Lakshmi Nivasa Serial:ಅರೆಸ್ಟ್ ಆದ ಹರೀಶ? ಹೆಂಡತಿಯ ಚೀಟಿ ಐಡಿಯಾಗೆ ತಗಲಾಕೊಂಡ ಗಂಡ

By ಪೂರ್ವ

ಕಷ್ಟಪಟ್ಟು ಕೆಲಸ ಮಾಡುತ್ತಿರುವ ಶ್ರೀನಿವಾಸರಾಯರಿಗೆ ಅವರ ಮಕ್ಕಳಿಂದಲೇ ಬಹಳಷ್ಟು ಕೆಟ್ಟ ಮಾತುಗಳನ್ನು ಕೇಳುವ ಪರಿಸ್ಥಿತಿ ಶ್ರೀನಿವಾಸ ರಾಯರಿಗೆ ಬಂದಿದೆ. ನಿವೃತ್ತಿಯಾದ ಬಳಿಕ ದುಡಿದು ಕೆಲಸ ಮಾಡುತ್ತಿರುವ ಶ್ರೀನಿವಾಸ್ ರಾಯರಿಗೆ ಮಕ್ಕಳಿಂದಲೇ ಅವಮಾನ ಆಗಿದೆ. ಅದೇ ಮಕ್ಕಳು ತನ್ನ ತಂದೆಗೆ ಸಿಕ್ಕಾಪಟ್ಟೆ ಅನ್ಯಾಯ ಮಾಡುತ್ತಿದ್ದಾರೆ. ಮಕ್ಕಳಿಗಾಗಿ ಶ್ರೀನಿವಾಸರಾಯರು ಮಾಡಿದ ಕೆಲಸವೇ ಇಲ್ಲ. ಅಷ್ಟೊಂದು ಕಷ್ಟಪಟ್ಟು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಮಕ್ಕಳು ಶ್ರೀನಿವಾಸ ರಾಯರಿಗೆ ಕೊಡುತ್ತಿರುವ ಬಹುಮಾನ ಮಾತ್ರ ಬೈಗುಳಗಳಾಗಿವೆ.

ಇದೀಗ ಶ್ರೀನಿವಾಸ ರಾಯರ ಮನೆಗೆ ಪೊಲೀಸರು ಧಿಡೀರ್ ಆಗಿ ಆಗಮಿಸಿದ್ದಾರೆ. ಇತ್ತ ಹರೀಶ್ ಚೀಟಿ ವ್ಯವಹಾರ ಮಾಡುತ್ತಿದ್ದಾನೆ. ಆ ವ್ಯವಹಾರದಿಂದಾಗಿ ಇದೀಗ ಹರೀಶ್‌ಗೆ ಬಹಳ ದೊಡ್ಡ ಕಂಟಕ ಎದುರಾಗಿದೆ. ಸಿಂಚನಾ ಮಾತನ್ನು ಕೇಳಿ ಹರೀಶ ಇದೀಗ ಚೀಟಿ ವ್ಯವಹಾರದಲ್ಲೂ ಕೂಡ ಕೈ ಸುಟ್ಟುಕೊಂಡಿದ್ದಾನೆ. ಚೀಟಿ ವ್ಯವಹಾರ ಮಾಡುತ್ತಿದ್ದಾಗ ಒಬ್ಬ ಹರೀಶ್ ಮನೆಗೆ ಪೊಲೀಸರನ್ನು ಕರೆದುಕೊಂಡು ಬರುತ್ತಾನೆ. ಪೊಲೀಸರು ಮನೆಗೆ ಬರುತ್ತಿರುವುದನ್ನು ಕಂಡ ಹರೀಶ ಬಹಳ ಆಶ್ಚರ್ಯ ಪಡುತ್ತಾನೆ.

Lakshmi Nivasa serial February 4th 2025 episode about Harish Arrest

ಇದೇನಣ್ಣ ಚೀಟಿ ತೆಗೆದುಕೊಳ್ಳಲು ನೀವು ಬರಬೇಕಿತ್ತು. ಆದರೆ ನೀವು ಪೊಲೀಸರನ್ನು ಯಾಕೆ ಕರೆದುಕೊಂಡು ಬಂದೀರಿ ಎಂದು ಹೇಳುತ್ತಾನೆ. ಇದನ್ನು ಕೇಳಿ ಪೊಲೀಸರು ನನಗೆ ಕಂಪ್ಲೆಂಟ್ ಕೊಟ್ಟ ಕಾರಣ ನಾವಿಲ್ಲಿಗೆ ಬಂದಿದ್ದೇವೆ. ಹರೀಶ್ ಅವರೇ ನೀವು ಚೀಟಿ ವ್ಯವಹಾರವನ್ನು ಮಾಡುತ್ತೀರಿ. ಆದರೆ ಅದಕ್ಕೆ ಕೂಡ ಲೈಸೆನ್ಸ್ ಎನ್ನುವುದು ಬಹಳ ಮುಖ್ಯವಾಗುತ್ತದೆ. ನೀವು ಲೈಸೆನ್ಸ್ ಇಲ್ಲದೆ ಚೀಟಿ ವ್ಯವಹಾರವನ್ನು ಮಾಡುತ್ತಿರುವುದು ಬಹಳ ದೊಡ್ಡ ತಪ್ಪು. ಈ ಕಾರಣಕ್ಕಾಗಿ ನಿಮ್ಮ ಮೇಲೆ ಕೇಸ್ ಆಗಿದೆ ಎಂದು ಹೇಳಿದಾಗ ಮನೆ ಮಂದಿಯೆಲ್ಲ ಶಾಕ್ ಆಗುತ್ತಾರೆ.

