Lavanya Hiremath: ನಾದಿನಿ ವಿಧಿ ಮದುವೆಗೆ ಅತ್ತಿಗೆ ಲಕ್ಷ್ಮೀ ಮಿಸ್ಸಿಂಗ್!

By ಎಸ್ ಸುಮಂತ್

ಡೆಂಟಲ್ ಡಾಕ್ಟರ್ ಆಗಿದ್ರು ಕೂಡ ಲಾವಣ್ಯ ನಟನೆಗೆ ಹೆಚ್ಚು ಒತ್ತು ಕೊಟ್ಟವರು. ಆಕ್ಟರ್ ಆಗಿ ಜೊತೆಗೆ ತಮ್ಮ ವೃತ್ತಿಯನ್ನು ನಿಭಾಯಿಸುತ್ತಿದ್ದರು. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಮುದ್ದಿನ ಮಗಳಾಗಿ, ವೈಷ್ಣವ್‌ಗೆ ಮುದ್ದಿನ ತಂಗಿಯಾಗಿದ್ದಾಳೆ ವಿಧಿ. ಆದರೆ ಅತ್ತಿಗೆ ಕಂಡರೆ ಅಷ್ಟಕ್ಕಷ್ಟೆ. ಸದಾ ಕಿತ್ತಾಡುತ್ತಲೇ ಇರುತ್ತಾಳೆ.

ವಿಧಿ ಸೀರಿಯಲ್‌ನಲ್ಲಿ ಸ್ಟೈಲ್ ಐಕಾನ್. ಪ್ರೀತಿ, ಗೀತಿ ಅಂತ ಮಾಡಿ ಹಾದಿ ತಪ್ಪೋದು ಬೇಡ ಅಂತ ಲಕ್ಷ್ಮೀ ಬುದ್ದಿ ಹೇಳುತ್ತಾ ಇರುತ್ತಾಳೆ. ಅಮ್ಮನ ಭಯಕ್ಕೆ ಅತ್ತಿಗೆ ಬಳಿ ಇತ್ತೀಚೆಗೆ ಜಗಳ ಕಡಿಮೆ ಮಾಡಿರುವ ವಿಧಿ ಈಗ ರಿಯಲ್ ಆಗಿ ಮದುವೆ ಆಗಿದ್ದಾರೆ.

Lakshmibaramma serial Sushma roa and Bhoomika missed co-star Lavanya s marriage

ವೃತ್ತಿಯಲ್ಲಿ ಡೆಂಟಲ್ ಡಾಕ್ಟರ್ ಅನ್ನೇ ಲಾವಣ್ಯ ಹಿರೇಮಠ್ ಮದುವೆಯಾಗಿದ್ದಾರೆ. ಅಕ್ಷಯ್ ಕೂಡ ಡೆಂಟಲ್ ಡಾಕ್ಟರ್. ಬಹಳ ಅದ್ದೂರಿಯಾಗಿ ಹೊಸ ಜೀವನಕ್ಕೆ‌ ಕಾಲಿಟ್ಟಿದ್ದಾರೆ. ತಮ್ಮ ಹುಡುಗನ ಬಗ್ಗೆ ಇತ್ತೀಚೆಗಷ್ಟೇ ಅನೌನ್ಸ್ ಮಾಡಿದ್ದರು. ಇದೀಗ ವಿಜೃಂಭಣೆಯಿಂದ ಮದುವೆಯೂ ಆಗಿದ್ದಾರೆ.

ಶಾಸ್ತ್ರೋಕ್ತವಾಗಿ ಲಾವಣ್ಯ ಕಲ್ಯಾಣ

'ಲಕ್ಷ್ಮೀಬಾರಮ್ಮ' ಧಾರಾವಾಹಿಯ ವಿಧಿ ಅಲಿಯಾಸ್ ಲಾವಣ್ಯ ಮದುವೆ ಶಾಸ್ತ್ರೋಕ್ತವಾಗಿ ನಡೆದಿದೆ. ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರ, ಬಳೆ ಶಾಸ್ತ್ರ ಅಂತ ಎಲ್ಲಾ ಶಾಸ್ತ್ರಗಳು ನಡೆದಿದ್ದು, ಲಾವಣ್ಯ ತಮ್ಮಿಷ್ಟದ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ. ಮದುವೆ ಶಾಸ್ತ್ರದ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡಿದ್ದಾರೆ.

