Manasa Manohar: ಗಂಡನ ಜೊತೆಗಿರುವಾಗ ಬೆಡ್ ರೂಮ್ ಫೋಟೋ ಶೇರ್ ಮಾಡಿದ ನಟಿ ಮಾನಸ!
ನಟಿ ಮಾನಸ ಮನೋಹರ್ ಇತ್ತೀಚೆಗಷ್ಟೇ ಎರಡನೇ ಮದುವೆ ಆಗಿದ್ದಾರೆ. ಮೊದಲ ಮದುವೆಯಿಂದ ಹೊರಗೆ ಬಂದಿದ್ದೇಕೆ ಎಂಬುದನ್ನು ಸ್ಪಷ್ಟನೆ ನೀಡಿದ್ದಾರೆ.
ಎರಡನೇ ಗಂಡನ ಫ್ಯಾಮಿಲಿ ಬಗ್ಗೆಯೂ ಪರಿಚಯ ಮಾಡಿಕೊಟ್ಟಿದ್ದರು. ಜೊತೆಗೆ ಮದುವೆಯಾದ ಮೇಲೆ ಗಂಡನ ಮನೆಯವರ ಜೊತೆಗೆ ಶಾಪಿಂಗ್, ಔಟಿಂಗ್ ಅಂತ ಫುಲ್ ಎಂಜಾಯ್ ಮಾಡ್ತಿದ್ದಾರೆ. ಪತಿಯ ಜೊತೆಗೆ ಹನಿಮೂನ್ ಕೂಡ ಎಂಜಾಯ್ ಮಾಡ್ತಾ ಇದಾರೆ.

ಮಾನಸ ಮನೋಹರ್ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಈ ಮೊದಲು ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಮೀನಾ ಪಾತ್ರದಲ್ಲಿ ಎಲ್ಲರನ್ನು ಗೆದ್ದಿದ್ದರು. ಆರ್ಯವರ್ಧನ್ ಅವರ ಅಸಿಸ್ಟೆಂಟ್ ಆಗಿದ್ದರು. ಈ ರೀತಿಯ ಎಂಪ್ಲಾಯ್ ನಮಗೂ ಬೇಕು ಅಂತಾನೇ ಅದೆಷ್ಟೋ ಕಾರ್ಪೋರೇಟರ್ಸ್ ಕಂಪನಿಯ ಓನರ್ ಗಳು ಥಿಂಕ್ ಕೂಡ ಮಾಡಿದ್ದರು. ಅಷ್ಟು ಅದ್ಭುತವಾಗಿ ಒಂದು ಕಂಪನಿಯ ಇಡೀ ಜವಬ್ದಾರಿ ತೆಗೆದುಕೊಂಡಿದ್ದ ಪಾತ್ರ ಮಾಡಿದ್ದರು.
ಹನಿಮೂನ್ ಮೂಡಲ್ಲಿ ನಟಿ ಮಾನಸ
ಮಾನಸ ಮನೋಹರ್ ಹಾಗೂ ಪ್ರೀತಮ್ ಮದುವೆಯಾದ ಮೇಲೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಈಗ ಇಬ್ಬರು ಹನಿಮೂನ್ ಗೆಂದು ಹೋಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹನಿಮೂನ್ ಗೆಂದು ಹೋಗಿರುವ ಫೋಟೋಗಳನ್ನಾಗಲಿ, ಇನ್ನೆಲ್ಲೋ ಒಳ್ಳೆ ಪ್ಲೇಸ್ ನಲ್ಲಿ ತೆಗೆಸಿದ ವಿಡಿಯೋಗಳನ್ನಾಗಲಿ ಹಂಚಿಕೊಂಡಿಲ್ಲ. ಆದರೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದೆರಡು ಪೋಟೋ ಹಂಚಿಕೊಂಡಿದ್ದು ಅದರಿಂದ ಅವರು ಹನಿಮೂನ್ ಗೆ ಹೋಗಿದ್ದಾರೆಂದು ಫಾಲೋವರ್ಸ್ ಅಂದಾಜಿಸುತ್ತಿದ್ದಾರೆ.
ಪತಿ ಕೈ ಹಿಡಿದು ಬರೆದದ್ದೇನು..?
