Lakshmi nivasa: 'ಲಕ್ಷ್ಮೀ ನಿವಾಸ' ಸಿದ್ದೇಗೌಡ್ರ ಡ್ಯಾನ್ಸ್ ನೋಡಿ ಫ್ಯಾನ್ಸ್ ದಿಲ್ ಖುಷ್
ಜೀ ಕನ್ನಡ ಧಾರಾವಾಹಿಯಲ್ಲಿ 'ಲಕ್ಷ್ಮೀ ನಿವಾಸ' ಶುರುವಾದ ಕಡಿಮೆ ಸಮಯದಲ್ಲಿಯೇ ಎಲ್ಲರ ಮನಸ್ಸನ್ನು ಗೆದ್ದಿದೆ. ಈ ಧಾರಾವಾಹಿಯಲ್ಲಿ ಮಧ್ಯಮವರ್ಗದವರ ಜೀವನವಿದೆ, ಸಾಕಷ್ಟು ಭಾವನೆಗಳು ತುಂಬಿವೆ, ಲವ್ ಸ್ಟೋರಿಯೂ ಅಡಗಿದೆ. ಹೀಗಾಗಿ ಈ ಧಾರಾವಾಹಿ ಮಕ್ಕಳಿಂದ ಹಿಡಿದು ವೃದ್ಧರ ತನಕವೂ ಸೆಳೆಯುತ್ತಿದೆ.
ಹಳ್ಳಿ ಸೊಗಡಿನ ಭಾಷೆಯೂ ಈ ಧಾರಾವಾಹಿಯಲ್ಲಿ ಅನಾವರಣವಾಗಿದೆ. ಜವರೇಗೌಡನ ಕುಟುಂಬದಲ್ಲಿ ಪಕ್ಕಾ ಮಂಡ್ಯ, ರಾಮನಗರ ಭಾಷೆಗೆ ಒತ್ತು ಕೊಡಲಾಗಿದೆ. ಸಿದ್ದೇಗೌಡನ ಮಾತಿಗಂತು ಅಭಿಮಾನಿಗಳು ಫುಲ್ ಖುಷಿ ಆಗಿಬಿಡುತ್ತಾರೆ. ಸಿದ್ದೇಗೌಡರ ಭಾಷೆ, ಮಾನವೀಯತೆ ಎಲ್ಲರನ್ನಿ ಬೆರಗು ಗೊಳಿಸಿದೆ. ಇದೀಗ ಡ್ಯಾನ್ಸ್ ಮಾಡಿಯೂ ಆಶ್ಚರ್ಯ ಉಂಟು ಮಾಡಿದ್ದಾರೆ.

ಭಾವನಾ ಕಂಡರೆ ಬಲು ಪ್ರೀತಿ
ಸಿದ್ದೇಗೌಡ್ರಿಗೆ ತನ್ನ ಕನಸಿನ ಹುಡುಗಿ ಇವಳೇ ಎಂಬುದು ಮನಸ್ಸಿಗೆ ಗೊತ್ತಾಗಿದೆ. ಭಾವನಾಳನ್ನು ಒಮ್ಮೆ ನೋಡಿದ್ದಷ್ಟೇ ಸಿದ್ದೇಗೌಡ್ರು ಫಿಕ್ಸ್ ಆಗಿ ಹೋಗವ್ರೆ. ಹೇಗಾದರೂ ಮಾಡಿ ಭಾವನಾಳನ್ನು ಒಲಿಸಿಕೊಳ್ಳಬೇಕೆಂದೇ ಹಿಂದೆ ಹಿಂದೆ ಬಿದ್ದು, ಕಮಲಿ ಅನ್ನೋ ಅತ್ತೆ ಮಗಳ ನೆವ ತೆಗೆದಿದ್ದಾರೆ. ಆದರೆ ಭಾವನಾ ಮನಸ್ಸಲ್ಲಿ ಶ್ರೀಕಾಂತ್ ಸಾವು ಅಷ್ಟು ಸುಲಭಕ್ಕೆ ಮಾಸುವುದಾದರೂ ಹೇಗೆ ಹೇಳಿ. ಹೀಗಾಗಿ ಸಿದ್ದೇಗೌಡನ ಬಗ್ಗೆ ಒಲವು ಮೂಡುತ್ತಿಲ್ಲ. ಸಿದ್ದೇಗೌಡ ಹಿಂದೆ ಹಿಂದೆ ಬಂದರೂ ಭಾವನಾ ಮಾತ್ರ ಮುಂದೆ ಮುಂದೆ ಅಂತ ಹೋಗುತ್ತಲೆ ಇದ್ದಾಳೆ.
ಮಹಿಳೆಯರ ಹೃದಯ ಕದ್ದ ಸಿದ್ದೇಗೌಡರು
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ ಪಕ್ಕಾ ಮಂಡ್ಯದ ಹುಡುಗನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಸದಾ ಹಣೆಯಲ್ಲಿ ತಿಲಕವಿಟ್ಟು, ಕೆಟ್ಟವರಿಗೆ ಕೆಟ್ಟವನಾಗಿ, ಒಳ್ಳೆಯವರಿಗೆ ಒಳ್ಳೆಯವನಾಗಿ, ಮನಿಷ್ಯತ್ವ ತುಂಬಿರುವ ಮನುಷ್ಯನಾಗಿ ಕಾಣಿಸುತ್ತಾನೆ. ಆ ಮುಗ್ಧತೆಗೆ ಹೆಣ್ಮನಗಳು ಸೋತು ಹೋಗಿವೆ. ಸಿದ್ದೇಗೌಡನ ಫೋಟೋ ಹಾಕಿ ಹಾರ್ಟ್ ಇಮೋಜಿ ಹಾಕಿಕೊಳ್ಳುತ್ತಿದ್ದಾರೆ. ಸಿದ್ದೇಗೌಡರು ಒಂದು ಫೋಟೋ ಹಾಕಿದರು ಸಾಕು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಅಷ್ಟು ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ ಸಿದ್ದೇಗೌಡ್ರು.

