Lakshmi Nivasa Serial: ಅಜ್ಜಿ ನೋಡಿಕೊಳ್ಳುವ ವಿಚಾರದಲ್ಲಿ ಕಿತ್ತಾಟ; ಅತ್ತ ಜಯಂತ್‌ಗೆ ಪೀಕಲಾಟ
ಜಾಹ್ನವಿಗೆ ಜಯಂತ್ ಮೇಲೆ ಬಹಳಷ್ಟು ಸಿಟ್ಟಿದೆ. ಆದರೆ ಅದ್ಯಾವುದನ್ನೂ ಯಾರ ಜೊತೆಯೂ ಹೇಳಿಕೊಳ್ಳಲು ಆಗದೆ ತನ್ನಲ್ಲೇ ತಾನು ನುಂಗಿಕೊಂಡು ಸಂಸಾರದ ನೌಕೆಯನ್ನು ತೂಗಿಸಿಕೊಂಡು ಹೋಗುತ್ತಿದ್ದಾಳೆ. ಜಾಹ್ನವಿಗೆ ಅಜ್ಜಿ ಎಂದರೆ ಪಂಚ ಪ್ರಾಣ. ಅಜ್ಜಿಗೆ ತನ್ನ ಗಂಡನಿಂದ ಅಪಾಯ ಆಯ್ತಲ್ಲಾ ಎನ್ನುವ ನೋವು ಆಕೆಯನ್ನು ಬಾಧಿಸುತ್ತಿದೆ. ಇದರ ಜೊತೆಗೆ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡು ಜಾಹ್ನವಿ ಬಹಳ ವೇದನೆ ಪಡುತ್ತಿದ್ದಾಳೆ. ತನ್ನ ಗಂಡನಿಗೆ ಯಾವುದೇ ವಿಚಾರವನ್ನು ಜಾಹ್ನವಿ ಹೇಳುವುದಿಲ್ಲ. ಆತನ ಜೊತೆ ಮಾತನಾಡುವುದು ಇಲ್ಲ. ಇದೀಗ ಅಜ್ಜಿಯನ್ನು ಮನೆಯಿಂದ ಹೊರಗೆ ಕಳುಹಿಸುವ ವಿಚಾರವನ್ನು ಜಾಹ್ನವಿ ತನ್ನ ಗಂಡನಿಂದ ಮುಚ್ಚಿಟ್ಟಿದ್ದಾಳೆ.
ಜಯಂತ್‌ಗೆ ಈ ವಿಚಾರ ತಿಳಿದರೆ ಖಂಡಿತವಾಗಿಯೂ ಅಜ್ಜಿಯನ್ನು ಮನೆಯಿಂದ ಕಳುಹಿಸಲು ಒಪ್ಪುವುದೇ ಇಲ್ಲ ಎನ್ನುವ ಆತಂಕ ಆಕೆಯಲ್ಲಿದೆ. ಶ್ರೀನಿವಾಸರಾಯರು ಮಗಳ ಮನೆಯಲ್ಲಿ ಖುಷಿಯಾಗಿಯೇ ಕಾಲ ಕಳೆಯುತ್ತಾರೆ. ಆದರೆ ಜಯಂತ್‌ಗೆ ಮಾವ ದಿಢೀರ್ ಬಂದಿರುವುದು ಮಾತ್ರ ಸರಿ ಕಾಣಿಸುತ್ತಿಲ್ಲ. ಮಾವ ಅದ್ಯಾಕೆ ಇದ್ದಕ್ಕಿದ್ದ ಹಾಗೆ ಬಂದು ಬಿಟ್ಟರಲ್ಲ. ನನ್ನ ಬಳಿ ಏನು ಹೇಳೇ ಇಲ್ಲ ಎಂದುಕೊಂಡಿದ್ದಾನೆ. ಈ ಬಗ್ಗೆ ಜಾಹ್ನವಿ ಬಳಿ ಕೇಳಿದಾಗ "ನನ್ನ ತಂದೆ ಅವರ ಮಗಳ ಮನೆಗೆ ಬಂದಿರುವುದು. ಇದಕ್ಕೆ ಯಾರ ಬಳಿಯೂ ಕೇಳಬೇಕಾಗಿಲ್ಲ ಎಂದು ಬಹಳ ಕೋಪದಿಂದ ಹೇಳುತ್ತಾಳೆ.