ಇನ್ನು ಮಾನಸ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋ ಜೊತೆಗೆ 'ಕೆಲವು ದಿನಗಳು ಕಠಿಣವಾಗಿವೆ -ಕೆಲವು ದಿನಗಳು ದಣಿದಿವೆ ಕೆಲವು ಮೋಡಿಮಾಡುವ ಮತ್ತು ರೋಮಾಂಚನಕಾರಿ, ದಿನಗಳು ಅಸ್ಥಿರ, ನೀವು ಮಾತ್ರ ಸ್ಥಿರ' ಎಂದು ಸಿಂಗಲ್ ಫೋಟೋಗೆ ಕ್ಯಾಪ್ಶನ್ ಹಾಕಿದ್ದರೆ, 'ನಾವು ಕೈಗಳನ್ನು ಹಿಡಿದಾಗ, ನಾವು ಹೃದಯಗಳನ್ನು ಹಿಡಿದಿಟ್ಟುಕೊಳ್ಳುತ್ತೇವೆ ಸುರಕ್ಷಿತ ಮತ್ತು ಪ್ರೀತಿಪಾತ್ರರಾದ @preethamc28 ನನ್ನ ಎಲ್ಲಾ ರೋಲರ್ ಕೋಸ್ಟರ್‌ಗಳ ಮೂಲಕ ನನ್ನ ರಾಕ್ ಸ್ಟಾರ್ ಆಗಿದ್ದಕ್ಕಾಗಿ ಧನ್ಯವಾದಗಳು' ಎಂದು ಪತಿ ಕೈಹಿಡಿದಿರುವ ಫೋಟೋಗೆ ಬರೆದುಕೊಂಡಿದ್ದಾರೆ.
ಫ್ಯಾಮಿಲಿ ಜೊತೆಗೂ ಟೈಮ್ ಪಾಸ್
ಇನ್ನು ಮದುವೆಯಾದ ಮೇಲೆ ಗಂಡನ ಕಡೆಯವರ ಜೊತೆಗಿನ ಬಾಂಧವ್ಯ ತುಂಬಾ ಚೆನ್ನಾಗಿದೆ. ಕುಟುಂಬದವರ ಜೊತೆಗಿರುವ ಫೋಟೋ, ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಇತ್ತೀಚೆಗಷ್ಟೇ ಮೆನ್ಸ್ ಡೇ ಸೆಲೆಬ್ರೇಷನ್ ಮಾಡಿದ್ದರು. ಮಾವ, ಗಂಡ, ಅವರ ಮನೆ ನಾಯಿಗೂ ಕೇಕ್ ಕಟ್ ಮಾಡಿಸಿದ್ದರು.
ಮದುವೆಯಾದ ಮೇಲೂ ವಿಲನ್
ಇನ್ನು ಮದುವೆಯಾದ ಮೇಲೂ ಮೊದಲು ಮಾಡುತ್ತಿದ್ದ ಸೀರಿಯಲ್ ಗಳಲ್ಲಿ ಮುಂದುವರೆದಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲು ಎಂಬ ಖಳನಾಯಕಿಯ ಪಾತ್ರ ಮಾಡಿದ್ದಾರೆ. ಆ ಸೀರಿಯಲ್ ನಲ್ಲೂ ಈಗಲೂ ಮುಂದುವರೆದಿದ್ದಾರೆ. ಆಕ್ಚುಲಿ ಮಾನಸ ಮನೋಹರ್ ಗ್ಲಾಮರ್ ಗೊಂಬೆ ಇದ್ದಂತೆ. ಮೀರಾ ರೀತಿಯ ಗ್ಲಾಮರ್ ಪಾತ್ರಗಳನ್ನು ಮಾಡಿದಾಗ ಅದಕ್ಕೂ ಹೆಚ್ಚಿನ ತೂಕ ಬರುತ್ತದೆ. ಈ ರೀತೊಉ ನೆಗೆಟಿವ್ ಪಾತ್ರಗಳಿಗೆ ಮಾನಸ ಸೂಟ್ ಆಗಲ್ಲ ಎಂದೇ ಹಲವರು ಹೇಳುತ್ತಾರೆ. ಆದರೆ ಮಾನಸ ಯಾವುದೇ ಪಾತ್ರ ಮಾಡಿದರು ಅದಕ್ಕೆ ಜೀವ ತುಂಬುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಪಾತ್ರವನ್ನು ಮಾಡುತ್ತಾರೆಂದು ಕಾದು ನೋಡಬೇಕಿದೆ.


Click it and Unblock the Notifications











