Lakshmibaramma: ಲಕ್ಷ್ಮೀ ಕನ್ನಡಕ ಹಾಕಿರೋದ್ಯಾಕೆ? ಲಾಯರ್ ಸಾಹೇಬ್ರು ಒಂದು ಕ್ಲಾರಿಟಿ ಕೊಟ್ಬಿಡಿ!
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಸತ್ತೆ ಹೋದಳು ಎಂಬ ಲಕ್ಷ್ಮೀ ಎದ್ದು ಬಂದಿದ್ದಾಳೆ. ತನ್ನ ಜೀವನದ ಖುಷಿಯನ್ನೇ ಕಳೆದುಕೊಂಡೆ ಎಂದುಕೊಂಡಿದ್ದ ವೈಷ್ಣವ್‌ಗೆ ಲಕ್ಷ್ಮೀ ಬದುಕಿ ಬಂದಿದ್ದು ಮರು ಜೀವ ಬಂದಂತೆ ಆಗಿದೆ. ಕೋರ್ಟ್ ನಲ್ಲಿ ಲಕ್ಷ್ಮೀ ಕಂಡು ತುಂಬಾ ಖುಷಿಪಟ್ಟ. ಅಮ್ಮ ಕಟಕಟೆಯಲ್ಲಿ ನಿಂತಿದ್ದನ್ನು ತಲೆಕೆಡಿಸಿಕೊಂಡಿಲ್ಲ. ಆದರೆ ಈಗ ಅಮ್ಮನ ತಪ್ಪುಗಳು, ಅಪರಾಧಗಳು ವೈಷ್ಣವ್ ಗಮನಕ್ಕೂ ಬರುತ್ತಿದೆ.
ಲಕ್ಷ್ಮೀ ಅಮ್ಮನ ಬಗ್ಗೆ ತಪ್ಪು ತಿಳಿದುಕೊಂಡಿದ್ದಾಳೆ ಎಂದುಕೊಂಡಿದ್ದ ವೈಷ್ಣವ್ ಗೆ ಎಲ್ಲ ಸತ್ಯವೂ ಗೊತ್ತಾಗಿದೆ. ಲಕ್ಷ್ಮೀಗೆ ಏನು ಆಗದೆ ಇದ್ದರು ಮಾನಸಿಕ ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿತ್ತು. ಶಾಕ್ ಟ್ರೀಟ್ಮೆಂಟ್ ಕೊಡಿಸುವುದಕ್ಕೆ ಪ್ರಯತ್ನ ಪಟ್ಟಿದ್ದರು ಎಂಬೆಲ್ಲಾ ವಿಚಾರ ಅರ್ಥವಾಗಿದೆ. ಹೀಗಾಗಿ ಅಪಾರವಾಗಿ ನಂಬುತ್ತಿದ್ದ ಅಮ್ಮನ ಬಗ್ಗೆ ಬೇಸರ ಮೂಡಿದೆ. ಅಮ್ಮನ ವಿರುದ್ಧವೇ ನಿಂತಿದ್ದಾನೆ.

ಕನ್ನಡಕ ಧರಿಸಿರುವ ಲಕ್ಷ್ಮೀ
ಲಕ್ಷ್ಮೀ ಕೋರ್ಟ್‌ಗೆ ನೇರವಾಗಿ ಬಂದಳು. ಅಂದಿನಿಂದಲೂ ಲಕ್ಷ್ಮೀ ಕನ್ನಡಕವನ್ನು ಧರಿಸಿಯೇ ಇದ್ದಾಳೆ. ಆದರೆ ಮನೆಯವರಿಗ್ಯಾರಿಗೂ ಆ ಕನ್ನಡಕದ ಬಗ್ಗೆ ಗಮನವೇ ಇಲ್ಲ. ಲಕ್ಷ್ಮೀ ಕನ್ನಡಕ ಹಾಕಿದ್ಯಾಕೆ ಎಂಬುದನ್ನು ಯಾರೂ ಕೇಳಲಿಲ್ಲ. ಕಾಣೆಯಾದವರು ಅಥವಾ ಸತ್ತೆ ಹೋದರು ಎಂದುಕೊಂಡವರು ದಿಢೀರನೇ ಬಂದಾಗ, ಅವರಲ್ಲಿ ಎದ್ದು ಕಾಣಿಸುವ ಬೆಳವಣಿಗೆಯಾದಾಗ ಎಂಥವರಿಗೆ ಆದರೂ ಆ ಬಗ್ಗೆ ಪ್ರಶ್ನೆಗಳು ಮೂಡುತ್ತವೆ. ಅದು ಸಹಜ. ಆದರೆ ಧಾರಾವಾಹಿಯಲ್ಯಾಕೆ ರಿಯಾಲಿಟಿಗಿಂತ ದೂರವೆಂಬಂತೆ ಫೀಲ್ ಮಾಡಿಕೊಳ್ಳುತ್ತಿರುವುದು.
