Lakshmi Nivasa:ಸಂತೋಷ್ ಜಿಪುಣತನಕ್ಕೆ ಬೇಸತ್ತ ವೀಣಾ; ಹರೀಶ್ ಮುಂದೇನು ಮಾಡುತ್ತಾನೆ?

By ಪೂರ್ವ

ಮನೆಯ ಖರ್ಚಿಗೆ ಎಲ್ಲರೂ ಹಣವನ್ನು ನೀಡಿದರೆ ಹರೀಶ್ ಮಾತ್ರ ತನ್ನಲ್ಲಿ ದುಡ್ಡು ಇಲ್ಲ ಅಮ್ಮ ಪೇಮೆಂಟ್ ಆದ ಬಳಿಕ ನಾನು ನಿಮಗೆ ಹಣ ನೀಡುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿ ಸಂತೋಷ ಮಾತ್ರ ಅಯ್ಯೋ ಅಮ್ಮ ಆತ ನೋಡಿ ಎಷ್ಟು ಜುಗ್ಗ. ಚೆನ್ನಾಗಿಯೇ ಸಂಪಾದನೆ ಮಾಡುತ್ತಾನೆ. ಹಾಗೆಯೇ ಒಳ್ಳೆಯ ವ್ಯವಹಾರ ಮಾಡುತ್ತಿದ್ದಾನೆ. ಆತನ ಜೊತೆ ದುಡ್ಡಿಲ್ಲ ಎಂದರೆ ನಂಬಲು ಸಾಧ್ಯವೇ ಎಂದು ಹೇಳುತ್ತಾರೆ. ಇದನ್ನು ಕೇಳಿದ ಲಕ್ಷ್ಮೀ ಹಾಗೂ ಆಕೆಯ ಗಂಡ ಹೀಗೆ ಹೇಳುತ್ತಾರೆ.

ಸಂತೋಷ್, ಹರೀಶ್‌ಗೆ ಕೂಡ ಕಷ್ಟಗಳಿವೆ. ಆತನ ಬಗ್ಗೆ ಹಾಗೆಲ್ಲ ಮಾತನಾಡುವುದು ಸರಿಯಲ್ಲ. ಹಾಗೆಲ್ಲ ಮಾತನಾಡುವುದು ತಪ್ಪು ಎಂದು ಹೇಳುತ್ತಾರೆ. ಇದನ್ನು ಕೇಳಿದ ಸಿಂಚನಾಗೆ ಕೂಡ ಬಹಳ ಬೇಸರ ಆಗುತ್ತದೆ. ನನ್ನ ಗಂಡನ ಬಗ್ಗೆ ಎಷ್ಟು ಕೇವಲವಾಗಿ ಮಾತನಾಡುತ್ತಿದ್ದಾರೆ ಎಂದು ಬೇಸರ ಪಟ್ಟುಕೊಳುತ್ತಾರೆ. ಇನ್ನ ಸಂತೋಷ್ ಮಾತ್ರ "ಆ ವೆಂಕಿಯೇ ಹಣ ಕೊಟ್ಟಿದ್ದಾನೆ ಎಂದರೆ, ನಿನೂ ಕೂಡ ಬಹುದಲ್ವಾ?" ಎಂದಾಗ ಹರೀಶ್ ಏನು ಮಾತನಾಡುವುದು ಇಲ್ಲ.

Lakshmi Nivasa serial July 11th episode update

ಆತನಿಗೆ ಬಹಳ ಬೇಸರ ಆಗುತ್ತದೆ. ತನಗೆ ಬಂದ ಕಷ್ಟವನ್ನು ಮನದಲ್ಲಿಯೇ ನುಂಗಿಕೊಂಡು ಇರುತ್ತಾನೆ. ಇತ್ತ ಸಿಂಚನ ಕೊಂಚ ಜೋರಾಗಿಯೇ ಹೇಳುತ್ತಾಳೆ. ಅರೆರೆ ಯಾಕೆ ಹರೀಶ್ ಸುಳ್ಳು ಹೇಕುತ್ತಿದ್ದಿರಾ ನಿಮ್ಮ ಹಣವನ್ನು ಅತ್ತೆಗೆ ಕೊಡಿ ಎಂದು ನೀವೇ ಹೇಳಿದಿರಿ ಅಲ್ವಾ ಎಂದು ಹೇಳಿ ಹಣವನ್ನು ಲಕ್ಷ್ಮಿ ಕೈ ಗೆ ಕೊಡುತ್ತಾರೆ. ಇದನ್ನು ನೋಡಿದ ಸಂತೋಷ್ ಬಾಯಿ ಮುಚ್ಚಿ ನಿಂತುಕೊಳ್ಳುತ್ತಾನೆ.

