ಈ ಕೂಡಲೇ ಚೈತ್ರಾ ಕುಂದಾಪುರ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಿ, ಇಲ್ಲದಿದ್ದರೆ....!
ಅಭಿನಯ ಚಕ್ರವರ್ತಿ ಸುದೀಪ್ ಪಾಲಿಗೆ ಬಿಗ್ ಬಾಸ್ ಕೇವಲ ಸೈಡ್ ಪ್ರಾಜೆಕ್ಟ್ ಅಲ್ಲ. ಬದಲಿಗೆ ಅದು ಅವರ ಎರಡನೇ ಮನೆ. ಕಳೆದ ವರ್ಷ ಬಿಗ್ ಬಾಸ್ ನ ಹತ್ತನೇ ಸೀಸನ್ ಆರಂಭವಾಗುವ ಮುನ್ನ ಖುದ್ದು ಸುದೀಪ್ ಈ ಮಾತನ್ನು ಹೇಳಿದ್ದರು ಕೂಡ.
ಇಂಥಾ ಸುದೀಪ್ ಈಗ ಬಿಗ್ ಬಾಸ್ ನ ಹನ್ನೊಂದನೇ ಆವೃತ್ತಿಗೆ ಚಾಲನೆ ನೀಡಿದ್ದಾರೆ. 17 ಜನರನ್ನು ಮನೆಗೆ ಕಳುಹಿಸಿದ್ದಾರೆ. ಆ ಪೈಕಿ ವಿವಾದಾತ್ಮಕ ವ್ಯಕ್ತಿಗಳಿದ್ದಾರೆ. ಕಿರುತೆರೆ ಕಲಾವಿದರಿದ್ದಾರೆ. ಬೆಳ್ಳಿ ತೆರೆಯ ತಾರೆಯರು ಇದ್ದಾರೆ. ಹೀಗೆ ಹೋದ ಈ 17 ಜನರಲ್ಲಿ ಒಬ್ಬೊಬ್ಬರು ಒಂದೊಂದು ಮುತ್ತು. ಇದಕ್ಕೆ ಸಾಕ್ಷಿ ಎನ್ನುವಂತೆ ಮೊದಲನೇ ದಿನದಿಂದ ಬಿಗ್ ಬಾಸ್ ಮನೆ ಕೊತ ಕೊತ ಕುದಿಯುತ್ತಿದೆ. ವಾದ-ವಿವಾದ-ಪ್ರತಿವಾದಗಳಿಗೆ ಬಿಗ್ ಬಾಸ್ ಮನೆ ಸಾಕ್ಷಿಯಾಗಿದೆ. ಇದರ ನಡುವೆ ಚೈತ್ರಾ ಕುಂದಾಪುರ ಮನೆಯಾಚೆ ಈಗಿಂದ ಈಗಲೇ ಕಳುಹಿಸದಿದ್ದರೆ ಪರಿಣಾಮ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ಹೌದು, ಹಿಂದೂತ್ವವನ್ನು ಕಣ ಕಣದಲ್ಲಿ ತುಂಬಿಕೊಂಡು, ಕರಾವಳಿಯ ಫೈರ್ ಬ್ರ್ಯಾಂಡ್ ಎಂದೇ ಹೆಸರುವಾಸಿಯಾದ ಚೈತ್ರಾ ಕುಂದಾಪುರ ಅವರನ್ನು ಬಿಗ್ ಬಾಸ್ ಮನೆಯಿಂದ ಕೂಡಲೇ ಹೊರ ಕಳುಹಿಸಬೇಕು ಎಂದು ವಕೀಲ ಕೆ.ಎಲ್. ಭೋಜರಾಜ್ ಆಗ್ರಹಿಸಿದ್ದಾರೆ. ಸಾಗರದಲ್ಲಿ ಬಿಗ್ ಬಾಸ್‌ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಕೆ.ಎಲ್ ಭೋಜರಾಜ್, ಚೈತ್ರಾ ಕುಂದಾಪುರ ವಿರುದ್ಧ ಗಲಾಟೆ, ದೊಂಬಿ, ವಂಚನೆ, ಹೀಗೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅದು, ಒಂದಲ್ಲ, ಎರಡಲ್ಲ, ಬರೋಬ್ಬರಿ ಹನ್ನೊಂದು ಪ್ರಕರಣಗಳು ಚೈತ್ರಾ ಕುಂದಾಪುರ ಅವರ ಮೇಲೆ ದಾಖಲಾಗಿವೆ. ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಅವರನ್ನು ಕರ್ಕೊಂಡಿರೋದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಇಂತಹ ಸ್ಫರ್ಧಿಯನ್ನು ಬಿಗ್ ಬಾಸ್ ಮನೆಯಲ್ಲಿ ಮುಂದುವರೆಸಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತೆ ಎಂದು ಹೇಳಿದ್ಧಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಲರ್ಸ್ ಕನ್ನಡ ವಾಹಿನಿ ಅವರಿಗೆ ನೋಟಿಸ್ ಕೂಡ ಜಾರಿ ಮಾಡಿರುವುದಾಗಿ ಹೇಳಿರುವ ಕೆ.ಎಲ್ ಭೋಜರಾಜ್, ಇನ್ನೆರಡು ಮೂರು ದಿನದಲ್ಲಿ ನಾವು ನೀಡಿರುವ ನೋಟಿಸ್‌ಗೆ ಉತ್ತರ ನೀಡದೆ ಇದ್ದಲ್ಲಿ ಹೈಕೋರ್ಟ್ ಮತ್ತು ಸ್ಥಳಿಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಕೂಡ ಹೇಳಿದ್ದಾರೆ. ಆ ನಂತರ ಬಿಗ್ ಬಾಸ್ ನ ಹನ್ನೊಂದನೇ ಸೀಸನ್‌ನ ಸ್ಥಗಿತ ಮಾಡಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಉಳಿದಂತೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ರಾಣಿ ಎಂದೇ ಹೆಸರುವಾಸಿಯಾಗುತ್ತಿದ್ದಾರೆ. ಬಿಗ್ ಬಾಸ್ ಮನೆಯ ಉಳಿದ ಸ್ಫರ್ಧಿಗಳಿಗೆ ನರಕ ತೋರಿಸುತ್ತಿದ್ದಾರೆ. ಮೊದಲ ದಿನವೇ ಯಮುನಾ ಶ್ರೀನಿಧಿ ಅವರ ಜೊತೆ ತಂಟೆ ತೆಗೆದ ಚೈತ್ರಾ ಆ ನಂತರ ಉಗ್ರಂ ಮಂಜು ಜೊತೆ ವಾಗ್ಯುದ್ದ ಮಾಡಿದರು. ಹಣ್ಣು ತಿಂದರೆ ಶಿಕ್ಷೆ ಕೊಡಲು ಬಿಗ್ ಬಾಸ್ ಇದ್ದಾರೆ ನಿಮಗೆ ಶಿಕ್ಷೆ ಕೊಡಲು ಯಾವ ಅಧಿಕಾರವೂ ಇಲ್ಲ ಎಂದು ಕೆಂಡ ಕಾರಿದರು.
ಒಟ್ನಲ್ಲಿ ಸದ್ಯಕ್ಕೆ ಚೈತ್ರಾ ಕುಂದಾಪುರ ಅವರನ್ನು ಈ ಕೂಡಲೇ ಮನೆಯಿಂದ ಹೊರ ಕಳುಹಿಸುವಂತೆ ಕೆ.ಎಲ್ ಭೋಜರಾಜ್ ಆಗ್ರಹಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಗೆ ನೊಟೀಸ್ ನೀಡಿದ್ದಾರೆ. ಇವರ ಈ ನೊಟೀಸ್‌ನ ವಾಹಿನಿ ಗಂಭೀರವಾಗಿ ತೆಗೆದುಕೊಳ್ಳುತ್ತಾ, ಮನೆಯಾಚೆ ಕಳುಹಿಸುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ. ಮಿಕ್ಕಂತೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬರುವ ಮುಂಚೆ ಉದ್ಯಮಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ಹಣ ವಂಚಿಸಿದ್ದು ಆ ನಂತರ ಇದೇ ಪ್ರಕರಣದಲ್ಲಿ ಜೈಲು ಸೇರಿದ್ದು ನಿಮಗೆ ಗೊತ್ತಿರಬೇಕು.


Click it and Unblock the Notifications











