ಹೆಂಗಿದ್ದ ಸಿದ್ದೇಗೌಡರು ಹೆಂಗಾದ್ರು? ಮಾಸ್ ಲುಕ್‌ನಲ್ಲಿ ಕಿಕ್ ಕೊಟ್ಟ ಧನಂಜಯ್!
ಸಿದ್ದೇಗೌಡರು ಕನ್ನಡ ಕಿರುತೆರೆಯಲ್ಲಂತು ಬಹಳ ಫೇಮಸ್ ಆಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ನಿವಾಸ' ಧಾರಾವಾಹಿಯ ಸಿದ್ದೇಗೌಡ ಅವರ ಪಾತ್ರ ಕನ್ನಡ ಪ್ರೇಕ್ಷಕರ ಮನ ಸೆಳೆದಿದೆ. 'ಲಕ್ಷ್ಮಿ ನಿವಾಸ' ಧಾರಾವಾಹಿಯು ವಿಭಿನ್ನ ಕಥಾಂದರದ ಜೊತೆಗೆ ಬಹು ದೊಡ್ಡ ತಾರಾಗಣವನ್ನು ಹೊಂದಿರುವುದರಿಂದ ವಿಶೇಷವಾಗಿ ಜನರ ಫೇವರಿಟ್ ಧಾರಾವಾಹಿ ಆಗಿದೆ.
ಇದರಲ್ಲಿ ಸಿದ್ದೇಗೌಡ ಪಾತ್ರ ಜನರಿಗೆ ಅಚ್ಚು ಮೆಚ್ಚು ಆಗುತ್ತಿದೆ. ವಯಸ್ಸಿನಲ್ಲಿ ತನಗಿಂತಲೂ ದೊಡ್ಡವಳಾದ ಭಾವನಾಳನ್ನು ನೋಡುತ್ತಿದ್ದಂತೆಯೇ ಪ್ರೀತಿಗೆ ಬಿದ್ದಿರುವ ಸಿದ್ದೇಗೌಡರು ಸೀಕ್ರೆಟ್ ಆಗಿ ತಾಳಿ ಕಟ್ಟಿ ಇದೀಗ ಭಾವನಾಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಆಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಇವರಿಬ್ಬರು ಹನಿಮೂನ್‌ಗೆಂದು ಶ್ರೀಲಂಕಾಗೆ ತೆರಳಿ ಅಲ್ಲಿ ಪರಸ್ಪರ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಇವರಿಬ್ಬರ ಬಾಂಧವ್ಯ ಹಾಗೂ ದಾಂಪತ್ಯದಲ್ಲಿ ಬಹಳಷ್ಟು ತಿರುವುಗಳು ಮೂಡಲಿದೆ.

