Lakshmibaramma: ವೈಷ್ಣವ್ ವಿಚಾರದಲ್ಲಿ ಸಲಿಗೆ ತೆಗೆದುಕೊಳ್ಳುತ್ತಿದ್ದ ಕೀರ್ತಿಗೆ ಎಚ್ಚರಿಕೆ ಕೊಟ್ಟ ಲಕ್ಷ್ಮಿ
ಲಕ್ಷ್ಮೀ ಜೀವನದಲ್ಲಿ ಕೀರ್ತಿಯ ದುರಾಸೆಯಿಂದ ಬಂದಂತ ನೋವು ಅಷ್ಟಿಷ್ಟಲ್ಲ. ಲಕ್ಷ್ಮೀ ಜೀವಕ್ಕೆ ಅಪಾಯ ಎದುರಾಗಿತ್ತು. ಈಗ ವೈಷ್ಣವ್ ಜೀವಕ್ಕೂ ಅಪಾಯ ಎದುರಾಗಿದೆ. ಸಾವು-ಬದುಕಿನ ನಡುವೆ ವೈಷ್ಣವ್ ಆಸ್ಪತ್ರೆಯಲ್ಲಿ ಇರುವಾಗ ಕೀರ್ತಿ, ತನ್ನದೇ ಅಹಂ ಅನ್ನು ಮೆರೆಯುತ್ತಿದ್ದಾಳೆ.
ಕಾವೇರಿಯ ನಾಟಕಕ್ಕೆ ಬಲಿಯಾದ ಕೀರ್ತಿ, ಪ್ರೀತಿಯನ್ನು ದೂರ ಮಾಡಿಕೊಂಡಳು. ಈಗ ಲಕ್ಷ್ಮೀ ಹಾಗೂ ವೈಷ್ಣವ್ ಸಂಸಾರ ಮಾಡುವುದಕ್ಕೂ ಬಿಡದೆ ನಂಗೆ ಅದೇ ಪ್ರೀತಿ ಬೇಕು ಎಂದು ಕೂತಿದ್ದಾಳೆ. ಇದನ್ನು ವೈಷ್ಣವ್ ಕೂಡ ಒಪ್ಪುತ್ತಿಲ್ಲ, ಲಕ್ಷ್ಮೀ ಗಂಡನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ಹಗ್ಗಜಗ್ಗಾಟದ ನಡುವೆ ಕಡೆಗೂ ಲಕ್ಷ್ಮೀ ರೊಚ್ಚಿಗೆದ್ದಿದ್ದಾಳೆ, ಕೀರ್ತಿಗೆ ಎಚ್ಚರಿಕೆ ನೀಡಿದ್ದಾಳೆ.

ಪೂಜೆಯಲ್ಲೂ ಹಠ ಮಾಡಿದ್ದ ಕೀರ್ತಿ
ವೈಷ್ಣವ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದಕ್ಕೆ ಕೀರ್ತಿಯೇ ಕಾರಣ. ನಿತಿನ್ ಜೊತೆಗೆ ಕೈ ಜೋಡಿಸಿ, ಲಕ್ಷ್ಮೀಯನ್ನು ವೈಷ್ಣವ್‌ನಿಂದ ದೂರ ಮಾಡಲು ಪ್ರಯತ್ನಿಸಿದಳು. ಆದರೆ ವೈಷ್ಣವ್ ಕಾಪಾಡುವುದಕ್ಕೆ ಹೋದಾಗ, ನಿತಿನ್ ಕಡೆಯವರು ಜೋರಾಗಿ ಹೊಡೆದರು. ಇದರಿಂದ ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದಾನೆ. ಇದರ ನಡುವೆ ಪೂಜೆ ಪುನಸ್ಕಾರಗಳಲ್ಲಿ ಹೆಂಡತಿ ಮಾಡಬೇಕಾದ ಜಾಗಕ್ಕೆಲ್ಲಾ ಕೀರ್ತಿ ಎಂಟ್ರಿ ಕೊಡುತ್ತಿದ್ದಾಳೆ. ಇದಕ್ಕೆಲ್ಲಾ ಆಗಲೇ ಲಕ್ಷ್ಮೀ ಬುದ್ದಿ ಮಾತು ಹೇಳಿದ್ದಳು.
ಕೀರ್ತಿಗೆ ಬುದ್ದಿ ಮಾತು ಶುರು ಮಾಡಿದ ಲಕ್ಷ್ಮೀ
ಕೀರ್ತಿ ಯಾಕೋ ಹೇಳಿದ ಮಾತನ್ನು ಕೇಳುತ್ತಾಳೆ, ಸರಿ ಮಾಡಿಕೊಳ್ಳುತ್ತಾಳೆ, ಸಂಸಾರದ ತಂಟೆಗೆ ಬರಲ್ಲ ಎಂಬುದನ್ನು ನಂಬುವುದಕ್ಕೆ ಆಗುತ್ತಿಲ್ಲ. ಅದಕ್ಕೆ ಇದೀಗ ಲಕ್ಷ್ಮೀ ಮುಂದೆ ನಿಂತು ಬುದ್ದಿ ಹೇಳುವುದಕ್ಕೆ ಶುರು ಮಾಡಿದ್ದಾಳೆ. ಮನೆಗೆ ಬಾ, ಅಡುಗೆ ಮನೆಗೆ ಹೋಗಿ, ತಿಂಡಿ ತಿನ್ನು, ಮನೆಯವರ ಜೊತೆಗೆ ಸಲಿಗೆಯಿಂದ ಇರು, ಎಲ್ಲಾ ಕಡೆ ಓಡಾಡು. ಆದರೆ, ನಿನ್ನದೇ ಆದ ಲಿಮಿಟ್ಸ್‌ನಲ್ಲಿ ನೀನು ಇರು. ಮ್ಯಾನರ್ಸ್‌ನ ಕಳೆದುಕೊಳ್ಳಬೇಡ ಎಂದಿದ್ದಾಳೆ.

