Lakshmi nivasa: ದೊಡ್ಡವರಿಂದ ಶ್ರೀನಿವಾಸನ ಸಮಸ್ಯೆಗಳಿಗೆ ಮುಕ್ತಿ; ಈ ದೊಡ್ಡವರು ಯಾರು?
ಲಕ್ಷ್ಮೀ ಹಾಗೂ ಶ್ರೀನಿವಾಸ ದಂಪತಿಯ ಮಕ್ಕಳು ಒಂದೊಂದು ಮುತ್ತು. ಮುತ್ತಿನಂತ ಮಕ್ಕಳನ್ನು ಹೆತ್ತ ಇವರೇ ಪುಣ್ಯವಂತರು. ವಯಸ್ಸಾದ ತಂದೆ-ತಾಯಂದಿರು ದುಡಿಯುತ್ತಿದ್ದರು ಗಂಡು ಮಕ್ಕಳಿಗೆ ಅದರ ಗೊಡವೆಯೇ ಇಲ್ಲ. ಇನ್ನು ಹಿರಿ ಮಗಳಂತು ಈಗಲೂ ತನಗೇನು ಸಿಗುತ್ತದೆ ಎಂಬುದನ್ನೇ ಕಾಯುತ್ತಿರುತ್ತಾಳೆ. ಇದರ ನಡುವೆ ಕಷ್ಟಟಪಟ್ಟು ಅಪ್ಪ-ಅಮ್ಮನಿಗೆ ಹೊರೆಯಾಗದಂತೆ ನಡೆದುಕೊಳ್ಳುತ್ತಿರುವುದು ಮಾತ್ರ ಭಾವನಾ ಹಾಗೂ ಜಾಹ್ನವಿ.
ಶ್ರೀನಿವಾಸ್ ಬಳಿ ಇರುವುದು ಒಂದು ಹಳೆಯ ಮನೆ ಮತ್ತೊಂದು ಸೈಟ್. ಭಾವನಾಳ ಮದುವೆಗಾಗಿ ಆ ಸೈಟ್ ಅನ್ನು ಅಡವಿಟ್ಟಿದ್ದಾನೆ. ಈಗ ಅದು ಕೈತಪ್ಪುವ ಸಾಧ್ಯತೆಗಳು ಕಾಣಿಸುತ್ತಿವೆ. ಆದರೆ ದೊಡ್ಡವರು ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಿರುವ ವ್ಯಕ್ತಿಯೊಬ್ಬ ಲಕ್ಷ್ಮೀ-ಶ್ರೀನಿವಾಸ್ ಕಷ್ಟಕ್ಕೆ ಕೈ ಜೋಡಿಸುತ್ತಿದ್ದಾನೆ. ಯಾರು ಆ ದೊಡ್ಡ ಮನುಷ್ಯ ಎಂಬ ಕುತೂಹಲ ನೋಡುಗರಲ್ಲಿ ಮೂಡಿದೆ.

