Lavanya Hiremath: ಬಾಯ್ ಫ್ರೆಂಡ್ ಜೊತೆಗೆ 'ಲಕ್ಷ್ಮೀ ಬಾರಮ್ಮ' ವಿಧಿ ರೊಮ್ಯಾಂಟಿಕ್ ಪೋಸ್; ಶೀಘ್ರದಲ್ಲೇ ಮದುವೆ!

By ಎಸ್ ಸುಮಂತ್

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ವಿಧಿ ಯಾರಿಗೆ ಗೊತ್ತಿಲ್ಲ ಹೇಳಿ. ಸ್ಟೈಲ್ ಐಕಾನ್ ಅಂತಾನೇ ಹೇಳಬಹುದು. ವಿಧಿ ಮಾಡೋ ಸ್ಟೈಲ್‌ಗೆ ಅದೆಷ್ಟೋ ಹುಡುಗಿಯರು ಕಾಪಿ ಮಾಡಿರುವುದು ಉಂಟು. ಹೇರ್ ಸ್ಟೈಲ್, ಡ್ರೆಸ್ ಎಲ್ಲವೂ ಸೂಪರ್ ಆಗಿನೇ ಇರುತ್ತದೆ. ಸ್ಟೈಲ್ ಐಕಾನ್ ಮಾತ್ರವಲ್ಲ ಮಾತಿನ ಮಲ್ಲಿ, ಕೋಪಿಷ್ಠೆ. ಮನೆಯಲ್ಲಿ ಚಿಕ್ಕಮಗಳಾಗಿರುವ ಕಾರಣ ಎಲ್ಲರೂ ಕೆಲವೊಂದು ವಿಚಾರದಲ್ಲಿ ದೂರ ಇಡುತ್ತಾರೆ. ಅದರಲ್ಲಿ ಅಣ್ಣನ ಮೇಲೆ ಮನೆಯವರಿಗೆ ಪ್ರೀತಿ ಜಾಸ್ತಿ ಇದು ವಿಧಿ‌ ಯಾವಾಗಲೂ ಹೇಳುವ ದೂರು.

ತಾನೂ ಫ್ಯಾಷನ್ ಆಗಿದ್ದೀನಿ ತನ್ನ ಅತ್ತಿಗೆ ಕೂಡ ಅಷ್ಟೇ ಫ್ಯಾಷನ್ ಆಗಿರಬೇಕು ಎಂದು ಬಯಸಿದವಳು ವಿಧಿ. ಲಕ್ಷ್ಮೀ ಅದಕ್ಕೆ ತದ್ವಿರುದ್ದ. ಪಕ್ಕಾ ಗೃಹಿಣಿಯಂತೆ ಇರುವುದಕ್ಕೆ ಆಸೆ ಪಡುವ ಹೆಣ್ಣು. ಹೀಗಾಗಿ ಮನೆಯಲ್ಲಿ ಲಕ್ಷ್ಮೀ ಹಾಗೂ ವಿಧಿ ನಡುವೆ ಆಗಾಗ ಯುದ್ಧಗಳು ನಡೆಯುತ್ತಲೆ ಇರುತ್ತವೆ. ಆದರೆ ಈಗ ವಿಧಿ ಮದುವೆಯಾಗಿ ಗಂಡನ ಮನೆಗೆ ಹೋಗುವ ಕಾಲ ಬಂದಿದೆ. ಅದು ರಿಯಲ್ ಲೈಫ್ ನಲ್ಲಿ.

Lakshmibaramma serial vidhi aka lavanya introduces her fiance marriage fixed

ರೊಮ್ಯಾಂಟಿಕ್ ಫೋಟೋ ಶೂಟ್

ವಿಧಿ ಅಲಿಯಾಸ್ ಲಾವಣ್ಯ ಹೀರೇಮಠ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಇತ್ತಿಚೆಗಷ್ಟೇ ತನ್ನಿಷ್ಟದ ತಾರ್ ತೆಗೆದುಕೊಂಡರು. ಅದು 20 ಲಕ್ಷ ಬೆಲೆಬಾಳುವಂಥದ್ದು. ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲೇ ಸ್ಪೆಷಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ಹುಡುಗನನ್ನು ತೋರೊಸಿದ್ದಾರೆ. ಈ ಕಪಲ್ ರೊಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸಿದೆ.

