Lakshmi Baramma: ಕೀರ್ತಿ ಜೊತೆಗೆ ಡಿನ್ನರ್‌ಗೆ ಹೊರಟ ವೈಷ್ಣವ್.. ಲಕ್ಷ್ಮೀ ಕಥೆ ಏನು ?
ವೈಷ್ಣವ್‌ಗೆ ಮದುವೆ, ಪ್ರೀತಿ, ಜೀವನದ ಮೇಲೆ ತನ್ನದೇ ಆದ ಕನಸಿತ್ತು, ಆಸೆಯಿತ್ತು. ಆ ಕನಸಿಗೆ ತಕ್ಕಂತೆ ಕೀರ್ತಿಯನ್ನು ಲವ್ ಮಾಡ್ತಾ ಇದ್ದ. ಆದರೆ ಇದ್ದಕ್ಕಿದ್ದ ಹಾಗೇ ವೈಷ್ಣವ್ ಕನಸಿಗೆ ಕೊಳ್ಳಿ ಇಟ್ಟು ಹೋಗಿದ್ದು ಕೀರ್ತಿ. ವೈಷ್ಣವ್ ನಿರೀಕ್ಷೆಯನ್ನೇ ಮಾಡದ ರೀತಿಯಲ್ಲಿ ಕೀರ್ತಿ ಮೋಸ ಮಾಡಿದಳು. ನೀನಂದ್ರೆ ದ್ವೇಷ ಎಂದು ತಿರುಗಿ ನೋಡದೆ ಹೋದಳು.
ಅವತ್ತು ವೈಷ್ಣವ್ ಮನಸ್ಸು ಭಾರವಾಗಿತ್ತು. ಪ್ರೀತಿ ದೂರಾದಂತೆ ಭಾಸವಾಗಿತ್ತು. ಹಿಂತಿರುಗಿ ನೋಡಿದರೆ ಕೀರ್ತಿ ಕಣ್ಣಿಗೆ ಕಾಣದಷ್ಟು ದೂರವಾಗಿದ್ದಳು. ಮನೆಯವರು ಮಾತ್ರ ಮುಖ್ಯವೆನಿಸಿತ್ತು. ಲಕ್ಷ್ಮೀಯನ್ನು ಮದುವೆಯಾಗುವಂತ ಮನಸ್ಥಿತಿ ಒದಗಿತ್ತು. ಆದರೆ ಈಗ ಲೆಕ್ಕಾಚಾರವೆಲ್ಲಾ ಉಲ್ಟಾ ಆಗಿದೆ. ಕೀರ್ತಿ ಜೊತೆಗೆ ವೈಷ್ಣವ್ ಡಿನ್ನರ್‌ಗೆ ಹೊರಟಿದ್ದಾನೆ.

ಐಸ್ ವಾಟರ್ ಸುರಿದುಕೊಂಡ ಕೀರ್ತಿ
ಕೀರ್ತಿ ನಾಟಕ ಒಂದ ಎರಡಾ? ಅದರಲ್ಲೂ ಲಕ್ಷ್ಮೀ ಮತ್ತು ವೈಷ್ಣವ್ ಮದುವೆಯಾದ ಮೇಲಂತೂ ಕೀರ್ತಿ ಮತ್ತಷ್ಟು ಕೋಪಗೊಂಡಿದ್ದಾಳೆ. ಏನೋ ಶಾಸ್ತ್ರಕ್ಕೋಸ್ಕರ ಲಕ್ಷ್ಮೀ ಜೊತೆಗೆ ಮದುವೆ. ಆಮೇಲೆ ಡಿವೋರ್ಸ್ ಆಗಿ ಬಿಡುತ್ತೆ ಎಂದೇ ನಂಬಿದ್ದಳು. ಆದರೆ, ಈಗ ಅದೆಲ್ಲವೂ ಸುಳ್ಳು ಎಂಬಂತೆ ಆಗಿದೆ. ಆ ಟೆನ್ಶನ್ ಅನ್ನು ಕೀರ್ತಿಯಿಂದ ತಡೆಯುವುದಕ್ಕೆ ಆಗ್ತಿಲ್ಲ. ವೈಷ್ಣವ್ ಬೇರೊಬ್ಬಳ ಜೊತೆಗೆ ಸುತ್ತಾಡೋದನ್ನು ಸಹಿಸುವುದಕ್ಕೆ ಆಗ್ತಿಲ್ಲ. ಈಗ ಕೋಲ್ಡ್ ವಾಟರ್ ಮೈಮೇಲೆ ಸುರಿದುಕೊಂಡು ನಾಟಕವಾಡುತ್ತಿದ್ದಾಳೆ.
ಕೀರ್ತಿ ಮಾತಿಗೆ ಶಾಕ್ ಆದ ವೈಷ್ಣವ್
ಕೀರ್ತಿಯ ಅವಾಂತರಗಳನ್ನು ನೋಡಿದ ವೈಷ್ಣವ್ ನೇರ ಮನೆಗೆ ಬಂದಿದ್ದಾನೆ. ಕೀರ್ತಿ ಹುಚ್ಚು ಹುಚ್ಚಾಗಿ ಆಡಿದ್ದನ್ನು ಕಂಡು ಶಾಕ್ ಆಗಿದ್ದಾನೆ. ಕೀರ್ತಿ ಮತ್ತೆ ಅದೇ ರಾಗ ಅದೇ ತಾಳ ಎಂಬಂತೆ ಆಡುತ್ತಿದ್ದಾಳೆ. ನಂಗೆ ನಿನ್ನ ಬಿಟ್ಟು ಇರುವುದಕ್ಕೆ ಆಗ್ತಾ ಇಲ್ಲ. ನೀನಂದ್ರೆ ಈಗಲೂ ಪ್ರೀತಿ. ಬೆಟ್ಟದಷ್ಟು ಪ್ರೀತಿ ಇದೆ ಅಂತೆಲ್ಲಾ ಅಂತಿದ್ದಾಳೆ.