ಗಂಡನ ತಂಟೆಗೆ ಬರದಂತೆ ಎಚ್ಚರಿಕೆ
ಕೀರ್ತಿಯೇ ವೈಷ್ಣವ್ ನಿಜವಾದ ಗರ್ಲ್ ಫ್ರೆಂಡ್ ಎಂಬುದು ಲಕ್ಷ್ಮೀಗೆ ಗೊತ್ತಿಲ್ಲ. ಫ್ರೆಂಡ್ಸ್ ಆಗಿದ್ದವರು ಎಂಬ ಕಾರಣಕ್ಕೆ ಸುಮ್ಮನೆ ಬಿಟ್ಟಿದ್ದಾಳೆ. ಫ್ರೆಂಡ್ಸ್ ಆದರೂ ಸರಿ, ಫ್ಯಾಮಿಲಿ ಆದರೂ ಸರಿ. ವೈಷ್ಣವ್ ವಿಚಾರಕ್ಕೆ ಬಂದರೆ ಲಕ್ಷ್ಮೀ ಸುಮ್ಮನೆ ಬಿಡುವವಳೇ ಅಲ್ಲ. ಈಗ ಕೀರ್ತಿಗೂ ಅದೇ ಎಚ್ಚರಿಕೆಯನ್ನು ನೀಡಿದ್ದಾಳೆ. ಮನೆಯೊಳಗೆ ಬಾ ಆದರೆ ಬೆಡ್ ರೂಮಿನ ಒಳಗೆ ಬರುವ ಸಾಹಸ ಮಾಡಲೇಬೇಡ. ಒಂದು ವೇಳೆ ಬರಬೇಕಾದ ಸ್ಥಿತಿ ಬಂದಾಗ ಮೊದಲು ಅನುಮತಿ ಕೇಳು. ನಾನು ಅಥವಾ ನನ್ನ ಗಂಡ ಅನುಮತಿ ನೀಡಿದರೆ ಮಾತ್ರ ಬಾ ಎಂದು ಖಡಕ್ ಎಚ್ಚರಿಕೆ ನೀಡಿದ್ದಾಳೆ.
ಲಕ್ಷ್ಮೀ ಮಾತು ಕೇಳಿ ಸುಪ್ರಿತಾಗೆ ಖುಷಿ
ಯಾವಾಗ ಸುಪ್ರಿತಾಗೆ ಲಕ್ಷ್ಮೀ ಬೆನ್ನೆಲುಬಾಗಿ ನಿಂತಳೋ ಅಂದಿನಿಂದ ಸುಪ್ರೀತಾ ಕೂಡ ಮಗಳಂತೆ ಕಾಣುತ್ತಿದ್ದಾಳೆ. ಲಕ್ಷ್ಮೀ ಹಾಗೂ ವೈಷ್ಣವ್ ಒಂದಾಗಲಿ ಎಂದೇ ಹಾರೈಸುತ್ತಿದ್ದಾಳೆ. ಆದಷ್ಟು ಕೀರ್ತಿ ಮಾಡುವ ಅನಾಹುತಗಳನ್ನೆಲ್ಲಾ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾಳೆ. ಈಗ ಕೀರ್ತಿಗೆ ಲಕ್ಷ್ಮೀಯೇ ಮಂಗಳಾರತಿ ಮಾಡುತ್ತಿರುವುದನ್ನು ಕಂಡು ಸುಪ್ರೀತಾ ಖುಷಿಯಾಗಿದ್ದಾಳೆ. ಮಗಳ ಸಂಸಾರ ಸರಿ ಆಗುತ್ತಿರುವುದಕ್ಕೆ ಖುಷಿಯಾಗಿದ್ದಾಳೆ. ಲಕ್ಷ್ಮೀ ಒಳ್ಳೆಯವಳೇ, ಮೃದು ಸ್ವಭಾವದವಳೇ ಆದರೆ ಗಂಡನ ವಿಚಾರಕ್ಕೆ ಬಂದರೆ ಕಾಳಿಯಾಗಿ ಬಿಡುತ್ತಾಳೆ.


Click it and Unblock the Notifications











