Lakshmibaramma: ಅತ್ತೆ ಬಳಿ ಸತ್ಯ ಒಪ್ಪಿಕೊಂಡೇ ಬಿಟ್ಟಳು ಲಕ್ಷ್ಮೀ .. ಆದರೂ ಕಾವೇರಿಯ ಒಪ್ಪಿಗೆ ಇಲ್ಲ!
ಲಕ್ಷ್ಮೀಗೆ ದುಡಿಯುವುದು ದೊಡ್ಡ ಅನಿವಾರ್ಯತೆಯಾಗಿದೆ. ತವರು ಮನೆಯನ್ನು ಸಾಕಲೇಬೇಕಾಗಿದೆ. ದೊಡ್ಡಪ್ಪ ತನ್ನ ಮದುವೆಗಾಗಿ ಮಾಡಿದ ಸಾಲವನ್ನು ಲಕ್ಷ್ಮೀಯೇ ತೀರಿಸಬೇಕಿದೆ. ಯಾಕಂದ್ರೆ ದೊಡ್ಡಪ್ಪನ ದೇಹದಲ್ಲಿ ಶಕ್ತಿ ಇಲ್ಲ. ಇನ್ನು ದೊಡ್ಡಮ್ಮ ಕೆಲಸಕ್ಕೆಂದು ಹೋಗಲ್ಲ. ಇನ್ನು ಪೂಜಾನೋ ಇರುವ ಹಣವನ್ನು ಶೋಕಿಗೆಂದೇ ಖರ್ಚು ಮಾಡುತ್ತಾಳೆ. ಹೀಗಿರುವಾಗ ಮನೆಯವ ಜವಾಬ್ದಾರಿ ನಡೆಯುವುದು ಎಲ್ಲಿಂದ.
ಅಂಗಡಿಯಲ್ಲಿ ಲಕ್ಷ್ಮೀ ಕುಂತರೆ ಮಾತ್ರ ಅಂಗಡಿ ಬಿಟ್ಟು ಕೊಡುವುದು ಎಂದು ಮಾಲೀಕ ಹೇಳಿ ಆಗಿದೆ. ಅದಕ್ಕಾಗಿಯೇ ಲಕ್ಷ್ಮೀ ಅಂಗಡಿಯಲ್ಲಿ ಕೂರುತ್ತಿದ್ದಾಳೆ. ಮನೆಯನ್ನು ಅಡವಿಟ್ಟಾಗಿದೆ. ಸಹಾಯ ಮಾಡುವುದಕ್ಕೆ ವೈಷ್ಣವ್ ಇದ್ದರೂ ಕೂಡ ಲಕ್ಷ್ಮೀಯ ಸ್ವಾಭಿಮಾನ ಅಡ್ಡಿಯಾಗ್ತಾ ಇದೆ.

ಬಾಯಿ ಬಿಡಿಸಲು ಕಾವೇರಿ ಕಸರತ್ತು
ವೈಷ್ಣವ್ ಮತ್ತು ಲಕ್ಷ್ಮೀ ಇಬ್ಬರು ಸ್ಟುಡಿಯೋಗೆ ಅಂತ ಹೊರಟು ಅಂಗಡಿಗೆ ಹೋಗಿದ್ದರು. ಅದೇ ಸಮಯಕ್ಕೆ ಕಾವೇರಿ ಸ್ಟುಡಿಯೋಗೆ ಹೋಗಿದ್ದಾಳೆ. ಮೊದಲ ಬಾರಿಗೆ ಮಗ ಸುಳ್ಳು ಹೇಳಿ ಎಲ್ಲೋ ಹೋಗಿದ್ದಿದ್ದು ತಿಳಿದು ಬಂದಿದೆ. ಆದರೆ ಮನೆಯಲ್ಲಿ ಸ್ಟುಡಿಯೋ ಅಂತಾನೆ ಮೆಂಟೈನ್ ಮಾಡುತ್ತಿದ್ದಾರೆ. ಇದನ್ನು ಬಾಯಿ ಬಿಡಿಸಲು ಕಾವೇರಿ ಶತ ಪ್ರಯತ್ನ ಮಾಡಿದ್ದಾಳೆ. ಲಕ್ಷ್ಮೀಯನ್ನು ಬೇಕು ಬೇಕು ಅಂತಾನೆ ಹೀಯಾಳಿಸಿದ್ದಾಳೆ. ನೀನು ರೆಸ್ಟ್ ಮಾಡು ಲಕ್ಷ್ಮೀ ಅಂತೆಲ್ಲಾ ಕೊಂಕು ಮಾತುಗಳನ್ನು ಹಾಡಿದ್ದಾಳೆ. ಲಕ್ಷ್ಮೀ ಆದಷ್ಟು ಸತ್ಯವನ್ನು ಹೇಳುವುದಕ್ಕೆ ಪ್ರಯತ್ನ ಪಟ್ಟರು ಅದು ಸಾಧ್ಯವಾಗಲೇ ಇಲ್ಲ.
ಕೇಕ್ ಕಟ್ ಮಾಡಿಸಲು ಹೊರಟ ಕಾವೇರಿ
ಒಂದಿನ ಆಯ್ತು.. ಎರಡು ದಿನ ಆಯ್ತು.. ವೈಷ್ಣವ್ ಮತ್ತು ಲಕ್ಷ್ಮೀ ಸ್ಟುಡಿಯೋಗೆ ಹೋಗ್ತೀವಿ ಅಂತ ಅಲಂಕಾರ ಮಾಡಿಕೊಂಡು ಹೊರಡುತ್ತಾ ಇದ್ದದ್ದು. ಕಾವೇರಿ ಇವತ್ತು ಬಾಯಿ ಬಿಡಿಸಲೇಬೇಕೆಂದು ಕೇಕ್ ತರಿಸಿದ್ದಳು. ಲಕ್ಷ್ಮೀ ಸ್ಟುಡಿಯೋಗೆ ಹೋಗುತ್ತಾಳೆ. ಅದಕ್ಕೆ ಕೇಕ್ ಕಟ್ ಮಾಡಿಸೋಣಾ ಅಂತಷ್ಟೇ ಎಂದಾಗ ಮನೆಯವರೆಲ್ಲಾ ಸಂತಸ ಪಟ್ಟರು. ಸೊಸೆಯನ್ನು ಇಷ್ಟು ಖುಷಿಯಿಂದ ಹೊರಗೆ ಕಳುಹಿಸುತ್ತಿದ್ದೀರಿ ಎಂದು ಹೊಗಳಿದರು. ಆದರೆ ಕಾವೇರಿಯ ಪ್ಲ್ಯಾನ್ ಬೇರೆಯದ್ದೇ ಆಗಿತ್ತು.

