Lakshmi nivasa: ಸ್ಕ್ರಿಪ್ಟ್ ಹೇಳಿ ಕೊಡುವಾಗ ಖುಷಿಯನ್ನೇ ಯಾಮಾರಿಸಿದ ಸಿದ್ದೇಗೌಡ್ರು!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕಳೆದ ಎರಡು ವಾರಗಳಿಂದ ಮದುವೆಯ ಸಂಭ್ರಮ ಮನೆ ಮಾಡಿತ್ತು. ಜಾಹ್ನವಿಯ ಮದುವೆಯೂ ಮುಗಿದಿದೆ, ತವರು ಬಿಟ್ಟು ಗಂಡನ ಮನೆಗೂ ಜಾಹ್ನವಿ ಹೊರಟು ಆಗಿದೆ. ಜಾಹ್ನವಿಯ ಮದುವೆಯಲ್ಲಿ ಒಂದಷ್ಟು ಗಮನ ಹರಿಸಬಹುದಾದಂತ ಸನ್ನಿವೇಶಗಳು ನಡೆದಿವೆ. ಅದರಲ್ಲೂ ಇನ್ಯಾವತ್ತು ಮುಖವನ್ನೇ ನೋಡಲ್ಲ ಎನ್ನುತ್ತಿದ್ದ ಸಿದ್ದೇಗೌಡರ ಕೋಪವೂ ನೀರಿನಂತೆ ಕರಗಿ ಹೋಗಿದೆ.
ಸಿದ್ದೇಗೌಡ್ರಿಗೆ ಜಾಹ್ನವಿ ಮದುವೆಯಲ್ಲಿ ತಾನೂ ಪ್ರೀತಿಸುತ್ತಿದ್ದ ಹುಡುಗಿ ಸಿಕ್ಕಿದ್ದಾಳೆ. ಭಾವನಾಳ ಅಡ್ರೆಸ್ ಇಲ್ಲದೆ ಕೊರಗುತ್ತಿದ್ದ ಸಿದ್ದೇಗೌಡ್ರಿಗೆ ಭಾವನಾ ತನ್ನ ಅತ್ತೆ ಮಗಳೇ ಎಂಬ ಸತ್ಯ ಅನಾವರಣಗೊಂಡಿದೆ. ಈ ಸತ್ಯದಿಂದ ಸಿದ್ದೇಗೌಡ್ರು ಖುಷಿ ಹೆಚ್ಚಾಗಿದ್ದು, ರೀಲ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾನೆ.

ಖುಷಿ ಬಚಾವ್ ಮಾಡಿದ್ದ ಸಿದ್ದೇಗೌಡ್ರು
ಖುಷಿ ಇದಕ್ಕೂ ಮುಂಚೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಳು. ಅತ್ತೆ-ಮಾವನಿಂದ ಕೆಲಸದ ಆಳಾಗಿದ್ದಳು. ನೆಮ್ಮದಿಯೂ ಇಲ್ಲ, ಊಟ, ನಿದ್ದೆಯೂ ಇರಲಿಲ್ಲ. ಹೇಗೋ ಮನೆಯಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಳು. ಭಾವನಾ ಅಮ್ಮ ಬೇಕು ಅಂತ ಸಿದ್ದೇಗೌಡರ ಬಳಿಯೇ ಹೋಗಿದ್ದಳು. ಆದರೆ ಅಂದು ಅಲ್ಲಿ ಆಗಿದ್ದೇ ಬೇರೆ ಆಗಿತ್ತು. ಭಾವನಾ ಅಮ್ಮಳಿಗೆ ಸಿಗದೆ ಮತ್ತೆ ಅದೇ ಅತ್ತೆ ಮಾವನ ಕೈಗೆ ಸಿಕ್ಕಿದ್ದಳು. ಅಲ್ಲಿನ ರಿಯಾಲಿಟಿ ಸಿದ್ದೇಗೌಡ್ರಿಗೆ ತಿಳಿದೇ ಇರಲಿಲ್ಲ. ಮಗುವಿನ ಮುಖ ನೋಡಿ ಏನೋ ಆಗಿದೆ ಎಂದಷ್ಟೇ ಭಾವಿಸಿದ್ದ.
ಭಾವನಾಳ ಮಗಳೆಂಬ ಸತ್ಯ ಅನಾವರಣ
ಜಾಹ್ನವಿಯ ಮದುವೆ ಮನೆಯಲ್ಲಿ ಸಿದ್ದೇಗೌಡ್ರು ಖುಷಿ ಖುಷಿಯಾಗಿ ಓಡಾಡುತ್ತಿದ್ದರು. ಅದಕ್ಕೆಲ್ಲ ಕಾರಣ ಭಾವನಾ ಸಿಕ್ಕ ಖುಷಿ. ಸಿದ್ದೇಗೌಡ್ರು, ಭಾವನಾಳನ್ನು ಪ್ರೀತಿ ಮಾಡ್ತಾ ಇದ್ದಾನೆ ಎಂಬುದು ಅದಾಗಲೇ ಅವನ ಅತ್ತಿಗೆಗೆ ಅನುಮಾನ ಮೂಡಿತ್ತು. ಆದರೆ ಇದರ ನಡುವೆ ಸಿದ್ದೇಗೌಡರ ಖುಷಿ ಪುಸುಕ್ ಅಂತ ಕಡಿಮೆಯಾಗುವುದಕ್ಕೆ ಕಾರಣವಾಗಿದ್ದು, ಖುಷಿಯ ಅಮ್ಮ ಎನ್ನುವ ಒಂದು ಶಬ್ದ. ಆ ಮಾತು ಕೇಳಿಸಿಕೊಂಡ ಸಿದ್ದೇಗೌಡ್ರು ಮಂಕಾಗಿ ಹೋದರು. ಅತ್ತುಗೆ ಇದೆಲ್ಲವನ್ನು ಗಮನಿಸಿ ಭಾವನಾಳ ಹಿನ್ನೆಲೆ ವಿಚಾರಿಸಿದ್ದಳು. ಅತ್ತಿಗೆಗೆ ತಿಳಿದ ಖುಷಿಯ ಸತ್ಯ ಸಿದ್ದೇಗೌಡ್ರಿಗೆ ತಿಳಿಯದೆ ಹೋಯಿತು.

