ಶನಿವಾರ ಸಂಜೆ ಮಿಸ್ ಮಾಡ್ಕೋಬೇಡಿ 'ಲೈಫ್ ಜೊತೆ ಒಂದು ಸೆಲ್ಫಿ'
ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾಗಿರುವಂತೆ ನೆನಪಾಗ್ತಿರುವ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾ ಕಿರುತೆರೆಗೆ ಬಂದೆ ಬಿಟ್ಟಿದೆ. ಇದೇ ವಾರ ನಿಮ್ಮನೆಯಲ್ಲಿ ಈ ಚಿತ್ರವನ್ನ ನೋಡಬಹುದು.
ಹೌದು, ಶನಿವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಹೊಚ್ಚ ಹೊಸ ಚಲನಚಿತ್ರ 'ಲೈಫ್ ಜೊತೆ ಒಂದು ಸೆಲ್ಫಿ' ಮೂಡಿ ಬರ್ತಿದೆ. ಪ್ರಜ್ವಲ್ ದೇವರಾಜ್, ಪ್ರೇಮ್, ಹರಿಪ್ರಿಯಾ, ಸುಧಾರಾಣಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ಆಗಸ್ಟ್ 24 ರಂದು ಬಿಡುಗಡೆಯಾಗಿತ್ತು.

ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಮತ್ತು ದಿನಕರ್ ಅವರ ಪತ್ನಿ ಮಾನಸ ಚಿತ್ರಕಥೆ ರಚಿಸಿದ್ದರು. ಸಮೃದ್ಧಿ ಮಂಜುನಾಥ್ ನಿರ್ಮಾಣ ಮಾಡಿದ್ದು, ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕಿತ್ತು.

ದಿನನಿತ್ಯ ನಡೆಯುವ ಸುಂದರ ಸನ್ನಿವೇಶವನ್ನು ನಾವು ಸೆಲ್ಫಿಯಲ್ಲಿ ಸೆರೆ ಹಿಡಿಯುತ್ತೇವೆ. ಅದೇ ರೀತಿ ಜೀವನದ ಕೆಲವು ಅಮೂಲ್ಯ ಘಟನೆಗಳ ಜೋಡಣೆಯೇ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾ. ಏನೇ ಕಷ್ಟ ಇದ್ದರೂ ಅದಕ್ಕೆ ಒಂದು ಪರಿಹಾರ ಇದ್ದೇ ಇರುತ್ತದೆ ಎನ್ನುವ ಈ ಸಿನಿಮಾ ಸರಳ ಹಾಗೂ ಸ್ವಚ್ಛ ಚಿತ್ರ.


Click it and Unblock the Notifications