ಸತ್ಯ ಹೇಳಿದ ಲಕ್ಷ್ಮೀ
ಕೇಕ್ ಕಟ್ ಮಾಡಿಸುವ ಬಗ್ಗೆ ಹೇಳುತ್ತಿದ್ದಾಗಲೇ ಲಕ್ಷ್ಮೀಯ ಎಂಟ್ರಿಯಾಗಿದೆ. ಇದರ ಅಗತ್ಯವಿಲ್ಲ ಎಂದು ಹೇಳಿ ಲಕ್ಷ್ಮೀ ಸತ್ಯ ಹೇಳಿದ್ದಾಳೆ. ನಾವೂ ಸ್ಟುಡಿಯೋಗೆ ಹೋಗಿದ್ದು ಅಲ್ಲ ಅಂತ. ಬಳಿಕ ವೈಷ್ಣವ್ ಕೂಡ ಬೆಂಬಲಕ್ಕೆ ನಿಂತಿದ್ದಾನೆ. ಲಕ್ಷ್ಮೀ ಸತ್ಯ ಹೇಳಬೇಕು ಅಂತಾನೆ ಇದ್ಲು. ಆದರೆ ನಾವೇ ಸುಳ್ಳು ಹೇಳುವಂತೆ ಮಾಡಿದ್ದು ಎಂದಿದ್ದಾನೆ. ಶಾಂತ ಕೂಡ ಲಕ್ಷ್ಮೀಗೆ ಸಪೋರ್ಟ್ ಮಾಡಿ, ಇದರಲ್ಲಿ ನಾವೂ ಭಾಗಿಯಾಗಿದ್ದೀವಿ. ಲಕ್ಷ್ಮೀ ಅಕ್ಕನದ್ದು ಏನು ತಪ್ಪಿಲ್ಲ ಎಂದಿದ್ದಾಳೆ.
ಲಕ್ಷ್ಮೀ ಬೆಂಬಲಕ್ಕೆ ನಿಲ್ಲದ ಕಾವೇರಿ
ಇಷ್ಟೆಲ್ಲಾ ಮುಗಿದ ಬಳಿಕ ಕೃಷ್ಣ ಮಧ್ಯಪ್ರವೇಶ ಮಾಡಿದ್ದಾರೆ. ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದರೆ ನಾವೂ ಫ್ರೀಡಂ ಕೊಟ್ಟಿಲ್ಲ. ನೀನೂ ಅಂಗಡಿಗೆ ಹೋಗಮ್ಮ. ಇನ್ಮೇಲೆ ನೀನು ಸುಳ್ಳು ಹೇಳುವ ಅಗತ್ಯವಿಲ್ಲ ಎಂದಾಗ ವಿಧಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಆದರೆ ಕೃಷ್ಣ ಮತ್ತೆ ಲಕ್ಷ್ಮೀಗೆ ಬೆಂಬಲ ಸೂಚಿಸಿದ್ದಾನೆ. ವೈಷ್ಣವ್ ಅಂತು ಸದಾ ಲಕ್ಷ್ಮೀ ಬೆನ್ನೆಲುಬಾಗಿದ್ದು, ಲಕ್ಷ್ಮೀ ಮನೆಯ ತವರಿನ ಕಷ್ಟವನ್ನು ತಿಳಿಸಿದ್ದಾನೆ. ಇದಕ್ಕಾದರೂ ಕಾವೇರಿಯ ಮನಸ್ಸು ಕರಗಬಹುದು ಎಂದುಕೊಂಡಿದ್ದ. ಆದರೆ ಅದು ಉಲ್ಟಾ ಆಗಿದೆ. ಇದಕ್ಕೆ ನಾನು ಅನುಮತಿ ನೀಡಲ್ಲ. ಲಕ್ಷ್ಮೀ ಈ ಮೊದಲೇ ನಿನಗೆ ಎಲ್ಲವನ್ನು ಹೇಳಿ ಆಗಿದೆ ಎಂದು ಎಚ್ಚರಿಕೆ ನೀಡಿದ್ದಾಳೆ.


Click it and Unblock the Notifications