ಸಿದ್ದೇಗೌಡರ ನಿಜವಾದ ಹೆಸರೇನು..?
ಲಕ್ಷ್ಮೀ ನಿವಾಸದಲ್ಲಿ ಸಿದ್ದೇಗೌಡರು ಎಂದು ಖ್ಯಾತಿ ಪಡೆಯುತ್ತಿರುವ ಈ ನಟನ ನಿಜವಾದ ಹೆಸರು ಧನಂಜಯ. ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ಅತ್ತಿಗೆ ಜೊತೆಗೆ ರೀಲ್ಸ್ ಮಾಡುವುದರಲ್ಲಿ ಎತ್ತಿದ ಕೈ. ಮಾನಸ ಮನೋಹರ್ ಜೀ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿದ್ದು, ಸಿದ್ದೇಗೌಡರ ಅತ್ತಿಗೆಯಾಗಿ ನಟಿಸುತ್ತಿದ್ದಾರೆ. ಶೂಟಿಂಗ್ ಗ್ಯಾಪ್ ನಲ್ಲಿ ಫನ್ನಿ ಎನಿಸುವಂತ ರೀಲ್ಸ್ ಮಾಡಿ, ಹಂಚಿಕೊಳ್ಳುತ್ತಾ ಇರುತ್ತಾರೆ. ಅಷ್ಟೇ ಅಲ್ಲ ಸಿದ್ದೇಗೌಡ್ರು ಡ್ಯಾನ್ಸ್ ಮಾಡುವುದರಲ್ಲೂ ಎಕ್ಸ್ ಪರ್ಟ್ ಎಂಬುದನ್ನು ತೋರಿಸಿದ್ದಾರೆ. ಅವರ ಫ್ಯಾನ್ ಪೇಜ್‌ಗಳು ಓಪನ್ ಆಗಿದ್ದು, ಸಿಕ್ಕಾಪಟ್ಟೆ ಡ್ಯಾನ್ಸ್ ವಿಡಿಯೋಗಳು ಅಪ್ಲೋಡ್ ಆಗಿವೆ.
ಸಿನಿಮಾಗಳಲ್ಲಿ ನಟಿಸಿರುವ ಸಿದ್ದೇಗೌಡರು
ಸಿದ್ದೇಗೌಡ ಅಲಿಯಾಸ್ ಧನಂಜಯ ಸಾಕಷ್ಟು ವರ್ಷಗಳಿಂದ ಕಲಾವಿದರಾಗಿ ತೆರೆ ಹಂಚಿಕೊಂಡಿದ್ದಾರೆ. ಸೀರಿಯಲ್ ಜೊತೆಗೆ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಥಂಗ್ಸ್ ಆಫ್ ರಾಮಘಡ', 'ವಾಸಂತಿ ನಲಿದಾಗ', 'ಖಾಸಗಿ ಪುಟಗಳು' ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಗ ಬೆಳ್ಳಿ ತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಿರುತೆರೆ ಕೂಡ ಈಗ ದೊಡ್ಡಮಟ್ಟದಲ್ಲಿ ರೀಚ್ ಆಗುತ್ತಿರುವ ಕಾರಣ ಕಿರುತೆರೆಯ ಆಫರ್ ಗಳನ್ನು ಯಾರೂ ಮಿಸ್ ಮಾಡಿಕೊಳ್ಳಲ್ಲ. ಬೆಳ್ಳಿ ತೆರೆಯಲ್ಲಿ ಖುಲಾಯಿಸದ ಅದೃಷ್ಟ ಎಷ್ಟೋ ಕಲಾವಿದರಿಗೆಕಿರುತೆರೆಯಲ್ಲಿ ಖುಲಾಯಿಸಿದೆ.


Click it and Unblock the Notifications