Lakshmi Nivasa Serial; ಸಿದ್ದು ಬಳಿ ಅಸಲಿ ಸತ್ಯ ಹೇಳಿದ ಜವರೇಗೌಡ; ಮುಂದೇನು ಮಾಡ್ತಾನೆ ಸಿದ್ಧು?

By ಪೂರ್ವ

ಭಾವನಾ ಹಾಗೂ ಸಿದ್ದೇ ಗೌಡರನ್ನು ಹೇಗಾದರೂ ಮಾಡಿ ಮನೆಗೆ ಕರೆದುಕೊಂಡು ಹೋಗಬೇಕೆಂದು ಶ್ರೀನಿವಾಸರಾಯರು ಹಾಗೆಯೇ ಅವರ ಮುದ್ದಿನ ಸೊಸೆ ಬರುತ್ತಾರೆ ತಂದೆ-ಅತ್ತಿಗೆಯನ್ನು ನೋಡಿದ ಭಾವನಾಗೆ ಬಹಳಷ್ಟು ಖುಷಿಯಾಗುತ್ತದೆ. ಅವರಿಬ್ಬರನ್ನು ಸ್ವಾಗತ ಮಾಡಿ ಬಹಳ ಖುಷಿಯಿಂದ ಮಾತನಾಡಿಸುತ್ತಾಳೆ. ಆದರೆ ಭಾವನಾ ಸ್ಥಿತಿ ನೋಡಿ ಶ್ರೀನಿವಾಸರಾಯರು ಬಹಳಷ್ಟು ಬೇಸರ ಮಾಡಿಕೊಂಡಿರುತ್ತಾರೆ. ಹಾಗೆಯೇ ಆಕೆಯನ್ನು ಮನೆಗೆ ಬರುವಂತೆ ಒತ್ತಾಯ ಮಾಡುತ್ತಾರೆ. ಆದರೆ ಭವನಾ ಮಾತ್ರ ತಂದೆಯ ಜೊತೆಗೆ ತವರು ಮನೆಗೆ ಬರಲು ಒಪ್ಪಿಲಿಲ್ಲ.

ಮಗಳ ಮಾತು ಕೇಳಿ ಒಂದು ಕಡೆ ಖುಷಿಯಾದರೆ, ಇನ್ನೊಂದು ಕಡೆ ಬಹಳ ಬೇಸರವಾಗುತ್ತದೆ. ಇತ್ತ ಸಿದ್ದೇಗೌಡರು ಮೂಟೆ ಹೊರುವ ಕೆಲಸಗಳನ್ನು ಮಾಡಿ ಮನೆಗೆ ಬೇಕಾದ ದಿನಸಿ ತರುವತ್ತ ಗಮನ ಹರಿಸುತ್ತಾನೆ. ಆದರೆ, ಸಿದ್ದೇಗೌಡ ಕಷ್ಟ ಪಡುವುದನ್ನು ನೋಡಿದ ಜವರೇಗೌಡರು ಸಿಕ್ಕಾಪಟ್ಟೆ ಕೋಪ ಮಾಡಿಕೊಡುತ್ತಾರೆ. ಸಿದ್ದೇಗೌಡ ನೀನು ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ದಿನ ಸಾಗಿಸಲಿ ಎಂದು ನಾನು ನಿನ್ನನ್ನು ಬೆಳೆಸಿ ಇಷ್ಟು ದೊಡ್ಡವನನ್ನಾಗಿ ಮಾಡಿದ್ದಕ್ಕೆ ನನಗೆ ದೊಡ್ಡ ಉಡುಗೊರೆಯನ್ನು ನೀಡುತ್ತಿದ್ದೀಯ ಎಂದು ಬಹಳ ಬೇಸರದಿಂದ ಹೇಳುತ್ತಾರೆ.

Lakshmi Nivasa serial January 27th episode Javaregowda revealed the truth to Siddu

ಸಿದ್ದೇಗೌಡಗೆ ತನ್ನ ತಂದೆ ಎಂದರೆ ಬಹಳಷ್ಟು ಪ್ರೀತಿ. ತಂದೆಯ ರಾಜಕೀಯ ಜೀವನಕ್ಕೆ ಒಂದು ಕಾಲದಲ್ಲಿ ಬಹಳಷ್ಟು ಶ್ರಮಿಸಿದಾತ. ತಾಯವ್ವ ಮಾಡಿದ ಒಂದೇ ಒಂದು ಕೆಲಸದಿಂದಾಗಿ ಭಾವನಾ ಹಾಗೂ ಸಿದ್ದೇಗೌಡ ಮನೆ ಬಿಡುವ ಪ್ರಮೇಯ ಬಂದೊದಗಿತು. ಜವರೇಗೌಡರು ಸಿದ್ದೇಗೌಡರ ಬಳಿ ಮಾತಿಗೆ ಇಳಿಯುತ್ತಾರೆ. ಸಿದ್ದೇಗೌಡ ನೀನು ಮನೆ ಬಿಟ್ಟು ಬಂದಿದ್ದು ಸರಿ ಇಲ್ಲ. ಈ ಕೂಡಲೇ ನೀನು ಮತ್ತೆ ನಿನ್ನ ಹೆಂಡತಿ ಮನೆಗೆ ಬರಬೇಕು ಎಂದು ಹೇಳಿದಕ್ಕೆ ಸಿದ್ದೇಗೌಡ ಅದು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಏಕೆಂದರೆ ಭಾವನಾ ಆ ಮನೆಗೆ ಬರಲು ಖಂಡಿತವಾಗಿಯೂ ಒಪ್ಪುವುದಿಲ್ಲ ಎನ್ನುವುದು ಸಿದ್ದೇಗೌಡರಿಗೆ ತಿಳಿದಿದ್ದು ಹಲವು ಬಾರಿ ಭಾವನಾ ಭಾವನೆಗೆ ಏಟಾಗಿದೆ.

