Lakshmi Nivasa Serial:ಜಾಹ್ನವಿ ಮಾತು ಕೇಳಿ ತಂದೆಗ್ಯಾಕೋ ಅನುಮಾನ? ಜಯಂತ್ ಎದೆಯಲ್ಲಿ ಢವ ಢವ!
ಜಾಹ್ನವಿಗೆ ಜಯಂತ್ ಕಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಜಯಂತ್‌ನಿಂದ ಅದೆಷ್ಟೇ ದೂರ ಹೋಗಬೇಕು ಎಂದು ಅಂದುಕೊಂಡರೂ ಜಾಹ್ನವಿಗೆ ಅದು ಸಾಧ್ಯ ಆಗುತ್ತಿಲ್ಲ. ಜಾಹ್ನವಿ ಎಲ್ಲೇ ಹೋದರೂ ಜಯಂತ್ ಹುಡುಕಿಕೊಂಡು ಬರುತ್ತಾನೆ. ಆತನ ಅತಿಯಾದ ಪ್ರೀತಿ ಜಾಹ್ನವಿಗೆ ಉಸಿರು ಕಟ್ಟಿಸುತ್ತಿದೆ. ಜಾಹ್ನವಿಗೆ ಜಯಂತ್ ಎಂದರೆ ಮೊದಲೆಲ್ಲ ಬಹಳ ಪ್ರೀತಿ ಇತ್ತು. ಆದರೆ ಇದೀಗ ಜಾಹ್ನವಿಗೆ ಜಯಂತ್ ಎಂದರೆ ಕೋಪ, ಭಯ. ಆತನ ವರ್ತನೆಗಳು ಜಾಹ್ನವಿಗೆ ಒಂಚೂರು ಹಿಡಿಸುತ್ತಿಲ್ಲಾ. ಆತನಿಂದ ದೂರ ಹೋಗಬೇಕು ಆತನ ಜೀವನದಲ್ಲಿ ಇರಬಾರದು ಎಂದುಕೊಂಡಾಗಲೆಲ್ಲಾ ಜಾಹ್ನವಿ ಹಿಂದೆಯೇ ಬರುತ್ತಾನೆ.
ಜಾಹ್ನವಿಗೆ ಇದೀಗ ಆಕೆಯ ಅಜ್ಜಿ ನೆನಪೇ ಹೆಚ್ಚಾಗಿ ಕಾಡುತ್ತಿದೆ. ಅಜ್ಜಿಗೆ ಹುಷಾರಿಲ್ಲ. ಈ ಸಮಯದಲ್ಲಿ ಜಯಂತ್ ಅಜ್ಜಿಗೆ ಏನು ಬೇಕಾದರೂ ಮಾಡಬಹುದು. ಅಜ್ಜಿ ಚೆನ್ನಾಗಿದ್ದರು. ಜಾಹ್ನವಿಯನ್ನು ನೋಡಿಕೊಳ್ಳಬೇಕು ಅಂತ ಈ ಮನೆಗೆ ಬಂದಿದ್ದರು. ಆದ್ರೀಗ ಜಯಂತ್ ಈ ಸ್ಥಿತಿ ತಂದಿದ್ದಾನೆ. ಇದಕ್ಕೆಲ್ಲ ಕಾರಣ ತಾನೆ ಎಂದು ಬೇಸರ ಪಟ್ಟುಕೊಳ್ಳುತ್ತಾಳೆ. ತನ್ನಿಂದಾಗಿಯೇ ಜಯಂತ್ ಈ ರೀತಿ ಆಗಿದ್ದಾರೆ ಎಂದು ಬಹಳ ನೋವಿನಿಂದ ಜಾಹ್ನವಿ ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಾಳೆ. ಈಗ ಅಜ್ಜಿಯನ್ನು ತನ್ನ ತವರು ಮನೆಗೆ ಕಳುಹಿಸುವುದೇ ವಾಸಿ ಎಂದುಕೊಂಡು ತನ್ನ ತಂದೆಗೆ ಕರೆ ಮಾಡುತ್ತಾಳೆ.

