Lakshminivasa: ಭಾವನಾ-ಸಿದ್ದೇಗೌಡ್ರು ಮದುವೆ ಗ್ಯಾರಂಟಿ; ಈ ವಿಡಿಯೋನೆ ಸಾಕ್ಷಿ!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಈಗ ಕ್ರೇಜ್ ಹುಟ್ಟಿಸಿರುವ ಜೋಡಿ ಎಂದರೆ ಅದು ಭಾವನಾ ಹಾಗೂ ಸಿದ್ದೇಗೌಡರದ್ದು. ಸಿದ್ದೇಗೌಡ್ರು ಮೊದಲೇ ತಮ್ಮ ಪ್ರೀತಿ ಹೇಳಿಕೊಳ್ಳುವುದಕ್ಕೆ ಆಗದೇ ಒದ್ದಾಡುತ್ತಿದ್ದಾರೆ. ಭಾವನಾನೋ ಸಿದ್ದೇಗೌಡ್ರು ಎದುರು ಬಂದ್ರೆದೇ ಕೋಪಿಸಿಕೊಳ್ಳುತ್ತಾಳೆ. ಅದೇ ಗೌಡ್ರು ಫೋನ್ ಬಂದ್ರೆ ಫುಲ್ ಖುಷಿಯಾಗುತ್ತಾಳೆ. ಹೀಗಿರುವಾಗ ಸೌಪರ್ಣಿಕಾ ಹಾಗೂ ನೀಲೂ ಡಬ್ಬಲ್ ಗೇಮ್ ಶುರು ಮಾಡಿದ್ದಾರೆ.
ಸಿದ್ದೇಗೌಡ್ರ ಪ್ರೀತಿ ವಿಚಾರ ಗೊತ್ತಿರೋದು ಮನೆಯಲ್ಲಿ ನೀಲೂಗೆ ಮಾತ್ರ. ಆದರೆ ತನಗಾಗಬೇಕಾದ ಲಾಭದಿಂದ ಈಗ ಸೌಪರ್ಣಿಕಾ ಜೊತೆಗೆ ಸೇರಿ, ಸಿದ್ದೇಗೌಡ್ರಿಗೆ ಪೂರ್ವಿ ಜೊತೆಗೆ ಮದುವೆ ಮಾಡಲು ಹೊರಟಿದ್ದಾರೆ. ಇದು ಪ್ರೇಕ್ಷಕರಿಗೇನೆ ಇಷ್ಟವಿಲ್ಲ ಅನ್ನಿ. ಪ್ರೇಕ್ಷಕರೆಲ್ಲಾ ನಮ್ ಸಿದ್ದೇಗೌಡ್ರಿಗೆ ಹಿಂಗೆಲ್ಲಾ ಅನ್ಯಾಯ ಮಾಡಬೇಡಿ ಅಂತಿದ್ದಾರೆ. ಆದರೆ ಈಗ ಅಭಿಮಾನಿಗಳು ಹಂಚಿಕೊಂಡಿರೋ ವಿಡಿಯೋದಲ್ಲಿ ಭಾವನಾ ಹಾಗೂ ಸಿದ್ದೇಗೌಡ್ರು ಇಬ್ಬರು ಮದುವೆ ಆಗೋದು ಪಕ್ಕಾ ಅಂತಿದ್ದಾರೆ.

ಸಿದ್ದೇಗೌಡ್ರು-ಭಾವನಾ ಮದುವೆ
ಸಿದ್ದೇಗೌಡ್ರಿಗೆ ಭಾವನಾ ಮೇಲೆ ಅದೆಷ್ಟು ಪ್ರೀತಿ ಎಂದರೆ ಅವಳ ಎಲ್ಲಾ ಕಷ್ಟವನ್ನು ತಾವೇ ಅರ್ಥ ಮಾಡಿಕೊಂಡು ಸಹಾಯ ಮಾಡುತ್ತಿದ್ದಾರೆ. ಮಗುವಿನ ಶಾಲೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಮೊದಲ ಹುಟ್ಟುಹಬ್ಬಕ್ಕೆ ಎರಡೆರಡು ಗಿಫ್ಟ್ ನೀಡಿದ್ದಾರೆ. ಮನೆಯವರ ಮುಂದೆ ಬೇರೆ ಗಿಫ್ಟ್ ಕೊಟ್ಟರೆ ಗೌಡ್ರಾಗಿ ಬಳೆಗಳನ್ನೇ ಗಿಫ್ಟ್ ನೀಡಿದ್ದಾರೆ. ಇದೀಗ ಇಬ್ಬರ ಮದುವೆ ಅದ್ದೂರಿಯಾಗಿ ನೆರೆವೇರಿರುವ ವಿಡಿಯೋವೊಂದು ವೈರಲ್ ಆಗಿದೆ.