ಜವರೇಗೌಡಗೆ ಶುರುವಾದ ಹೊಸ ಟೆನ್ಶನ್

ಆಕೆಗೆ ನನ್ನ ಮನೆಗೆ ಬರಲು ಇಷ್ಟವಿಲ್ಲ ಎಂದು ತಂದೆಯ ಬಳಿ ಸಿದ್ದೇಗೌಡ ಹೇಳುತ್ತಾನೆ. ಆ ಕೂಡಲೇ ಜವರೇಗೌಡರು ಶ್ರೀಕಾಂತ ಸಾವಿನ ಹಿಂದಿರುವ ರಹಸ್ಯವನ್ನು ಸಿದ್ದೇಗೌಡರ ಬಳಿ ಜವರೇಗೌಡರು ಹೇಳುತ್ತಾರೆ. ಶ್ರೀಕಾಂತ್ ಸಾವಿಗೆ ನೀನೇ ಕಾರಣ. ನೀನೇ ಅವರ ಕಾರಿಗೆ ಆಕ್ಸಿಡೆಂಟ್ ಮಾಡ್ಸಿದ್ದು ಎಂದು ಜವರೇಗೌಡರು ಸಿದ್ದೇಗೌಡನ ಬಳಿ ಹೇಳುತ್ತಾರೆ.

Lakshmi Nivasa serial January 27th episode Javaregowda revealed the truth to Siddu

ಜವರೇಗೌಡರ ಮಾತಿಗೆ ಸಿದ್ದು ಶಾಕ್

ಅವತ್ತು ಬಹಳ ಜೋರಾಗಿ ಮಳೆ ಸುರಿಯುತ್ತಿತ್ತು. ಆಗ ಶ್ರೀಕಾಂತ್ ಅವರ ಕಾರು ಪಾಸ್ ಆಗುತ್ತಿತ್ತು ಆ ವೇಳೆ ನೀನು ಆ ಕಾರಿಗೆ ಆಕ್ಸಿಡೆಂಟ್ ಮಾಡಿಸಿದ್ದೀಯಾ. ಇದೇ ಕಾರಣಕ್ಕೆ ನಾನು ಪೊಲೀಸರ ಬಳಿ ಯಾವುದೇ ದೂರು ತೆಗೆದುಕೊಳ್ಳಬಾರದು ಎಂದು ಹೇಳಿದ್ದೆ. ಆದರೆ, ನೀನು ನಿನ್ನ ಹೆಂಡತಿಗೆ ಪ್ರತಿಭಟನೆ ಮಾಡುವ ರೀತಿಯಲ್ಲಿ ಕುಮ್ಮಕ್ಕನ್ನು ನೀಡುತ್ತಿದೆಯಾ ಎಂದು ಜವರೇಗೌಡರು ಹೇಳಿದಾಗ ಸಿದ್ದೇಗೌಡ ಶಾಕ್ ಆಗುತ್ತದೆ. ಸಿದ್ದೇಗೌಡ ಹಾಗೂ ಭಾವನಾ ಇಬ್ಬರು ಜವರೇಗೌಡರ ಮನೆಗೆ ಬಂದಿದ್ದರು. ಆದರೆ ಅವರಿಬ್ಬರ ಮುಖವನ್ನು ನೋಡಿ ರೇಣುಕಾ ಹಾಗೆಯೇ ತಾಯವ್ವ ಮುಖ ತಿರುಗಿಸಿದರೆ, ಜವರೇಗೌಡರು ಮಾತ್ರ ಸಿದ್ದು ಹಾಗೂ ಭಾವನಾಳನ್ನ ಮನೆಯೊಳಗೆ ಕರೆದು ಬಹಳ ಖುಷಿಯಿಂದ ಮಾತಾಡಿಸುತ್ತಾರೆ. ಇನ್ನು ಸಿದ್ದೇಗೌಡರ ಬಳಿ ಮಾತಿಗೆ ಹೊರಟ ಜವರೇಗೌಡರು ನಿಜಾಂಶವನ್ನು ಈಗಾಗಲೇ ಹೇಳಿದ್ದಾರೆ. ಮುಂದೇನಾಗುತ್ತೆ? ಅನ್ನೋದು ನೋಡಬೇಕಿದೆ.

More from Filmibeat

English summary
Lakshmi Nivasa serial January 27th episode Javaregowda revealed the truth to Siddu
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X