ಒಟ್ಟಿನಲ್ಲಿ ಹಳ್ಳಿ ಹೈದನಂತೆ ಮಾತನಾಡುವ ಸಿದ್ಧೇಗೌಡರ ಪಾತ್ರ ಕಿರುತೆರೆ ಪ್ರೇಕ್ಷಕರಿಗೆ ಬಹಳ ಹಿಡಿಸಿದೆ. ಅದರಲ್ಲೂ ಹೆಂಗಳೆಯರಿಗೆ ಸಿದ್ಧೇಗೌಡರ ಪಾತ್ರ ಇಷ್ಟವಾಗಿದೆ. ನೋಡೋಕೆ ರಫ್ ಅಂಡ್ ಟಫ್ ಅನಿಸಿದರೂ ಸಿದ್ಧೇಗೌಡರದ್ದು ಮಗುವಿನ ಮನಸ್ಸು. ತಾನು ಪ್ರೀತಿಸಿದ ಹುಡುಗಿ ಚೆನ್ನಾಗಿರಬೇಕೆಂದು ಸದಾ ಹಪಹಪಿಸುವ ಈ ಪಾತ್ರ ಇದೀಗ ಕಿರುತೆರೆ ಪ್ರೇಕ್ಷಕರ ಫೇವರೆಟ್ ಪಾತ್ರಗಳಲ್ಲೊಂದು.
ಸಿದ್ದೇಗೌಡರ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವವರು ನಟ ಧನಂಜಯ್. ಡಿಜೆ ಅಲಿಯಾಸ್ ಧನಂಜಯ್ 'ಲಕ್ಷ್ಮಿನಿವಾಸ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ಕೊರಿಯೋಗ್ರಾಫರ್ ಡ್ಯಾನ್ಸರ್ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಆಗಿರುವ ಧನಂಜಯ್ ಇದೀಗ ನಟನೆಯಲ್ಲಿಯೂ ಸೈ ಎನಿಸಿಕೊಳ್ಳುತ್ತಿದ್ದಾರೆ. 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಂತೂ ಸದಾ ಬಿಳಿ ಶರ್ಟ್ ಬಿಳಿ ಪಂಚೆ ಹಾಕಿಕೊಂಡು ಹಣಗೆ ತಿಲಕವಿಟ್ಟು ಕೂದಲನ್ನು ಸ್ಟೈಲ್ ಆಗಿ ಹಾರಿಸುತ್ತಾ ಮೇಡಂ ಅವರೇ ಮೇಡಂ ಅವರೇ ಎಂದು ತಮ್ಮ ಹೆಂಡತಿ ಭಾವನಾ ಹಿಂದೆ ಓಡಾಡುವ ಪಾತ್ರ ಇವರದ್ದಾದರೆ ರಿಯಲ್ ಲೈಫ್ ನಲ್ಲಿ ಧನಂಜಯ್ ಬಹಳ ಸ್ಟೈಲಿಶ್.
ಇದೀಗ ಧನಂಜಯ್ ಸೋಶಿಯಲ್ ಮೀಡಿಯಾದಲ್ಲೂ ಬಹಳಷ್ಟು ಆ್ಯಕ್ಟೀವ್ ಇದ್ದು, ಇವರಿಗೆ ಸಾವಿರಾರು ಫಾಲೋವರ್ಸ್ ಇದ್ದಾರೆ. ಸದ್ಯ ಧನಂಜಯ್ ಪೋಸ್ಟ್ ಮಾಡಿರುವ ಫೋಟೋ ಒಂದು ಬಹಳಷ್ಟು ವೈರಲಾಗಿದೆ. ಹೌದು, ಧನಂಜಯ್ ಕಪ್ಪು ಜಾಕೆಟ್ ಧರಿಸಿ ಗಾಗಲ್ಸ್ ಹಾಕಿಕೊಂಡು ಬಾಯಲ್ಲಿ ಒಂದು ಸಿಗಾರ್ ಇಟ್ಟುಕೊಂಡು ಬಹಳ ಖಡಕ್ ಲುಕ್ ಕೊಟ್ಟಿದ್ದಾರೆ. ಈ ರೀತಿಯ ಹೊಸ ಫೋಟೋ ಶೂಟ್ ಇವರ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ.

ಧನಂಜಯ್ ಅವರ ಈ ಹೊಸ ಅವತಾರಕ್ಕೆ ಅಭಿಮಾನಿಗಳು, ಫಾಲೋವರ್ಸ್ ದಾವೂದ್ ಬಾಯಿ, ಬಾಂಬ್ ಬೆಂಕಿ ಮಾರ್ಚ್ ಎಂಬಿತ್ಯಾದಿ ಕಾಮೆಂಟ್ ಗಳ ಸುರಿಮಳೆಗೆ ಸುರಿಸಿದ್ದಾರೆ. "ನಾನು ಸರಿಯಾದ ಕೆಲಸ ಮಾಡುತ್ತಿದ್ದೇನೆ ಎಂಬುದಕ್ಕೆ ನನ್ನನ್ನು ದ್ವೇಷಿಸುವವರೇ ಸಾಕ್ಷಿ. ನಾನೊಬ್ಬ ಯೋಧ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. " ಎಂದು ಕ್ಯಾಪ್ಷನ್ ಕೊಟ್ಟಿರುವ ಧನಂಜಯ್ ಮಾತಿನಲ್ಲೇ ಯಾರಿಗೋ ಟಾಂಗ್ ಕೊಟ್ಟಂತಿದೆ. ಧನಂಜಯ್ ಅವರು ಮೊದಲ ಧಾರಾವಾಹಿಯಲ್ಲೇ ಇಷ್ಟೊಂದು ಅಭಿಮಾನಿ ಬಳಗವನ್ನು ಸಂಪಾದಿಸಿದ್ದು ಇನ್ನು ಸಿನಿಮಾದಲ್ಲಿಯೂ ಬಹಳಷ್ಟು ಮಿಂಚುವ ಆಸೆ ಇದ್ದಂತಿದೆ.


Click it and Unblock the Notifications