ಜಾಹ್ನವಿ ಮಾತನ್ನು ಕೇಳಿ ಜಯಂತ್‌ಗೆ ಸಿಟ್ಟು ಬಂದರು ತಡೆದುಕೊಳ್ಳುತ್ತಾನೆ. ಜಾಹ್ನವಿಗೆ ತನ್ನ ಗಂಡನ ಮನ:ಸ್ಥಿತಿ ಏನು ಎನ್ನುವುದು ಚೆನ್ನಾಗಿಯೇ ಅರ್ಥ ಆಗಿದೆ. ಆಕೆಗೆ ಜಯಂತ್ ಏನೇ ಮಾತನಾಡಿದರೂ ಕೋಪ ಬರುತ್ತಿದೆ. ಜಾಹ್ನವಿಗೆ ತನ್ನ ತಂದೆಯ ಬಳಿ ಗಂಡನ ಕರಾಳ ಮುಖದ ಅನಾವರಣ ಮಾಡಬೇಕೆಂದುಕೊಂಡಿರುತ್ತಾಳೆ. ಆದರೆ ಇದರಿಂದ ತಂದೆಗೆ ಬಹಳಷ್ಟು ನೋವು ಆಗುತ್ತದೆ ಎನ್ನುವ ಕಾರಣಕ್ಕೆ ತಂದೆಯ ಬಳಿ ಏನೂ ಹೇಳದೆ ಸುಮ್ಮನಾಗುತ್ತಾಳೆ. ಇತ್ತ ಶ್ರೀನಿವಾಸರಾಯರ ಮನೆಯಲ್ಲಿ ಅಜ್ಜಿ ಕರೆದುಕೊಂಡು ಬರುವ ವಿಷಯಕ್ಕೆ ಚರ್ಚೆ ನಡೆಯುತ್ತಿದೆ.
ಅಜ್ಜಿ ಮನೆಗೆ ಬರೋದು ಮನೆ ಮಂದಿಗೆ ಇಷ್ಟವಿಲ್ಲ
ಅಜ್ಜಿ ಮನೆಗೆ ಬಂದರೆ ನಮಗೆಲ್ಲ ಕಷ್ಟ. ಅವರನ್ನು ನೋಡಿಕೊಳ್ಳುವವರು ಯಾರು ಎಂದು ಕೋಪದಿಂದ ಸಿಂಚನಾ ತನ್ನ ಗಂಡನ ಬಳಿ ಹೇಳುತ್ತಾಳೆ. ಹರಿ ಮಾವನಿಗೆ ಕರೆ ಮಾಡಿ ಅಜ್ಜಿಯನ್ನು ಈ ಮನೆಗೆ ಕರೆತರುವುದು ಬೇಡ ಎಂದಾಗ ಹರಿಗೆ ಏನು ಮಾಡಬೇಕು ಅಂತ ದಿಕ್ಕೇ ತೋಚದಂತಾಯಿತು. ಇತ್ತ ಸಂತೋಷ್ ಕೂಡ ವೀಣಾ ಮುಂದೆ ಸಿಕ್ಕಾಪಟ್ಟೆ ಹಾರಾಡುತ್ತಾನೆ. ಆತನಿಗೆ ತನ್ನ ಹಣ ಎಲ್ಲಿ ಖರ್ಚಾಗಿ ಬಿಡುತ್ತದೆ ಎನ್ನುವ ಭಯ. ಆದರೆ ವೀಣಾ ಮಾತ್ರ ಸಂತೋಷ್‌ಗೆ ಸರಿಯಾಗಿಯೇ ಟಕ್ಕರ್ ಕೊಡುತ್ತಾಳೆ. ಇತ್ತ ಶ್ರೀನಿವಾಸರಾಯರಿಗೆ ಮಗಳು ಹಾಗೂ ಅಳಿಯಂದಿರ ಸಂಬಂಧ ಸರಿಗಾಗಿದೆಯೋ ಎನ್ನುವ ಅನುಮಾನ ಕಾಡುತ್ತದೆ.