ಕನಸೋ ಇದು ನನಸೋ ಇದು ಗೊತ್ತಿಲ್ಲ
ಭಾವನಾಗಿರುವ ಕೋಪ, ಸಿದ್ದೇಗೌಡ್ರ ಭಯ, ಅತ್ತಿಗೆಯ ಮಸಲತ್ತು, ಸೌಪರ್ಣಿಕಾ ಗೇಮ್ ಇದೆಲ್ಲಾ ನೋಡಿದರೆ ಸಿದ್ದೇಗೌಡ್ರ ಈ ಅದ್ದೂರಿ ಮದುವೆ ಇಷ್ಟು ಬೇಗ ನನಸಾಗುವುದಕ್ಕೆ ಸಾಧ್ಯವಾ ಎನಿಸುತ್ತಿದೆ. ಅದರಲ್ಲೂ ಇಷ್ಟು ಬೇಗ ಬರುವುದಕ್ಕೆ ಕೊಂಚ ಕಷ್ಟವೇ ಸರಿ. ಆದರೆ ವೈರಲ್ ಆಗಿರುವ ಈ ರೀಲ್ಸ್ ಅದ್ದೂರಿ ಮಂಟಪ, ಅಲಂಕಾರಗೊಂಡ ಕುಟುಂಬಸ್ಥರು, ಸಾಂಪ್ರದಾಯಿಕ ಉಡುಗೆಯಲ್ಲಿ ಭಾವನಾ ಸಿದ್ದೇಗೌಡ್ರು. ಹೀಗೆ ಯಾರಿಗೂ ಕಮ್ಮಿ ಇಲ್ಲ ಅಂತೇನೋ ಮದುವೆಯಾಗಿದ್ದಾರೆ. ಆದರೆ ಇದು ಕನಸೋ.. ನನಸೋ ತಿಳಿಯುತ್ತಿಲ್ಲ.
ರೀಲ್ಸ್‌ನಲ್ಲೂ ಫುಲ್ ಫನ್ನು
ಸಿದ್ದೇಗೌಡ್ರು ಹೇಳಿ ಕೇಳಿ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ರೀಲ್ಸ್ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಸೆಟ್‌ನಲ್ಲಂತು ಎಲ್ಲರ ಕಾಲೆಳೆಯುತ್ತಾ, ಖುಷಿ ಖುಷಿಯಾಗಿ ಇರುತ್ತಾರೆ. ಈಗ ಮದುವೆ ಅಲಂಕಾರದಲ್ಲಿದ್ದರು ಕೂಡ ಮನರಂಜನೆ ನೀಡಿದ್ದಾರೆ. ಸಿದ್ದೇಗೌಡ್ರ ಸುತ್ತ ನಿಂತಿರುವ ಮನೆ ಮಂದಿ ಫುಲ್ ಸೈಲೆಂಟ್ ಆಗಿ ನಿಂತಿದ್ದಾರೆ. ಆದರೆ ಗೌಡ್ರು ಎಲ್ಲರ ಮುಖ ನೋಡಿಕೊಂಡು ಫನ್ ಮಾಡಿದ್ದಾರೆ. ಅಷ್ಟೇ ಅಲ್ಲ ಜವರೇಗೌಡ್ರು ಫುಲ್ ಗರಂ ಆಗಿ ನೋಡುತ್ತಿದ್ದಾರೆ.
ಗೌಡ್ರು-ಭಾವನಾ ಮದುವೆಗೆ ಬಹುಪರಾಕ್
ಸೌಪರ್ಣಿಕಾ ಹಾಗೂ ನೀಲೂ ಏನೇ ಪ್ಲ್ಯಾನ್ ಮಾಡಿದರೂ ಸಿದ್ದೇಗೌಡ್ರಿಗೆ ಪೂರ್ವಿ ಜೋಡಿಯಲ್ಲ ಅನ್ನೋದು ಅಭಿಮಾನಿಗಳ ಆಶಯ. ಅಭಿಮಾನಿಗಳಿಗೆ ಹೇಗೆ ಇಷ್ಟವಾಗುತ್ತೊ ನಿರ್ದೇಶಕರು ಒಮ್ಮೊಮ್ಮೆ ಕಥೆಯನ್ನು ಹಾಗೆ ತೆಗೆದುಕೊಂಡು ಹೋಗುತ್ತಾರೆ. ಇದೀಗ ಭಾವನಾ ಹಾಗೂ ಸಿದ್ದೇಗೌಡ್ರ ಮದುವೆ ವಿಡಿಯೋ ನೋಡಿ ಫುಲ್ ಖುಷಿಯಾಗಿದ್ದಾರೆ. ಈ ಎಪಿಸೋಡ್ ಟಿವಿಯಲ್ಲಿ ಯಾವಾಗ ಬರಲಿದೆ ಎಂದು ಕುತೂಹಲದಿಂದ ಕಮೆಂಟ್ಸ್ ಹಾಕುತ್ತಿದ್ದಾರೆ. ಆದಷ್ಟು ಬೇಗ ಈ ರೀತಿಯ ಎಪಿಸೋಡ್ ಹಾಕಿ ಎಂದು ಮನವಿ ಮಾಡಿದ್ದಾರೆ.


Click it and Unblock the Notifications











