Lakshmi nivasa: ವಿಶ್ವ-ಜಾಹ್ನವಿ ಮದುವೆ ಪಕ್ಕಾ; ಅದಕ್ಕಿದೆ ಬಲವಾದ ಕಾರಣ!

By ಎಸ್ ಸುಮಂತ್

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸಡನ್ ಸಡನ್ ಟ್ವಿಸ್ಟ್ ಕೊಡುತ್ತಾ ಇದ್ದಾರೆ ನಿರ್ದೇಶಕರು. ಪ್ರೀತಿ- ಪ್ರೇಮ ಎಂಬ ಕಾನ್ಸೆಪ್ಟ್ ಸದಾ ಕಾಲಕ್ಕೂ ಸಲ್ಲುತ್ತದೆ. ಎಲ್ಲಾ ವಯಸ್ಸಲ್ಲೂ ಪ್ರೀತಿ ಚಿಗುರುವುದಕ್ಕೆ ಯಾವುದೇ ಅಡೆತಡೆ ಇಲ್ಲದ ಕಾರಣ, ಲವ್ ಸ್ಟೋರಿಗಳನ್ನ ಆಲ್ಮೋಸ್ಟ್ ಎಲ್ಲರೂ ಲೈಕ್ ಮಾಡ್ತಾರೆ. ಆದರೆ ಈ ಧಾರಾವಾಹಿಯಲ್ಲಿ ಟ್ವಿಸ್ಟ್ ಅಂದ್ರೆ ಲವ್ ಸ್ಟೋರಿಯಲ್ಲೇ ಕೊಡ್ತಿದ್ದಾರೆ.

ಧಾರಾವಾಹಿಯಲ್ಲಿ ಜಿಗುರೊಡೆಯುತ್ತಿದ್ದ ಪ್ರೇಮಕಥೆಗೆ ಅಂತ್ಯವಾಡಿದ್ದು ಆಗಿದೆ. ಈಗ ಭಾವನಾ ಲೈಫ್‌ನಲ್ಲಿ ಮತ್ತೆ ಪ್ರೀತಿ ಚಿಗುರುವುದು ಕಷ್ಟವೇ. ಇನ್ನು ಜಾಹ್ನವಿಯನ್ನು ವಿಶ್ವ ಮನಸಾರೆ ಪ್ರೀತಿ ಮಾಡುತ್ತಾ ಇದ್ದರೂ ವಿಶ್ವನಿಗೆ ವಿಲನ್ ಆಗಿ ಜಯಂತ್ ಬಂದಾಗಿದೆ. ಆದರೂ ಜಾಹ್ನವಿಗೆ ವಿಶ್ವನೇ ವಿಧಿ ಬರೆದ ಜೋಡಿ. ಅದಕ್ಕೆ ಪಕ್ಕಾ ಉತ್ತರ ಇಲ್ಲಿದೆ.

Lakshmi nivasa serial Written Update on February 7th episode

ಜಾಹ್ನವಿ ಕಾಲೇಜಿಗೆ ಬಂದ ಜಯಂತ್

ಕಾಲೇಜಿನ ವಾರ್ಷಿಕೋತ್ಸವಕ್ಕೆ ಗೆಸ್ಟ್ ಆಗಿ ಜಯಂತ್ ಬಂದಿದ್ದ. ಕಾಲೇಜಿಗೆ ಬಂದ ಗಳಿಗೆಯೇ ಇಬ್ಬರ ಮುಖಾಮುಖಿಯಾಗಿತ್ತು. ಇಂಪ್ರೆಸ್ ಕೂಡ ಆಗಿದ್ದ ಜಯಂತ್. ಕಾರ್ಯಕ್ರಮ ಮುಗಿದು, ಬಹುಮಾನಗಳನ್ನು ತೆಗೆದುಕೊಂಡು ಹೋಗುವಾಗ ಜಾಹ್ನವಿಗೆ ಒಬ್ಬರ ಸಹಾಯ ಬೇಕಿತ್ತು. ಕೇಳದೆಯೂ ಜಯಂತ್ ಸಹಾಯಕ್ಕೆ ನಿಂತಿದ್ದಾನೆ.

ಜಾಹ್ನವಿಯ ಹೋಗಿದ್ದಕ್ಕೆ ವಿಶ್ವ ಬೇಸರ

ವಿಶ್ವ, ಜಾಹ್ನವಿಯನ್ನು ಅದೆಷ್ಟು ಪ್ರೀತಿ ಮಾಡುತ್ತಾನೆ ಎಂಬುದು ಸ್ನೇಹಿತರಿಗೆಲ್ಲಾ ಗೊತ್ತು. ಆದರೆ ಜಾಹ್ನವಿಗೆ ಅದು ಗೊತ್ತಿಲ್ಲ. ಬೆಸ್ಟ್ ಫ್ರೆಂಡ್ ಎಂಬ ಭಾವನೆಯಷ್ಟೇ ಅವಳಲ್ಲಿ ಇರುವುದು. ಪ್ರೀತಿಯ ವಿಚಾರವನ್ನು ಹೇಳುವುದಕ್ಕೆ ಹೊರಟಾಗಲೇ ಅವಳ ಅಕ್ಕನ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಹೀಗಾಗಿ ವಿಶ್ವ ತನ್ನ ಪ್ರೀತಿಯನ್ನು ಹೇಳಿಕೊಳ್ಳದೆ ಸುಮ್ಮನಾಗಿಬಿಟ್ಟ. ಆದರೆ ಜಾಹ್ನವಿ ಇನ್ಯಾರದ್ದೋ ಕಾರಲ್ಲಿ ಹೋಗುವುದನ್ನು ವಿಶ್ವನಿಗೆ ಸಹಿಸುವುದಕ್ಕೆ ಆಗಿಲ್ಲ. ಮನಸ್ಸಿನ ಭಾವನೆಯನ್ನು ಬರೆದಿದ್ದ ಪತ್ರವನ್ನು ತಲುಪಿಸಲು ಆಗದೇ ಒದ್ದಾಡಿದ್ದಾನೆ.

