Anubandha: ಸ್ಟೈಲ್ ಐಕಾನ್ ಅವಾರ್ಡ್ ಪಡೆದ ಕೀರ್ತಿ; ಅಭಿಮಾನಿಗಳಿಂದ ಪ್ರೀತಿಯ ವಿಶಸ್!
ಕಲರ್ಸ್ ಕನ್ನಡದಲ್ಲಿ ಸಂಜೆಯಿಂದ ರಾತ್ರಿವರೆಗೂ ಒಳ್ಳೊಳ್ಳೆ ಧಾರಾವಾಹಿಗಳು ಬರುತ್ತವೆ. ಒಂದೊಂದು ಧಾರಾವಾಹಿಯಲ್ಲೂ ಸಾಕಷ್ಟು ಕಲಾವಿದರು ಇರುತ್ತಾರೆ. ಎಷ್ಟೇ ಧಾರಾವಾಹಿಗಳು ಬಂದರೂ ಎಲ್ಲರೂ ಕೂಡ ಒಂದೇ ಕುಟುಂಬದಂತೆ. ಆದರೆ ಎಲ್ಲೆರೂ ಒಟ್ಟಿಗೆ ಸೇರುವುದಕ್ಕೆ ಅಂತ ಇರುವುದೇ ಒಂದೇ ದಿನ. ಅದುವೇ ಅನುಬಂಧ. ಈ ಅವಾರ್ಡ್ ಕಾರ್ಯಕ್ರಮಕ್ಕಾಗಿ ಇಡೀ ಕಲರ್ಸ್ ಕನ್ನಡ ಕುಟುಂಬದವರು ಕಾಯುತ್ತಿರುತ್ತಾರೆ. ಯಾಕಂದ್ರೆ ಅವರ ಪಾತ್ರಗಳಿಗೆ ತಕ್ಕ ಹಾಗೇ ಪ್ರಶಸ್ತಿಯೂ ಸಿಗುವ ದಿನ ಅದು. ಹೀಗಾಗಿ ಎಲ್ಲರಿಗೂ ವಿಶೇಷವಾದಂತು.
ಕಲಾವಿದರಿಗೆ ಪ್ರಶಸ್ತಿ ಎನ್ನುವುದು ಬಹಳ ಮುಖ್ಯ. ಅದರಲ್ಲೂ ಧಾರಾವಾಹಿ ಲೋಕದಲ್ಲಂತೂ ಪ್ರಶಸ್ತಿ ಎಂಬಹದು ಬಹಳ ಮುಖ್ಯವಾಗುತ್ತದೆ. ವೀಕ್ಷಕರ ಮನಸ್ಸಲ್ಲಿ ಕಲಾವಿದರು ಹೇಗೆ ಮನೆ ಮಾಡಿದ್ದಾರೆ ಎಂಬುದು ಕೂಡ ತಿಳಿದುಕೊಳ್ಳುವುದಕ್ಕೆ ಸುಲಭವಾಗುತ್ತದೆ. ಕಲರ್ಸ್ ಕನ್ನಡ ಅನೌನ್ಸ್ ಮಾಡಿದ ವಿಭಾಗಗಳಲ್ಲಿ ತಮ್ಮ ಇಷ್ಟವಾದಂತ ನಟ-ನಟಿಯರಿಗೆ ವೋಟ್ ಮಾಡುತ್ತಾರೆ. ಇದೀಗ ಅವಾರ್ಡ್ ಕಾರ್ಯಕ್ರಮದಲ್ಲಿ ಸ್ಟೈಲ್ ಐಕಾನ್ ಅವಾರ್ಡ್ ಅನ್ನು ಕೀರ್ತಿ ಪಡೆದಿದ್ದಾರೆ.

ಕೀರ್ತಿ ಎಂದರೆ ಹಲವರಿಗೆ ಪ್ರೀತಿ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಈ ಮೊದಲೆಲ್ಲಾ ಕೀರ್ತಿಯನ್ನು ಕಂಡರೆ ಸಾಕಷ್ಟು ಜನ ನಿಂದನೆ ಮಾಡಿದವರೇ ಹೆಚ್ಚು. ಯಾಕಿಷ್ಟು ಹುಚ್ಚಿ ಥರ ಆಡುತ್ತಿದ್ದಾಳೆ. ವೈಷ್ಣವ್‌ನನ್ನು ಬದುಕಲು ಬಿಡಬಹುದಲ್ವಾ ಎನ್ನುತ್ತಿದ್ದರು. ಯಾಕಂದ್ರೆ ಕಾವೇರಿಯಿಂದಾಗಿ ಕೀರ್ತಿ ಕೆಟ್ಟದಾಗಿ ಕಾಣುತ್ತಿದ್ದಳು. ಆದರೆ ದಿನಕಳೆದಂತೆ ಕೀರ್ತಿಯ ನಿಜವಾದ ಪ್ರೀತಿ ತಿಳಿದು, ಎಲ್ಲರೂ ಅವಳಿಗೆ ಸಪೋರ್ಟ್ ಮಾಡುವುದಕ್ಕೆ ಶುರು ಮಾಡಿದರು.
