Lakshmibaramma: ಏನೇ ಕಷ್ಟ ಬಂದರೂ ಕಣ್ಣೀರು ಹಾಕದ ಲಕ್ಷ್ಮೀ.. ವೈಷ್ಣವ್‌ಗಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ..!
ಲಕ್ಷ್ಮೀ ಮತ್ತು ವೈಷ್ಣವ್ ಸದ್ಯ ಇಬ್ಬರೂ ಬೆಸ್ಟ್ ಗಂಡ ಹೆಂತಿಯಾಗುವುದಕ್ಕೆ ಹೊರಟಿದ್ದಾರೆ. ವೈಷ್ಣವ್ ಅಂತು ಹಳೆಯ ಎಲ್ಲಾ ಸ್ಟೋರಿಯನ್ನು ಮರೆತು ಲಕ್ಷ್ಮೀಯ ಜೊತೆಗೆ ಜೀವನ ಕಟ್ಟಿಕೊಳ್ಳಲು ಹೊರಟಿದ್ದಾನೆ. ಆದರೆ ಹಳೆಯ ಪ್ರೇಮವೇ ಪದೇ ಪದೆ ಕಣ್ಣೆದುರಿಗೆ ಬರುತ್ತಾ ಇದೆ. ಇದನ್ನು ನಿಭಾಯಿಸುವುದೇ ವೈಷ್ಣವ್‌ಗೆ ದೊಡ್ಡ ತಲೆ ನೋವಾಗಿದೆ.
ಕೀರ್ತಿಯ ಹುಚ್ಚಾಟ ಇತ್ತೀಚೆಗೆ ಜಾಸ್ತಿಯಾಗಿದೆ. ಆ ಕಡೆ ಕಾವೇರಿಯನ್ನು ನೆಮ್ಮದಿಯಾಗಿ ಇರುವುದಕ್ಕೆ ಬಿಡುತ್ತಿಲ್ಲ. ಈ ಕಡೆ ವೈಷ್ಣವ್‌ನನ್ನು ಒಂಟಿಯಾಗಿ ಇರುವುದಕ್ಕೆ ಬಿಡುತ್ತಿಲ್ಲ. ಕೀರ್ತಿ ಮತ್ತು ಕಾವೇರಿ ಮಾಡಿದ ಪ್ಲ್ಯಾನ್ ವೈಷ್ಣವ್‌ಗೆ ಗೊತ್ತಿಲ್ಲ. ಗರ್ಲ್ ಫ್ರೆಂಡ್ ಇದೇ ಲಕ್ಷ್ಮೀ ಎಂಬುದು ಲಕ್ಷ್ಮೀಗೆ ಗೊತ್ತಿಲ್ಲ. ಎಲ್ಲಾ ಸತ್ಯಗಳು ಒಟ್ಟಾಗಿ ಹೊರಗೆ ಬಂದರೆ ಅಲ್ಲಿ ಅದೇನಾಗುತ್ತೋ ಏನೋ..?

