Lakshmi Nivasa Serial:ಗಂಡನ ಕರಾಳ ಮುಖ ಜಾಹ್ನವಿ ಮುಂದೆ ಬಯಲು? ಮುಂದಿನ ನಡೆ ಏನು?
ಜಾಹ್ನವಿಗೆ ಪತಿ ಜಯಂತನ ಬಗ್ಗೆ ಇತ್ತೀಚೆಗೆ ಉತ್ತಮ ಭಾವನೆ ಬಂದಿತ್ತು. ಆದ್ರೀಗ ಜಾಹ್ನವಿಗೆ ತನ್ನ ಗಂಡನ ಇನ್ನೊಂದು ಕರಾಳ ಮುಖ ಗೊತ್ತಾಗುವ ಸಮಯ ಬಂದೇ ಬಿಟ್ಟಿದೆ. ಆಕೆಗೆ ತನ್ನ ಗಂಡ ಎಂದರೆ ಬಹಳ ಪ್ರೀತಿ, ಬಹಳ ನಂಬಿಕೆ. ಆದರೆ ಆ ನಂಬಿಕೆಯನ್ನು ಜಯಂತ್ ಉಳಿಸಿಕೊಳ್ಳುವ ರೀತಿಯಲ್ಲಿ ಕಾಣಿಸುತ್ತಿಲ್ಲ. ಜಯಂತ್ ಬಗ್ಗೆ ಅಜ್ಜಿಗೆ ನಿಜ ವಿಚಾರ ತಿಳಿದ ಬಳಿಕ ಆಕೆ ಅದೆಷ್ಟೋ ಬಾರಿ ನೊಂದಿದ್ದಾರೆ. ನನ್ನ ಮೊಮ್ಮಗಳಿಗೆ ಇಂತಹ ಗಂಡ ಸಿಕ್ಕನಲ್ಲ ಎನ್ನುವ ಬೇಸರ ಅವಳಿಗೆ ಕಾಡುತ್ತದೆ. ಆದರೆ ಇದೀಗ ಅಜ್ಜಿ ಕೋಮ ಸ್ಥಿತಿಗೆ ತಲುಪಿದ್ದು, ಅಜ್ಜಿಯ ಸ್ಥಿತಿ ನೋಡಲಾಗದೆ ಜಾಹ್ನವಿ ಕಣ್ಣೀರು ಹಾಕುತ್ತಿದ್ದಾಳೆ.
ತನ್ನ ಅಜ್ಜಿ ಇಲ್ಲಿಗೆ ಬಂದ ನಂತರ ಹೀಗಾಯಿತಲ್ಲ ಎಂದು ಮನಸ್ಸಿನಲ್ಲಿ ಬಹಳ ಕೊರೆಯುತ್ತದೆ. ನನ್ನನ್ನು ನೋಡಿಕೊಳ್ಳಲು ಬಂದ ಅಜ್ಜಿಗೆ ಇದೇನಾಯ್ತು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ಆದರೆ ಇದಕ್ಕೆಲ್ಲ ಕಾರಣ ತನ್ನ ಗಂಡ ಎನ್ನುವ ಯೋಚನೆ ಆಕೆಗೆ ಬರುವುದಿಲ್ಲ. ಅಜ್ಜಿಯ ಕೋಣೆಯೊಳಗೆ ಬಂದ ಜಾಹ್ನವಿಗೆ ಗೊತ್ತಿಲ್ಲದೆ ಅಲ್ಲೊಂದು ತಪ್ಪು ಅನ್ನ ಮಾಡುತ್ತಾಳೆ. ಅಲ್ಲಿಯೇ ಪಕ್ಕದಲ್ಲಿದ್ದ ನೀರನ್ನು ಚೆಲ್ಲುತ್ತೆ. ಆದರೆ ಕೈ ತಪ್ಪಿ ನಡೆದ ಘಟನೆಗಳನ್ನು ಕಂಡು ಜಯಂತ್ ಬಹಳಷ್ಟು ಕೋಪ ಮಾಡಿಕೊಳ್ಳುತ್ತಾನೆ.