ಲಕ್ಷ್ಮೀ ಮಾತಿಗೆ ಚಕಾರ ಎತ್ತಿದ ಸಂತೋಷ್

"ಬರುವ ತಿಂಗಳಿನಿಂದ ಸ್ವಲ್ಪ ಜಾಸ್ತಿ ಹಣ ಕೊಡಿ. ದಿನಸಿ ಸಾಮಾನಿಗೆ ಈಗ ರೇಟ್ ಜಾಸ್ತಿ ಆಗಿದೆ" ಎಂದು ಹೇಳುತ್ತಾರೆ. ಇದನ್ನು ಕೇಳಿ ಸಂತೋಷ್ "ಏನಮ್ಮಾ ಹಣ ಯಾಕೆ ಜಾಸ್ತಿ ಕೇಳುತ್ತಿಯಾ? ದಿನಸಿ ಸಾಮಾನಿನ ರೇಟ್ ಹೆಚ್ಚಳ ಆಗಿದೆ. ಆದರೆ ನಮ್ಮ ಸಂಬಳ ಹೆಚ್ಚಾಗಿಲ್ಲ" ಎಂದಾಗ ಲಕ್ಷ್ಮೀ ಗೆ ಕೊಂಚ ಕೋಪ ಬಂದು "ಇನ್ಮೇಲೆ ನೀನೇ ಇದನ್ನೆಲ್ಲ ನೋಡಿಕೋ" ಎಂದು ಹೇಳುತ್ತಾರೆ. ಆಗ ವೀಣಾ "ಅತ್ತೆ ನನ್ನ ಗಂಡನಿಗೆ ಮನೆ ಜವಾಬ್ದಾರಿ ವಹಿಸಬೇಡಿ. ಹೊಟ್ಟೆಗೆ ಅನ್ನ ಕೂಡ ತಿನ್ನಲು ಇವರು ಬಿಡದೆ. ಬರೀ ನೀರೆ ಕುಡಿದು ಜೀವನ ಸಾಗಿಸಬೇಕಾಗುತ್ತೆ. ನೀವೇ ಈ ಮನೆಯ ನಿರ್ವಹಣೆ ಮಾಡಿಕೊಂಡು ಹೋಗಿ ಅತ್ತೆ" ಎಂದು ಹೇಳುತ್ತಾಳೆ.

ವೀಣಾ ಮಾತು ಕೇಳಿ ನಕ್ಕ ಮನೆಮಂದಿ

ಈ ಮಾತನ್ನು ಕೇಳಿ ಸಂತೋಷ್‌ಗೆ ಮುಜುಗರ ಆಗುತ್ತದೆ. ಇತ್ತ ಹರೀಶನಿಗೆ ನಿಜ ವಿಚಾರ ಹೇಳಲು ಆಗದೆ ಬಹಳ ಸಂಕಟ ಪಡುತ್ತಾನೆ. ಆದರೆ, ಸಿಂಚನ ಮಾತ್ರ ಹರೀಶ್ ಮೇಲೆ ಗರಂ ಆಗಿದ್ದಾಳೆ. "ಹಣ ಇಲ್ಲ ಎಂದರೆ, ನನ್ನ ಜೊತೆ ಹೇಳಬೇಕು. ನಿನಗೆ ಕೂಡ ಇದೀಗ ಜವಾಬ್ಧಾರಿ ಬಂದಿದೆ. ನೀನು ಇದೆಲ್ಲವನ್ನೂ ನಿರ್ವಹಿಸಿಕೊಂಡು ಹೋಗಬೇಕು" ಎಂದಾಗ ಹರೀಶ್ ಮೆತ್ತಗೆ "ಇನ್ನೂ ಪೇಮೆಂಟ್ ಆಗಿಲ್ಲ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಿಂಚನಾಗೆ ಇನ್ನೂ ಕೋಪ ಬರುತ್ತದೆ. "ಪೇಮೆಂಟ್ ಆಗಿಲ್ಲ ಎನ್ನುವ ವಿಚಾರವನ್ನು ನನ್ನ ಬಳಿ ಹೇಳಬಹುದು ಅಲ್ವಾ . ನೀನು ಯಾಕೆ ನನ್ನ ಜೊತೆ ಏನು ಹೇಳಲಿಲ್ಲ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಹರೀಶ್ ಮೌನವಾಗಿ ಇರುತ್ತಾನೆ.

Lakshmi Nivasa serial July 11th episode update

ಗಂಡನ ಬಗ್ಗೆ ಕೋಪಗೊಂಡ ಸಿಂಚನ

ಸಿಂಚನಾಗೆ ತನ್ನ ಗಂಡ ಯಾರ ಎದುರಲ್ಲಿ ಕೂಡ ಕೈ ಚೆಲ್ಲಿ ಕೂರಬಾರದು. ಆತ ಯಾವತ್ತಿದ್ದರೂ ರಾಜನ ಹಾಗೆ ಇರಬೇಕು ಎಂದು ಹೇಳುತ್ತಾರೆ. ಇದನ್ನು ಕೇಳಿದ ಹರೀಶ್ ಸುಮ್ಮನಿರುತ್ತಾರೆ. ಇನ್ನೂ ವೀಣಾಗೆ ಸಂತೋಷ್ ಕಟ್ಟಿಸುತ್ತಿರುವ ಮನೆ ನೋಡಬೇಕು ಎನ್ನುವ ಆಸೆ ಮನೆ ಮಾಡಿ ಇರುತ್ತದೆ. ಆತನ ಬಳಿ ಅದೆಷ್ಟೇ ಸಾರಿ ಕೇಳಿಕೊಂಡರು ಆತ ಮಾತ್ರ ಮನೆಯವರ ಕೈಯಲ್ಲಿ ಸಿಕ್ಕಿಬಿದ್ದರೆ ಎನ್ನುವ ಭಯದಲ್ಲಿಯೇ ಇರುತ್ತಾನೆ. ವೀಣಾ ಆಸೆ ಈಡೇರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Lakshmi Nivasa serial July 11th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X