Lakshmibaramma: ಲಕ್ಷ್ಮೀ ನಡತೆ ಖುಷಿ ಕೊಟ್ಟಿದ್ದರೂ, ಕಾವೇರಿಗೆ ಆತಂಕ ಇನ್ನೂ ಕಡಿಮೆಯಾಗುತ್ತಿಲ್ಲ..!

By ಎಸ್ ಸುಮಂತ್

ಕಾವೇರಿಗೆ ತನ್ನ ಅತ್ತೆಯ ಶಾಪದ ಆತಂಕ ಹೆಚ್ಚಾಗಿಯೇ ಕಾಡುತ್ತಿದೆ. ಯಾಕಂದ್ರೆ ತಾಯಿ ಮಗನನ್ನು ದೂರ ಮಾಡಿದ್ದು ಕಾವೇರಿ. ಆ ಮಾತನ್ನು ಯಾವಾಗಲೂ ಸುಪ್ರೀತಾ ಹೇಳುತ್ತಾನೇ ಇರುತ್ತಾಳೆ. ಹೀಗಾಗಿ ಕಾವೇರಿಗೆ ಕುಂತರೂ ನಿಂತರೂ ಅತ್ತೆಯ ನೆನಪು, ಹಾಕಿದ ಶಾಪ ಕಾಡುತ್ತಲೇ ಇದೆ.

ಸುಪ್ರಿತಾ ಕಾಯ್ತಾ ಇರುವುದೇ ಅದಕ್ಕೋಸ್ಕರ. ತಾಯಿ ಸಾಯುವಾಗಲೂ ಮಗನ ಜೊತೆಗೆ ಇರುವುದಕ್ಕೆ ಬಿಡಲಿಲ್ಲ ಎಂಬ ಕೋಪ ಜಾಸ್ತಿಯೇ ಇದೆ. ಕಾವೇರಿಗೂ ಆ ಭಯ ಇರುವುದಕ್ಕೆ ಕೀರ್ತಿಯನ್ನು ಬಿಟ್ಟು ಲಕ್ಷ್ಮೀಯನ್ನು ಸೊಸೆಯಾಗಿ ತಂದಳು. ಲಕ್ಷ್ಮೀಯ ಗುಣ ನೋಡಿದಾಗಲಾದರೂ ಕಾವೇರಿಗೆ ಅರ್ಥವಾಗಬೇಕಿತ್ತು. ಆದರೆ ಅದು ಆಗದೆಯೇ ತಲೆ ಸುತ್ತಿ ಬಿದ್ದಿದ್ದಾಳೆ.

Lakshmibaramma serial Written Update on June 6th episode

ಕಾವೇರಿ ಮಾತು ಕೇಳಿದ ವೈಷ್ಣವ್

ವೈಷ್ಣವ್‌ಗೆ ಈಗೀಗ ತುಂಬಾನೇ ಬುದ್ದಿ ಬರ್ತಾ ಇದೆ. ಅದು ಲಕ್ಷ್ಮೀ ಕೃಪಾ ಕಟಾಕ್ಷದಿಂದ. ವಿಧಿ ಹಣ ಕೇಳಿದಾಗಲೂ ಹಿಂದೆ ಮುಂದೆ ಯೋಚಿಸದೆ ಕೊಡುವುದಕ್ಕೆ ಶುರು ಮಾಡಿದ. ಫೋನ್ ಒಡೆದು ಹೋಗಿದೆ. ಒಂದು ಲಕ್ಷ ಬೇಕು ಎಂದಾಕ್ಷಣಾ ಒಂದು ಲಕ್ಷ ಹಣ ಕೊಡುವುದಕ್ಕೆ ಓಕೆ ಎಂದಿದ್ದ. ಆದರೆ ಲಕ್ಷ್ಮೀ ಹೇಳಿದ ಉಳಿತಾಯದ ಮಾತಿಗೆ ಕೊಡುವ ಹಣಕ್ಕೆ ಬ್ರೇಕ್ ಹಾಕಿದ್ದ. ಇದಕ್ಕೆ ರೊಚ್ಚಿಗೆದ್ದ ವಿಧಿ, ಬೈಯ್ಯುವುದಕ್ಕೆ ಶುರು ಮಾಡಿದಳು. ಆಗ ಅಜ್ಜಿ ಲಕ್ಷ್ಮೀಯನ್ನು ನೈಸ್ ಮಾಡಿ, ಗಂಡನನ್ನು ಕಳುಹಿಸಿಕೊಟ್ಟು ಬಾರಮ್ಮ ಅಂತ ಕಳುಹಿಸಿದರು. ಅವರ ಮಾತಿನಂತೆ ಲಕ್ಷ್ಮೀ ಕೂಡ ಗಂಡನನ್ನು ಕಳುಹಿಸಲು ಬಂದಳು.

