Lakshmibaramma: ಆ ಕಡೆ ಕೀರ್ತಿ ಬಾಯಿಂದ ಸತ್ಯ ಹೊರಬರ್ತಿದ್ರೆ.. ಈ ಕಡೆ ಕಾವೇರಿಯ ಹಾರ್ಟ್ ಬೀಟ್ ಏರುತ್ತಿದೆ!

By ಎಸ್ ಸುಮಂತ್

ಕಾವೇರಿಗೆ ತನ್ನ ಅತ್ತೆಯ ಶಾಪದ ಬಗ್ಗೆಯೇ ಚಿಂತೆಯಾಗಿದೆ. ಸುಪ್ರೀತಾ ಮನೆಯಲ್ಲಿ ಇಲ್ಲದೆ ಹೋಗಿದ್ದರೆ ಅತ್ತೆಯ ಶಾಪ ಎನ್ನುವುದು ಕಾವೇರಿಗೆ ಇಷ್ಟು ದೊಡ್ಡಮಟ್ಟಕ್ಕೆ ಕಾಡುತ್ತಿರಲಿಲ್ಲ. ಆದರೆ, ಈಗ ಮಾತಿಗೆ ಮುಂಚೆ ಅತ್ತೆಯ ಶಾಪ ನೆನೆದು ನೆನೆದು ತಲೆ ತಿರುಗಿ ಬೀಳುತ್ತಿದ್ದಾಳೆ. ತಾನು ಚೆನ್ನಾಗಿರಬೇಕೆಂಬ ಕಾರಣಕ್ಕೆ ಅಮ್ಮ ಮಗನನ್ನು ಕಾವೇರಿ ದೂರ ಮಾಡಿದ್ದಾಳೆ. ಈ ಶಾಪದ ಭಯವೂ ಅವಳನ್ನು ಕಾಡುತ್ತಿದೆ.

ನಾನು ಅತ್ತೆಯಿಂದ ಮಗನನ್ನು ದೂರ ಮಾಡಿದಂತೆ ನನ್ನ ಮಗನ್ನು ಸೊಸೆ ದೂರ ಮಾಡಬಾರದು ಎಂಬ ಕಾರಣಕ್ಕೆ ಕೀರ್ತಿಯನ್ನು ಬಿಟ್ಟು ಲಕ್ಷ್ಮೀಯನ್ನು ಮದುವೆ ಮಾಡಿಕೊಂಡಳು. ಆದರೆ ಈಗ ಕೀರ್ತಿಯ ಕಾಟದಿಂದ ಕಾವೇರಿಯ ಬಿಪಿ ಏರುತ್ತಲೇ ಇದೆ.

Lakshmibaramma serial Written Update on June 13th episode

ಕೀರ್ತಿಯಿಂದ ಕಣ್ಣೀರು ಹಾಕಿದ ವೈಷ್ಣವ್

ವೈಷ್ಣವ್ ಮನೆಗೆ ಬೇಗ ಬಂದಿದ್ದಾನೆ. ಆದರೆ ನಗು ಮುಖ ಇರಲೇ ಇಲ್ಲ. ಲಕ್ಷ್ಮೀ ಕಾಫಿ ಕೊಡಲು ಬಂದಾಗಲು ವೈಷ್ಣವ್ ಬೇಡ ಅಂತ ನಡೆದೆ ಬಿಟ್ಟ. ಇದು ಕಾವೇರಿಗೆ ಏನೋ ಆಗಿದೆ ಎಂಬುದಂತು ಗೊತ್ತಾಯ್ತು. ಅದಕ್ಕೆ ಮಗನ ಹಿಂದೆಯೇ ಹೋಗಿ, ಮುಲಾಮ್ ಹಚ್ಚಿದಳು. ಅಳು ತಡೆದುಕೊಳ್ಳುವುದಕ್ಕೆ ಆಗದೆ ತಬ್ಬಿಕೊಂಡು‌ ಕಣ್ಣೀರು ಹಾಕಿದ. ಬಳಿಕ ಕೀರ್ತಿ ಎಷ್ಟು ಕಾಟ ಕೊಡುತ್ತಿದ್ದಾಳೆ ಎಂದು ಹೇಳಿದ.