ಖುಷಿ ಜೊತೆಗೆ ಸಿದ್ದೇಗೌಡ್ರು ರೀಲ್ಸ್
ಇದು ಮದುವೆ, ಪ್ರೀತಿ, ಪ್ರೇಮ ಇತ್ಯಾದಿ ಎಂದುಕೊಂಡರು ಸಿದ್ದೇಗೌಡ್ರು ರೀಲ್ಸ್ ಮಾಡುವುದರಲ್ಲಿ ಫೇಮಸ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ಸೋಷಿಯಲ್ ಮೀಡಿಯಾ ತೆಗೆದು ನೋಡಿದರೇನೆ ಗೊತ್ತಾಗುತ್ತದೆ. ಎಷ್ಟು ಬ್ಯುಸಿ ರೀಲ್ಸ್ ಮಾಡುವುದರಲ್ಲಿ ಎಂಬುದು. ಈಗ ಖುಷಿ ಬೇರೆ ಸೇರಿದ್ದಾಳೆ. ಇಬ್ಬರು ರೀಲ್ಸ್ ಮಾಡುವುದರಲ್ಲಿ ಎಕ್ಸ್‌ಪರ್ಟ್‌ಗಳೇ ಆಗಿದ್ದಾರೆ. ಖುಷಿ ಅಲಿಯಾಸ್ ನಿಶಾ ಅಂತೂ ಡ್ಯಾನ್ಸ್, ಆಕ್ಟಿಂಗ್‌ನಲ್ಲಿ ಸೂಪರ್ ಆಗಿ ರೀಲ್ಸ್ ಮಾಡುತ್ತಾಳೆ.
ಖುಷಿಯನ್ನು ರೇಗಿಸಿದ ಸಿದ್ದೇಗೌಡ್ರು
ನಿಶಾಳ ಅಮ್ಮ ಪ್ರಿಯಾ ಅವರ ಅಕೌಂಟ್‌ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಖುಷಿ ಸ್ಕ್ರಿಪ್ಟ್ ಓದುತ್ತಿದ್ದಾಳೆ. ಸಿದ್ದೇಗೌಡ್ರು ಹೇಳಿಕೊಡುತ್ತಿದ್ದಾರೆ. ಅಕ್ಕಿ ರೊಟ್ಟಿ ತಿಂದ ಮೇಲೆ ಕಕ್ಕ ಹೋಗುತ್ತಾಳೆ ಎಂಬ ಸಾಲು ಬರುತ್ತದೆ. ಅಲ್ಲಿವರೆಗೂ ಹೇಳುತ್ತಿದ್ದ ಖುಷಿಗೆ ಶಾಕ್ ಆಗಿದೆ. ಹ ಎಂದು ಎಕ್ಸ್‌ಪ್ರೆಷನ್ ಕೊಟ್ಟು, ಸಿದ್ದೇಗೌಡ್ರುಗೆ ಹೊಡೆದಿದ್ದಾಳೆ. ಸಿದ್ದೇಗೌಡ್ರು ಈ ಫನ್ನಿ ವಿಡಿಯೋ ಮಾಡಿ ನಕ್ಕಿದ್ದಾರೆ. ಹೀಗೆ ಶೂಟಿಂಗ್ ಸ್ಪಾಟ್‌ನಲ್ಲಿ ಸಿದ್ದೇಗೌಡ್ರು ಎಲ್ಲರನ್ನು ಖುಷಿಯಾಗಿ ಇಟ್ಟುಕೊಳ್ಳುತ್ತಾರೆ.


Click it and Unblock the Notifications