ಜಾಹ್ನವಿ ಅವರೇ ನಿಮಗೆ ಒಂದು ಕೆಲಸವನ್ನು ನೆಟ್ಟಗೆ ಹೇಳಿದರೂ ನೀವು ಆ ಕೆಲಸವನ್ನೇ ಮಾಡುವಾಗ ಈ ರೀತಿ ಅವಾಂತರ ಮಾಡಿಕೊಳ್ಳುತ್ತೀರಾ ಎಂದು ಬಯ್ಯುತ್ತಾನೆ. ಹಾಗೆಯೇ ಆತ ಆಫೀಸಿಗೆ ಲೇಟಾಯ್ತು ಎಂದು ಅಲ್ಲಿಂದ ಹೊರಟು ಹೋಗುತ್ತಾನೆ. ಅಲ್ಲಿಯೇ ಇದ್ದ ಒಂದು ಬಾಟಲ್ ಹಿಡಿದುಕೊಂಡು ಬಂದ ಜಾಹ್ನವಿ ಇದೆಲ್ಲ ಹೀಗೆ ಆಗಲು ನೀನೇ ಕಾರಣ. ನಿನ್ನಿಂದಲೇ ಹೀಗೆಲ್ಲಾ ಆಗಿದ್ದು ಎಂದು ಹೇಳುವಾಗಲೇ ಬಾಟಲ್‌ನನ್ನು ಸರಿಯಾಗಿ ಗಮನಿಸಿದ ಜಾಹ್ನವಿಗೆ ಶಾಕಿಂಗ್ ಆದ ಸಂಗತಿಯನ್ನು ಗಮನಿಸಿದಳು. ಅದೇನೆಂದರೆ ಬಾಟಲ್‌ನಲ್ಲಿ ಸಿಸಿ ಕ್ಯಾಮರಾ ಫಿಕ್ಸ್ ಆಗಿರುವುದು ಗಮನಿಸುತ್ತಾಳೆ. ಇದನ್ನು ನೋಡಿ ಜಾಹ್ನವಿಗೆ ಶಾಕ್ ಆಗುತ್ತದೆ.
ಲಕ್ಷ್ಮೀ ಎಲ್ಲಿದ್ದಾರೆ ಎನ್ನುವ ಗೊಂದಲ
ತನ್ನ ಗಂಡ ಮಾಡುತ್ತಿರುವ ಕೆಲವೊಂದು ಕೆಲಸಗಳು ಜಾಹ್ನವಿ ಅರಿವಿಗೆ ಬರುತ್ತಿದೆ. ಇತ್ತ ಶ್ರೀನಿವಾಸ ರಾಯರು ಒಬ್ಬೊಂಟಿಯಾಗಿದ್ದಾರೆ. ಮನೆಯಲ್ಲಿ ಲಕ್ಷ್ಮೀ ಬೇರೆ ಇಲ್ಲ. ಲಕ್ಷ್ಮೀ ಇಲ್ಲದ ವೇಳೆ ಶ್ರೀನಿವಾಸ ರಾಯರಿಗೆ ಮನೆಯಲ್ಲಿ ಬೆಲೆ ಕಡಿಮೆ ಆಗುತ್ತಿದೆ. ಮಗ ಸೊಸೆ ಸ್ವಂತ ಬ್ಯುಸಿನೆಸ್ ಶುರು ಮಾಡಿದ್ದರು. ಆದರೆ ಒಂದು ಮಾತು ಲಕ್ಷ್ಮೀ ಹಾಗೂ ಶ್ರೀನಿವಾಸ ಅವರಿಬ್ಬರೂ ಕೇಳಿಲ್ಲ. ಹೀಗಾಗಿ ಈ ವಿಚಾರದಲ್ಲಿ ಶ್ರೀನಿವಾಸ್ ಗೆ ಬಹಳಷ್ಟು ಬೇಸರ ಇರುತ್ತೆ. ಆದರೆ ಅದನ್ನು ಯಾರ ಜೊತೆಗೆ ಹೇಳದೆ ತನ್ನ ಪಾಡಿಗೆ ಇದ್ದು ಬಿಡುತ್ತಾರೆ.

ಆತಂಕದಲ್ಲಿರುವ ಸಿದ್ದುಗೆ ತಂದೆಯ ಸಾಂತ್ವನ
ಜವರೇ ಗೌಡರು ಮನೆ ಮಂದಿಯನ್ನು ಎಲ್ಲರನ್ನೂ ಕರೆದು ಮುಖ್ಯವಾದ ವಿಚಾರ ಮಾತನಾಡಲು ಶುರು ಮಾಡುತ್ತಾನೆ. ಭಾವನಾ ಹಾಗೂ ಸಿದ್ಧು ಯಾವತ್ತೂ ಕೂಡ ಈ ಮನೆಯ ಸೊಸೆ. ಇದನ್ನು ಈ ಮನೆಯವರು ಒಪ್ಪಿಕೊಳ್ಳಲೇ ಬೇಕು ಎಂದು ಖಡಕ್ ಆಗಿ ಹೇಳುತ್ತಾನೆ. ಮಗನ ವರ್ತನೆಯ ಬಗ್ಗೆ ತಾಯವ್ವ ಮಾತ್ರ ಸಿಡಿ ಸಿಡಿ ಎಂದರು ತಾಯವ್ವ ಮಾತ್ರ ಯಾರ ಬಗ್ಗೆಯೂ ಕ್ಯಾರೆ ಎನ್ನುತ್ತಿಲ್ಲ .ಯಾಕೆಂದರೆ ಜವರೇ ಗೌಡಗೆ ಸಿದ್ದು ಯಾವ ಪರಿಸ್ಥಿತಿಯಲ್ಲಿ ಇದ್ದಾನೆ ಎನ್ನುವುದು ಚೆನ್ನಾಗಿಯೇ ತಿಳಿದಿತ್ತು. ಆಕ್ಸಿಡೆಂಟ್ ವಿಚಾರವಾಗಿ ಸಿದ್ದು ಬಹಳಷ್ಟು ಕುಗ್ಗಿ ಹೋಗಿದ್ದಾನೆ. ಎಲ್ಲಾದರೂ ಭಾವನಾಗೆ ನಾನೇ ಆಕ್ಸಿಡೆಂಟ್ ಮಾಡಿದ್ದೇನೆ ಎಂದು ತಿಳಿದರೆ ನಾನು ಏನು ಮಾಡಲಿ ಎನ್ನುವ ಆಲೋಚನೆ ಮೂಡುತ್ತದೆ.


Click it and Unblock the Notifications