ಕೀರ್ತಿ ಪಾತ್ರ ಸತ್ತಿದ್ದಕ್ಕೆ ವೀಕ್ಷಕರ ಬೇಸರ
ಕೀರ್ತಿಗೆ ಅದೆಷ್ಟು ಅಭಿಮಾನಿಗಳಾಗಿದ್ದರು ಎಂದರೆ ಧಾರಾವಾಹಿಯಲ್ಲಿ ಕೀರ್ತಿ ಪಾತ್ರ ಸತ್ತಿದ್ದಕ್ಕೆ ತುಂಬಾ ಬೇಸರ ಮಾಡಿಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೇ ಶುರು ಮಾಡಿದ್ದರು. ದಯವಿಟ್ಟು ಮತ್ತೆ ಕೀರ್ತಿಯನ್ನು ವಾಪಾಸ್ ಕರೆದುಕೊಂಡು ಬನ್ನಿ ಎಂದು ಮನವಿ ಮಾಡಿದ್ದರು. ವೀಕ್ಷಕರ ಆಸೆಯಂತೆ ಕೀರ್ತಿ ವಾಪಾಸ್ ಬಂದಿದ್ದಾರೆ, ಆದರೆ ದೆವ್ವದ ಪಾತ್ರದ ಮೂಲಕ.
ಕೀರ್ತಿಗೆ ಸಿಕ್ತು ಸ್ಟೈಲ್ ಐಕಾನ್
ವರ್ಷಕ್ಕೆ ಒಮ್ಮೆ ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ ನಡೆಸುತ್ತದೆ. ಈ ಅವಾರ್ಡ್ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಅವಾರ್ಡ್ ಗಳನ್ನ ಕಲಾವಿದರಿಗೆ ನೀಡಲಾಗುತ್ತದೆ. ಈ ಬಾರಿಯ ಅನುಬಂಧ ಕಾರ್ಯಕ್ರಮದಲ್ಲಿ ಕೀರ್ತಿಗೂ ಅವಾರ್ಡ್ ಸಿಕ್ಕಿದೆ. ಸ್ಟೈಲ್ ಐಕಾನ್ ಅವಾರ್ಡ್ ಅನ್ನು ಕೀರ್ತಿಗೆ ನೀಡಲಾಗಿದೆ. ಇದು ಕೀರ್ತಿಯ ಅಭಿಮಾನಿಗಳಿಗೆ ಬಹಳ ಖುಷಿಯಾಗಿದೆ. ಶುಕ್ರವಾರ, ಶನಿವಾರ, ಭಾನುವಾರ ಮೂರು ದಿನಗಳ ಕಾಲ ಅನುಬಂಧ ಅವಾರ್ಡ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇಡೀ ಕಲರ್ಸ್ ಕನ್ನಡದ ಬಳಗ ಒಂದೇ ವೇದಿಕೆಯಲ್ಲಿ ಸೇರಿರುವುದು ಬ್ಯೂಟಿಫುಲ್ ಆಗಿ ಕಾಣಿಸುತ್ತಿದೆ.
ಫ್ಯಾನ್ಸ್ ಮೆಚ್ಚುಗೆ
ಕೀರ್ತಿಗೆ ಸ್ಟೈಲ್ ಐಕಾನ್ ಅವಾರ್ಡ್ ಸಿಕ್ಕಿರುವುದು ಸರಿಯಾಗಿದೆ ಎಂದೇ ಫ್ಯಾನ್ಸ್ ಭಾವಿಸಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ಯು ಡಿಸರ್ವ್ ಕೀರ್ತಿ ಎಂದೇ ಕಮೆಂಟ್ ಹಾಕುತ್ತಿದ್ದಾರೆ. ಯಾಕಂದ್ರೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ, ಡ್ರೆಸ್ಸಿಂಗ್ ಸೆನ್ಸ್ ಎಲ್ಲರಿಗೂ ಇಷ್ಟವಾಗುತ್ತಿತ್ತು. ಹೆಣ್ಣುಮಕ್ಕಳಿಗೆ ವಾವ್ ಎನಿಸುವಂತ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಸ್ಟೈಲ್ ಐಕಾನ್ ಅವಾರ್ಡ್ ಕೊಟ್ಟಿರುವುದು ಸರಿಯಾಗಿದೆ. ಹೀಗಾಗಿ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಖುಷಿಯಾಗಿದ್ದಾರೆ.


Click it and Unblock the Notifications