ಭಾಗ್ಯ-ಲಕ್ಷ್ಮೀ ಮಿಸ್ಸಿಂಗ್

ಕಾವೇರಿ ಹಾಗೂ ಕುಸುಮಾ ಅವರದ್ದು ಒಂದೇ ಕುಟುಂಬ. ಲಕ್ಷ್ಮೀಗೆ ಮದುವೆಯಾದ ಮೇಲೆ ಕುಟುಂಬ ದೊಡ್ಡದಾಗಿತ್ತು. ಆದರೆ ವಿಧಿಗೆ ಕುಸುಮಾ ದೊಡ್ಡಮ್ಮ ಎಂದರೆ ಕೊಂಚ ಭಯ. ಎರಡು ಕುಟುಂಬಸ್ಥರು ವಿಧಿ ರಿಯಲ್ ಮದುವೆಗೆ ಹಾಜರಾಗಿದ್ದಾರೆ. ಕಲರ್ ಫುಲ್ ಕಾಸ್ಟ್ಯೂಮ್ ತೊಟ್ಟು ಲಾವಣ್ಯ ಮದುವೆಗೆ ಬಂದಿದ್ದಾರೆ. ಆದರೆ ಇಲ್ಲಿ ಭಾಗ್ಯ ಮತ್ತು ಲಕ್ಷ್ಮೀ ಇಬ್ಬರು ಮಿಸ್ ಆಗಿದ್ದಾರೆ. ಧಾರಾವಾಹಿಯಲ್ಲಿ ಲಕ್ಷ್ಮೀ ಆಸ್ಪತ್ರೆಯಲ್ಲಿದ್ದಾರೆ. ಆದರೆ ರಿಯಲ್ ಲೈಫ್‌ನಲ್ಲಿ ಅಲ್ಲ. ತೆಲುಗಿನಲ್ಲೂ ಲಕ್ಷ್ಮೀ ಬ್ಯುಸಿ ಇದ್ದು, ಹೀಗಾಗಿ ಮದುವೆಗೆ ಬಾರದೆ ಇರಬಹುದು.

Lakshmibaramma serial Sushma roa and Bhoomika missed co-star Lavanya s marriage

ಅತ್ತೆ ಕೂಡ ಮಿಂಚಿಂಗ್!

ಇನ್ನು ಮೊದಲೆಲ್ಲಾ ಸುಪ್ರಿತಾ ಅತ್ತೆ ಎಂದರೆ ವಿಧಿಗೆ ಸಿಕ್ಕಾಪಟ್ಟೆ ಪ್ರೀತಿ. ಇಬ್ಬರು ತುಂಬಾ ಸಪೋರ್ಟಿವ್ ಆಗಿದ್ರು. ಆದರೆ ಸುಪ್ರೀತಾ ಲಕ್ಷ್ಮೀ ಜೊತೆಗೆ ಕ್ಲೋಸ್ ಆದ ಮೇಲೆ ವಿಧಿ ಸ್ವಲ್ಪ ದೂರ ಉಳಿದು ಬಿಟ್ಟಳು. ಆದರೆ ಇದು ಧಾರಾವಾಹಿ ಕಥೆ. ಆದರೆ ರಿಯಲ್ ಲೈಫ್‌ನಲ್ಲಿ ಹಾಗಲ್ಲ. ಇಬ್ಬರು ಅನ್ಯೋನ್ಯವಾಗಿದ್ದಾರೆ. ಲಾವಣ್ಯ ಮದುವೆಗೆ ಸುಪ್ರೀತಾ ಸೇರಿದಂತೆ ಎರಡು ಕುಟುಂಬ ಹೋಗಿತ್ತು. ಈ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸುಪ್ರೀತಾ ಶೇರ್ ಮಾಡಿಕೊಂಡಿದ್ದಾರೆ.

ಮತ್ತೆ ನಟನೆಗೆ ಬರ್ತಾರಾ?

ಲಾವಣ್ಯ ಈಗಷ್ಟೇ ಮದುವೆಯಾಗಿದ್ದಾರೆ. ಇಬ್ಬರು ಡಾಕ್ಟರ್. ಕ್ಲಿನಿಕ್ ಕೂಡ ಇದೆ. ಆದರೆ ಮದುವೆಯ ನಂತರ ನಟನೆಗೆ ಬರ್ತಾರಾ ಎಂಬ ಪ್ರಶ್ನೆ ಅವರ ಫಾಲೋವರ್ಸ್‌ದು. ಹಾಗೇ ಯೋಚನೆ ಮಾಡಿದ್ರೆ ಈಗಲೇ ಆಕ್ಟಿಂಗ್ ಜೊತೆಗೆ ಡಾಕ್ಟರ್ ಆಗಿಯೂ ವೃತ್ತಿ ಮುಂದುವರೆಸಿದ್ದರು. ಈಗ ಮದುವೆಯಾದ ಮೇಲೂ ನಟನೆ, ವೃತ್ತಿ, ಸಂಸಾರ ಎಲ್ಲವನ್ನು ಬ್ಯಾಲೆನ್ಸ್ ಮಾಡುತ್ತಾರೆ ಎಂದೇ ಎಲ್ಲರ ಅಭಿಪ್ರಾಯವಾಗಿದೆ.

More from Filmibeat

English summary
Lakshmibaramma serial fame Lavanya's marriage; Both Sushma and Bhoomika absent for marriage;
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X