ಅಜ್ಜಿ ಈ ಪರಿಸ್ಥಿತಿಯಲ್ಲಿರುವುದನ್ನು ನೋಡಿ ಜಾಹ್ನವಿಗೆ ಬಹಳಷ್ಟು ನೋವಾಗುತ್ತದೆ. ಅವರನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ. ಅಲ್ಲಿ ಸುತ್ತ ಜನರು ಮಾತನಾಡುತ್ತಿರುತ್ತಾರೆ. ಸ್ವಲ್ಪ ಬೇಗ ಚೇತರಿಕೆ ಕಾಣಬಹುದು. ಅಜ್ಜಿ ಇಲ್ಲಿಯೇ ಇದ್ದರೆ ಖಂಡಿತವಾಗಿಯೂ ಆಕೆ ಉಳಿಯುವುದು ಅನುಮಾನ ಎಂದು ಜಾಹ್ನವಿ ತನ್ನ ತಂದೆ ಶ್ರೀನಿವಾಸ್ ಬಳಿ ಹೇಳುತ್ತಾಳೆ. ಶ್ರೀನಿವಾಸನಿಗೆ ಜಾಹ್ನವಿ ಮಾತು ಕೇಳಿ ಇದೇನು ಜಾಹ್ನವಿ ಸಡನ್ ಆಗಿ ಹೀಗೆ ಹೇಳಿದಳಲ್ಲ. ಯಾವತ್ತೂ ಜಾಹ್ನವಿ ಇಂತಹ ಮಾತುಗಳನ್ನು ಆಡುವುದಿಲ್ಲ. ಆದರೆ ಹೀಗ್ಯಾಕೆ ಹೀಗೆ ಹೇಳಿದಳು ಅಂತ ಯೋಚನೆ ಮಾಡುತ್ತಾರೆ.
ಶ್ರೀನಿವಾಸ್‌ಗೆ ಮೂಡಿದ ಅನುಮಾನ
ಜಾಹ್ನವಿ ಬಳಿ ಶ್ರೀನಿವಾಸ್ ಫೋನ್‌ನಲ್ಲಿ ಮಾತನಾಡಿದ ಬಳಿಕ ನಿಮ್ಮ ಮನೆಗೆ ಬರುತ್ತೇನೆಂದು ಕಾಲ್ ಕಟ್ ಮಾಡುತ್ತಾರೆ. ಫೋನ್ ಕಟ್ ಆದ ಬಳಿಕ ಶ್ರೀನಿವಾಸರಾಯರಿಗೆ ಅನುಮಾನ ಮೂಡಲು ಶುರುವಾಗುತ್ತೆ. ಜಾಹ್ನವಿಗೆ ಆ ಮನೆಯಲ್ಲಿ ಏನಾದರೂ ತೊಂದರೆ ಆಗಿರಬಹುದಾ? ಯಾಕೆ ಜಾಹ್ನವಿ ಸಡನ್ ಆಗಿ ಹೀಗೆ ಹೇಳಿದಳು ಎನ್ನುವ ಯೋಚನೆ ಕಾಡುತ್ತದೆ. ಬಹಳ ಲಘುಬಗೆಯಿಂದ ಜಾಹ್ನವಿ ಮನೆಗೆ ಶ್ರೀನಿವಾಸರಾಯರು ಬರುತ್ತಾರೆ. ಮಾವನನ್ನು ನೋಡಿದ ಜಯಂತ್‌ಗೆ ಖುಷಿ ಆಗುತ್ತೆ. ಆದರೆ ಸಡನ್ ಆಗಿ ಮಾವ ಬಂದ್ರಲ್ಲಾ ಯಾಕೆ ಎನ್ನುವ ಆತಂಕ ಆತನಲ್ಲಿ ಕಾಡುತ್ತದೆ. ಇನ್ನು ಜಾಹ್ನವಿ ಬಳಿ ಶ್ರೀನಿವಾಸ್ ಸ್ವಲ್ಪ ಪರ್ಸ್ನಲ್ ಆಗಿ ಮಾತನಾಡಬೇಕು ಎಂದು ಕರೆದುಕೊಂಡು ಹೋಗುತ್ತಾರೆ.

