Lakshmibaramma: ಮಗ-ಸೊಸೆ ವೆಡ್ಡಿಂಗ್ ಆ್ಯನಿವರ್ಸರಿ; ಉರಿದು ಬೀಳ್ತಿದ್ದ ಕಾವೇರಿಗೆ ಸುಪ್ರೀತಾ ಕ್ಲಾಸ್!
ಹೆಣ್ಣು ಮಕ್ಕಳಿಗಿಂತ ಕೆಲವೊಂದಿಷ್ಟು ತಾಯಂದಿರಿಗೆ ಗಂಡು ಮಕ್ಕಳ ಮೇಲೆ ವ್ಯಾಮೋಹ ಜಾಸ್ತಿ ಎಂಬ ಮಾತು ಲೋಕರೂಢಿ. ಅದು ಸತ್ಯ ಕೂಡ. ಎಷ್ಟೋ ಜನಕ್ಕೆ ಅನುಭವ ಕೂಡ ಆಗಿದೆ. ಇದೀಗ ಅಂಥದ್ದೆ ಕ್ಯಾರೆಕ್ಟರ್ ನಮಗೆಲ್ಲಾ ಕಣ್ಣಿಗೆ ಕಾಣಿಸುತ್ತಿರುವುದು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ. ಮಗನೆಂದರೆ ಕಾವೇರಿಗೆ ಪ್ರೀತಿ ಎಂಬುದಕ್ಕಿಂತ ವ್ಯಾಮೋಹ ಜಾಸ್ತಿ. ಮಗನ ಎಲ್ಲಾ ಅಗತ್ಯತೆಗಳನ್ನು ತಾನೇ ಪೂರೈಸಬೇಕು ಎಂಬ ದುರಾಸೆ.
ಮಗನಿಗೆ ಮದುವೆಯಾಗಿದೆ. ಆದರೆ ಸೊಸೆಯೊಂದಿಗೆ ಮಗ ಅನ್ಯೋನ್ಯವಾಗಿರುವುದನ್ನು ಸಹಿಸುವುದಿಲ್ಲ. ಮಗನಿಗೆ ಸೊಸೆ ಪ್ರೀತಿಯಿಂದ ಏನಾದರೂ ಅಡುಗೆ ಮಾಡಿಕೊಟ್ಟರು ಅದನ್ನು ಸಹಿಸುವುದಿಲ್ಲ. ಹೊರಗೆ ಹೋದರಂತೂ ಕಾವೇರಿಗೆ ಮನಸ್ಸೇ ಹಾಳಾಗಿ ಬಿಡುತ್ತದೆ. ಬಾಲ ಸುಟ್ಟ ಬೆಕ್ಕಿನ ರೀತಿ ಆಡುವುದಕ್ಕೆ ಶುರು ಮಾಡಿಬಿಡುತ್ತಾಳೆ. ಈಗ ಆಗುತ್ತಿರುವುದು ಅದೇ ಕಥೆ.