ಮಗಳ ಮಾತು ಕೇಳಿದ ತಂದೆಗೆ ಅನುಮಾನ
ಈ ಬಗ್ಗೆ ಜಾಹ್ನವಿಯ ಬಳಿ ಕೇಳಿದಾಗ ಜಾಹ್ನವಿ ಮಾತ್ರ ನಾವು ಚೆನ್ನಾಗಿಯೇ ಇದ್ದೇವೆ ಅಜ್ಜಿ ನಿಮ್ಮ ಜೊತೆ ಇದ್ದರೆ ಖಂಡಿತವಾಗಿಯೂ ರಿಕವರಿ ಆಗುತ್ತಾರೆ. ಅದಕ್ಕೆ ನಾನು ಹಾಗೆ ಹೇಳಿದೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಶ್ರೀನಿವಾಸ ಅಳಿಯಂದಿರ ಬಳಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿ ಹೊರಟು ಹೋಗುತ್ತಾನೆ. ಇನ್ನು ಜಯಂತ್ ಒಬ್ಬನೇ ಕುಳಿತಿರುವ ವೇಳೆ ಅಲ್ಲಿಗೆ ಬಂದ ಶ್ರೀನಿವಾಸ್, ಅಜ್ಜಿಯನ್ನು ಮನೆಗೆ ಕರೆದುಕೊಂಡು ಹೋಗುವ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಇದಕ್ಕಿಂತ ಮುನ್ನ ಜಯಂತ್ ತನ್ನ ಮಾವನ ಬಳಿ ನಗು ನಗುತ್ತಾ "ಏನು ತಂದೆ ಮಗಳು ಮಾತನಾಡುತ್ತಾ ನನ್ನ ಮರೆತು ಬಿಟ್ಟಿದ್ದೀರ" ಎಂದು ಕೇಳಿದಾಗ ನಗುತ್ತಾ ಶ್ರೀನಿವಾಸ ರಾಯರು ಸಮಜಾಯಿಸಿ ನೀಡಲು ಮುಂದಾಗುತ್ತಾರೆ. ಹಾಗೆಯೇ ಅಜ್ಜಿಯನ್ನು ಈ ಮನೆಯಿಂದ ಕರೆದುಕೊಂಡು ಹೋಗೋಣ ಎಂದುಕೊಂಡಿದ್ದೇನೆ ಎಂದು ಹೇಳುತ್ತಾರೆ.

ಡಾಕ್ಟರ್‌ಗೆ ಕರೆ ಮಾಡಿದ ಜಯಂತ್
ಈ ಮಾತು ಕೇಳಿ ಜಯಂತ್‌ಗೆ ಮತ್ತಷ್ಟು ಕೋಪ ಬರುತ್ತದೆ. ಅಯ್ಯೋ ಅಜ್ಜಿ ಮಾವನ ಮನೆಗೆ ಹೋಗಿ ರಿಕವರಿಯಾದರೆ ನನ್ನ ಬಂಡವಾಳ ಹೊರಗೆ ಬರುತ್ತೆ ಅಂದುಕೊಳ್ಳುತ್ತಾನೆ. ಇನ್ನು ಮಾವ ಅಲ್ಲಿಂದ ಹೋದ ಬಳಿಕ ಡಾಕ್ಟರ್ ಜಯಂತ್‌ಗೆ ಕರೆ ಮಾಡಿ ಅಜ್ಜಿ ಕಂಡಿಶನ್ ಹೇಗಿದೆ ಎನ್ನುವುದನ್ನು ಚೆಕ್ ಮಾಡುತ್ತಾರೆ. ಆಗ ಡಾಕ್ಟರ್ ಅಜ್ಜಿಗೆ ಒಂದು ದಿನದಲ್ಲಿ ಅಥವಾ ಒಂದು ತಿಂಗಳಲ್ಲಿ ಅಥವಾ ಒಂದು ವರ್ಷದಲ್ಲಿ ಪ್ರಜ್ಞೆ ಬರಬಹುದು ಎಂದು ಹೇಳುತ್ತಾರೆ. ಇಷ್ಟಕ್ಕೆ ಸುಮ್ಮನಾಗಿ ಜಯಂತ್ ಕರೆ ಕಟ್ ಮಾಡುತ್ತಾನೆ. ಅಜ್ಜಿಯನ್ನು ಹೇಗಾದರೂ ಮಾಡಿ ಇಲ್ಲಿಯೇ ಉಳಿಸಿಕೊಂಡು ಜಾಹ್ನವಿ ಅವರ ಜೊತೆ ತನ್ನ ಸಂಬಂಧವನ್ನು ಸರಿಪಡಿಸಿಕೊಳ್ಳಬೇಕು ಎಂದು ಜಯಂತ್ ಅಂದುಕೊಳ್ಳುತ್ತಾನೆ.


Click it and Unblock the Notifications