ಭಯ ಹೊರ ಹಾಕಿದ ಕಾವೇರಿ

ಎಲ್ಲಿಯೇ ಹೋದರು ಬರುತ್ತಾಳೆ. ಮನೆಗೆ ಬರುತ್ತಾಳೆ. ಲಕ್ಷ್ಮೀ ಜೊತೆಗೆ ಹೊರಗೆ ಹೋದ್ರು ಕಾಡ್ತಾಳೆ. ಸ್ಟುಡಿಯೋಗೆ ಬರ್ತಾಳೆ. ನಿನ್ನ ಪ್ರೀತಿಸ್ತೀನಿ ಅಂತಾಳೆ. ನಾನು ಕೂಡ ಸಾಮಾನ್ಯ ಮನುಷ್ಯ ಅಲ್ವಾ ಅಮ್ಮ ಎಂದಾಕ್ಷಣಾ ಕಾವೇರಿಗೆ ಆತಂಕವೇ ಎದುರಾಯ್ತು. ವೈಷ್ಣವ್ ಮತ್ತೆ ಇನ್ನೆಲ್ಲಿ ಅವಳನ್ನು ಹುಡುಕಿಕೊಂಡು ಹೊರಟು ಹೋಗುತ್ತಾನೋ ಎಂಬ ಆತಂಕ. ಅದನ್ನು ವೈಷ್ಣವ್ ಮುಂದೆ ಕೂಡ ಹೇಳಿದಳು. ಅವಳೊಬ್ಬಳು ತಲೆ ಕೆಟ್ಟವಳು. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ ಅಂತ ಬುದ್ದಿ ಮಾತು ಹೇಳಿದಳು.

Lakshmibaramma serial Written Update on June 13th episode

ವೈಷ್ಣವ್ ಮಾತಿಗೆ ಕಾವೇರಿ ಶಾಕ್

ಅಮ್ಮನ ಮಾತಿಗೆ ವೈಷ್ಣವ್ ಸಮಧಾನವಾಗಿಯೇ ಉತ್ತರ ನೀಡಿದ್ದಾನೆ. ಇಲ್ಲ ಅಮ್ಮ ನಾನು ಕೂಡ ತುಂಬಾ ಗೊಂದಲದಲ್ಲಿದ್ದೇನೆ. ಅಂದಿನಿಂದ ಏನಾಯ್ತು ಅನ್ನೋದು ನನಗು ಬೇಕು. ಅದಕ್ಕೆ ಒಂದು ಪ್ಲ್ಯಾನ್ ಮಾಡಿದ್ದೀನಿ. ಅವಳನ್ನು ಡಿನ್ನರ್‌ಗೆ ಕರೆದಿದ್ದೀನಿ. ಎಲ್ಲಾ ಸತ್ಯವನ್ನು ತಿಳಿದುಕೊಳ್ಳುತ್ತೀನಿ ಎಂದಾಕ್ಷಣಾ ಕಾವೇರಿಗೆ ಸಿಕ್ಕಾಪಟ್ಟೆ ಭಯ ಬಂದಿತ್ತು. ವಾಸ್ತವದಲ್ಲಿಯೇ ಇರದಷ್ಟು ಭಯ ಅದು. ಪುಟ್ಟ ನೀನು ಅಲ್ಲಿಗೆ ಹೋಗಬೇಡ ಅಂತ ಸಾಕಷ್ಟು ಬುದ್ದಿ ಹೇಳಿದಳು. ಆದರೆ ವೈಷ್ಣವ್‌ಗೆ ಏನಿರಬಹುದು ಎಂಬ ವಿಚಾರ ತಿಳಿದುಕೊಳ್ಳಲೇಬೇಕಾಗಿತ್ತು.

ವೈಷ್ಣವ್‌ಗೆ ಸತ್ಯ ಹೇಳಲು ಹೊರಟ ಕೀರ್ತಿ

ಕೀರ್ತಿ ಅದಾಗಲೇ ಮಾಮೂಲಿ ಅಡ್ಡ ಮಾಡಿಕೊಂಡಿದ್ದ ಹೊಟೇಲ್ಗೆ ಬಂದು ಕುಳಿತಿದ್ದಳು. ಅಮ್ಮನ ಮಾತು ಮೀರಿ ಸತ್ಯ ತಿಳಿಯುವಹದಕ್ಕೆ ವೈಷ್ಣವ್ ಕೂಡ ಅಲ್ಲಿಗೆ ಬಂದನು. ಕೀರ್ತಿ ಮೊದಲೇ ಸತ್ಯ ಹೇಳುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಳು. ಯಾಕಂದ್ರೆ ಇದು ತಾತ್ಕಾಲಿಕ ಮದುವೆಯೆಂದು ಕಾವೇರಿ ನಂಬಿಸಿದ್ದಳು. ಈಗ ತಾಯಿಯ ಬಗ್ಗೆ ಸತ್ಯ ಗೊತ್ತಾದರೆ ಏನಾಗುತ್ತೋ ಏನೋ. ಆ ಕಡೆ ಬೇರೆ ಕಾವೇರಿ ಅದೇ ಭಯದಲ್ಲಿಯೇ ಕಾಯುತ್ತಾ ಕುಳಿತಿದ್ದಾಳೆ. ಇವತ್ತು ಸತ್ಯ ಹೇಳಿದರೆ ನನ್ನ ಕಥೆ ಮುಗೀತು ಎಂಬುದು ಕಾವೇರಿಗೆ ಚೆನ್ನಾಗಿಯೇ ಗೊತ್ತಿದೆ.

More from Filmibeat

English summary
Colors Kannada Lakshmibaramma serial Written Update on June 13th episode. Here is the details Vaishnav and Keerthi meeting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X