ಲಕ್ಷ್ಮೀಗೆ ಕ್ಲಾಸ್ ತೆಗೆದುಕೊಂಡ ವಿಧಿ

ಲಕ್ಷ್ಮೀಯ ಹಿಂದೆಯೇ ಬಂದ ವಿಧಿಗೆ ಒಂದಷ್ಟು ಸತ್ಯ ಅರ್ಥವಾಗಿತ್ತು. ಯಾಕಂದ್ರೆ, ಲಕ್ಷ್ಮೀ ಮತ್ತು ವೈಷ್ಣವ್ ಮಾತನಾಡುತ್ತಿದ್ದನ್ನು ಕೇಳಿಸಿಕೊಳ್ಳುತ್ತಿದ್ದಳು. ಆಗಲೇ ಅರ್ಥವಾಗಿತ್ತು. ಬಳಿಕ ಲಕ್ಷ್ಮೀಗೆ ಕ್ಲಾಸ್ ತೆಗೆದುಕೊಂಡ ವಿಧಿ ಮತ್ತೆ ಅತ್ತಿಗೆ ಕಡೆಯಿಂದಾನೂ ಬುದ್ದಿ ಹೇಳಿಸಿಕೊಂಡಳು. ಲಕ್ಷ್ಮೀ ಇತ್ತೀಚೆಗೆ ಬೇಡದೆ ಇರುವುದಕ್ಕೆಲ್ಲಾ ಸೊಪ್ಪು ಹಾಕುವುದನ್ನು ನಿಲ್ಲಿಸಿದ್ದಾಳೆ.

Lakshmibaramma serial Written Update on June 6th episode

ತಲೆ ಸುತ್ತಿ ಬಿದ್ದ ಕಾವೇರಿ

ಇತ್ತ ವಿಧಿಯ ಕಿರಿಕಿರಿ ಮಾತಿಗೆ ಇನ್ನೇನು ಬುದ್ದಿ ಹೇಳಬೇಕು ಎನ್ನುವಷ್ಟರಲ್ಲಿ ಒಳಗಿಂದ ಶಾಂತ ಜೋರು ಕಿರುಚಿದ್ದಾಳೆ. ಅಮ್ಮೋರು ಬಿದ್ದೋಗಿದ್ದಾರೆ ಅಂತ. ಎಲ್ಲರು ಓಡಿ ಹೋಗಿ ನೋಡಿದರೆ ಕಾವೇರಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನೀರು ತಂದು ಮುಖಕ್ಕೆ ಹಾಕಿ ಎಚ್ಚರ ಮಾಡಿದಾಗಲೇ ಕಾವೇರಿಗೂ ಶಾಕ್ ಆಗಿದ್ದು. ಮನೆಯವರೆಲ್ಲಾ ಕಣ್ಣ ಮುಂದೆ ಇದ್ದರು, ಕಾವೇರಿಗೆ ಅತ್ತೆಯ ಛಾಯೆಯೇ ಕಾಣಿಸುತ್ತಾ ಇತ್ತು. ಬಳಿಕ ಮನೆಯವರೆಲ್ಲಾ ನೀರು ಕುಡಿಸಿ, ಸಮಾಧಾನ ಮಾಡಿದರು.

ಲಕ್ಷ್ಮೀ ಮಾತಿಗೆ ಇಂಪ್ರೆಸ್ ಆದ ಕಾವೇರಿ

ಈ ಕಡೆ ಲಕ್ಷ್ಮೀ ಅಂಗಡಿಗೆ ಹೋಗಬೇಕಾಗಿತ್ತು. ಆದರೆ, ಕಾವೇರಿ ಬಿದ್ದಿದ್ದನ್ನು ಕಂಡು ಮೊದಲು ಅತ್ತೆಗೆ ಸೇವೆ ಮಾಡಲು ಮುಂದಾದಳು. ಎಲೆಕ್ಟ್ರೋ ಪೌಡರ್ ಬೆರೆಸಿದ್ದ ನೀರು ತಂದಳು. ಕಾವೇರಿಗೆ ಲಕ್ಷ್ಮೀ ಹೇಳಿದ ಮಾತುಗಳು ಇಂಪ್ರೆಸ್ ಮಾಡಿತ್ತು. ಅತ್ತೆಯೇ ಮೊದಲು ಎಂಬ ಮಾತುಗಳು. ಮನಸ್ಸು ಅದನ್ನು ಒಪ್ಪಿಕೊಂಡರೂ ಕಾವೇರಿ ಬುದ್ದಿ ಮಾತು ಅದನ್ನು ಫೇಕ್ ಆಗಿಯೇ ನೋಡಿತ್ತು. ಎಷ್ಟೇ ಆಗಲಿ ಅಂಗಡಿಯಲ್ಲಿ ತೂಕ ಹಾಕಿದವಳು ಅಲ್ವಾ, ಅದಕ್ಕೆ ಇಲ್ಲು ಅಳೆದು ತೂಗುತ್ತಿದ್ದಾಳೆ ಎಂದೇ ಯೋಚಿಸಿ, ಮತ್ತೆ ಲಕ್ಷ್ಮೀ ಬಗ್ಗೆ ತನ್ನ ಮನಸ್ಸಲ್ಲಿ ನೆಗೆಟಿವ್ ಆಗಿಯೇ ಯೋಚನೆ ಮಾಡಿದಳು. ಆದರೆ ಲಕ್ಷ್ಮೀಯ ರಿಯಲ್ ಕ್ಯಾರೆಕ್ಟರ್ ಇರುವುದೇ ಇಂಪ್ರೆಸ್ ಮಾಡುವಂತೆ.

More from Filmibeat

English summary
Colors Kannada Lakshmibaramma serial Written Update on June 6th episode. Here is the details Lakshmi impress Kaveri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X