Lakshmi nivasa serial Written Update on February 7th episode

ವಿಶ್ವ-ಜಾಹ್ನವಿ ಜೋಡಿಗೆ ಬಹುಪರಾಕ್

ಮೊದಲಿನಿಂದ ವಿಶ್ವ ಜಾಹ್ನವಿಯನ್ನು ಪ್ರೀತಿಸುತ್ತಿದ್ದಾನೆ. ಹೀಗಾಗಿ ಲಕ್ಷ್ಮೀ ನಿವಾಸ ಫ್ಯಾನ್ಸ್ ಜಾಹ್ನವಿ ಹಾಗೂ ವಿಶ್ವನ ಪರವೇ ಇದ್ದಾರೆ. ಇಬ್ಬರ ಪ್ರೀತಿ ಒಂದಾಗಲಿ ಎಂದೇ ಬಯಸುತ್ತಿದ್ದಾರೆ. ಇದರ ಜೊತೆಗೆ ಜಾಹ್ನವಿ ಪಾತ್ರಧಾರಿಯ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆದಷ್ಟು ಚಂದನಾಗೆ ಡ್ರೆಸ್ ಚೇಂಜ್ ಮಾಡಿ, ಲಂಗ-ದಾವಣಿ ಬಿಟ್ಟು ಬೇರೆ ಡ್ರೆಸ್ ಹಾಕಿ ಎನ್ನುತ್ತಿದ್ದಾರೆ. ಮೇಕಪ್ ವಿಚಾರದಲ್ಲೂ ಚೆನ್ನಾಗಿ ಕಾಣುವಂತೆ ಮಾಡಿ ಎನ್ನುತ್ತಿದ್ದಾರೆ.

ವಿಶ್ವನೇ ಜಾಹ್ನವಿ ಜೋಡಿಯಾಗುವುದು

ಲಕ್ಷ್ಮೀ ನಿವಾಸ ಧಾರಾವಾಹಿಯನ್ನು ಬಹಳ ಅಚ್ಚುಕಟ್ಟಾಗಿ ನೋಡಿದರೆ ಯಾರೂ..? ಯಾರಿಗೆ ಜೋಡಿಯಾಗಬೇಕು..? ಯಾಕೆ ಎಂಬುದು ಬಹಳ ಚೆನ್ನಾಗಿಯೇ ಅರ್ಥವಾಗಿ ಬಿಡುತ್ತದೆ. ಯಾಕಂದ್ರೆ ಧಾರಾವಾಹಿಯಲ್ಲಿ ಎರಡು ಕುಟುಂಬಗಳು ಸರಿಯಾಗಬೇಕಿದೆ. ಅದಕ್ಕೊಂದು ಸ್ಟ್ರಾಂಗ್ ಕಾರಣವೂ ಬೇಕಿದೆ. ಆ ಕಾರಣಗಳೇ ಎರಡು ಹೆಣ್ಣುಮಕ್ಕಳು ಆ ಮನೆಗಳಿಗೆ ಸೊಸೆಯಂದಿರಾಗಿ ಹೋಗುವುದು. ಒಂದು‌ ಲಕ್ಷ್ಮೀಯ ಅಣ್ಣನ ಮನೆ. ಮದುವೆ ಮಾಡಿಕೊಂಡು ಬಂದಾಗಿಂದ ಅಣ್ಣನ ಬಾಂಧವ್ಯವನ್ನೇ ಕಡಿದುಕೊಂಡು ಬದುಕುತ್ತಿದ್ದಾಳೆ. ಸಂಬಂಧ ಸರಿ ಮಾಡಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಅಣ್ಣ ಒಪ್ಪುತ್ತಿಲ್ಲ. ಲಕ್ಷ್ಮೀ ಅಣ್ಣನ ಮಗನೇ ವಿಶ್ವ. ಇನ್ನು ಲಕ್ಷ್ಮೀ ಚಿಕ್ಕ ಸೊಸೆ ಅಂದರೆ ಬೀಗರ ಮನೆಗೂ ಇಲ್ಲಿರುವ ಸಂಬಂಧಕ್ಕೂ ನಂಟು ಅಷ್ಟಕ್ಕೆ ಅಷ್ಟೇ. ಬೀಗರ ಮನೆಯ ಮಗ ಸಿದ್ದೇಗೌಡ. ಈಗ ಭಾವನಾಳನ್ನು ನೋಡಿ ಫಿದಾ ಆಗಿದ್ದಾನೆ. ಹೀಗಾಗಿ ಈ ಜೋಡಿ ಒಂದಾದರೆ ಸಂಬಂಧಗಳು ಮತ್ತೆ ಬೆಸೆಯುವ ಸಾಧ್ಯತೆ ಇದೆ.

More from Filmibeat

English summary
Lakshmi nivasa today episode update. Here is the details about sidde gowda and Vishwa background;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X