Lakshmibaramma: ವೈಷ್ಣವ್ ಕೇಳ್ತಾ ಇರೋದು ಕೀರ್ತಿ ಬಗ್ಗೆ ಆದರೆ, ಕಾವೇರಿ ಬೈತಿರೋದು ಲಕ್ಷ್ಮೀ ಬಗ್ಗೆ.. ಯಾಕೆ ಹೀಗೆ?

By ಎಸ್ ಸುಮಂತ್

ವೈಷ್ಣವ್ ಮತ್ತು ಲಕ್ಷ್ಮೀ ಮದುವೆಯಾದ ಮೇಲೆ ಆದಷ್ಟು ಸಂಸಾರವನ್ನು ತೂಗಿಸಿಕೊಂಡು ಹೋಗುವ ಪ್ರಯತ್ನ ಮಾಡ್ತಾ ಇದ್ದಾರೆಮ ವೈಷ್ಣವ್ ಪ್ರೀತಿ ಮೂಡದೆ ಹೋದರೂ, ಲಕ್ಷ್ಮೀಯನ್ನು ಕಂಡರೆ ಕಾಳಜಿ ತೋರುತ್ತಾನೆ. ಲಕ್ಷ್ಮೀಯನ್ನು ತನ್ನ ಜವಾಬ್ದಾರಿ ಎಂದೇ ಭಾವಿಸಿದ್ದಾನೆ. ಅದಕ್ಕೆ ಲಕ್ಷ್ಮೀ ಏನೇ ಕೇಳಿದರೂ, ಏನನ್ನೇ ಆಸೆ ಪಟ್ಟರೂ ಅದನ್ನು ನೆರವೇರಿಸುತ್ತಾ ಇದ್ದಾನೆ.

ಮಗ ಕೈ ತಪ್ಪಿ ಹೋಗಿ ಬಿಡುತ್ತಾನೆ ಎಂಬ ಭಯ ಕಾವೇರಿಯದ್ದು. ತನ್ನ ಅತ್ತೆಯ ಶಾಪ ತನಗೆ ತಟ್ಟಿದೆ ಎಂದುಕೊಂಡು ಆದಷ್ಟು ಲಕ್ಷ್ಮೀಯನ್ನು ಕ್ಲಾಸ್ ತೆಗೆದುಕೊಂಡಾಗ, ವೈಷ್ಣವ್ ತನ್ನ ತಾಯಿಗೆ ಸತ್ಯ ತಿಳಿಸಿ, ಸಮಾಧಾನ ಮಾಡಿದ್ದಾನೆ. ಆದರೆ, ಈಗ ಕಾವೇರಿಗೆ ವೈಷ್ಣವ್ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾನೆ.

Lakshmibaramma serial Written Update on May 16th episode

ಕೀರ್ತಿ ಕೆಲಸಕ್ಕೆ ರೊಚ್ಚಿಗೆದ್ದ ವೈಷ್ಣವ್

ಕೀರ್ತಿ ಈಗ ತನ್ನ ಆಟ ಶುರು ಮಾಡಿಕೊಂಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಮತ್ತು ವೈಷ್ಣವ್ ವಿಡಿಯೋ ಹಂಚಿಕೊಂಡಿದ್ದಾಳೆ. ಆ ವಿಡಿಯೋ ಬೇರೆ ಅರ್ಥವನ್ನು ಕೊಡುತ್ತಿರುವುದಕ್ಕೆ ವೈಷ್ಣವ್ ಕೋಪ ಮಾಡಿಕೊಂಡಿದ್ದಾನೆ. ಸೀದಾ ಕೀರ್ತಿ ಮನೆಗೆ ಹೋಗಿ, ಕ್ಲಾಸ್ ತೆಗೆದುಕೊಂಡಿದ್ದಾನೆ. ಆಗ ಕೀರ್ತಿ ನಮ್ಮಿಬ್ಬರದ್ದು ಮದುವೆ ಆಗುತ್ತೆ ಎಂದಾಗ ಇನ್ನಷ್ಟು ಕೋಪ ನೆತ್ತಿಗೇರಿದೆ.

