ಮೇಕಪ್ ಆರ್ಟಿಸ್ಟ್ ಜೊತೆ ಪ್ರೀತಿಲಿ ಬಿದ್ದ ಕನ್ನಡ ನಟ ಬ್ರೋ ಗೌಡ!
ಬ್ರೋ ಗೌಡಗೆ ಸಿಕ್ಕಾಪಟ್ಟೆ ಮಹಿಳಾ ಅಭಿಮಾನಿಗಳಿದ್ದಾರೆ. ಅದರಲ್ಲೂ ಬಿಗ್ ಬಾಸ್ ಶೋನಲ್ಲಿ ಭಾಗಿಯಾದ ಮೇಲೆ ಅವರನ್ನ ಮನಸ್ಸಲ್ಲಿಯೇ ಪ್ರೀತ್ಸೋ ಹೃದಯಗಳು ಜಾಸ್ತಿಯಾಗಿದ್ದರು. ಮೊದಲ ಸೀರಿಯಲ್ 'ಲಕ್ಷ್ಮೀಬಾರಮ್ಮ'ದಲ್ಲಿ ಕಾಣಿಸಿಕೊಂಡ ಮೇಲಂತು ಕ್ರೇಜ್ ಜಾಸ್ತಿಯಾಯ್ತು. ಬ್ರೋ ಗೌಡ ಕೂಡ ಮೊದಲ ಸೀರಿಯಲ್ ನಲ್ಲಿಯೇ ತಮ್ಮ ನಟನೆಯಿಂದಾನೇ ಗಮನ ಸೆಳೆದವರು.
'ಲಕ್ಷ್ಮೀಬಾರಮ್ಮ' ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಶೈನ್ ಆಗಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಸಿಂಗರ್ ಆಗಿ, ಲವ್ವರ್ ಬಾಯ್ ಆಗಿ ಈಗ ಪಕ್ಕ ಫ್ಯಾಮಿಲಿ ಮ್ಯಾನ್ ಆಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ರಿಯಲ್ ಲೈಫ್ ನಲ್ಲೂ ಹೊಸ ಬಾಳಿನ ಕಡೆಗೆ ಹೆಜ್ಜೆಯಾಕುತ್ತಿದ್ದಾರೆ. ಅವರ ಜೊತೆಗೆ ಬರ್ತಾ ಇರೋದು ಮೇಘನಾ.

ಹುಡುಗಿ ಪರಿಚಯಿಸಿದ ಬ್ರೋ ಗೌಡ
ಬ್ರೋ ಗೌಡ ಸದ್ಯಕ್ಕೆ 'ಲಕ್ಷ್ಮೀಬಾರಮ್ಮ' ಧಾರಾವಾಹಿಯಲ್ಲಿ ಶಮಂತ್ ಗೌಡ, ವೈಷ್ಣವ್ ಪಾತ್ರವನ್ನ ಮಾಡಿದ್ದಾರೆ. ಸೀರಿಯಲ್ ನಲ್ಲಿ ತಾಯಿಯ ಸ್ವಾರ್ಥದಿಂದಾಗಿ ಮೊದಲ ಪ್ರೀತಿ ಸಿಗಲಿಲ್ಲ, ಮದುವೆಯಾದ ಮೇಲೆ ಹೆಂಡತಿ ಮೇಲೆ ಲವ್ ಆಗಿದೆ ಅದು ಯಾಕೋ ಸಿಗುವಂತೆ ಕಾಣಿಸುತ್ತಿಲ್ಲ. ಆದರೆ ರಿಯಲ್ ಲೈಫ್ ನಲ್ಲಿ ವೈಷ್ಣವ್ ಅಲಿಯಾಸ್ ಶಂಮತ್ ಗೌಡ ಹೊಸ ಜೀವನ ಶುರು ಮಾಡಲು ಹೊರಟಿದ್ದಾರೆ. ತಾವೂ ಮದುವೆಯಾಗ್ತಿರೋ ಹುಡುಗಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ.
ಬ್ರೋ ಗೌಡ ಹುಡುಗಿ ಯಾರು..?