ಜಯಂತ್‌ಗೆ ಹೆಚ್ಚಾಯಿತು ತಳಮಳ
ಜಾಹ್ನವಿಗೆ ತಂದೆ ಏನೆಲ್ಲಾ ಪ್ರಶ್ನೆ ಕೇಳುತ್ತಾರೋ ಎನ್ನುವ ಭಯ ಕಾಡುತ್ತಿದೆ. ಇತ್ತ ಜಯಂತ್‌ಗೆ ಎಲ್ಲಿ ತನ್ನ ರಹಸ್ಯಗಳನ್ನು ಹೇಳುತ್ತಾಳೋ ಅಂತ ಭಯವಾಗುತ್ತೆ. ಏನಾದರೂ ಜಾಹ್ನವಿ ತನ್ನ ವಿಷಯವನ್ನು ಬಾಯಿಬಿಟ್ಟರೆ ಎನ್ನುವ ಭಯ ಕಾಡುತ್ತದೆ. ಆದರೆ ಶ್ರೀನಿವಾಸ್‌ಗೆ ಜಾಹ್ನವಿ ಅಜ್ಜಿಯನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಯಾಕೆ ಹೇಳುತ್ತಿದ್ದಾಳೆ. ಎಲ್ಲವೂ ಸರಿಯಾಗಿದೆ ಅಲ್ವಾ ಎಂದು ಮುದ್ದು ಮಗಳ ಬಳಿ ಶ್ರೀನಿವಾಸ್ ಕೇಳುತ್ತಾರೆ. ತಂದೆಯ ಮಾತಿಗೆ ಜಾಹ್ನವಿ ಅಂತದ್ದೇನು ಆಗಿಲ್ಲ ಎಂಬಂತೆ ಸಾಂತ್ವನದ ಮಾತನ್ನು ಹೇಳುತ್ತಾಳೆ.
ಪೊಲೀಸ್ ಸ್ಟೇಷನ್ ಕಡೆಗೆ ಭಾವನಾ
ಭಾವನಾಗೆ ಸಿದ್ದೇಗೌಡರ ಮೇಲೆ ಇತ್ತೀಚೆಗೆ ಪ್ರೀತಿ ಹುಟ್ಟಿದೆ. ಆ ಪ್ರೀತಿಯನ್ನು ಸಿದ್ದೇಗೌಡರೆ ಚಿವುಟಿ ಹಾಕಲು ಹೊರಟಿದ್ದಾರೆ. ಶ್ರೀಕಾಂತ್ ಸಾವಿಗೆ ಕಾರಣರಾದ ಆರೋಪಿ ಯಾರು? ಆತನ ಮುಖವನ್ನು ನಾನು ನೋಡಲೇಬೇಕೆಂದು ಕಂಡ ಕಂಡ ದೇವರಿಗೆ ಹರಕೆ ಕಟ್ಟಿಕೊಂಡ ಭಾವನಾ ಕಷ್ಟ ನೋಡಲಾಗದೆ ಸಿದ್ದೇಗೌಡರೆ ಸ್ವತಃ ತಾನೇ ಈ ಕೆಲಸ ಮಾಡಿರುವುದಾಗಿ ಭಾವನಾ ಬಳಿ ಹೇಳಬೇಕು. ಇಲ್ಲವಾದರೆ ಖಂಡಿತವಾಗಿಯೂ ಭಾವನಾ ಪಟ್ಟು ಬಿಡುವುದಿಲ್ಲ ಎಂದುಕೊಂಡ ಸಿದ್ದೇಗೌಡ ನೇರವಾಗಿ ಪೊಲೀಸ್ ಸ್ಟೇಷನ್‌ಗೆ ಹೋಗುತ್ತಾನೆ. ಸ್ಟೇಷನ್‌ಗೆ ಹೋಗುವ ಮೊದಲು ಭಾವನಾಗೆ ವಿಚಾರವನ್ನು ತಿಳಿಸುತ್ತಾನೆ. ಭಾವನಾ ತರಾತುರಿಯಲ್ಲಿ ಪೊಲೀಸ್ ಸ್ಟೇಷನ್‌ಗೆ ಹೋಗಲು ತಯಾರಿ ನಡೆಸುತ್ತಿರುತ್ತಾಳೆ. ಆಗ ಅಲ್ಲಿಗೆ ಬಂದ ಸಿದ್ದೇಗೌಡರ ಅಣ್ಣನಿಗೆ ಭಾವನಾಳಿಂದ ಆರೋಪಿ ಸಿಕ್ಕಿ ಬಿಟ್ಟ ಎನ್ನುವ ವಿಚಾರವನ್ನು ಕೇಳಿ ಭಯವಾಗುತ್ತೆ. ಭಾವನಾಳನ್ನು ಸ್ಟೇಷನ್‌ಗೆ ಹೋಗದ ರೀತಿ ತಡೆಯುತ್ತಾನೆ. ಆದರೆ ಭಾವನಾ ಮಾರಿಗೌಡರ ಮಾತು ಕೇಳದೆ ನೇರವಾಗಿ ಪೊಲೀಸ್ ಸ್ಟೇಷನ್ ಕಡೆಗೆ ಹೊರಟಿದ್ದಾಳೆ.


Click it and Unblock the Notifications