ಕಾರಣ ಹುಡುಕಲು ಹೊರಟ ವೈಷ್ಣವ್
ವೈಷ್ಣವ್ ಗೆ ಈ ಮೊದಲೇ ಅನುಮಾನವಿತ್ತು. ಅಷ್ಟು ಪ್ರೀತಿಸುವ ಕೀರ್ತಿ ನನ್ನಿಂದ ದೂರ ಆಗೋದಕ್ಕೆ ಹೇಗೆ ಸಾಧ್ಯ ಎಂಬ ಅನುಮಾನ ಸಣ್ಣದಾಗಿ ಕಾಡುತ್ತಿತ್ತು. ಆದರೆ, ಆ ಕ್ಷಣದಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೆ ಲಕ್ಷ್ಮೀಯನ್ನು ಮದುವೆಯಾಗಿದ್ದ. ಆದರೆ ಈಗ ಕೀರ್ತಿ ವರ್ತನೆಗೆ ಬೇಸತ್ತಿದ್ದಾನೆ. ಇದರ ಹಿಂದೆ ಯಾರೋ ಇದ್ದಾರೆ ಎಂಬ ಅನುಮಾನ ಬಲವಾಗಿ ಕಾಡುವುದಕ್ಕೆ ಶುರುವಾಗಿದೆ. ಕೀರ್ತಿಯನ್ನು ಯಾರೋ ಆಡಿಸುತ್ತಿದ್ದಾರೆ ಎಂಬುದು ದಟ್ಟವಾಗಿದೆ. ಅದನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದಾನೆ ವೈಷ್ಣವ್.
ವೈಷ್ಣವ್ ಆಹ್ವಾನಕ್ಕೆ ಕೀರ್ತಿ ಖುಷಿ
ವೈಷ್ಣವ್‌ಗೆ ಈಗ ಹೇಗಾದರೂ ಮಾಡಿ ಆ ಸತ್ಯ ತಿಳಿದುಕೊಳ್ಳಲೇಬೇಕಾಗಿದೆ. ಯಾಕಂದ್ರೆ ಜೊತೆಯಾಗಿಯೇ ಜೀವನ ಸಾಗಿಸಬೇಕು ಎಂದವರನ್ನು ದೂರ ಮಾಡಿದವರು ಯಾರು? ಎಂಬ ಪ್ರಶ್ನೆ ಅವನಲ್ಲೂ ಇದೆ. ಹೀಗಾಗಿ ಈಗ ಕೀರ್ತಿಯನ್ನು ಬೆಂಬಲಿಸುವುದಕ್ಕೆ ಶುರು ಮಾಡಿದ್ದಾನೆ. ಒಳಗೆ ಇದ್ದ ಕೀರ್ತಿಯನ್ನು ಮೊದಲು ಹೊರಗೆ ಬಾ ಕೀರ್ತಿ ಎಂದು ಕರೆದರು ಬಂದಿಲ್ಲ. ಅದಕ್ಕೆ ಕೀರ್ತಿ ಡಿಮ್ಯಾಂಡ್ ಇಟ್ಟಿದ್ದಾಳೆ. ನನ್ನ ಪ್ರೀತಿಸ್ತೀನಿ ಅಂತ ಹೇಳು ಅಂತ. ಆಗ ವೈಷ್ಣವ್, ರಾತ್ರಿ ಡಿನ್ನರ್‌ಗೆ ಹೋಗೋಣ್ವಾ ಎಂದಿದ್ದಾನೆ. ಸತ್ಯ ತಿಳಿದುಕೊಳ್ಳುವ ಸಲುವಾಗಿ ಈ ದಾರಿ ಹಿಡಿದಿದ್ದಾನೆ. ಆದರೆ ಅದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತೋ ಗೊತ್ತಿಲ್ಲ.


Click it and Unblock the Notifications











