Lakshmi Nivasa: 'ಲಕ್ಷ್ಮೀ ನಿವಾಸ' ಶ್ವೇತಾಗೆ ಕನ್ನಡ ಬರಲ್ಲ ಅಂದ್ಕೊಂಡಿದ್ರಂತೆ ವೀಕ್ಷಕರು; ಅದಕ್ಕೂ ಕಾರಣವಿದೆ!

By ಎಸ್ ಸುಮಂತ್

'ಕರ್ಪೂರದ ಗೊಂಬೆ' ಸಿನಿಮಾ ಈಗ ರಿರಿಲೀಸ್ ಮಾಡಿದ್ರು ಥಿಯೇಟರ್ ತುಂಬೋದು ಆಗೋದು ಪಕ್ಕ. ಅದರಲ್ಲಿನ ಅಕ್ಕ ತಂಗಿಯರ ಕಥೆ ಜನರ ಮನಸ್ಸಲ್ಲಿ ಹಾಗೇ ಉಳಿದುಕೊಂಡು ಬಿಟ್ಟಿದೆ. ಅಷ್ಟೊಳ್ಳೆ ಹಾಡುಗಳು ಸಹ ಆ ಸಿನಿಮಾದಿಂದ ಸಿಕ್ಕಿವೆ.

ಸಿನಿಮಾಗಳಲ್ಲಿ ಬ್ಯುಸಿ ಇದ್ದಂತ ನಟಿ ಶ್ವೇತಾ,‌ ಒಂದಷ್ಟು ವರ್ಷ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ವರ್ಷಗಳೇ ಉರುಳಿದ ಮೇಲೆ ಒಂದೊಳ್ಳೆ ಧಾರಾವಾಹಿ ಮೂಲಕ ಕಿರುತೆರೆಯ ಲಕ್ಷ್ಮೀಯಾಗಿದ್ದಾರೆ. ಜೀ ಕನ್ನಡದಲ್ಲಿ ಬರುತ್ತಿರುವ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

Lakshmi nivasa viewers ask Shwetha s Real voice to Lakshmi Role

ಪ್ರೀತಿಸಿದವನಿಗಾಗಿ ಶ್ರೀಮಂತಿಕೆಯನ್ನೇ ಬಿಟ್ಟು ಬಂದ ಲಕ್ಷ್ಮೀ, ಐವರು ಮಕ್ಕಳನ್ನು ಸಾಕಿ ಬೆಳೆಸಿದ ರೀತಿ, ಗಂಡನ ಕಷ್ಟಕ್ಕೆ ಸದಾ ಹೆಗಲಾಗುವ ರೀತಿ, ಗಂಡನ ಮರ್ಯಾದೆ ಕಾಪಾಡುವ ಲಕ್ಷ್ಮೀಯಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

ಶ್ವೇತಾಗೆ ಧಾರಾವಾಹಿಯಲ್ಲಿ ವಾಯ್ಸ್ ಡಬ್

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಶ್ವೇತಾ ಅವರ ರಿಯಲ್ ವಾಯ್ಸ್ ಇಲ್ಲ. ಅದು ನೋಡುವವರಿಗೆ ಬಲು ಬೇಗನೇ ಅರ್ಥವಾಗಿ ಬಿಡುತ್ತದೆ. ಅದು ಡಬ್ ವಾಯ್ಸ್ ಆಗಿದೆ. ಶ್ವೇತಾ ಅವರ ಭಾವನೆಗೆ ತಕ್ಕ ಹಾಗೇ ಆ ವಾಯ್ಸ್ ಭಾವನಾತ್ಮಕವಾಗಿ ಸೆಳೆಯುತ್ತಿಲ್ಲ. ಇದು ನೋಡುಗರಿಗೂ ಬೇಸರ ತರಿಸಿದೆ.

