Lavanya Hiremath: ಲಕ್ಷ್ಮೀ ನಾದಿನಿ ವಿಧಿ ಡಾಕ್ಟರ್ ವೃತ್ತಿ ಮರೆತಿಲ್ಲ; ಡೆಂಟಲ್ ಟ್ರೀಟ್ಮೆಂಟ್ ವಿಡಿಯೋ ನೋಡಿ ಒಮ್ಮೆ

By ಎಸ್ ಸುಮಂತ್

ಲಕ್ಷ್ಮೀ ಬಾರಮ್ಮ ಧಾರಾವಾಹಿ ಈಗ ಸಖತ್ ಟ್ವಿಸ್ಟ್‌ನೊಂದಿಗೆ ಸಾಗುತ್ತಾ ಇದೆ. ಕಾವೇರಿಯ ಕುತಂತ್ರದಿಂದ ಕೀರ್ತಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಕಾವೇರಿಯ ಚಿಕ್ಕ ಮಗಳು ವಿಧಿಗೆ ಮೊದಲೆಲ್ಲಾ ಕೀರ್ತಿ ಎಂದರೆ ತುಂಬಾ ಇಷ್ಟ ಇತ್ತು. ಯಾಕಂದ್ರೆ ಕೀರ್ತಿ ಮಾಡ್ರನ್ ಹುಡುಗಿಯಾಗಿದ್ದಳು. ಆದರೆ ಕಾವೇರಿಯ ಕುತಂತ್ರದಿಂದ ಲಕ್ಷ್ಮೀ, ವೈಷ್ಣವ್ ಹೆಂಡತಿಯಾಗಿ ಬಂದಳು. ಅಂದಿನಿಂದ ವಿಧಿಗೂ ಲಕ್ಷ್ಮೀಗೂ ಒಳ ಯುದ್ಧ ತಪ್ಪಿದ್ದಲ್ಲ.

ವಿಧಿ ಮನೆಯ ಮುದ್ದಿನ ಮಗಳು. ಅದರಲ್ಲೂ ವೈಷ್ಣವ್ ಮುದ್ದಿನ ತಂಗಿ. ಅವಳು ಏನು ಕೇಳಿದರೂ ಇಲ್ಲ ಅಂತಿರ್ಲಿಲ್ಲ ವೈಷ್ಣವ್. ಆದ್ರೆ ಲಕ್ಷ್ಮೀ ಬಂದ ಮೇಲೆ ಕೆಲವೊಂದು ತಪ್ಪುಗಳನ್ನು ತಿದ್ದಿಕೊಂಡಿದ್ದ. ಅದು ವಿಧಿಗೆ ಕೋಪ ತರಿಸಿತ್ತು. ಲಕ್ಷ್ಮೀಯನ್ನ ಇನ್ನಷ್ಟು ದ್ವೇಷ ಮಾಡುವುದಕ್ಕೆ ಶುರು ಮಾಡಿದ್ದಳು. ಆದರೆ ಈಗ ಸುಪ್ರೀತಾಗೆ ಶಾಕ್ ಆಗುವಂತ ಬೆಳವಣಿಗೆ ವಿಧಿ ಕಡೆಯಿಂದ ನಡೆಯುತ್ತಿದೆ.

Lakshmibaramma serial fame dentist come actor dr Lavanya shares her treatment video

ಕಾವೇರಿ ಮುದ್ದಿನ ಮಗಳು ವಿಧಿ

ವಿಧಿಗೆ ಸ್ಟೇಟಸ್, ಶ್ರೀಮಂತಿಕೆ ಎಂಬ ಅಹಂಕಾರ ಸ್ವಲ್ಪ ಜಾಸ್ತಿಯೇ ಇದೆ. ಮನೆಯಲ್ಲಿ ಸಣ್ಣ ಪುಟ್ಟದ್ದಕ್ಕೂ ಹೆಚ್ಚು ಜಗಳ ಮಾಡುವ ಗುಣದವಳು ವಿಧಿ. ಕಾವೇರಿಗೂ ಮುದ್ದಿನ ಮಗಳೇ. ಹಾಗಂತ ಜೋರು ಮಾಡಿದರೆ ಬೈಯದೇ ಬಿಡುವವಳಲ್ಲ ಕಾವೇರಿ. ಅಣ್ಣನಿಗೆ ಹೆಚ್ಚಿ ಪ್ರಾಶಸ್ತ್ಯ ಈ ಮನೆಯಲ್ಲಿ ಅನ್ನೋದು ಅವಳ ವಾದ-ಜಗಳ.

