ಬಿಗ್ ಬಾಸ್ 'ಫಿಕ್ಸ್ಡ್' ಶೋ ಎಂಬುದಕ್ಕೆ ಸಾಕ್ಷಿ: ಕಂಟ್ರೋಲ್ ರೂಮ್ ನಿಂದ ವಿಡಿಯೋ ಲೀಕ್.!

Recommended Video

Bigg Boss : Confidential Video of Bigg Boss 13 control room goes viral | Filmibeat kannada

ಬಿಗ್ ಬಾಸ್ ಫಿಕ್ಸ್ಡ್ ಶೋ ಎಂಬ ಆರೋಪ ಪ್ರತಿ ವರ್ಷವೂ ಕೇಳಿಬರುತ್ತದೆ. ವಿನ್ನರ್ ಯಾರು ಎಂದು ಮೊದಲೇ ನಿರ್ಧಾರವಾಗಿರುತ್ತದೆ ಎಂಬ ಅನುಮಾನ ಹಲವು ವೀಕ್ಷಕರನ್ನು ಕಾಡುತ್ತಲೇ ಇದೆ.

ಮೊನ್ನೆ ಮೊನ್ನೆಯಷ್ಟೇ ಮುಕ್ತಾಯವಾದ 'ಬಿಗ್ ಬಾಸ್-13'ನಲ್ಲೂ ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ವಿನ್ನರ್ ಆಗಿರುವುದು ಹಲವು ವೀಕ್ಷಕರಿಗೆ ಖುಷಿ ಕೊಟ್ಟಿಲ್ಲ. ಕಾಶ್ಮೀರಿ ಮಾಡೆಲ್ ಆಸಿಮ್ ರಿಯಾಝ್ ಗೆ ವೀಕ್ಷಕರ ಬೆಂಬಲ ಇದ್ದರೂ, ವಾಹಿನಿ ಅವರನ್ನು ಗೆಲ್ಲಿಸಿಲ್ಲ. ಹೀಗಾಗಿ, ಸಿದ್ಧಾರ್ಥ್ ಶುಕ್ಲಾ 'ಫಿಕ್ಸ್ಡ್ ವಿನ್ನರ್' ಅಂತಲೇ ಬ್ರ್ಯಾಂಡ್ ಆಗಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ವಾಹಿನಿಯ ಪ್ರೋಗ್ರಾಂ ಕಂಟ್ರೋಲ್ ರೂಮ್ ನಿಂದ ಒಂದು ವಿಡಿಯೋ ಲೀಕ್ ಆಗಿದೆ. ಆ ವಿಡಿಯೋ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. ಓದಿರಿ...

ಲೀಕ್ ಆಗಿರುವ ವಿಡಿಯೋದಲ್ಲಿ ಏನಿದೆ.?

'ಬಿಗ್ ಬಾಸ್-13' ಗ್ರ್ಯಾಂಡ್ ಫಿನಾಲೆಯಂದು ವಿಜೇತರ ಘೋಷಣೆ ಆಗುವ ಸಂದರ್ಭದಲ್ಲಿ, ವಾಹಿನಿಯ ಪ್ರೋಗ್ರಾಂ ಕಂಟ್ರೋಲ್ ರೂಮ್ ನಿಂದ ಒಂದು ವಿಡಿಯೋ ಲೀಕ್ ಆಗಿದೆ. ಆ ವಿಡಿಯೋದಲ್ಲಿ ಮಹಿಳೆಯೊಬ್ಬರು, ''ಸಿದ್ಧಾರ್ಥ್ ಶುಕ್ಲಾ ಮತ್ತು ಆಸಿಮ್ ರಿಯಾಝ್ ಗೆ ಸಮವಾಗಿ ವೋಟ್ಸ್ ಲಭಿಸಿದೆ'' ಎಂದು ಹೇಳುತ್ತಾರೆ.