Lakshmi nivasa viewers ask Shwetha s Real voice to Lakshmi Role

ಶ್ವೇತಾ ಒರಿಜನಲ್ ವಾಯ್ಸ್‌ಗೆ ಬೇಡಿಕೆ

ಶ್ವೇತಾ ಈಗಾಗಲೇ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅಭಿಮಾನಿಗಳು ಸಾಕಷ್ಟು ಜನ ಹುಟ್ಟಿಕೊಂಡಿದ್ದಾರೆ. ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ಅಷ್ಟೇ ಮುಗ್ಧತೆಯಿಂದ ನಟಿಸಿದ್ದಾರೆ. ಒಬ್ಬ ಮಿಡಲ್ ಕ್ಲಾಸ್ ಗೃಹಿಣಿಗೆ ಎಷ್ಟೆಲ್ಲಾ ಸಮಸ್ಯೆಗಳಿರುತ್ತವೆ, ಆ ಸಮಸ್ಯೆಯ ನಡುವೆ ಗಂಡ, ಮನೆ, ಮಕ್ಕಳನ್ನ ಸಂಭಾಳಿಸಬೇಕಾದದ್ದು ಹೇಗೆ..? ಸ್ವಾಭಿಮಾನ ಅನ್ನೋದು ಎಷ್ಟು ಮುಖ್ಯ ಆಗುತ್ತೆ. ಈ ಎಲ್ಲಾ ವಿಚಾರಗಳಲ್ಲೂ ಶ್ವೇತಾ ಪರ್ಫೆಕ್ಟ್ ಆಗಿ ನಟಿಸಿದ್ದಾರೆ. ಆದರೆ ಶ್ವೇತಾ ಅವರಿಗೆ ವಾಯ್ಸ್ ಬೇರೆಯವರು ಕೊಡುತ್ತಿರುವುದಕ್ಕೆ ವಿರೋಧವಿದೆ. ಅವರ ಫ್ಯಾನ್ಸ್ ಕಮೆಂಟ್ ಮೂಲಕ ಡಿಮ್ಯಾಂಡ್ ಇಟ್ಟಿದ್ದರು. ಶ್ವೇತಾ ಮೇಡಂ ಅವರ ರಿಯಲ್ ವಾಯ್ಸ್ ನೀಡಿ ಅಂತ. ಈಗ ಮತ್ತೆ ಆ ವಿಚಾರ ಸದ್ದು ಮಾಡುತ್ತಿದೆ.

ಶ್ವೇತಾಗೆ ಕನ್ನಡ‌ ಬರುತ್ತಾ..?

ಶ್ವೇತಾ ಅವರನ್ನು ನೋಡಿದ ಎಷ್ಟೋ ಮಂದಿಗೆ ಅವರು ಕನ್ನಡ ಮಾತನಾಡುತ್ತಾರಾ? ಎಂಬ ಪ್ರಶ್ನೆಯನ್ನು ತಮ್ಮೊಳಗೆ ಇಟ್ಟುಕೊಂಡಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಶ್ವೇತಾ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಹಾಡಿದ ಮಾತುಗಳನ್ನು ಕೇಳಿ ಅನುಮಾನ ಪಟ್ಟವರು ಧನ್ಯರಾಗಿದ್ದಾರೆ. ಯಾವುದೋ ಒಂದು ಪ್ರಮೋಷನ್‌ಗಾಗಿ ಮಾಡಿರುವ ವಿಡಿಯೋ ಅದಾಗಿದೆ.‌ ಪ್ರಮೋಷನ್ ಮಾಡುವಾಗ ಒಂದಷ್ಟು ಮಾಹಿತಿಯನ್ನು ಶ್ವೇತಾ ನೀಡಿದ್ದಾರೆ. ಇದನ್ನು ಕೇಳಿ ಶ್ವೇತಾ ಅವರಿಗೆ ಕನ್ನಡ ಬರುತ್ತಾ ಎಂದೇ ಕಮೆಂಟ್ ಹಾಕಿದ್ದಾರೆ.

ರಿಯಲ್ ವಾಯ್ಸ್ ಸಖತ್ತಾಗಿದೆ

ಇನ್ನು ಇದೇ ವಿಡಿಯೋದಲ್ಲಿ ಧಾರಾವಾಹಿಯಲ್ಲಿ ಬರುತ್ತಿರುವ ಧ್ವನಿಗೆ ವಿರೋಧ ವ್ಯಕ್ತವಾಗಿದೆ‌. ಧಾರಾವಾಹಿಯಲ್ಲಿ ನೀಡುತ್ತಿರುವ ಡಬ್ ವಾಯ್ಸ್‌ಗಿಂತ ನಿಮ್ಮ ರಿಯಲ್ ಧ್ವನಿ ತುಂಬಾ ಚೆನ್ನಾಗಿದೆ. ನೀವೇ ಯಾಕೆ ಧಾರಾವಾಹಿಗೆ ವಾಯ್ಸ್ ಕೊಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಅಂದ್ರೆ ಶ್ವೇತಾ ಅವರ ನಿಜವಾದ ಧ್ವನಿಯನ್ನೇ ಕೇಳುವುದಕ್ಕೆ ಅಭಿಮಾನಿಗಳು ಬಯಸುತ್ತಿದ್ದಾರೆ. ಇನ್ನು ಶ್ವೇತಾ, ಮಗುವಿನಂತೆ‌ ಮಾತನಾಡುತ್ತಾರೆ. ಇದು ಎಲ್ಲರ ಮನಸ್ಸನ್ನು ಗೆದ್ದಿದೆ.

More from Filmibeat

English summary
Zee kannada serial Lakshmi nivasa Written Update on Shwetha social Media comments. Here is the details about Demand for Shweta's real voice has increased;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X