Lakshmibaramma: ಗೊಂದಲದಲ್ಲಿರುವ ಲಕ್ಷ್ಮೀಗೆ ಕಲರ್ಸ್ ಕನ್ನಡದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನೋಡಲು ಹೇಳಿದ ಟ್ರೋಲರ್ಸ್
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸತ್ಯವನ್ನು ಮುಚ್ಚಿಡುವುದೇ ಒಂದು ದೊಡ್ಡ ಯುದ್ಧ ಗೆದ್ದಂತೆ. ವೈಷ್ಣವ್ ಈ ಮೊದಲೇ ಸತ್ಯ ಹೇಳಿ ಬಿಡುತ್ತೇನೆ ಎಂದು ನಿರ್ಧಾರ ಮಾಡಿದ್ದ. ಆದರೆ ಲಕ್ಷ್ಮೀಯ ದೊಡ್ಡಪ್ಪನೇ ಅಂದು ವೈಷ್ಣವ್‌ನ ತಡೆದಿದ್ದ. ಈ ವಿಚಾರ ಲಕ್ಷ್ಮೀಗೆ ಗೊತ್ತಾದರೇ ಅವಳು ಸಹಿಸಿಕೊಳ್ಳಲ್ಲ. ಹೀಗಾಗಿ ಈ ಸತ್ಯವನ್ನು ಮುಚ್ಚಿಟ್ಟು ಬಿಡು ಎಂದೇ ಹೇಳಿದ್ದರು. ಹೀಗಾಗಿ ತಾಂಡವ್ ಇರುವ ಸತ್ಯವನ್ನು ಹೇಳುವುದಕ್ಕೆ ಹೋಗಲಿಲ್ಲ.
ಕೀರ್ತಿಯದ್ದು ಒಂದೇ ಹಠ. ಹೇಗಾದರೂ ಮಾಡಿ ವೈಷ್ಣವ್‌ನನ್ನು ಪಡೆಯಲೇಬೇಕೆಂಬುದು. ಅವಳ ಪ್ರೀತಿ, ಇನ್ಯಾರಿಗೋ ಹತ್ತಿರವಾಗುವುದನ್ನು ಸಹಿಸಲು ಆಗುತ್ತಿರಲಿಲ್ಲ. ಹೀಗಾಗಿ ಹುಚ್ಚು ಹುಚ್ಚಾಗಿ ಆಡುವುದಕ್ಕೆ ಶುರು ಮಾಡಿದಳು. ಹುಚ್ಚಾಟ ಹೆಚ್ಚಾಗಿ ಅದು ಲಕ್ಷ್ಮೀಗೆ ಸತ್ಯ ಗೊತ್ತಾಗುವಂತೆ ಮಾಡಿತ್ತು.

ಕೀರ್ತಿ ಲವ್ ಮನೆಯವರಿಗೆ ಗೊತ್ತಿಲ್ಲವಂತೆ
ಲಕ್ಷ್ಮೀಗೆ ಕೀರ್ತಿಯ ನಡವಳಿಕೆಯಿಂದ ಸತ್ಯ ಗೊತ್ತಾಗಿದೆ. ಹೀಗಾಗಿ ನೇರ ಮನೆಗೆ ಬಂದು ಆ ಸತ್ಯವನ್ನು ಕೇಳಿದ್ದಾಳೆ. ಕಾವೇರಿಯೂ ಇಷ್ಟು ದಿನ ಅದುಮಿಟ್ಟುಕೊಂಡು ಬಮನದಿದ್ದಂತೆ ಎಲ್ಲಾ ವಿಚಾರವನ್ನು ತಿಳಿಸಿಯೇ ಬಿಟ್ಟಿದ್ದಾಳೆ. ಇದು ಮನೆಯವರಿಗೆಲ್ಲಾ ಶಾಕ್ ಆಗಿದೆ. ಲಕ್ಷ್ಮೀ ದಿಗ್ಬ್ರಾಂತಳಾಗಿದ್ದಾಳೆ. ಮತ್ತೆ ಎಲ್ಲವನ್ನು ಸರಿ ಮಾಡಲು ಮನೆಯವರೆಲ್ಲಾ ಮತ್ತೆ ಸುಳ್ಳು ಹೇಳಿದ್ದಾರೆ. ವೈಷ್ಣವ್‌ನ ಕೀರ್ತಿ ಲವ್ ಮಾಡ್ತಾ ಇದ್ದಳು, ಆದರೆ ಅದು ಯಾರಿಗೂ ಗೊತ್ತಿರಲಿಲ್ಲ ಅಂತ.
ಕೀರ್ತಿ ಕಿವಿಗೆ ಬಿತ್ತು ವೈಷ್ಣವ್ ಕಠಿಣ ಮಾತು
ಮನೆಯ ವಾತಾವರಣದಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಇದು ತಾಂಡವ್‌ಗೆ ಇಷ್ಟವಾಗಿಲ್ಲ. ಅದರಲ್ಲೂ ಲಕ್ಷ್ಮೀಯ ನೆಮ್ಮದಿ ಹಾಳಾದರೆ ತಾಂಡವ್ ಸಹಿಸಿಕೊಳ್ಳುವುದಿಲ್ಲ. ಇದೀಗ ನೇರ ಕಾರುಣ್ಯಗೆ ಕರೆ ಮಾಡಿದ್ದಾನೆ. ವೈಷ್ಣವ್ ಕಾಲ್ ಎಂದಾಕ್ಷಣಾ ಕೀರ್ತಿ ಫೋನ್ ತೆಗೆದುಕೊಂಡಿದ್ದಾಳೆ. ಆದರೆ ಕೀರ್ತಿಗೆ ಸಿಕ್ಕ ಉತ್ತರ, ಅಲ್ಲಿಯೇ ಕುಸಿದು ಹೋಗಿದ್ದಾಳೆ. 'ಕಾರುಣ್ಯ ಆಂಟಿ ದಯವಿಟ್ಟು ಕೀರ್ತಿ ಇನ್ಮೇಲೆ ನಮ್ಮ ಮನೆ ಕಡೆ ಬರದಂತೆ ನೋಡಿಕೊಳ್ಳಿ. ಅದು ನಮ್ಮ ಮನೆಯವರಿಗೆ ಯಾರಿಗೂ ಇಷ್ಟವಾಗುತ್ತಿಲ್ಲ. ಮೊದಲನೆಯದಾಗಿ ನನ್ನ ಹೆಂಡತಿಗೆ ಇಷ್ಟವಾಗುತ್ತಿಲ್ಲ. ನನಗೂ ಕೂಡ ಅವಳ ಮುಖ ನೋಡಲು ಇಷ್ಟವಿಲ್ಲ' ಎಂದು ಮತ್ತೊಮ್ಮೆ ರಿಕ್ವೆಸ್ಟ್ ಮಾಡಿದ್ದಾನೆ. ವೈಷ್ಣವ್ ಮಾತು ಕೇಳಿದ ಕೀರ್ತಿ ಅಲ್ಲಿಯೇ ಕುಸಿದು ಹೋಗಿದ್ದಾಳೆ.