ಕಷ್ಟಕ್ಕೆ ಸಿಲುಕಿದ ಶ್ರೀನಿವಾಸ
ಶ್ರೀನಿವಾಸ್ ಮಗಳ ಮದುವೆಗಾಗಿ ಸಾಕಷ್ಟು ಕಷ್ಟಪಡುತ್ತಿದ್ದ. ಬಳಿಕ ಕಣ್ಣೆದುರು ಬಂದಿದ್ದು ಇರುವ ಒಂದು ಸೈಟ್ ಮಾತ್ರ. ಶ್ರೀನಿವಾಸ್ ಸ್ನೇಹಿತ ಬೇಡ ಎಂದರೂ ಮೀಟರ್ ಬಡ್ಡಿ ನೀಡುವವನ ಬಳಿ ಸೈಟ್ ಅನ್ನು ಅಡವಿಟ್ಟಿದ್ದ. ಈಗ ಆ ಸೈಟ್ ಕೂಡ ಕೈ ತಪ್ಪುವ ಹಂತಕ್ಕೆ ಬಂದಿತ್ತು. ಸೈಟ್ ಅನ್ನು ಸಾಲ ಪಡೆದವ ಹೆಸರಿಗೆ ಬರೆದುಕೊಡಲು ಹೊರಟಿದ್ದಾರೆ. ಸೈಟ್ ಹೋಯಿತಲ್ಲ ಎಂದು ಕೊರಗುತ್ತಿರುವ ಮಕ್ಕಳಿಗೆ ತಂದೆ-ತಾಯಿ ಕಷ್ಟವೇ ಕಾಣಿಸುತ್ತಿಲ್ಲ.
ದೊಡ್ಡವರಿಂದ ಉಳಿಯಿತು ಸೈಟ್
ಇನ್ನೇನು ಆ ಸೈಟ್‌ಗೆ ಸಹಿ ಹಾಕುವುದಕ್ಕೆ ಬಡ್ಡಿ ಕೊಟ್ಟವನ ಆಫೀಸ್ ಕಡೆಗೆ ಎಲ್ಲರು ಹೊರಟಿದ್ದರು. ಅದೇ ಸಮಯಕ್ಕೆ ಆತನೇ ಓಡೋಡಿ ಬಂದು, ನೀವೂ ದೊಡ್ಡವರ ಕಡೆಯವರು ಅಂತ ಹೇಳಬಾರದಾ..? ನಿಮ್ಮ ಸೈಟ್ ಬೇಡ ಹಣವೂ ಬೇಡ. ಅವರಿಗೆ ಕರೆ ಮಾಡಿ ಹೇಳಿಬಿಡು, ವಾಪಸ್ ನೀಡಿದ್ದಾರೆ ಅಂತ ಮನವಿ ಮಾಡಿ ಅಲ್ಲಿಂದ ಹೊರಡುತ್ತಾನೆ. ಮನೆಯವರಿಗೆಲ್ಲಾ ಆ ದೊಡ್ಡವರು ಯಾರೆಂಬುದೇ ದೊಡ್ಡ ಕುತೂಹಲ.
ದೊಡ್ಡವನ ಭೇಟಿಗೆ ಹೊರಟ ದಂಪತಿ
ಮನೆಯಲ್ಲಿರುವ ಅಜ್ಜಿಗೆ ಆ ದೊಡ್ಡವರು ಎಂದರೆ ಜಾಹ್ನವಿಯನ್ನು ಕೇಳಿದ ಹುಡುಗ ಜಯಂತ್ ಇರಬಹುದು ಎಂಬುದೇ ಅನುಮಾನವಾಗಿದೆ. ಹೀಗಾಗಿ ಆ ಹುಡುಗನ ಬಳಿ ಮಾತನಾಡುವುದಕ್ಕೆ ಹೇಳಿದ್ದಾರೆ. ಆ ನಂಬರ್‌ಗೆ ಫೋನ್ ಮಾಡಿಕೊಂಡು. ದೊಡ್ಡವರನ್ನು ಹುಡುಕಿಕೊಂಡು ಲಕ್ಷ್ಮೀ ಹಾಗೂ ಶ್ರೀನಿವಾಸ್ ಆಫೀಸ್ ತಲುಪಿದ್ದಾರೆ. ಕುಳಿತಿದ್ದವರ ಬಳಿಗೆ ಬಂದು ನಿಂತು ಆ ದೊಡ್ಡವರು ಮಾತನಾಡಿಸಿದ್ದಾರೆ. ಅವರನ್ನು ಕಂಡು ಒಂದು ಕ್ಷಣ ದಂಪತಿ ಶಾಕ್ ಆಗಿದ್ದಾರೆ.

ದೊಡ್ಡವರ ಚಿಂತೆಯಲ್ಲಿ ವೀಕ್ಷಕರು..!
ಲಕ್ಷ್ಮೀ ಶ್ರೀನಿವಾಸ ಧಾರಾವಾಹಿಯ ಪ್ರೋಮೋ ನೋಡಿದ ಪ್ರೇಕ್ಷಕರು ಆ ದೊಡ್ಡ ಮನುಷ್ಯ ಜಯಂತ್ ಇರಬೇಕು. ಜಯಂತ್ ಹಾಗೂ ಜಾಹ್ನವಿಯ ಜೋಡಿ ಚಂದ. ಅವರಿಬ್ಬರನ್ನು ಒಂದು ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇದರ ನಡುವೆ ಜಯಂತ್ ಇನ್ಮುಂದೆ ವಿಲನ್ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ. ನಿಜಕ್ಕೂ ಆ ದೊಡ್ಡವರು ಅಂದ್ರೆ ಜಯಂತಾ? ಎಂಬ ಅನುಮಾನವೂ ಶುರುವಾಗಿದೆ.
ಹೆಚ್ಚಾಯ್ತು ಅನುಮಾನ
ಈಗಾಗಲೇ ಲಕ್ಷ್ಮೀ ಹಾಗೂ ಶ್ರೀನಿವಾಸ್ ಭೇಟಿ ಮಾಡಿದ್ದಾರೆ. ಹೀಗಿದ್ದು ಮತ್ತೆ ಬಿಲ್ಡಪ್ ಕೊಡುವ ಸಾಧ್ಯತೆ ಕಡಿಮೆ ಇದೆ. ಅವರ ಮುಖವನ್ನೇ ತೋರಿಸದೆ ಹೈಡ್ ಮಾಡಿದ್ದು ಯಾಕೆ..? ಈ ದೊಡ್ಡವರು ಹೊಸ ಎಂಟ್ರಿನಾ? ಎಂಬ ಅನುಮಾನ ಶುರುವಾಗಿದೆ. ಕಂಪನಿಯ ಹೆಸರು ನೋಡಿದಾಗ ಜಯಂತ್ ಇರಬಹುದು ಎನಿಸುತ್ತೆ. ಇಂದಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.


Click it and Unblock the Notifications