ಕೀರ್ತಿ - ಕಾರುಣ್ಯ ಮಾತಿಗೆ ಶಾಕ್

ಮಾತಿಗೆ ಮಾತು ಜೋರಾಗಿಯೇ ಬೆಳೆದಿದೆ. ಕೀರ್ತಿ ಅದ್ಯಾವಾಗ ನಂದು ನಿಂದು ಮದುವೆ ಮತ್ತೆ ಆಗುತ್ತೆ ಎಂದಳೋ, ಆಗ ವೈಷ್ಣವ್ ಮತ್ತೆ ಎಚ್ಚರಿಕೆ ನೀಡಿದ್ದಾನೆ. ಆಗ ಕೀರ್ತಿ ಇರುವ ವಿಚಾರವನ್ನು ಹೇಳಿಯೇ ಬಿಟ್ಟಿದ್ದಾಳೆ. ಏನೇ ವಿಚಾರ ಬೇಕು ಅಂದ್ರು ನೀನು ಹೋಗಿ ನಿಮ್ಮ ಅಮ್ಮನ ಬಳಿ ಕೇಳು ಎಂದಿದ್ದಾಳೆ‌. ಕಾರುಣ್ಯ ಕೂಡ ಅದೇ ಉತ್ತರವನ್ನು ಹೇಳಿದ್ದಾಳೆ. ಇದು ವೈಷ್ಣವ್‌ಗೆ ಅರಗಿಸಿಕೊಳ್ಳಲಾಗದಂತ ಉತ್ತರವಾಗಿದೆ. ತಕ್ಷಣ ಅಲ್ಲಿಂದ ಮನೆಗೆ ಹೊರಟಿದ್ದಾನೆ.

Lakshmibaramma serial Written Update on May 16th episode

ಅಂಗಡಿ ನಡೆಸಲಾಗದೆ ಲಕ್ಷ್ಮೀ ಕಣ್ಣೀರು

ಲಕ್ಷ್ಮೀ ಆ ಕಡೆ ತವರು ಮನೆಗೆ ಮಾತು ಕೊಟ್ಟು ಬಂದಿದ್ದಾಳೆ. ಅಂಗಡಿಯನ್ನು ನಾನೇ ನಡೆಸಿ, ಮನೆ ನಡೆಸುತ್ತೀನಿ ಅಂತ. ಆದರೆ, ಈ ಕಡೆ ಅತ್ತೆ ಕಾವೇರಿ ಸುತರಾಮ್ ಒಪ್ಪುತ್ತಿಲ್ಲ. ಮೊದಲೇ ನಂಗೆ ಹೇಳಿಯೇ ಇಲ್ಲ ಅಂತ ಕಾವೇರಿ ಕೋಪ ಮಾಡಿಕೊಂಡಿದ್ದಾಳೆ. ಆ ಕಡೆ ದೊಡ್ಡಮ್ಮನಿಂದ ಫೋನ್ ಬೇರೆ ಬರ್ತಿದೆ. ಉತ್ತರಿಸಲಾಗದೆ ಲಕ್ಷ್ಮೀ ಕಣ್ಣೀರು ಹಾಕುತ್ತಿದ್ದಾಳೆ. ಶಾಂತ ಜೊತೆಗೆ ನಿಂತು ಸಮಾಧಾನ ಮಾಡಿದ್ದಾಳೆ.

ವೈಷ್ಣವ್ ಹೇಳಿದ್ದು ಬೇರೆ ಕಾವೇರಿ ತಿಳಿದದ್ದು?

ವೈಷ್ಷವ್ ಪಿತ್ತ ನೆತ್ತಿಗೇರಿದೆ. ಕೀರ್ತಿ ಪ್ರೀತಿಯನ್ನು ದೂರ ಮಾಡಿ, ಮನಸ್ಸಿಗೆ ನೋವು ಮಾಡಿ ಹೋದವಳು. ಈಗ ಅವತಾರ ಬೇರೆಯದ್ದೇ ಆಡುತ್ತಿದ್ದಾಳೆ. ಆ ಕೋಪಕ್ಕೆ ಬಂದ ವೈಷ್ಣವ್ ಅಮ್ಮನ ಬಳಿ, "ಅವಳ ಬಳಿ ನಿಮ್ಗೇನು ಕೆಲ್ಸ. ಅವಳು ಏನು ಮಾಡಿದ್ರೆ ನಿಮ್ಗೇನಮ್ಮ. ಅವಳ ಸುದ್ದಿಗೆ ಯಾಕೆ ಹೋಗೋದು. ಅವಳನ್ನ ಅವಳ ಪಾಡಿಗೆ ಅವಳನ್ನ ಬಿಡಿ. ನಿಮ್ಮ ಬಗ್ಗೆ ಅವಳು ಏನೇನೋ ಮಾತನಾಡ್ತಾ ಇದ್ರೆ ಕೇಳೋಕೆ ಆಗಲ್ಲ" ಎಂದಿದ್ದಾನೆ. ಆಗ ಕಾವೇರಿ ಎಲ್ಲದನ್ನು ಲಕ್ಷ್ಮೀಗೇನೆ ಹೋಲಿಕೆ ಮಾಡಿಕೊಂಡಿದ್ದಾಳೆ. ಅಂಗಡಿಗೆ ಹೋಗಬೇಡ ಎಂದಿದ್ದನ್ನು ಗಂಡನಿಗೆ ಹೇಳಿದ್ದಾಳೆಂದು ತಿಳಿದು, ಬಾ ಎಲ್ಲವು ಅವಳ ಮುಂದೆಯೇ ಇತ್ಯರ್ಥ ಮಾಡ್ತೀನಿ ಅಂತ ಎಳೆದೊಯ್ದಿದ್ದಾಳೆ.

More from Filmibeat

English summary
Colors Kannada Lakshmibaramma serial Written Update on May 16th episode. Here is the details Kaveri confusion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X