Lakshmibaramma: ಆ ಕಡೆ ಸತ್ಯ ಗೊತ್ತಾಗುವ ಸಮಯದಲ್ಲಿ ಈ ಕಡೆ ಕಾವೇರಿ, ಲಕ್ಷ್ಮೀಗೆ ಶೃಂಗಾರ ಮಾಡಿದ್ದೇಕೆ?

By ಎಸ್ ಸುಮಂತ್

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕಳೆದ ಎರಡು ದಿನಗಳಿಂದ ನೋಡುಗರ ಹಾರ್ಟ್ ಬೀಟ್ ಕೊಂಚ ಜೋರಾಗಿಯೆ ಹೊಡೆದುಕೊಳ್ಳುತ್ತಿದೆ. ಈಗ ಏನಾಗಬಹುದು, ಈಗ ಸತ್ಯ ಗೊತ್ತಾಗಿ ಬಿಡಬಹುದಾ..? ಗೊತ್ತಾಗಿ ಬಿಟ್ಟರೆ ಏನೆಲ್ಲಾ ಅವಸ್ಥೆಗಳಾಗಬಹುದು ಎಂಬುದೆಲ್ಲವನ್ನು ಪ್ರೇಕ್ಷಕರು ಯೋಚಿಸಿ, ಯೋಚಿಸಿ ಸುಸ್ತಾಗಿ ಹೋಗಿದ್ದಾರೆ.

ಕೀರ್ತಿ ಆ ಕಡೆ ತಮ್ಮ ಮಾಮೂಲಿ ಅಡ್ಡದಲ್ಲಿ ಸಿಕ್ಕಾಪಟ್ಟೆ ಅಲಂಕಾರ ಮಾಡಿದ್ದಾಳೆ‌. ವೈಷ್ಣವ್‌ಗಾಗಿ ಸ್ಪೆಷಲ್ ಆಗಿ ಸೆಲೆಬ್ರೇಷನ್ ರೀತಿ ಸಿದ್ಧತೆ ಮಾಡಿಕೊಂಡಿದ್ದಾಳೆ. ವೈಷ್ಣವ್ ಮನಸ್ಸಲ್ಲೂ ಅದೇ ಪ್ರೀತಿ ಇರಬಹುದೆಂದು ಭಾವಿಸಿ, ಹಳೆಯ ಕೀರ್ತಿ ರೀತಿಯೇ ನಡೆದುಕೊಳ್ಳುತ್ತಿದ್ದಾಳೆ. ಇದು ವೈಷ್ಣವ್‌ಗೆ ಅಷ್ಟಿಷ್ಟು ಕಿರಿಕಿರಿ ಮಾಡ್ತಿಲ್ಲ.

Lakshmibaramma serial Written Update on June 15th episode

ಕೀರ್ತಿಯನ್ನು ಭೇಟಿ ಮಾಡಿದ ವೈಷ್ಣವ್

ಕೀರ್ತಿ ಹುಚ್ಚು ಹುಚ್ಚು ಆಗಿ ಆಡುವುದನ್ನು ನೋಡಿ ನೋಡಿ ವೈಷ್ಣವ್‌ಗೆ ಸಾಕಾಗಿ ಹೋಗಿದೆ. ಹೀಗಾಗಿ ಅವಳ ಇಷ್ಟು ವಿಚಿತ್ರ ವರ್ತನೆಗೆ ಕಾರಣ ಏನು ಎಂಬುದನ್ನು ತಿಳಿಯಲೇಬೇಕೆಂದು ವೈಷ್ಣವ್ ನಿರ್ಧಾರ ಮಾಡಿ, ಕೀರ್ತಿಯನ್ನು ಊಟಕ್ಕೆ ಕರೆದಿದ್ದಾನೆ‌. ವೈಷ್ಣವ್ ಬರುವುದಕ್ಕೂ ಮುನ್ನವೇ ಕೀರ್ತಿ ಆ ಜಾಗಕ್ಕೆ ಬಂದಿದ್ದು, ಫುಲ್ ಡೆಕೋರೇಷನ್ ಮಾಡಿದ್ದಾಳೆ‌. ವೈಷ್ಣವ್ ಬರುವ ದಾರಿಗೂ ಹೂವಿನ ಅಲಂಕಾರ ಮಾಡಿದ್ದಾಳೆ. ವೈಷ್ಣವ್ ಬರುವ ಹಾದಿಯಲ್ಲೆಲ್ಲಾ ಸಂಗೀತವೇ ಮೇಳೈಸುತ್ತಿದೆ. ಆದರೆ, ಇದು ವೈಷ್ಣವ್‌ಗೆ ಬೇಡದ ವಿಚಾರವಾಗಿದೆ.

