Lakshmibaramma: ಸತ್ಯ ಮುಚ್ಚಿಡಲು ಕಾವೇರಿ ಮಾಡಿದ್ದು ಮಾಸ್ಟರ್ ಪ್ಲ್ಯಾನ್.. ಆ ಪ್ಲ್ಯಾನ್ ಏನು ಅಂತ ನೋಡಿ!
ಲಕ್ಷ್ಮೀಯನ್ನ ಕಾವೇರಿ ಮನೆ ಸೊಸೆ ಮಾಡಿಕೊಳ್ಳುವುದಕ್ಕೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಅದಕ್ಕಾಗಿ ಕೀರ್ತಿ ಎಂಬ ಬಂಡೆ ಕಲ್ಲನ್ನೇ ಪಕ್ಕಕ್ಕೆ ಸರಿಸಿದ್ದಳು. ಆದರೆ, ಈಗ ಆ ಕಲ್ಲನ್ನು ನೇರ ಕಾವೇರಿ ತಲೆ ಮೇಲೆ ಬೀಳುವಂತಿದೆ. ಹಾಗಂತ ಕಾವೇರಿ ಪೆಟ್ಟು ತಿಂದು ಸುಮ್ಮನೆ ಕೂರುವವಳು ಅಲ್ಲ. ಪೆಟ್ಟು ಬೀಳುವುದಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳುವ ಚಾಲಾಕಿತನ ಅವಳಲ್ಲಿದೆ.
ಅದಕ್ಕೆಂದೆ ಕೀರ್ತಿ ಊಹೆಯನ್ನೇ ಮಾಡದ ರೀತಿಯಲ್ಲಿ ಪ್ಲ್ಯಾನ್ ಮಾಡಿ ಬಂದಿದ್ದಾಳೆ ಕಾವೇರಿ. ಕೀರ್ತಿ ಇರುವ ಸತ್ಯವನ್ನೆಲ್ಲಾ ಹೇಳಿ ಬಿಡಬೇಕು ಎಂಬ ಆತುರದಲ್ಲಿದ್ದಾಳೆ. ಅಷ್ಟೆ ಯಾಕೆ ವೈಷ್ಣವ್‌ನನ್ನು ಮತ್ತೆ ಪಡೆಯಬೇಕೆಂಬ ಬಯಕೆಯೂ ಅವಳಲ್ಲಿದೆ. ಹೀಗಾಗಿ ವೈಷ್ಣವ್ ಜೊತೆಗೆ ಡಿನ್ನರ್ ಪಾರ್ಟಿಗೆ ಬಂದಿದ್ದಾಳೆ. ಇಲ್ಲಿ ಕಾವೇರಿಯ ಹೊಸ ನಾಟಕ ಬಯಲಾಗಿದೆ.

ತಾಯಿಯನ್ನು ಪ್ರಶ್ನೆ ಮಾಡಿದ ವೈಷ್ಣವ್
ಕೀರ್ತಿಯ ಜೊತೆಗೆ ಡಿನ್ನರ್‌ಗೆ ಹೋಗಬೇಡ ಅಂತ ಕಾವೇರಿ ಸಾಕಷ್ಟು ಮನವಿಯನ್ನು ಮಾಡಿಕೊಂಡರು, ವೈಷ್ಣವ್ ಕೇಳುವುದಕ್ಕೆ ರೆಡಿ ಇರಲಿಲ್ಲ. ಯಾಕಂದ್ರೆ, ಅವನಿಗೆ ಸತ್ಯ ತಿಳಿಯಬೇಕಿತ್ತು. ಆದರೆ, ಕಾವೇರಿ ನೇರವಾಗಿ ಡಿನ್ನರ್ ಮಾಡುವ ಜಾಗಕ್ಕೆ ಬಂದು ಕುಳಿತಳು. ಇದು ವೈಷ್ಣವ್‌ಗೆ ಗೊತ್ತಾಗಿತ್ತು. ಅದಕ್ಕೆ ಉತ್ತರ ಕೇಳಿದಾಗ, ಬೇಕು ಎಂತಾನೇ ಈ ರೀತಿ ಮಾಡಿದೆ ಎಂದು ಹೇಳಿದ್ದಳು. ಅದಕ್ಕೆ ಕೀರ್ತಿ ಕೂಡ ಸಿಟ್ಟಾದಳು. ಆದರೆ, ಕಾವೇರಿ ಈ ಬಾರಿ ಡೋಂಟ್ ಕೇರ್ ಸ್ವಭಾವ ತೋರಿದ್ದಾಳೆ.
ಕೀರ್ತಿಗೂ ಉತ್ತರ ಕೊಟ್ಟ ಕಾವೇರಿ
ಕೀರ್ತಿಗೆ ಹಲವು ದಿನಗಳ ಬಳಿಕ ವೈಷ್ಣವ್‌ನನ್ನು ಭೇಟಿ ಮಾಡಿದ ಖುಷಿ ಇತ್ತು. ಪ್ರೀತಿ ಮತ್ತೆ ಮುಂದುವರೆಯುತ್ತೆ ಎಂಬ ಭರವಸೆ ಮೂಡಿತ್ತು. ಆದರೆ ಎಲ್ಲವನ್ನು ಕಾವೇರಿ ಹಾಳು ಮಾಡಿದ್ದನ್ನು ಕಂಡು, ನನ್ನ ವೈಷ್ಣವ್ ಡಿನ್ನರ್ ಅನ್ನು ಹಾಳು ಮಾಡೋದಕ್ಕೇನೆ ಬಂದಿದ್ದೀರಾ ಎಂದು ಕೇಳಿದ್ದಾಳೆ. ಇದಕ್ಕೆ ಕಾವೇರಿ ಸಮಾಧಾನವಾಗಿಯೇ ಉತ್ತರ ನೀಡಿದ್ದಾಳೆ. ಕಾವೇರಿಯ ಉತ್ತರ ಕೇಳಿ ಕೀರ್ತಿಗೆ ಮಾತೇ ಬರುತ್ತಿಲ್ಲವೆಂಬಂತೆ ಆಗಿದೆ.

