Lakshmibaramma: ವೈಷ್ಣವ್ ಮುಂದೆ ಸತ್ಯ ಹೇಳಲು ಮುಂದಾದ ಕೀರ್ತಿಗೆ ಶಾಕ್ ಕೊಟ್ಟ ಕಾವೇರಿ.. ಅಂಥದ್ದೇನಾಯ್ತು?

By ಎಸ್ ಸುಮಂತ್

ಕಾವೇರಿಗೆ ತಲೆ ತಿರುಗುವಷ್ಟು ಆತಂಕ ಶುರುವಾಗಿತ್ತು. ಮನೆಯಲ್ಲಿ ಮಗ ಹೇಳಿದ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಆ ಕಡೆ ಕೀರ್ತಿ ತುದಿಗಾಲಿನಲ್ಲಿ ನಿಂತಿದ್ದಾಳೆ. ವೈಷ್ಣವ್‌ನನ್ನು ಕಳೆದುಕೊಳ್ಳುವ ಭಯದಲ್ಲಿದ್ದಾಳೆ ಕೀರ್ತಿ. ಹೀಗಾಗಿ ಬ್ಲಾಕ್ ಮೇಲ್ ತಂತ್ರಗಾರಿಕೆಯನ್ನು ಬಳಸುತ್ತಿದ್ದಾಳೆ. ವೈಷ್ಣವ್‌ಗೂ ತಲೆ ಕೆಟ್ಟೋಗಿದೆ. ಮನಸ್ಸನ್ನೇನೋ ಗಟ್ಟಿ‌ ಮಾಡಿಕೊಂಡಿದ್ದಾನೆ. ಆದರೆ, ಪ್ರಾಣಕ್ಕಿಂತ ಹೆಚ್ಚಿನದ್ದಾಗಿ‌ ಪ್ರೀತಿ ಮಾಡಿದ ಹುಡುಗಿ ಮತ್ತೆ ವಾಪಾಸ್ ಬಂದಿದ್ದಾಳೆ ಎಂದಾಗ, ವೈಷ್ಣವ್ ಮನಸ್ಸು ಕೂಡ ಕೊಂಚ ಕಸಿವಿಸಿಯಾಗ್ತಾ ಇದೆ.

ಈಗ ಕೀರ್ತಿ ಸೀರಿಯಸ್ ಆಗಿ ತನಗಾದ ಅನ್ಯಾಯದ ಬಗ್ಗೆ ಹೇಳುವುದಕ್ಕೆ ಹೊರಟಿದ್ದಾಳೆ. ಪ್ರೀತಿ ಮಾಡುವಾಗ ಹೇಗೆ ಸೆಲೆಬ್ರೆಟ್ ಮಾಡುತ್ತಿದ್ದರೋ ಅದೇ ರೀತಿ ಎಲ್ಲವನ್ನು ಅಲಂಕಾರ ಮಾಡಿದ್ದಾಳೆ. ಇನ್ನೇನು ನಡೆದ ಸತ್ಯ ಹೇಳಿ, ಕಾವೇರಿಯನ್ನು ತಗಲಾಕಿಸಬೇಕು, ಅಷ್ಟರಲ್ಲಿ ಕಾವೇರಿಯ ಎಂಟ್ರಿಯಾಗಿದೆ.

Lakshmibaramma serial Written Update on June 16th episode

ಸತ್ಯ ಹೇಳಲು ಮುಂದಾದ ಕೀರ್ತಿ

ಕೀರ್ತಿ ಮತ್ತು ವೈಷ್ಣವ್ ಭೇಟಿಯಾಗಿದ್ದಾರೆ. ಕೀರ್ತಿ ಹಳೆಯ ಪ್ರೀತಿಯನ್ನು ಕೆದಕುತ್ತಿದ್ದಾಳೆ. ವೈಷ್ಣವ್ ಕೀರ್ತಿಯನ್ನು ಮರೆತು ಬದುಕುವುದಕ್ಕೆ ಪ್ರಯತ್ನ ಮಾಡ್ತಾ ಇದ್ದಾನೆ. ಇದನ್ನು ಕೇಳಿಸಿಕೊಂಡ ಕೀರ್ತಿ, "ಸುಳ್ಳನ್ನು ನಂಬಿಕೊಂಡು ಎಷ್ಟು ದಿನ ಬದುಕುತ್ತೀಗಾ ವೈಶ್. ಇವತ್ತು ನಾನು ನಿನಗೆ ಎಲ್ಲಾ ಸತ್ಯವನ್ನು ಹೇಳ್ತೀನಿ. ಅದನ್ನು ಹೇಳೋದಕ್ಕೆ ಬಂದಿರೋದು. ಅದು ನಿನ್ನ ಮೇಲಿರುವ ಅತಿಯಾದ ಪ್ರೀತಿ. ನಾನಿಡುವ ಒಂದೊಂದು ಹೆಜ್ಜೆಯೂ ನಿನ್ನ ಪ್ರೀತಿ ಉಳಿಸಿಕೊಳ್ಳುವುದಕ್ಕೆ ಮಾಡ್ತಾ ಇರೋದು" ಎಂದು ವೈಷ್ಣವ್‌ಗೆ ಕಿರಿಕಿರಿ ಮಾಡುತ್ತಿದ್ದಾಳೆ. ವೈಷ್ಣವ್ ಗಟ್ಟಿ ಮನಸ್ಸು ಮಾಡಿದ್ದಾನೆ.