ಪ್ರಶ್ನೆಗಳ ಸುರಿಮಳೆ

ಪ್ರಶ್ನೆಗಳ ಸುರಿಮಳೆ

ಸಮನಾಗಿ ವೋಟ್ಸ್ ಸಿಕ್ಕಿದ್ದರೂ, ವಾಹಿನಿಯವರು ಸಿದ್ಧಾರ್ಥ್ ಶುಕ್ಲಾರನ್ನ ಮಾತ್ರ ವಿಜೇತರನ್ನಾಗಿ ಆಯ್ಕೆ ಮಾಡಿದ್ದು ಯಾಕೆ.? ಆಸಿಮ್ ರಿಯಾಝ್ ರನ್ನ ಯಾಕೆ ಪರಿಗಣಿಸಲಿಲ್ಲ.? ಎಂಬ ಪ್ರಶ್ನೆಗಳು ವಿಡಿಯೋ ವೈರಲ್ ಆದ್ಮೇಲೆ ಉದ್ಭವ ಆಗಿದೆ. ಜೊತೆಗೆ 'ಫಿಕ್ಸ್ಡ್ ವಿನ್ನರ್' ಸಿದ್ಧಾರ್ಥ್ ಶುಕ್ಲಾರನ್ನ ವಾಹಿನಿಯವರು ಬೇಕು ಅಂತ ಗೆಲ್ಲಿಸಿದ್ದಾರೆ. 'ಪಬ್ಲಿಕ್ ವಿನ್ನರ್' ಆಸಿಮ್ ರಿಯಾಝ್ ಗೆ ವಾಹಿನಿ ಮನ್ನಣೆ ಕೊಟ್ಟಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಆಸಿಮ್ ರಿಯಾಝ್ ಏನಂತಾರೆ.?

ಆಸಿಮ್ ರಿಯಾಝ್ ಏನಂತಾರೆ.?

ಇನ್ನೂ 'ಫಿಕ್ಸ್ಡ್ ವಿನ್ನರ್' ಬಗ್ಗೆ ಪ್ರಶ್ನೆ ಕೇಳಿದಾಗ, ''ಆ ತರಹ ಏನೂ ಇಲ್ಲ. ಯಾವುದೂ ಫಿಕ್ಸ್ಡ್ ಇಲ್ಲ. ನಾನು ಇಲ್ಲಿಯವರೆಗೂ ತಲುಪಿದ್ದೀನಿ. ಸಿದ್ಧಾರ್ಥ್ ಗೆದ್ದಿದ್ದಾರೆ. ಇದೆಲ್ಲವೂ ಸಾಧ್ಯವಾಗಿದ್ದು ವೀಕ್ಷಕರ ಪ್ರೀತಿಯಿಂದ'' ಎಂದು ರನ್ನರ್ ಅಪ್ ಆಸಿಮ್ ರಿಯಾಝ್ ಹೇಳಿದ್ದಾರೆ.

ವಿನ್ನರ್ ಸಿದ್ಧಾರ್ಥ್ ಶುಕ್ಲಾ ಏನಂತಾರೆ.?

ವಿನ್ನರ್ ಸಿದ್ಧಾರ್ಥ್ ಶುಕ್ಲಾ ಏನಂತಾರೆ.?

''ಬಿಗ್ ಬಾಸ್' ಮನೆಯಲ್ಲಿ ಕಷ್ಟದ ಹಾದಿ ತುಳಿದು ವಿನ್ನರ್ ಟ್ರೋಫಿ ಪಡೆದುಕೊಂಡಿದ್ದೇನೆ. ಅಂಥದ್ರಲ್ಲಿ ಫಿಕ್ಸ್ಡ್ ವಿನ್ನರ್ ಅಂದ್ರೆ ಬೇಸರ ಆಗುತ್ತೆ. ಇಡೀ ಸೀಸನ್ ನ ಫಾಲೋ ಮಾಡಿದ್ದರೆ, ನನಗೆ 'ಬಿಗ್ ಬಾಸ್' ಪಯಣ ಸುಲಭ ಆಗಿರಲಿಲ್ಲ ಎಂಬುದು ನಿಮಗೆ ಗೊತ್ತಾಗುತ್ತೆ'' ಎಂದು 'ಫಿಕ್ಸ್ಡ್ ವಿನ್ನರ್' ಪಟ್ಟದ ಬಗ್ಗೆ 'ಬಿಗ್ ಬಾಸ್-13' ವಿಜೇತ ಸಿದ್ಧಾರ್ಥ್ ಶುಕ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Leaked Video From Bigg Boss 13 Control Room Suggests Asim And Sidharth Got Equal Votes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X