ಕೀರ್ತಿಯಿಂದ ಸತ್ಯ ತಿಳಿಯುವ ಪ್ರಯತ್ನ

ಮದುವೆಗೂ ಮುಂಚೆ ಕೀರ್ತಿ ಆಡಿದ ಅವತಾರವೇ ಬೇರೆಯಾಗಿತ್ತು. ನೀ‌ನು ಬೇಡವೇ ಬೇಡ ಎಂದಿದ್ದಳು. ಆದರೆ, ಈಗ ಮದುವೆಯಾದ ಮೇಲೆ ಕೀರ್ತಿಯ ನಡೆಯೇ ಬದಲಾಗಿದೆ. ಲಕ್ಷ್ಮೀ ಜೊತೆಗೆ ಹೋದರೆ ಎಲ್ಲೆಲ್ಲೂ ಕಾಯುತ್ತಾಳೆ‌. ಇದು ವೈಷ್ಣವ್ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ಅದರ ಹಿಂದಿನ ಸತ್ಯ ತಿಳಿದುಕೊಳ್ಳಲೆಂದೇ ವೈಷ್ಣವ್ ಡಿನ್ನರ್ ಪಾರ್ಟಿಯನ್ನು ಅರೆಂಜ್ ಮಾಡಿದ್ದಾನೆ. ಅಲ್ಲಿ ಕೀರ್ತಿ ಗೆಸ್ಟ್ ಅಲ್ಲ. ಕೀರ್ತಿಯೇ ವೈಷ್ಣವ್‌ಗಾಗಿ ಎಲ್ಲವನ್ನು ಮಾಡಿದ್ದಾಳೆ. ವೈಷ್ಣವ್ ತಲೆಯಲ್ಲಿ ಓಡುತ್ತಿರುವ ಪ್ರಶ್ನೆ ಒಂದೇ ಅದುವೇ ಕೀರ್ತಿಯಿಂದ ಸತ್ಯ ತಿಳಿಯಬೇಕು ಎನ್ನುವುದು.

Lakshmibaramma serial Written Update on June 15th episode

ಕಾವೇರಿಗೆ ಇಷ್ಟೊಂದು ಅಲಂಕಾರವಾ..?

ಕಾವೇರಿಗೆ ಮಗನನ್ನು ತಡೆಯುವುದಕ್ಕೆ ಆಗಲಿಲ್ಲ. ಹಾಗಂತ ಕೀರ್ತಿಯಿಂದ ಸತ್ಯ ಮುಚ್ಚಿಡು ಅಂತ ಹೇಳುವುದಕ್ಕೂ ಆಗುವುದಿಲ್ಲ. ಟೆನ್ಶನ್‌ನಲ್ಲಿಯೇ ಒದ್ದಾಡುತ್ತಿದ್ದ ಕಾವೇರಿ ಇದ್ದಕ್ಕಿದ್ದ ಹಾಗೇ ಸೊಸೆಗೆ ಸೀರೆ ಉಡಿಸಿ, ಅಲಂಕಾರ ಮಾಡಿದ್ದಾಳೆ. ಇನ್ನೆಲ್ಲಿಗೋ ಕರೆದುಕೊಂಡು ಹೋಗುವ ಪ್ಲ್ಯಾನ್‌ನಲ್ಲಿದ್ದಾಳೆ. ಕಾವೇರಿ, ಲಕ್ಷ್ಮೀಯನ್ನು ಅದೆಷ್ಟು ಮುದ್ದಾಗಿ ರೆಡಿ‌ಮಾಡಿದ್ದಳು ಅಂದ್ರೆ, ಲಕ್ಷ್ಮೀ ಡೈಲಿ ಲುಕ್ ಬಿಟ್ಟು ರಾಯಲ್ ಆಗಿ ಕಾಣುವಂತೆ ಮಾಡಿದ್ದಳು. ಇದನ್ನು ಕಂಡು ಮನೆಯವರೆಲ್ಲಾ ಶಾಕ್ ಆಗಿದ್ದಾರೆ.

ಸತ್ಯವನ್ನು ಜೀರ್ಣಿಸಿಕೊಳ್ತಾನಾ ವೈಷ್ಣವ್?

ವೈಷ್ಣವ್‌ಗೆ ತಾಳ್ಮೆ ಸ್ವಲ್ಪ ಕಡಿಮೆಯೇ ಇದೆ. ಈಗ ಅವನಿಗೆ ಕೀರ್ತಿಯ ಪ್ರೀತಿ ಬೇಡ. ಅವಳಿಂದ ಸತ್ಯವಷ್ಟೇ ಬೇಕು. ಆದರೆ, ಕೀರ್ತಿ ಮಾಡ್ತಾ ಇರೋದೆ ಬೇರೆ. ಹಳೆಯ ನೆನಪುಗಳನ್ನು ಮರುಕಳುಹಿಸುವಂತೆ ಮಾಡುತ್ತಿದ್ದಾಳೆ. ತಾನೆಷ್ಟು ಪ್ರೀತಿ ಮಾಡ್ತಾ ಇದ್ದೀನಿ ಅಂತ ಹೇಳುವುದಕ್ಕೆ ಪ್ರಯತ್ನ ಪಡ್ತಾ ಇದ್ದಾಳೆ. ಇದನ್ನೆಲ್ಲಾ ಕೇಳಿದ ವೈಷ್ಣವ್‌ಗೆ ಹಳೆಯ ಕೀರ್ತಿ ಬೇರೆ ಡಿಸ್ಟರ್ಬ್ ಮಾಡಿದ್ದಾಳೆ. ಅಂದು ಆ ರೀತಿ ಆಡಿ ಇಂದು ಹೀಗೆ ಮಾತನಾಡುತ್ತಾಳಲ್ಲ ಎಂಬ ಕೋಪ ಬಂದಿದೆ. ಅದಕ್ಕೆ ಇದೆಲ್ಲಾ ಡ್ರಾಮಾ ನಿಲ್ಲಿಸಿ, ಸತ್ತ ಹೇಳು ಎಂದಾಗ ಕೀರದತಿ ಸತ್ಯ ಹೇಳುವುದಕ್ಕೆ ಮುಂದಾಗಿದ್ದಾಳೆ‌.

More from Filmibeat

English summary
Colors kannada lakshmibaramma serial Written Update on June 15th episode. Here is the details Kaveri surprise gift for Lakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X