ಬ್ರೋ ಗೌಡ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮೇಘನಾ. ಇಬ್ಬರ ಪ್ರೀತಿ ವಿಚಾರವನ್ನು ಹೇಳುವುದಕ್ಕೆಂದೆ ಒಂದು ಬ್ಯೂಟಿಫುಲ್ ವಿಡಿಯೋ ಮಾಡಿದ್ದಾರೆ. ಆ ವಿಡಿಯೋವನ್ನು ಶಮಂತ್ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಅದರಲ್ಲಿಯೇ ತಮ್ಮ ಹುಡುಗಿಯ ಪ್ರೊಫೈಲ್ ಕೂಡ ಟ್ಯಾಗ್ ಮಾಡಿದ್ದಾರೆ. ಶಮಂತ್ ಗೌಡ, ಬ್ಲಾಕ್ ಅಂಡ್ ವೈಟ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ರೆ, ಮೇಘನಾ ಕಂಪ್ಲೀಟ್ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬ್ಯೂಟಿಫುಲ್ ವಿಡಿಯೋ ಮೂಲಕ ತಮ್ಮ ಮದುವೆ ವಿಚಾರವನ್ನು ಅಧಿಕೃತವಾಗಿ ಹೇಳಿದ್ದಾರೆ.
ಮೇಕಪ್ ಆರ್ಟಿಸ್ಟ್ ಮೇಘನಾ
ಮೇಘನಾ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಅವರದ್ದೇ ಆದ ಮೇಕಪ್ ಪ್ರೊಫೈಲ್ ಖಾತೆಯನ್ನು ಹೊಂದಿದ್ದು, ತಮ್ಮ ಮೇಕಪ್ ವಿಡಿಯೋ, ಫೋಟೋಗಳನ್ನು ಅದರಲ್ಲು ಹಂಚಿಕೊಂಡಿದ್ದಾರೆ. ಅದರಲ್ಲೂ ಆಗಾಗ ಒಳ್ಳೊಳ್ಳೆ ಥೀಮ್‌ಗಳ ಮೇಲೆ ವಿಡಿಯೋಗಳನ್ನ ಮಾಡುತ್ತಾ ಇರುತ್ತಾರೆ. ಲಕ್ಷ್ಮೀಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಲವ್ವರ್ ಕೀರ್ತಿಗೆ ಇವರೇ ಮೇಕಪ್ ಆರ್ಟಿಸ್ಟ್. ಆ ವಿಡಿಯೋಗಳನ್ನು ಕೂಡ ತಮ್ಮ ಪ್ರೊಫೈಲ್ ನಲ್ಲಿ ಹಾಕಿಕೊಂಡಿದ್ದಾರೆ.
ಫ್ರೆಂಡ್ಸ್, ಫ್ಯಾನ್ಸ್ ವಿಶಸ್
ವೈಷ್ಣವ್ ಅಲಿಯಾಸ್ ಬ್ರೋ ಗೌಡ ಅಲಿಯಾಸ್ ಶಮಂತ್ ಗೌಡ ತನ್ನ ಹುಡುಗಿಯ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದೆ ತಡ ಅವರ ಫ್ರೆಂಡ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಇತ್ತೀಚೆಗಷ್ಟೇ ವೈಷ್ಣವ್ ತಂಗಿ ನಿಧಿ ಕೂಡ ರಿಯಲ್ ಲೈಫ್ ನಲ್ಲಿ ಮದುವೆಯಾಗಿದ್ದರು. ಇದೀಗ ವೈಷ್ಣವ್ ಮದುವೆಯಾಗುತ್ತಿದ್ದಾರೆ. ಹೀಗಾಗಿ ಲಕ್ಷ್ಮೀಬಾರಮ್ಮ ಧಾರಾವಾಹಿ ಟೀಂನವರು ಕೂಡ ಶಮಂತ್ ಗೌಡಗೆ ವಿಶ್ ಮಾಡುತ್ತಿದ್ದಾರೆ. ಹಾಗೇ ಅವರ ಅಭಿಮಾನಿಗಳು ಕೂಡ ವಿಶ್ ಮಾಡುತ್ತಿದ್ದಾರೆ. ಶಮಂತ್ ಗೌಡ ಮದುವೆ ಸೆಟ್ ಆಗಿದ್ದು ಎಲ್ಲರುಗೂ ಖುಷಿ ಕೊಟ್ಟಿದೆ. ಶಮಂತ್ ಗೌಡ ಹಾಕಿರುವ ವಿಡಿಯೋ ಅಂತು ಲೈಕ್ಸ್ ಪಡೆದು, ಕಮೆಂಟ್‌ಗಳ ಸುರಿಮಳೆಯನ್ನೇ ಹರಿಸುತ್ತಿದೆ.


Click it and Unblock the Notifications











