ಮದುವೆಗೆ ಒಡವೆ ಮಾರಲು ಹೊರಟ ಲಕ್ಷ್ಮೀ ; ಸೌಪರ್ಣಿಕಾ ಬೇಡಿಕೆಯಂತೆ ಮದುವೆ ಮಾಡೋಕೆ ಆಗುತ್ತಾ?
'ಲಕ್ಷ್ಮೀ ನಿವಾಸದಲ್ಲಿ' ಮದುವೆಗೆ ತಯಾರಿ ನಡೆಯುತ್ತಿದೆ. ಮಕ್ಕಳಲ್ಲಿ ಸಂಭ್ರಮ ಜೋರಾಗಿದೆ. ಅಕ್ಕನ ಮದುವೆ ಅಂತ ತಂಗಿ ಖುಷಿಯಾಗಿದ್ದರೆ, ತಂಗಿ ಮದುವೆಯಲ್ಲಿ ನನಗೂ ಒಂದು ಒಡವೆ ಸಿಗುತ್ತೆ ಅಂತ ಅಕ್ಕ ಸಂತಸದಿಂದ ಇದ್ದಾಳೆ. ಇನ್ನು ಒಬ್ಬ ಅಣ್ಣ ನೇರವಾಗಿಯೇ ಸಹಾಯ ಮಾಡಲ್ಲ ಅಂದ್ರೆ, ಇನ್ನೊಬ್ಬ ತಮ್ಮ ಕೆಲಸವೇ ಇಲ್ಲ ಹೇಗೆ ಸಹಾಯ ಮಾಡಲಿ ಎನ್ನುತ್ತಿದ್ದಾನೆ.
ಮೂಲ ನಕ್ಷತ್ರ ಅಂತ ಭಾವನಾಗೆ ಮದುವೆಯೇ ಫಿಕ್ಸ್ ಆಗುತ್ತಿರಲಿಲ್ಲ. ಈಗ ದೊಡ್ಡ ಸಂಬಂಧವೇ ಬಂದಿದೆ. ಆದರೆ, ಮದುವೆ ಮಾಡಿಕೊಡುವುದಕ್ಕೆ ಹಣ ಒದಗಿಸುವುದಕ್ಕೆ ನೂರೆಂಟು ಸಮಸ್ಯೆಗಳು ಬರುತ್ತಿವೆ. ಮಕ್ಕಳ ಮನಸ್ಥಿತಿ, ಗಂಡನ ಪರಿಸ್ಥಿತಿ ಕಂಡ ಲಕ್ಷ್ಮೀ ಈಗ ತನ್ನ ಒಡವೆಗಳನ್ನೇ ತ್ಯಾಗ ಮಾಡಲು ಹೊರಟಿದ್ದಾಳೆ.

