Lakshmi Nivasa: ಭಾವನ ಮದುವೆಗೆ ಮಕ್ಕಳಿಂದಾನೂ ಸಹಾಯ ಸಿಕ್ಕಿಲ್ಲ; ಕಡೆ ಗಳಿಗೆಯಲ್ಲಿ ಏನ್ಮಾಡ್ತಾರೆ ಲಕ್ಷ್ಮೀ-ಶ್ರೀನಿವಾಸ?
ಮಗಳನ್ನು ದೊಡ್ಡ ಮನೆಗೆ ಮದುವೆ ಮಾಡಿಕೊಡುತ್ತಿದ್ದಾರೆ. ಭಾವನಾಗೆ ಬಾಸ್ ಶ್ರೀಕಾಂತ್. ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಡಿ ಎಂದಾಗಲೂ ಒಪ್ಪಲಿಲ್ಲ. ಮಗಳ ಮದುವೆ ಬಗ್ಗೆ ಕನಸಿದೆ ಎಂದೇ ಲಕ್ಷ್ಮೀ-ಶ್ರೀನಿವಾಸ ಮಾತು ಕೊಟ್ಟುಬಿಟ್ಟರು. ದಿನ ಉರುಳುತ್ತಿವೆ, ಹಣ ಹೊಂದುತ್ತಿಲ್ಲ. ಕೈಕಾಲು ಆಡದೆ ಕಂಗಲಾಗಿದ್ದಾರೆ ದಂಪತಿ.
ಮಗನ ಮದುವೆಯಾಗುತ್ತಿದೆ, ಖುಷಿಗೆ ತಾಯಿ ಸಿಗುತ್ತಿದ್ದಾಳೆ ಎಂಬ ಸಂಭ್ರಮ ವನಜಾಗೆ. ಬೀಗರಿಗೆ ಫೋನ್ ಮಾಡುತ್ತಿದ್ದಾರೆ. ಆದರೆ ಲಕ್ಷ್ಮೀ ಏನು ಉತ್ತರ ಕೊಡಬೇಕೆಂಬುದು ತಿಳಿಯುತ್ತಿಲ್ಲ. ಆ ಕಡೆ ಶ್ರೀನಿವಾಸ ಸ್ನೇಹಿತನಿಗೆ ಕೊಟ್ಟ ಹಣದಲ್ಲಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬಹುದು ಎಂದುಕೊಂಡಿದ್ದರು. ಆದರೆ, ಶಂಕರನನ್ನು ಕರೆದುಕೊಂಡು ಬಿಟ್ಟಿದೆ.