ಗೊಂದಲ್ಲೇ ಇರುವ ಲಕ್ಷ್ಮೀ
ಮನೆಯವರೆಲ್ಲ ಸೇರಿ ಲಕ್ಷ್ಮೀಗೆ ಸಮಾಧಾನ ಆಗಲಿ ಎಂಬ ಕಾರಣಕ್ಕೆ ಮತ್ತೊಂದು ಸುಳ್ಳು ಹೇಳಿದ್ದಾರೆ. ಕೀರ್ತಿ ಲವ್ ಮಾಡಿದ ವಿಚಾರವೇ ಗೊತ್ತಿಲ್ಲ ಎಂದಿದ್ದಾರೆ. ಆದರೆ ಇದು ಲಕ್ಷ್ಮೀ ಮನಸ್ಸಿಗೆ ಸತ್ಯ ಎನಿಸುತ್ತಿಲ್ಲ. ಅದನ್ನೇ ಯೋಚನೆ ಮಾಡುತ್ತಾ ನಿಂತಿದ್ದಾಳೆ. ತನ್ನ ಗೌರಿ ಬಳಿ ಆ ಪ್ರಶ್ನೆಗಳನ್ನೆಲ್ಲಾ ಕೇಳುತ್ತಿದ್ದಾಳೆ.
ಟ್ರೋಲಿಗರಿಂದ ಲಕ್ಷ್ಮೀಗೆ ಸಲಹೆ
ಲಕ್ಷ್ಮೀ ಸ್ಥಿತಿ ಕಂಡ ಟ್ರೋಲಿಗರು ಉತ್ತರ ಸಿಗಬೇಕು ಅಂದ್ರೆ ಈ ಐಡಿಯಾ ಫಾಲೋ ಮಾಡು ಅಂತ ಒಂದಷ್ಟು ಐಡಿಯಾಗಳನ್ನು ನೀಡಿದ್ದಾರೆ. ಕಮೆಂಟ್‌ಗಳ ಮೂಲಕ, ಟ್ರೋಲ್‌ಗಳ ಮೂಲಕ ಸಲಹೆ ನೀಡಿದ್ದಾರೆ. ಅದರಲ್ಲಿ 'ನಿಮಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬೇಕು ಎಂದರೆ ಪ್ರತಿ ದಿನ ಕಲರ್ಸ್ ಕನ್ನಡದಲ್ಲಿ ಸಂಜೆ 7.30 ಕ್ಕೆ ಬರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ನೋಡಿ. ಆದಷ್ಟು ಬೇಗ ಉತ್ತರ ಸಿಗಲಿದೆ' ಎಂದಿದ್ದಾರೆ. ಇನ್ನು ತರಹೇವಾರಿ ಕಮೆಂಟ್‌ಗಳು ಬಂದಿವೆ.


Click it and Unblock the Notifications