ಶುಭ ಹಾರೈಸಿದ ಕುಟುಂಬ

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ವಿಧಿ ಚಿಕ್ಕ ಮಗಳು. ಅದರಲ್ಲೂ ವೈಷ್ಣವ್‌ಗೆ ತಂಗಿ ಎಂದರೆ ಪ್ರೀತಿ ಜಾಸ್ತಿ. ಮನೆಯವರಿಗೂ ವಿಧಿ ಎಂದರೆ ಮುದ್ದು ಜಾಸ್ತಿ. ಚಿಕ್ಕಮಗಳು ರಿಯಲ್ ಲೈಫ್‌ನಲ್ಲಿ ಮದುವೆಯಾಗುತ್ತಿರೋದಕ್ಕೆ ಎಲ್ಲರೂ ವಿಶ್ ಮಾಡಿದ್ದಾರೆ. ವಿಧಿ ತಾಯಿ ಕಾವೇರಿ, ಅತ್ತೆ ಸುಪ್ರೀತಾ, ಗಂಗಾ ಎಲ್ಲರೂ ವೈವಾಹಿಕ ಜೀವನಕ್ಕೆ ಶುಭಕೋರಿದ್ದಾರೆ.

Lakshmibaramma serial vidhi aka lavanya introduces her fiance marriage fixed

ಆಕ್ಟರ್ ಅಲ್ಲ ಡಾಕ್ಟರ್

ಲಾವಣ್ಯ ಹಿರೇಮಠ್ ತಾನೂ ಮದುವೆಯಾಗುತ್ತಿರುವ ಹುಡುಗನ ಜೊತೆಗೆ ಬುಕ್ ಓದುವ ರೀತಿ, ಕಿಸ್ಸಿಂಗ್ ಸೀನ್, ರೊಮ್ಯಾಂಟಿಕ್ ಮೂಡ್‌ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅದರ ಜೊತೆಗೆ ತನ್ನುಡುಗ ಯಾರೆಂದು ಟ್ಯಾಗ್ ಕೂಡ ಮಾಡಿದ್ದಾರೆ. ಲಾವಣ್ಯ ಹಿರೇಮಠ್ ಮದುವೆಯಾಗುತ್ತಿರುವ ಹುಡುಗನ ಹೆಸರು ಅಕ್ಷಯ್ ಆಚಾರ್ಯ. ಅವರು ಕೂಡ ಡೆಂಟಿಸ್ಟ್. ಲಾವಣ್ಯ ಕೂಡ ಡಾಕ್ಟರ್ ಆಗಿದ್ದು, ನಟನೆ ಆಸಕ್ತಿ ಕ್ಷೇತ್ರ ಎಂದು ಇಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅದೇ ಥರ ನಟನಾ ಕ್ಷೇತ್ರದಲ್ಲಿಯೇ ಲಾವಣ್ಯ ಮದುವೆಯಾಗುತ್ತಾರೇನೋ ಎಂದುಕೊಂಡಿದ್ದವರಿಗೆ ಲಾವಣ್ಯ ತಮ್ಮದೇ ಕ್ಷೇತ್ರದ, ಡೆಂಟಿಸ್ಟ್ ಅನ್ನೇ ಆಯ್ಕೆ ಮಾಡಿಕೊಂಡು ಮದುವೆಯಾಗುತ್ತಿದ್ದಾರೆ.

ಡೇಟ್ ಅನೌನ್ಸ್ ಮಾಡಿದ ಅಕ್ಷಯ್

ಇನ್ನು ವಿಧಿ ತಮ್ಮ ಮದುವೆ ಡೇಟ್ ಅನೌನ್ಸ್ ಮಾಡಿರಲಿಲ್ಲ. ಜಸ್ಟ್ ಫೋಟೋಗಳನ್ನು ಹಂಚಿಕೊಂಡು, ಹಾರ್ಟ್ ಸಿಂಬಲ್ ಹಾಕಿ ತನ್ನ ಸಂಗಾತಿ ಎಂಬುದರ ಸುಳಿವು ನೀಡಿದ್ದರು. ಅಕ್ಷಯ್ ಆಚಾರ್ಯ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಕುವ ಮೂಲಕ ಡೇಟ್ ಅನೌನ್ಸ್ ಮಾಡಿದ್ದಾರೆ. Save The Date ಅಂತ ಹಾಕಿ ನವೆಂಬರ್ 11 ಮೆನ್ಶನ್ ಮಾಡಿದ್ದಾರೆ.ಈ ಮೂಲಕ ಲಾವಣ್ಯ ಹಿರೇಮಠ್ ನವೆಂಬರ್ 11ಕ್ಕೆ ಮದುವೆಯಾಗುತ್ತಿದ್ದಾರೆ ಎಂಬುದು ಅರ್ಥವಾಗಿದೆ.

More from Filmibeat

English summary
Lakshmibaramma serial actress Lavanya marriage fixed; Here is the details about vidhi introduce her boy friend;
Read more about: sumanth serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X