Lakshmi nivasa: ಮಗಳ ಮದುವೆ ಅಂತ ಖುಷಿ ಪಡೋದಾ..? ಕೋಟಿ ಕೋಟಿ ಖರ್ಚಿನ ಬಗ್ಗೆ ಚಿಂತಿಸೋದಾ?

By ಎಸ್ ಸುಮಂತ್

'ಲಕ್ಷ್ಮೀ ನಿವಾಸ' ಎಂದರೆ ಅದೊಂದು ಕೂಡು ಕುಟುಂಬ. ಮೂರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. ಮಿಡಲ್ ಕ್ಲಾಸ್ ಜೀವನ. ಆಸೆಗಳು ಆಕಾಶದಷ್ಟು. ದುಡಿಯುವ ಸೊಸೆಯ ಸ್ಚಾರ್ಥ, ಮನೆಯಲ್ಲಿರುವ ಸೊಸೆಯ ಅಸಹಾಯಕತೆ, ಬಂದಷ್ಟು ಬರಲಿ ಎನ್ನುವ ಮದುವೆಯಾಗಿರುವ ದೊಡ್ಡ ಮಗಳು, ಇನ್ನಿಬ್ಬರು ಮಕ್ಕಳ ಮದುವೆ. ಇರುವುದಕ್ಕೊಂದು ದೊಡ್ಡ ಸೂರಿನ ಕನಸನ್ನು ಕಾಣುತ್ತಲೇ ಜೀವನ ಸಾಗಿಸುತ್ತಿದ್ದಾರೆ ಲಕ್ಷ್ಮೀ ಹಾಗೂ ಆಕೆಯ ಪತಿ.

ಮಧ್ಯಮ ವರ್ಗದ ಕುಟುಂಬದಲ್ಲಿ ಹೇಗೆಲ್ಲಾ ಜೀವನದ ಏರುಪೇರುಗಳು ಬರುತ್ತವೆ ಎಂಬುದನ್ನು ಬಹಳ ಅದ್ಭುತವಾಗಿ ತೋರಿಸಲಾಗಿದೆ. ಒಂದೊಂದು ದೃಶ್ಯವೂ ನೋಡುಗರ ಮನಸ್ಸನ್ನು ಕದಡುತ್ತದೆ. ಇದು ನಮ್ಮದೇ ಜೀವನದಲ್ಲಿ ನಡೆದ ಘಟನೆಯಲ್ಲವಾ ಎಂಬಂತೆ ಹಾದು ಹೋಗುವಂತೆ ಮಾಡುತ್ತಿದೆ. ಪ್ರಸಾರ ಆಗುತ್ತಿರುವ ಒಂದೇ ವಾರಕ್ಕೆ ಎಲ್ಲರ ಮನಮುಟ್ಟಿದೆ.

Lakshmi Nivasa serial Written Update on January 23rd episode

ಮಗಳ ಮದುವೆ ಬಗ್ಗೆ ಲಕ್ಷ್ಮೀ ಕನಸು

ಭಾವನಾಗೆ ಮದುವೆ ಮಾಡಿಸಲೆಂದು ಅಪ್ಪ ಅಮ್ಮ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಅದೆಷ್ಟೋ ಗಂಡುಗಳು ಬಂದು ಹೋಗಿವೆ. ಆದರೆ, ಜಾತಕವೆಂಬ ಭೂತದಿಂದ ಎಲ್ಲರೂ ರಿಜೆಕ್ಟ್ ಮಾಡಿದ್ದಾರೆ. ಗಂಡಿನವರು ಬರುತ್ತಾರೆಂದು ಭಾವನ ಸಿದ್ಧವಾಗಿ, ಬೇಸರ ಮಾಡಿಕೊಂಡಿದ್ದೆ ಹೆಚ್ಚು. ಆದರೆ ಭಾವನಾ ಜೊತೆಗೆ ಇದ್ದಾಗ ಖುಷಿ ಸಂತಸದಿಂದ ಇದ್ದದ್ದನ್ನು ಕಂಡ ಶ್ರೀಕಾಂತ್ ತಾಯಿ, ಭಾವನಾಳನ್ನು ಮದುವೆ ಮಾಡಿಕೊಳ್ಳಲು ಒಪ್ಪಿದ್ದಾರೆ. ಈ ಸಂತಸ 'ಲಕ್ಷ್ಮೀ ನಿವಾಸ'ದಲ್ಲಿ ಜೋರಾಗಿದೆ.

