ಮಲೈಕಾ ಅರೋರಗೂ ತಮ್ಮ ಹೆಸರಿಗೂ ಸಂಬಂಧವಿದೆ ಎಂದ ಹಿಟ್ಲರ್ ಕಲ್ಯಾಣದ ಯಡವಟ್ಟು ಲೀಲಾ!

By ಅನಿತಾ ಬನಾರಿ

'ಹಿಟ್ಲರ್ ಕಲ್ಯಾಣ' ಧಾರಾವಾಹಿ ಖ್ಯಾತಿಯ ನಟಿ ತಮ್ಮ ಹೆಸರ ಹಿಂದಿನ ಇಂಟ್ರೆಸ್ಟಿಂಗ್ ಕಥೆ ಬಗ್ಗೆ ಮಾತನಾಡಿದ್ದಾರೆ. ಹೌದು, ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಮುದ್ದು ಮುಖದ ನಟಿ ಮಲೈಕಾ ವಸುಪಾಲ್ ಇದೀಗ ಹೊಸ ವಿಚಾರವೊಂದನ್ನು ಹೊರಹಾಕಿದ್ದಾರೆ.

ಬಾಲಿವುಡ್ ನಟಿ ಮಲೈಕಾ ಆರೋರಗೂ ಕನ್ನಡ ಕಿರುತೆರೆಯ ಹಿಟ್ಲರ್ ಕಲ್ಯಾಣ ಖ್ಯಾತಿಯ ಯಡವಟ್ಟು ಲೀಲಾ ಅಲಿಯಾಸ್ ಮಲೈಕಾ ವಸುಪಾಲ್‌ಗೂ ಸಂಬಂಧ ಉಂಟಂತೆ. ಯಡವಟ್ಟು ಲೀಲಾ ಎಂದೇ ಪ್ರಸಿದ್ದಿ ಪಡೆದಿರುವ ನಟಿ ಮಲೈಕಾ ವಸುಪಾಲ್ ತಮ್ಮ ಮುಗ್ಧ ಹಾಗೂ ಯಡವಟ್ಟು ಪಾತ್ರದಿಂದ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವುದಂತೂ ನಿಜ.

hitler-kalyana-malaika-vasupal-malaika-arora

ವಿಶೇಷ ಕಥಾ ಹಂದರ ಹೊಂದಿರುವ ಈ ಧಾರಾವಾಹಿಯಲ್ಲಿ ಸೊಸೆಯಂದಿರಿಗಿಂತ ಅತ್ತೆಯೇ ವಯಸ್ಸಿನಲ್ಲಿ ಚಿಕ್ಕವಳು. ಅದ್ಯಾವುದೋ ಘಳಿಗೆಯಲ್ಲಿ ಅನಿವಾರ್ಯವಾಗಿ ಎಜೆ ಅನ್ನು ವರಿಸುವ ಲೀಲಾ ತನ್ನ ಯಡವಟ್ಟುಗಳಿಂದಲೇ ಮನೆಯವರಿಗೆಲ್ಲರಿಗೂ ಹತ್ತಿರವಾಗಿದ್ದಾಳೆ. ಈ ಪಾತ್ರವನ್ನು ಚೆನ್ನಾಗಿ ನಟಿಸುತ್ತಿರುವ ನಟಿ ಮಲೈಕ ವಸುಪಾಲ್ ಅವರ ಹೆಸರ ಬಗ್ಗೆ ಕೇಳಿದಾಗ ಹೊಸ ವಿಚಾರ ಒಂದು ಬೆಳಕಿಗೆ ಬಂದಿದೆ.

hitler-kalyana-malaika-vasupal-malaika-arora

1998ರಲ್ಲಿ ಚಯ್ಯ ಚಯ್ಯ ಹಾಡು ಬಹಳ ಪಾಪ್ಯುಲರ್ ಆಗಿತ್ತು. ಅದರಲ್ಲಿ ಟ್ರೈನ್ ಮೇಲೆ ಸ್ಟೆಪ್ ಹಾಕಿದ ನಟಿ ಮಲೈಕಾ ಆರೋರ ಕೂಡ ಅಷ್ಟೇ ಫೇಮಸ್ ಆಗಿದ್ದರು. ಅದೇ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಹುಟ್ಟಿದ ಈ ನಟಿಗೆ 'ಮ' ಅಕ್ಷರದಿಂದಲೇ ಒಂದು ಹೆಸರಿಡಬೇಕಾದ ಸಂದರ್ಭ ಬಂದಾಗ ಆಕೆಯ ತಂದೆ, ತಾಯಿ ಇತ್ತ ಹೆಸರು ಮಲೈಕಾ ವಸುಪಾಲ್ ಎಂದು ಇಟ್ಟಿದ್ದರು. ಹಾಗಾಗಿ ತಮ್ಮ ಹೆಸರಿಗೂ ಅದೇ ಹೆಸರಿಗೆ ಸ್ಫೂರ್ತಿಯಾದ ಬಾಲಿವುಡ್ ನಟಿಗೂ ಸಂಬಂಧ ಇದೆ ಎಂದರು ಈ ಹಿಟ್ಲರ್ ಕಲ್ಯಾಣದ ಲೀಲಾ ಹೇಳಿದ್ದಾರೆ.

ತಮ್ಮ ಹೆಸರಿನ ಇತರ ಅರ್ಥಗಳನ್ನು ಈಕೆ ವಿವರಿಸಿದ್ದಾರೆ. ಮಲೈ ಎಂದರೆ ಕೆನೆ, ಅಷ್ಟೇ ಅಲ್ಲದೆ ಮಲೈಕಾ ಎನ್ನುವುದು ಒಂದು ದೇಶದ ಹೂವಿನ ಹೆಸರಂತೆ. ಹಾಗೂ ಬಾಲಿವುಡ್‌ನ ಖ್ಯಾತ ನಟಿಯ ಹೆಸರೂ ಹೌದು. ಕೇವಲ 24 ವರ್ಷದ ನಟಿ ಮಲೈಕಾ ವಸುಪಾಲ್ ತಮ್ಮ ನಟನೆಯೊಂದಿಗೆ ಹೆಸರ ಹಿಂದಿನ ಕಥೆಯ ಮೂಲಕವೂ ಇದೀಗ ಅವರ ಫ್ಯಾನ್ಸ್‌ಗೆ ಅಚ್ಚರಿಪಡಿಸಿದ್ದಾರೆ.

More from Filmibeat

English summary
Leela of Hitler Kalyana says that Malaika Arora has a connection with her name
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X