ಸಾಕ್ಷಿ ಸಮೇತ ತೋರಿಸಿದ ಕಾವೇರಿ
ಕೋಪಗೊಂಡಿದ್ದ ವೈಷ್ಣವ್ ಹಾಗೂ ಕೀರ್ತಿಯನ್ನು ಸಮಾಧಾನ ಮಾಡಲೇಬೇಕಾಗಿದೆ. ಮೊದಲೇ ವೈಷ್ಣವ್ ಮೀಡಿಯಾ ಎಂದರೆ ಭಯಪಡುತ್ತಾನೆ. ಹೀಗಾಗಿ ಕಾವೇರಿ ಅದನ್ನೇ ಬಂಡವಾಳ ಮಾಡಿಕೊಂಡಿದ್ದಾಳೆ. ನಿಮ್ಮ ಸುದ್ದಿಯೆಲ್ಲಾ ಮೀಡಿಯಾದಲ್ಲಿ ಲೈವ್ ಕವರ್ ಆಗ್ತಾ ಇದೆ. ವೈಷ್ಣವ್ ಮದುವೆಯಾದ ಹುಡುಗಿಯನ್ನು ಬಿಟ್ಟು, ಈಗ ಹಳೆ ಹುಡುಗಿಯ ಜೊತೆಗೆ ಬಂದಿರುವುದಕ್ಕೆ ಆಡಿಕೊಂಡು ನಗುತ್ತಾರೆ ಎಂದು ಹೇಳಿದ್ದಾಳೆ. ಅದಕ್ಕೆ ಕೀರ್ತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಆಗ ಕಾವೇರಿ ಮಾತ್ರ ಸಾಕ್ಷಿ ಸಮೇತ ಪ್ರೂವ್ ಮಾಡಿದ್ದಾಳೆ.
ಕಾವೇರಿಯ ಪ್ಲ್ಯಾನ್ ವರ್ಕೌಟ್ ಆಗುತ್ತಾ..?
ದೂರದಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಹಿಡಿದುಕೊಂಡು ವಿಡಿಯೋ ಮಾಡುತ್ತಿದ್ದ. ಅದನ್ನು ತೋರಿಸಿದ ಕಾವೇರಿ, ನಿಮಗೆ ಗೊತ್ತಿಲ್ಲದೆ ಸುಮ್ಮನೆ ನಿಮ್ಮದೇ ಲೋಕದಲ್ಲಿ ಇರುತ್ತೀರಿ. ಆದರೆ ಅದ್ಯಾವುದು ನಿಮಗೆ ಕಾಣುವುದೆ ಇಲ್ಲವಲ್ಲ ಎಂದು ತಿರುಗೇಟು ನೀಡಿದ್ದಾಳೆ. ಆದರೆ, ಇದು ಕಾವೇರಿಯದ್ದೇ ಪ್ಲ್ಯಾನ್ ಆಗಿದೆ. ಯಾಕಂದ್ರೆ, ಕಾವೇರಿಗೆ ಸತ್ಯ ಹೊರ ಬಂದರೆ ಮನೆಯಲ್ಲಿ ಯುದ್ಧ ನಡೆಯುತ್ತೆ ಎನ್ನುವುದು ಬಹಳ ಚೆನ್ನಾಗಿ ಗೊತ್ತಿತ್ತು. ಅದಕ್ಕೆಂದೆ ಏನಾದರೂ ಮಾಡಲೇಬೇಕೆಂದು ಸೀದಾ ವೈಷ್ಣವ್ ಮತ್ತು ಕೀರ್ತಿ ಇರುವ ಜಾಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಎಲ್ಲಾ ಪ್ಲ್ಯಾನ್ ಅನ್ನು ಉಲ್ಟಾ ಮಾಡಿದ್ದಾಳೆ.


Click it and Unblock the Notifications