ಲಕ್ಷ್ಮೀ-ವೈಷ್ಣವ್ ಮದುವೆಗೆ ವರ್ಷ
ಇಷ್ಟವಿಲ್ಲದ ಮನೆಯವರಿಗಾಗಿ, ಅವರ ಸಂತೋಷಕ್ಕಾಗಿ ಆದ ಮದುವೆಗೆ ಒಂದು ವರ್ಷ. ಲಕ್ಷ್ಮೀ ಮತ್ತು ವೈಷ್ಣವ್ ಈ ಒಂದು ವರ್ಷದ ಮದುವೆ ಜೀವನದಲ್ಲಿ ಏನೇನೋ ನಡೆದು ಹೋಯ್ತು. ಎಲ್ಲವೂ ಪಕ್ಕಕ್ಕೆ ಸರಿಸಿ ಈಗ ಇಬ್ಬರ ನಡುವೆ ಪ್ರಿತೀ ಬೆರೆಯಲು ಶುರುವಾಗಿದೆ. ಲಕ್ಷ್ಮೀ ಜೊತೆಗಿದ್ದರೆ ವೈಷ್ಣವ್ ಅದೇನೋ ಖುಷಿ, ನೆಮ್ಮದಿ. ಬೆಸ್ಟ್ ಕಂಪಾನಿಯನ್. ಲಕ್ಷ್ಮೀ ವಿರುದ್ಧ ಯಾರೇ ಮಾತನಾಡಿದರು ಸಹಿಸುವುದಿಲ್ಲ. ಲಕ್ಷ್ಮೀ ಇಷ್ಟಕಷ್ಟಗಳಿಗೆ ಹೆಚ್ಚು ಒತ್ತು ಕೊಡುತ್ತಾನೆ. ಇಭರು ಸೇರಿ ಯಾರೂ ಇಲ್ಲದ ಜಾಗದಲ್ಲಿ ಕೂತು ಮನಬಿಚ್ಚಿ ಮಾತನಾಡುವ ಮೂಲಕ ಈ ಸಂಭ್ರಮವನ್ನು ಕಳೆಯುವುದಕ್ಕೆ ಹೋಗಿದ್ದಾರೆ.
ಅಮ್ಮನ ಕಾಲ್ ಬಂದ್ರು ಡೋಂಟ್ ಕೇರ್
ಲಕ್ಷ್ಮೀ ಮದುವೆಗೂ ಮೊದಲು ಸಾಕಷ್ಟು ಕಷ್ಟ ಪಟ್ಟಿದ್ದಾಳೆ. ಚಿಕ್ಕಮ್ಮನ ಮನೆಯ ಜವಾಬ್ದಾರಿಯನ್ನು ಲಕ್ಷ್ಮೀ ಹೊತ್ತಿದ್ದಳು. ಆಗ ಸ್ಕೂಟರ್ ಒಂದು ಇವಳ ಕಷ್ಟ ಸುಖಕ್ಕೆ ಆಗಿದೆ. ಅದೆಂದರೆ ತುಂಬಾ ಇಷ್ಟ. ಹೀಗಾಗಿ ವೈಷ್ಣವ್ ಅದೇ ಸ್ಕೂಟರ್‌ನಲ್ಲಿ ಆ್ಯನಿವರ್ಸರಿ ಸ್ಪೆಷಲ್ ಅಂತ ಲಕ್ಷ್ಮೀ ಜೊತೆಗೆ ಹೊರಟಿದ್ದಾನೆ.
ವೈಷ್ಣವ್ ಒಪ್ಪಲ್ಲ.. ಕಾವೇರಿ ಬಿಡಲ್ಲ
ಬೆಟ್ಟದ ತುದಿಯಲ್ಲಿ ಕೂತು ಲಕ್ಷ್ಮೀ-ವೈಷ್ಣವ್ ತಮ್ಮ ಮದುವೆಯ ಜೀವನ, ಕಷ್ಟ ಸುಖ, ಪ್ರೀತಿ ಗೀತಿ ಇತ್ಯಾದಿಗಳನ್ನೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಅಷ್ಟರಲ್ಲೇ ಕಾವೇರಿ ಕರೆ ಮೇಲೆ ಕರೆ ಮಾಡಿದ್ದಾಳೆ. ಆದರೆ ವೈಷ್ಣವ್ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಆದರೆ ಕಾವೇರಿ ಬಿಡಬೇಕಲ್ಲ ಲಕ್ಷ್ಮೀಗೆ ಮಾಡಿದ್ದಾಳೆ. ಮಗನ ಭವಿಷ್ಯ, ಈ ಮೀಟಿಂಗ್ ಅಟೆಂಡ್ ಮಾಡಲೇಬೇಕು ಅಲ್ಲಿಂದ ಕರೆದುಕೊಂಡು ಹೊರಟು ಬಾ ಅಂತ ಹೇಳಿದ್ದಾಳೆ. ಲಕ್ಷ್ಮೀಗೆ ಅತ್ತೆಯ ಮಾತಿಗೆ ಎದುರಾಡುವ ಧೈರ್ಯವಿಲ್ಲ. ಇತ್ತ ವೈಷ್ಣವ್ ಗೆ ಹೇಳಿದರೂ ಕೇಳುತ್ತಿಲ್ಲ. ಆ ಮೀಟಿಂಗ್ ಏನು ಇಂಪಾರ್ಟೆಂಟ್ ಅಲ್ಲ ಎಂದು ಲಕ್ಷ್ಮೀ ಜೊತೆಗಿನ ಆ ಸಮಯವನ್ನು ಎಂಜಾಯ್ ಮಾಡುತ್ತಿದ್ದಾನೆ.

ಸುಪ್ರೀತಾಗೆ ನೆಟ್ಟಿಗರ ಬಹುಪರಾಕ್
ಕಾವೇರಿ ಕೆಲಸ ಸುಪ್ರೀತಾಗೆ ಕೋಪ ತರಿಸೋದು. ಇವತ್ತು ಮಕ್ಕಳಿಬ್ಬರ ಆ್ಯನಿವರ್ಸರಿ. ಅವರಿಬ್ಬರು ಹೊರಗೇನೋ ಹೋಗಿದ್ದಾರೆ. ಯಾಕೆ ನಿಮಗೆ ತಡೆಯುವುದಕ್ಕೆ ಆಗುತ್ತಿಲ್ವಾ. ನಿಮಗೂ ನಮ್ಮ ಅಮ್ಮ ಇದೇ ಥರ ಮಾಡಿದ್ದರೆ ಉರೀತಾ ಇತ್ತು ತಾನೇ. ಆದರೆ ನಮ್ಮ ಅಮ್ಮ ಈ ರೀತಿ ಮಾಡಲಿಲ್ಲ. ಮೀಟಿಂಗ್ ನೆಪ ಹೇಳಿ ಅವರಿಬ್ಬರ ಪ್ರೈವೆಸಿ ಹಾಳು ಮಾಡುತ್ತಾ ಇದ್ದೀರಾ ಅಂತ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾಳೆ. ಇದು ನೆಟ್ಟಿಗರಿಗೆ ತುಂಬಾನೇ ಇಷ್ಟವಾಗಿಬಿಟ್ಟಿದೆ. ಸುಪ್ರೀತಾಗೆ ಇನ್ನಷ್ಟು ಸಪೋರ್ಟ್ ಮಾಡಿದ್ದಾರೆ. ಉಗಿ ಉಗಿ ಇನ್ನ ಉಗಿ ನಿಮ್ಮ ಅತ್ತಿಗೆಗೆ ಅಂತ.


Click it and Unblock the Notifications