ನಕ್ಷತ್ರವನ್ನು ಲೆಕ್ಕಿಸದೆ ಮದುವೆಗೆ ಸಿದ್ಧತೆ

ಖುಷಿ ಅಂದರೆ ಭಾವನಾಗೂ ಪ್ರಾಣ. ಅವಳ ಜೊತೆಗೆ ಇದ್ದರೆ ಬೇರೆ ಲೋಕವೇ ಇರುವುದಿಲ್ಲ. ಖುಷಿಗೂ ಅಷ್ಟೇ. ತಾಯಿಯಿಲ್ಲದ ಖುಷಿ, ಭಾವನಾಳನ್ನು ತುಂಬಾ ಪ್ರೀತಿ ಮಾಡುತ್ತಾಳೆ. ಶ್ರೀಕಾಂತ್ ಹಾಗೂ ಭಾವನಾ ಈಗ ಮದುವೆಯೆಂಬ ಬಂಧಕ್ಕೆ ಒಳಗಾಗುತ್ತಿರುವುದೇ ಖುಷಿಗಾಗಿ. ಈಗ ಖುಷಿಗೆ ಭಾವನಾ ಆಂಟಿ ಅಲ್ಲ, ಭಾವನಾ ಅಮ್ಮ. ಮೂಲ ನಕ್ಷದಲ್ಲಿ ಹುಟ್ಟಿದ್ದ ಭಾವನಾಳನ್ನು ಜಾತಕದಿಂದ ರಿಜೆಕ್ಟ್ ಮಾಡಿದವರೇ ಹೆಚ್ಚು. ಆದರೆ, ಶ್ರೀಕಾಂತ್ ಮನೆಯಲ್ಲಿ ಅದ್ಯಾವುದು ಲೆಕ್ಕಕ್ಕೇ ಬರಲಿಲ್ಲ. ಖುಷಿ ಅಷ್ಟೇ ಮುಖ್ಯ.

ಹಾರ ಬದಲಾಯಿಸಿಕೊಂಡ ಭಾವನಾ-ಶ್ರೀಕಾಂತ್

ಶ್ರೀಕಾಂತ್, ಭಾವನಾಗೆ ಬಾಸ್. ಆದರೂ ಭಾವನಾಳ ಅಭಿಪ್ರಾಯವನ್ನು ಕೇಳಿದ. ಭಾವನಾ ಕೂಡ ಖುಷಿಯಾಗಿಯೇ ಒಪ್ಪಿಕೊಂಡಿದ್ದಾಳೆ. ಹಾರ ಕೂಡ ಬದಲಾಯಿಸಿಕೊಂಡು ಆಗಿದೆ‌. ಮಗಳ ಮದುವೆ ಫಿಕ್ಸ್ ಆದ ಖುಷಿಯಲ್ಲಿ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿದ್ದಾಳೆ. ಅಲ್ಲಿ ತಾಯಿಯ ಆಶೀರ್ವಾದವೂ ಸಿಕ್ಕಿದೆ‌. ಮದುವೆಯನ್ನ ಖುಷಿ ಖುಷಿಯಿಂದ ಮಾಡುವುದಷ್ಟೇ ಬಾಕಿ.

Lakshmi Nivasa serial Written Update on January 23rd episode

ಮಿಡಲ್ ಕ್ಲಾಸ್ ಮಂದಿಗೆ 2 ಕೋಟಿ ಭಯ

ಶ್ರೀಕಾಂತ್ ಮನೆ ಕಡೆ ತುಂಬಾ ಶ್ರೀಮಂತಿಕೆ ಇದೆ. ಹೀಗಾಗಿ ಶ್ರೀಕಾಂತ್ ತಾಯಿ ಮದುವೆ ಖರ್ಚನ್ನು ತಾವೇ ನೋಡಿಕೊಳ್ಳುವುದಾಗಿ ಹೇಳಿ ಹೊರಟಿದ್ದಾರೆ. ಆದರೆ ಶ್ರೀಕಾಂತ್ ತಂಗಿ ಸೌಪರ್ಣಿಕಾಗೆ ಇದು ನೆಮ್ಮದಿ ತರುವ ವಿಚಾರವಲ್ಲ. ಮೊದಲಿಗೆ ಭಾವನಾಳ ಮನಸ್ಸನ್ನು ಕೆಡಿಸಿದ್ದಾಳೆ.‌ ಎರಡನೇ ಮದುವೆ ಆಗುವುದಕ್ಕೂ ಮೊದಲು ಯೋಚನೆ ಮಾಡು ಎಂದಿದ್ದಾಳೆ‌. ಈಗ ಲಕ್ಷ್ಮೀಯ ಮನಸ್ಸನ್ನು ಕದಡಿದ್ದಾಳೆ. ಇದು ಉಳ್ಳವರ ಮದುವೆ. ಏನಿಲ್ಲವಾದರೂ 2 ರಿಂದ ಎರಡೂವರೆ ಸಾವಿರ ಜನ ಮದುವೆಗೆ ಬರುತ್ತಾರೆ. ಹತ್ತಿರತ್ತಿರ ಎರಡು ಕೋಟಿ ಹಣ ಖರ್ಚಾಗುತ್ತದೆ. ಈ ಚೆಕ್ ಇಟ್ಟುಕೊಳ್ಳಿ ಎಂದು ನಾಟಕ ಶುರು ಮಾಡಿದ್ದಾಳೆ. ಮಧ್ಯಮವರ್ಗದ ಜನವಾದರೂ ಸ್ವಾಭಿಮಾನ ಬಿಡಲ್ಲ. ಅದೇ ಸೌಪರ್ಣಿಕಾಗೂ ಬೇಕಾಗಿದ್ದದ್ದು. ಈಗ ಲಕ್ಷ್ಮೀಗೆ ದೊಡ್ಡ ಚಿಂತೆಯಾಗಿದೆ. ಮಗಳ ಮದುವೆಯೆಂದು ಸಂಭ್ರಮ ಪಡಬೇಕೋ..? ಎರಡು ಕೋಟಿ ಅಂತ ಚಿಂತಿಸಬೇಕೋ ತಿಳಿಯದಾಗಿದೆ.

More from Filmibeat

English summary
Lakshmi Nivasa serial Written Update on January 23rd episode. Here is the details about Lakshmi is shocked by Sauparnika's words
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X