ಕಾವೇರಿಯಿಂದ ಹೊಸ ಪ್ಲ್ಯಾನ್

ಕಾವೇರಿಗೆ ಒಂದು ಕಡೆ ಟೆನ್ಶನ್. ಕೀರ್ತಿ ಎಲ್ಲದನ್ನು ಮಗನಿಗೆ ಹೇಳಿ ಬಿಡುತ್ತಾಳೆ ಎಂಬಂತೆ. ಆದರೆ, ಸುಮ್ಮನೆ ಕೂತರೆ ಏನು ಪ್ರಯೋಜನವಾಗಲ್ಲ ಎಂದು ತನ್ನ ಸೊಸೆಯನ್ನು ಅಲಂಕಾರ ಮಾಡಿಕೊಂಡು ಕೀರ್ತಿ & ವೈಷ್ಣವ್ ಇರುವ ಹೊಟೇಲ್‌ಗೆ ಬಂದಿದ್ದಾಳೆ. ಇದನ್ನು ಕಂಡು ವೈಷ್ಣವ್ ಮತ್ತು ಕೀರ್ತಿ ಶಾಕ್ ಆಗಿದ್ದಾರೆ. ವೈಷ್ಣವ್ ಬಳಿ ಸತ್ಯ ಹೇಳುವುದಕ್ಕೆ ಅವಕಾಶವನ್ನೇ ನೀಡಿಲ್ಲ.

Lakshmibaramma serial Written Update on June 16th episode

ಕೀರ್ತಿ ತಲೆಗೆ ಹೊಸ ಪ್ಲ್ಯಾನ್ ಕಟ್ಟಿದ ಕಾವೇರಿ

ಸತ್ಯ ಗೊತ್ತಾಗುವ ಹೊತ್ತಲ್ಲಿ ಕಾವೇರಿ ಏನು ಮಾಡ ಬಲ್ಲಳು ಎಂಬ ಪ್ರಶ್ನೆ ಕಾಡುತ್ತಾ ಇತ್ತು. ಈಗ ಕಾವೇರಿಯ ಹೊಸ ಪ್ಲ್ಯಾನ್ ಎಲ್ಲರಿಗೂ ಶಾಕ್ ಆಗಿದೆ. ವೈಷ್ಣವ್ ಬಳಿ ಇನ್ನೇನು ಸತ್ಯ ಹೇಳಬೇಕು ಅಷ್ಟರಲ್ಲಿ ಕಾವೇರಿ, ಲಕ್ಷ್ಮೀಯನ್ನು ಕರೆದುಕೊಂಡು ಬಂದು ಇದು ದೊಡ್ಡ ಸರ್ಪೈಸ್ ಅಲ್ವಾ ಪುಟ್ಟ ಎಂದಿದ್ದಾಳೆ. "ಕೀರ್ತಿಯೇ ಲಕ್ಷ್ಮೀಯನ್ನು ಕರೆದುಕೊಂಡು ಬರೋದಕ್ಕೆ ಹೇಳಿದ್ಲು. ನಿಂಗೂ ಆ ವಿಚಾರವನ್ನ ಹೇಳಿಲ್ವಾ. ನೋಡು ಇದು ನಿಂಗು ಸರ್ಪೈಸ್ ಆಗಿನೇ ಇಟ್ಟಿದ್ದಾಳೆ" ಅಂತ ವೈಷ್ಣವ್ ಮುಂದೆಯೇ ಹೇಳಿದ್ದಾಳೆ.

ಕಾವೇರಿಯ ಮುಂದೆ ಸತ್ಯ ಹೇಳ್ತಾಳಾ ಕೀರ್ತಿ.?

ಕೀರ್ತಿಯಿಂದ ಸತ್ಯ ತಿಳಿದುಕೊಳ್ಳುವುದಕ್ಕೆ ಕೀರ್ತಿಯನ್ನ ಡಿನ್ನರ್ ಪಾರ್ಟಿಗೆ ಕರೆದಿದ್ದ ವೈಷ್ಣವ್‌ಗೆ, ಕಾವೇರಿ ಶಾಕ್ ಕೊಟ್ಟಿದ್ದಾಳೆ. ಆದರೆ, ಇದನ್ನು ವೈಷ್ಣವ್ ತಿಳಿಯದಷ್ಟು ದಡ್ಡನಲ್ಲ. ಅದಕ್ಕೆ ಕಾವೇರಿಯನ್ನ ಕರೆದುಕೊಂಡು ಮಾತನಾಡುವುದಕ್ಕೆ ಹೊರಟಿದ್ದಾನೆ. ಮನೆಯಿಂದ ಹೊರಡಾಗಲೂ ಬೇಡವೆಂದವರು ಈಗ ಬೇಕಂತಾನೇ ಈ ರೀತಿ ಮಾಡುತ್ತಿದ್ದೀರಾ ಎಂದು ಕೇಳುವಷ್ಟರಲ್ಲಿ ಕೀರ್ತಿ ಕೂಡ ಬಂದಿದ್ದಾಳೆ. ಕಾವೇರಿಯ ವರ್ತನೆಗೆ ರೈಸ್ ಆಗಿದ್ದಾಳೆ. ಕಾವೇರಿ ಕೂಡ ಹೆದರುತ್ತಿಲ್ಲ. ಕೀರ್ತಿ ಕೇಳಿದ ಪ್ರಶ್ನೆಗಳಿಗೂ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾಳೆ. ಆದರೆ ಕಾವೇರಿಯ ಪ್ಲ್ಯಾನ್ ಏನು ಅನ್ನೋದೆ ದೊಡ್ಡ ಕುತೂಹಲವಾಗಿದೆ.

More from Filmibeat

English summary
Colors Kannada Lakshmibaramma serial Written Update on June 16th episode. Here is the details Kaveri and Lakshmi surprise entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X