ವಿಧಿ ನಿಜವಾದ ಹೆಸರು ಲಾವಣ್ಯ ಹಿರೇಮಠ್

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಹೀಗೆ ಮುನಿಸು, ಜಗಳ ಮಾಡಿಕೊಳ್ಳುವ ವಿಧಿ ರಿಯಲ್ ಲೈಫ್ ನಲ್ಲಿ ಬೇರೆಯದ್ದೇ ರೀತಿ ಇದ್ದಾರೆ. ವಿಧಿಯ ನಿಜವಾದ ಹೆಸರು ಡಾ.ಲಾವಣ್ಯ ಹಿರೇಮಠ್. ಅವರ ಸೋಷಿಯಲ್ ಮೀಡಿಯಾವನ್ನು ಒಮ್ಮೆ ತಿರುವಿ ಹಾಕಿದ್ರೆ ಗೊತ್ತಾಗುತ್ತೆ ಅವರೆಷ್ಟು ಮಾಡ್ರನ್ ಗರ್ಲ್ ಅನ್ನೋದು. ಸೀರಿಯಲ್‌ನಲ್ಲಿ ಕೂಡ ಅಷ್ಟೇ ಮಾಡ್ರನ್ ಆಗಿ ಇರುತ್ತಾರೆ. ಪುಟ್ಟ ಹುಡುಗಿಯಂತೆ ಕಂಡರೂ, ರಿಯಲ್ ಲೈಫ್‌ನಲ್ಲಿ ಈಗಾಗಲೇ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸುವಷ್ಟು ದೊಡ್ಡವರಾಗಿದ್ದಾರೆ.

Lakshmibaramma serial fame dentist come actor dr Lavanya shares her treatment video

ಡೆಂಟಲ್ ಡಾಕ್ಟರ್ ಲಕ್ಷ್ಮೀ ನಾದಿನಿ

ಲಾವಣ್ಯ ಹಿರೇಮಠ್ ವೃತ್ತಿಯಲ್ಲಿ ವೈದ್ಯೆ. ಡೆಂಟಲ್ ಡಾಕ್ಟರ್. ಆದರೆ ಒಬ್ಬೊಬ್ಬರಿಗೆ ಒಂದೊಂದೆ ಆಸಕ್ತಿ, ಆಸೆ ಅಂತ ಇರುತ್ತಲ್ಲ, ಅದೇ ರೀತಿ ಲಾವಣ್ಯ ಅವರಿಗೂ ನಟನೆ ಮೇಲೆ ಬಹಳ ಪ್ರೀತಿ. ಹೀಗಾಗಿ ವೃತ್ತಿಯಲ್ಲಿ ಡಾಕ್ಟರ್ ಆದರೂ ಆಕ್ಟರ್ ಆಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಲಕ್ಷ್ಮೀಬಾರಮ್ಮ ಧಾರಾವಾಹಿಯಲ್ಲಿ ಮುದ್ದು ಮುದ್ದಾಗಿ ಕಾಣಿಸುತ್ತಾರೆ. ಲಾವಣ್ಯ ಅವರು ಜಗಳವಾಡಿದರೂ ಅವರ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಶೂಟಿಂಗ್ ಮಧ್ಯೆ ಕೆಲಸ ಮರೆಯದ ಲಾವಣ್ಯ

ಸೋಷಿಯಲ್ ಮೀಡಿಯಾದಲ್ಲಿ ಲಾವಣ್ಯ ಫುಲ್ ಬ್ಯುಸಿ. ಫೋಟೋಶೂಟ್ ಮಾಡಿಸಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಟೀಂ ಜೊತೆಗೆ ರೀಲ್ಸ್ ಮಾಡಿ‌ಹಾಕುತ್ತಾ ಇರುತ್ತಾರೆ. ಅವರು ಹಾಕುವ ಒಂದೊಂದು ಪೋಸ್ಟ್‌ಗೂ ಫಾಲೋವರ್ಸ್ ಲೈಕ್, ಕಮೆಂಟ್ ಕೂಡ ಮಾಡುತ್ತಾರೆ. ಇದೀಗ ಡೆಂಟಲ್ ಟ್ರೀಟ್ಮೆಂಟ್ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದು, ನಟನೆ ಜೊತೆಗೆ ತಮ್ಮ ವೃತ್ತಿಯನ್ನು ಮರೆಯದೆ ಎರಡು ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಬದ್ಧತೆಯನ್ನು ತೋರಿಸುತ್ತದೆ. ಡೆಂಟಲ್ ಟ್ರೀಟ್ಮೆಂಟ್ ವಿಡಿಯೋ ನೋಡಿ ಅಲ್ಲಿಯೂ ನಿಮ್ಮ ನಟನೆ ಸೂಪರ್ ಎನ್ನುತ್ತಿದ್ದಾರೆ.

More from Filmibeat

English summary
Colors kannada Lakshmibaramma Written Update on vidhi social media. Here is the details about Vidhi aka Dr.Lavanya hiremath shared the video of the treatment;
Read more about: filmbeat original serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X