ಸತ್ಯ ಗೊತ್ತಿಲ್ಲದ ಲಕ್ಷ್ಮೀಯ ನಿರ್ಧಾರವೇ ಬೇರೆ
ಕೀರ್ತಿಗೆ ವೈಷ್ಣವ್‌ನನ್ನು ಕಳೆದುಕೊಳ್ಳುವ ಆತಂಕ ಶುರುವಾಗಿದೆ. ತಾಯಿ ಕಾರುಣ್ಯ ಹೇಳಿದ ಮಾತುಗಳು ಸತ್ಯ ಎನಿಸುವುದಕ್ಕೆ ಶುರುವಾಗಿದೆ. ಅದಕ್ಕೆ ಹುಚ್ಚು ಹಿಡಿದವಳಂತೆ ಮಧ್ಯರಾತ್ರಿಯಲ್ಲಿಯೇ ಲಕ್ಷ್ಮೀ ಮನೆಗೆ ಬಂದಿದ್ದಾಳೆ. ಅಲ್ಲಿ ವೈಷ್ಣವ್ ಜೊತೆ ಜಗಳವಾಡುವುದಕ್ಕೆ ಶುರು ಮಾಡಿದ್ದಾಳೆ. ಇದು ಲಕ್ಷ್ಮೀಯ ಗೊಂದಲಕ್ಕೆ ಕಾರಣವಾಗಿತ್ತು. ಯಾಕೆ ಅಂತ ಕೇಳಿದರೆ, ನಿನ್ನ ಮದುವೆ ಆದ್ಮೇಲೆ ವೈಷ್ಣವ್‌ನನ್ನ ದೂರ ಮಾಡಿದ್ದಾನೆ ಎಂದು ಅರ್ಥವಾಗದಂತೆ ಹೇಳಿ, ವೈಷ್ಣವ್‌ನನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾಳೆ. ಲಕ್ಷ್ಮೀ ಕಡೆಯಿಂದಾನೇ ಸಪೋರ್ಟ್ ತೆಗೆದುಕೊಂಡಿದ್ದಾಳೆ.
ವೈಷ್ಣವ್‌ಗೆ ಹತ್ತಿರವಾಗಲು ಹೊರಟ ಕೀರ್ತಿ
ಆಲ್ಬಂ ನಿಂದ ತೆಗೆದಾಕಿದ್ದನ್ನು ಮಾತ್ರ ಲಕ್ಷ್ಮೀಗೆ ಹೇಳಿದ ಕೀರ್ತಿ, ತಾನೇ ವೈಷ್ಣವ್ ಗರ್ಲ್ ಫ್ರೆಂಡ್ ಎಂಬುದನ್ನು ತಿಳಿಸಿಲ್ಲ. ಈ ಕಡೆ ವೈಷ್ಣವ್ ಕೂಡ ತನ್ಮ ಗರ್ಲ್ ಫ್ರೆಂಡ್ ಕೀರ್ತಿ ಅಂತ ಹೇಳಿಲ್ಲ. ಇದರಿಂದ ಲಕ್ಷ್ಮೀಗೆ ವಿರೋಧ ಮಾಡುವುದಕ್ಕೆ ಕಾರಣವೇ ಇರಲಿಲ್ಲ. ಅದಕ್ಕೆ ಒಟ್ಟಿಗೆ ಇರಿ ಎಂದಿದ್ದಾಳೆ. ಇದನ್ನೇ ಕೀರ್ತಿ ಪಾಸಿಟಿವ್ ಅಂತ ತಿಳಿದುಕೊಂಡು ಖುಷಿ ಪಟ್ಟಿದ್ದಾಳೆ. ಇನ್ಮೇಲೆ ಲಕ್ಷ್ಮೀನೇ ವೈಷ್ಣವ್ ನನ್ನು ಬಿಟ್ಟುಕೊಡುವಂತೆ ಮಾಡುತ್ತೀನಿ ಎಂಬ ಆತ್ಮವಿಶ್ವಾಸದಲ್ಲಿದ್ದಾಳೆ. ಆದರೆ ಲಕ್ಷ್ಮ, ಕೀರ್ತಿಯೇ ಗಂಡನ ಗರ್ಲ್ ಫ್ರೆಂಡ್ ಎಂದು ಗೊತ್ತಾದರೆ ಮುಗೀತು.
ಅಳಿಯನಿಗೆ ಉಪವಾಸ ಇರಿಸುವ ಪ್ಲ್ಯಾನ್
ಈ ಕಡೆ ಸುನಂದಾ ಸ್ವಲ್ಪವೂ ಮನುಷ್ಯತ್ವವೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾಳೆ. ಮನೆಯಲ್ಲಿದ್ದ ಆಹಾರ ಪದಾರ್ಥವನ್ನೆಲ್ಲಾ ಕದ್ದು ಇಟ್ಟು, ಅಳಿಯನಿಗೆ ಕಾಫಿ ಮಾಡುವುದಕ್ಕೂ ಬಿಡುತ್ತಿಲ್ಲ. ಲಕ್ಷ್ಮೀಯನ್ನೇ ಜೋರಾಗಿ ಗದರುತ್ತಿದ್ದಾಳೆ. ಇದನ್ನೆಲ್ಲಾ ಕೇಳಿಸಿಕೊಂಡ ವೈಷ್ಣವ್, ಎಲ್ಲರನ್ನು ತಿಂಡಿಗೆ ಹೋಟೆಲ್‌ಗೆ ಹೋಗೋಣಾ ಎಂದು ಹೊರಡಿಸಿದ್ದಾನೆ. ಇದು ಸುನಂದಾಗೆ ಮತ್ತು ಪೂಜಾಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

ಲಕ್ಷ್ಮೀಯ ಕಣ್ಣೀರು ಕಂಡು ವೈಷ್ಣವ್ ಬೇಸರ..!
ಲಕ್ಷ್ಮೀಗೆ ಮೊದಲಿನಿಂದಲೂ ತುಂಬಾ ಖುಷಿಯಾಗಿ ಏನು ಬೆಳೆದವಳಲ್ಲ. ಎಲ್ಲಾ ನೋವು ತಿಂದುಕೊಂಡೆ ಬೆಳೆದಿದ್ದಾಳೆ. ಹಾಗಂತ ಕಣ್ಣೀರು ಹಾಕಿಲ್ಲ. ಹಸಿವಿದ್ದರು ಸಂಕಟ ಪಟ್ಟಿಲ್ಲ. ಆದರೆ ಈಗ ವೈಷ್ಣವ್‌ಗಾದ ಅನ್ಯಾಯ ಕಂಡು ಕಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ವೈಷ್ಣವ್ ಮನೆಗೆ ಬಂದಾಗಿನಿಂದ ಮಲಗುವುದಕ್ಕೆ, ಕೂರುವುದಕ್ಕೆ, ತಿನ್ನುವುದಕ್ಕೆ ಏನು ಇಲ್ಲ. ಹೀಗಾಗಿ ಲಕ್ಷ್ಮೀಗೆ ತುಂಬಾ ನೋವಾಗಿದೆ. ಶ್ರೀಮಂತ ಮನೆಯಲ್ಲಿ ಬೆಳೆದ ವೈಷ್ಣವ್‌ನನ್ನು ಈ ರೀತಿ ಹೆಣಗಿಸುತ್ತಿರುವುದಕ್ಕೆ ವೈಷ್ಣವದ ನಿಂತು ಸಮಾಧಾನ ಮಾಡಿದ್ದಾನೆ.


Click it and Unblock the Notifications