ಕಮೆಂಟ್ ಮೇಲೆ ಕಮೆಂಟ್
ಲಕ್ಷ್ಮೀ ಬಂದಾಗಿನಿಂದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಯಾವುದೇ ಪ್ರೋಮೋ ಬಿಟ್ಟರು ಆ ವಿಡಿಯೋಗೆ ವೀಕ್ಷಕರು ಕಮೆಂಟ್ ಹಾಕುತ್ತಿದ್ದಾರೆ. ಲಕ್ಷ್ಮೀ ಕನ್ನಡಕ ಧರಿಸಿರುವುದು ಯಾಕೆ ಎಂದು. ಆದರೆ ನಿರಧೇಶಕರು ಅದಕ್ಕೊಂದು ಸಣ್ಣ ಕ್ಲಾರಿಟಿ ಕೊಡುವ ಪ್ರಯತ್ನವನ್ನು ಮಾಡುತ್ತಿಲ್ಲ. ನಿರ್ದೇಶಕರೇ ಲಾಯರ್ ಕೂಡ ಆಗಿದ್ದಾರೆ. ಆದರೆ ಸದಾ ಕಾಲ ಕನ್ನಡಕ ಧರಿಸುವಂತದ್ದು ಕಣ್ಣಿಗೇನಾದರೂ ಆಯ್ತಾ ಎಂಬುದರ ಬಗ್ಗೆ ಸುಳಿವು ನೀಡುತ್ತಿಲ್ಲ. ವೀಕ್ಷಕರಿಗೆ ಬಂದ ಅನುಮಾನ ಮನೆಯವರಿಗ್ಯಾಕೆ ಕಾಡುತ್ತಿಲ್ಲ ಎಂಬುದೇ ಬಿಗ್ ಮಿಲಿಯನ್ ಪ್ರಶ್ನೆಯಾಗಿದೆ.
ಸಾಕ್ಷಿ ಸೇವ್ ಮಾಡುವುದೇ ಕಷ್ಟ
ಇನ್ನು ಕಾವೇರಿಯ ಭವಿಷ್ಯ ಕೋರ್ಟ್ ಕಟಕಟೆಯಲ್ಲಿದೆ. ಸೆಂಟರ್‌ನಲ್ಲಿದ್ದಾಗ ಲಕ್ಷ್ಮೀಯನ್ನು ಸಾತಿಸುವುದಕ್ಕೆ ಕಾವೇರಿ ಸುಪಾರಿ ಕೊಟ್ಟಿರುವುದಕ್ಕೆ ಕೋರ್ಟ್ ಸಾಕ್ಷಿ ಕೇಳಿದೆ. ಅದಕ್ಕೆ ಗಿರಿಜಾನೆ ಬಂದು ಸಾಕ್ಷಿ ಹೇಳಬೇಕಿದೆ. ಗಿರಿಜಾ ಏನೋ ಸಿಕ್ಕಾಗಿದೆ. ಆದರೆ ಸಿಕ್ಕ ಗಿರಿಜಾಳನ್ನ ಕಾಪಾಡಿಕೊಳ್ಳುವುದೇ ದೊಡ್ಡ ಸಾಹಸದ ಕೆಲಸವಾಗಿದೆ. ಹೀಗಾಗೊ ಸುಪ್ರೀತಾ ಹಾಗೂ ಲಕ್ಷ್ಮೀ ಸಾಕಷ್ಟು ಸವಾಲು ಎದುರಿಸುತ್ತಿದ್ದಾರೆ.
ಲಕ್ಷ್ಮೀಗೆ ಸವಾಲು ಹಾಕಿದ ವಿಧಿ
ಇತ್ತ ಮನೆಯಲ್ಲಿ ವಿಧಿ ರಂಪಾಟ ಶುರು ಮಾಡಿದ್ದಾಳೆ. ಅಮ್ಮ ನಿರಪರಾಧಿ ಎಂದು ಸಾಬೀತಾಗಿ ಬಂದರೆ ಈ ಮನೆಯಿಂದ ನೀವೂ ಹೊರಗೆ ಹೋಗಬೇಕು ಎಂದು ಲಕ್ಷ್ಮೀಗೆ ಹೇಳಿದ್ದಾಳೆ. ವಿಧಿಯ ಸವಾಲನ್ನ ಲಕ್ಷ್ಮೀ ಕೂಡ ಸ್ವೀಕರಿಸಿದ್ದಾಳೆ. ನಿಮ್ಮ ಅಮ್ಮ ಅಪರಾಧಿ ಅಲ್ಲ ಅನ್ನೋದು ಪ್ರೂವ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಪ್ರೂವ್ ಆದರೆ ಖಂಡಿತ ನಾನು ಈ ಮನೆಯಲ್ಲಿ ಇರಲ್ಲ ಎಂದಿದ್ದಾಳೆ. ಇದನ್ನು ಕೇಳಿದ ತಾಂಡವ್ ಹಾಗೂ ಮನೆಯ ರು ಶಾಕ್ ಆಗಿದ್ದಾರೆ. ಆದರೆ ಕೋರ್ಟ್‌ಗೆ ಹೋಗುವುದಕ್ಕೂ ಮುನ್ನವೇ ವೈಷ್ಣವ್‌ಗೆ ಎಲ್ಲಾ ಸತ್ಯ ತಿಳಿಯುವಂತೆ ಆಗಿದೆ.


Click it and Unblock the Notifications