ಮದುವೆಗೆ ಭಾವನಾರಿಂದ ಹಣ ಸಹಾಯ
ತಂದೆ-ತಾಯಿಯ ಕಷ್ಟವನ್ನು ಭಾವನಾ ಮೊದಲಿನಿಂದಲೂ ನೋಡಿಕೊಂಡೆ ಬಂದಿದ್ದಾಳೆ. ಹೀಗಾಗಿ ಈಗ ಮದುವೆ ಸಂದರ್ಭದಲ್ಲಿ ಎಷ್ಟು ಕಷ್ಟವಾಗಬಹುದು ಎಂದು ಅಂದಾಜಿಸಿದ ಭಾವನಾ, ತಂದೆಯ ಕಷ್ಟಕ್ಕೆ ಹೆಗಲಾಗುವುದಕ್ಕೆ ಪ್ರಯತ್ನಿಸಿದ್ದಾಳೆ. "ಆಫೀಸಲ್ಲಿ ಒಂದು ಲಕ್ಷದ ತನಕ ಸಾಲ ಸಿಗುತ್ತೆ" ಬಾಸ್‌ನ ಕೇಳಲಾ ಅಂತ ತಂದೆಯ ಬಳಿ ಕೇಳಿದ್ದಾಳೆ. ಆದರೆ, ಸ್ವಾಭಿಮಾನದಿಂದ ಬದುಕಿದ ತಂದೆ, ಗಂಡು ಮಕ್ಕಳ ಬಳಿಯೇ ಹಣ ಕೇಳಲ್ಲ ಇನ್ನು ಹೆಣ್ಣು ಮಕ್ಕಳ ಬಳಿ ಕೇಳುತ್ತೀನಾ..? ಆರಾಮವಾಗಿರು ಎಂದು ಅಪ್ಪ-ಅಮ್ಮ ಸಮಾಧಾನ ಮಾಡಿದ್ದಾರೆ.
ಸೌಪರ್ಣಿಕಳಿಂದ ಹೆಚ್ಚಾಯ್ತು ಕಾಟ
ಸೌಪರ್ಣಿಕಾಗೆ ಶ್ರೀಕಾಂತ್ ಮದುವೆಯಾಗುವುದು ಇಷ್ಟವಿಲ್ಲ. ಹೀಗಾಗಿ ಹೆಣ್ಣು ನೋಡುವುದಕ್ಕೆ ಬಂದಾಗಿನಿಂದ ಕಿತಾಪತಿ ಮಾಡುತ್ತಿದ್ದಾಳೆ. ಅದರಲ್ಲೂ ಲಕ್ಷ್ಮೀ ಹಾಗೂ ಶ್ರೀನಿವಾಸರ ಸ್ವಾಭಿಮಾನ ಅರಿತ ಸೌಪರ್ಣಿಕ ಹಣ ನೀಡಲು ಹೋಗಿ ಮನಸ್ಸು ನೋಯಿಸಿದ್ದಾಳೆ. ಹಣ ತೆಗೆದುಕೊಳ್ಳದೆ ಹೋದರೆ ಮದುವೆಯನ್ನು ನಿಮ್ಮ ಹಣದಲ್ಲೇ ನಮ್ಮ ಲೆವೆಲ್‌ಗೆ ತಕ್ಕನಾಗಿ ಮಾಡಿಕೊಡಬೇಕೆಂದು ಹೆದರಿಸಿದ್ದಾಳೆ. ಪದೇ ಪದೇ ಕಾಲ್ ಮಾಡಿ ಬೇರೆ ಆತಂಕ ಸೃಷ್ಟಿಸುತ್ತಿದ್ದಾಳೆ.
ಮಗಳ ಮದುವೆಗಾಗಿ ಲಕ್ಷ್ಮೀ ತ್ಯಾಗ
ಹೊರಗಡೆಯಿಂದ ಸಾಲ ಸಿಗುತ್ತಿಲ್ಲ. ಹಣ ಕೊಡಬೇಕಾದ ವ್ಯಕ್ತಿ ಜೀವಂತ ಇಲ್ಲ. ಮಕ್ಕಳಂತೂ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಮದುವೆಗೆ ಬಹಳಷ್ಟು ಸಮಯ ಇಲ್ಲವೇ ಇಲ್ಲ. ಈಗ ಲಕ್ಷ್ಮೀಗೆ ಉಳಿದಿರುವುದು ಒಂದೇ ದಾರಿ. ಅದು ತನ್ನ ಒಡವೆಯನ್ನು ಮಾರುವುದು. ಅದಕ್ಕಾಗಿಯೇ ಮನೆಯಲ್ಲಿದ್ದ ಒಡವೆಯನ್ನೆಲ್ಲಾ ಒಟ್ಟು ಗೂಡಿಸಿ ಗಂಡನ ಕೈಗೆ ಕೊಟ್ಟಿದ್ದಾಳೆ. ಇದನ್ನು ಮಾರಿಬಿಡಿ. ಮೊದಲು ಮದುವೆ ಮಾಡೋಣಾ ಎಂದಿದ್ದಾಳೆ.

ವನಜಾಗೆ ಸತ್ಯ ಗೊತ್ತಾಗುತ್ತಾ?
ಇತ್ತ ವನಜಾ ಬಹಳಷ್ಟು ಸಿಂಪಲ್ ಆಗಿ ಮದುವೆ ಮಾಡಿಕೊಡಿ ಎಂದೇ ಕೇಳಿದ್ದರು. ಸೌಪರ್ಣಿಕಾ ಕಿತಾಪತಿ ವನಜಾಗೆ ತಿಳಿಯುತ್ತಿಲ್ಲ. ಆ ಸತ್ಯವನ್ನು ಲಕ್ಷ್ಮೀ ಹೇಳುವಂತೆಯೂ ಇಲ್ಲ. ಎರಡು ಕೋಟಿ ಹಣ ಅಂದ್ರೆ ಸುಮ್ನೆನಾ? ಶ್ರೀಕಾಂತ್ ಆದರೂ ಭಾವನಾ ಮನೆಯ ಕಷ್ಟ ಅರ್ಥ ಮಾಡಿಕೊಳ್ಳುತ್ತಾನಾ ನೋಡಬೇಕಿದೆ. ಅಥವಾ ಬೇರೆ ಯಾರಿಂದ ಆದರೂ ಮಗಳು-ಅಳಿಯನ ಕಿತಾಪತಿ ವನಜಾಗೆ ತಿಳಿದರೆ ಖಂಡಿತ ಈ ಮದುವೆಗೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಆಗುತ್ತದೆ. ಇಲ್ಲವಾದರೆ ಮಗಳ ಮದುವೆಗೆ ಲಕ್ಷ್ಮೀ-ಶ್ರೀನಿವಾಸ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ.


Click it and Unblock the Notifications