ಸಾವಿನ ಮನೆಯಲ್ಲೇ ಹಣ ಕೇಳಲು ಹೋದ ಶ್ರೀನಿವಾಸ
ಮಗಳ ಮದುವೆಯನ್ನು ಸಾಧ್ಯವಾದರೆ ನಾಲ್ಕು ದಿನದಲ್ಲಿ ಮಾಡಿ ಮುಗಿಸಿ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಈಗ ಅದಕ್ಕೆ ಹಣ ಒದಗಿಸುವ ಸಲುವಾಗಿ, ಸಾಲ ಕೇಳಲು ಶಂಕರನ ಮನೆಗೆ ಹೋಗಿದ್ದಾರೆ. ಆದರೆ, ಶಂಕರನ ಮಗ ಸಾಲದ ಬಗ್ಗೆ ಆಡಿದ ಮಾತು ಶ್ರೀನಿವಾಸನಿಗೆ ಕೋಪ ತರಿಸಿದೆ. ಒಳಗೆ ನುಗ್ಗಲು ಯತ್ನಿಸಿದ ಶ್ರೀನಿವಾಸನನ್ನು ಲಕ್ಷ್ಮಿಯೇ ತಡೆ ಹಿಡಿದು, ಸಮಾಧಾನ ಮಾಡಿ ವಾಪಾಸ್ ಕರೆದು ಕೊಂಡು ಬಂದಿದ್ದಾಳೆ. ಹತ್ತು ಲಕ್ಷ ಹಣ ಕಳೆದುಕೊಂಡು ದಾರಿ ಕಾಣದಂತೆ ಶ್ರೀನಿವಾಸ ನಿಂತಿದ್ದಾನೆ.
ಮಕ್ಕಳಿಂದ ಸಹಾಯ ನಿರೀಕ್ಷಿಸಿದ ಪೋಷಕರು
ಆ ಪರಿಸ್ಥಿತಿಯನ್ನು ಲಕ್ಷ್ಮೀ ತಿಳಿಗೊಳಿಸಿದ್ದಾಳೆ. ದೇವರಿದ್ದಾನೆ, ಸಾವಿನ ಮನೆಯಲ್ಲಿ ಸಾಲ ವಾಪಸ್ ಕೇಳುವುದು ಸೂಕ್ತವಲ್ಲ ಎಂದು ಕರೆದುಕೊಂಡು ಬಂದಿದ್ದಾಳೆ. ಈ ವೇಳೆ ಇಬ್ಬರು ಗಂಡು ಮಕ್ಕಳಿಂದ ಸಹಾಯವಾಗಬಹುದು ಎಂದು ನಿರೀಕ್ಷೆ ಮಾಡಿದ್ದಾಳೆ. ಮನೆಗೆ ಬಂದು ಮದುವೆಯ ಡೇಟ್ ಫಿಕ್ಸ್ ಮಾಡಿದ್ದನ್ನು ಸಹ ಹೇಳಿದ್ದಾರೆ. ತಂಗಿಯ ಮದುವೆಯಾಗಿರುವ ಕಾರಣಕ್ಕೆ ಖಂಡಿತ ಗಂಡು ಮಕ್ಕಳು ಕೈಜೋಡಿಸುತ್ತಾರೆ ಎಂಬ ಬಲವಾದ ನಂಬಿಕೆಯಾಗಿತ್ತು. ಆದರೆ, ಹೆತ್ತ ಮಕ್ಕಳು ಆ ರೀತಿ ಅಲ್ಲ ಎಂಬುದು ಲಕ್ಷ್ಮೀಗೆ ಇನ್ನು ಗೊತ್ತಿಲ್ಲ. ದೊಡ್ಡ ಮಗನಂತು ಹಣವನ್ನೆಲ್ಲಾ ಮನೆಯಲ್ಲಿಯೇ ಜೋಪಾನವಾಗಿ ಕದ್ದು ಇಡುತ್ತಿದ್ದಾನೆ.
ಸಹಾಯ ಮಾಡಲು ಆಗಲ್ಲವೆಂದ ಮಕ್ಕಳು
ಸಮಯ ಕಡಿಮೆ ಇದೆ ಎಂದಾಗ ಎಲ್ಲರೂ ಒಂದೊಂದು ನೆಪ ಹೇಳಿದ್ದಾರೆ. ದೊಡ್ಡ ಮಗನಂತು "ಅಲ್ಲ ಅಮ್ಮ ಇಷ್ಟು ಬೇಗ ಮದುವೆ ಡೇಟ್ ಫಿಕ್ಸ್ ಮಾಡಿಕೊಂಡು ಬಂದರೆ ಹಣ ಎಲ್ಲಿಂದ ತರೋದು. ನನ್ನ ಹತ್ತಿರ ಅಂತು ಬಿಡಿಗಾಸು ಇಲ್ಲ" ಎಂದು ಎದ್ದು ಹೋಗಿದ್ದಾನೆ. ಇನ್ನು ಎರಡನೇ ಮಗ "ನಾನಿನ್ನು ಕೆಲಸವನ್ನೇ ಶುರು ಮಾಡಿಲ್ಲ ಹಣ ಎಲ್ಲಿಂದ ತರುವುದು ಎಂದು ಹಣ ಕೊಡಲು ಸಾಧ್ಯವಿಲ್ಲ" ಎಂದಿದ್ದಾನೆ. ಇನ್ನು ಈಗಾಗಲೇ ಮದುವೆಯಾಗಿ ಹೊರ ಹೋಗಿರುವ ದೊಡ್ಡ ಮಗಳು ದೊಡ್ಡ ಸ್ವಾರ್ಥಿ. ಆಕೆ ಹಣ ನೀಡುತ್ತಾಳೆಯೇ..?

ಭಾವನಾಳಿಗೆ ಸಮಾಧಾನ ಮಾಡಿದ ತಂದೆ
ಭಾವನಾಗೆ ಮನೆಯ ಪರಿಸ್ಥಿತಿ ಚೆನ್ನಾಗಿಯೇ ಗೊತ್ತು. ಅಣ್ಣ-ತಮ್ಮಂದಿರ ಬುದ್ದಿಯೂ ಅರಿತಿದ್ದಾಳೆ. ಹೀಗಾಗಿ ಅಪ್ಪ ಅಮ್ಮನ ಬಳಿ ಮದುವೆಯನ್ನು ಮುಂದೆ ಹಾಕಿ, ಈಗ ಹಣ ಹೊಂದಿಸುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾಳೆ. ಭಾವನಾಳ ಮನಸ್ಸು ಏನು ಎಂಬುದ ಅಪ್ಪ-ಅಮ್ಮನಿಗೆ ಚೆನ್ನಾಗಿಯೇ ಗೊತ್ತು. ಹೀಗಾಗಿ ಸಮಾಧಾನ ಮಾಡಿ, ಅದೇ ಡೇಟ್‌ಗೆ ಮದುವೆ ಮಾಡುವುದಾಗಿ ಹೇಳಿದ್ದಾರೆ. ಲಕ್ಷ್ಮೀ-ಶ್ರೀನಿವಾಸರ ಕಷ್ಟವನ್ನು ಅರಿತಿರುವ ಭಾವನಾ ತನ್ನ ಹಣದಲ್ಲೇ ಮದುವೆಯಾಗುತ್ತಾಳಾ..? ಅಥವಾ ಶ್ರೀಕಾಂತ್ ಸಹಾಯ ಸಿಗುತ್ತಾ ನೋಡಬೇಕಿದೆ.


Click it and Unblock the Notifications