ಪೊಲೀಸರನ್ನು ನೋಡಿ ಮನೆ ಮಂದಿ ಶಾಕ್

ಲೈಸೆನ್ಸ್ ಇಲ್ಲಿದೆ ಹರೀಶ ಚೀಟಿ ವ್ಯವಹಾರ ಮಾಡುತ್ತಿದ್ದರಿಂದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿಂಚನಾಗೆ ಗಂಡನ ಅವಸ್ಥೆ ಕಂಡು ಬಹಳಷ್ಟು ನೋವು ಆಗುತ್ತೆ. ಯಾಕೆಂದರೆ, ಸಿಂಚನಾಗೆ ತನ್ನ ಗಂಡ ಚೆನ್ನಾಗಿ ಇರಬೇಕು ಎಂದು ಅಂದುಕೊಂಡಿರುತ್ತಾಳೆ. ಆದರೆ, ಈಗ ಆಗಿದ್ದೇ ಬೇರೆ. ಇಂತಹ ಸಮಯದಲ್ಲಿ ಆಕೆಗೆ ಏನು ಮಾಡಬೇಕು ಅನ್ನೋದೇ ಗೊತ್ತಾಗುವುದಿಲ್ಲ. ಗಂಡ ಅರೆಸ್ಟ್ ಆಗಿ ಹೋಗುತ್ತಿರುವುದನ್ನು ನೋಡಿ ಆಕಾಶವೇ ಕಳಚಿ ಬಿದ್ದ ಹಾಗೆ ಆಗುತ್ತದೆ. ಗಂಡನ ಅರೆಸ್ಟ್ ಆಗುತ್ತಿದ್ದಂತೆ ಸಿಂಚನಾ ತನ್ನ ತಂದೆಯ ಬಳಿಗೆ ಓಡೋಡಿ ಬರುತ್ತಾಳೆ.

Lakshmi Nivasa serial February 4th 2025 episode about Harish Arrest

ತಂದೆಯ ಬಳಿ ಓಡೋಡಿ ಬಂದ ಸಿಂಚನಾ

ಆಕೆಗೆ ತನ್ನ ಗಂಡ ಅರೆಸ್ಟ್ ಆಗಿರುವುದನ್ನು ನೋಡಿ ಬಹಳಷ್ಟು ಭಯ ಆಗುತ್ತದೆ. ಜವರೇಗೌಡರು ಮಗಳ ಬಳಿ ವಿಚಾರಣೆ ಮಾಡಿದಾಗ ಹರೀಶ್ ಅರೆಸ್ಟ್ ಆಗಿರುವ ವಿಚಾರ ತಿಳಿಯುತ್ತದೆ. ಸಿಂಚನಾಗೆ ತನ್ನ ಗಂಡ ಮಾಡುತ್ತಿರುವ ಚೀಟಿ ವ್ಯವಹಾರದ ಬಗ್ಗೆ ತಂದೆಯ ಬಳಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಆಕೆಗೆ ತನ್ನ ಗಂಡನಿಗೆ ತನ್ನಿಂದಲೇ ಹೀಗೆ ಆಯಿತಲ್ಲ ಎನ್ನುವ ನೋವು ಆಕೆಗೆ ಕಾಡುತ್ತದೆ. ಲಕ್ಷ್ಮಿ ಹಾಗೂ ಶ್ರೀನಿವಾಸ ರಾಯರು ಮಕ್ಕಳ ವಿಚಾರದಲ್ಲಿ ಸಿಕ್ಕಾಪಟ್ಟೆ ತೊಂದರೆಗೆ ಒಳಗಾಗಿದ್ದರು ಕೂಡ ಮಕ್ಕಳಿಗೆ ಸಣ್ಣ ಮಟ್ಟಕ್ಕೆ ನೋವಾದರೂ ಅದನ್ನು ಅವರಿಬ್ಬರಿಗೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಇತ್ತ ಜಾಹ್ನವಿಗೆ ತನ್ನ ಗಂಡನ ಅನುಮಾನದ ಭೂತ ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ತಿಳಿದು ಬಹಳಷ್ಟು ಭಯ ಆಗುತ್ತಿದೆ.

More from Filmibeat

English summary
Lakshmi Nivasa serial February 4th 2025 episode about Harish Arrest;
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X