twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಕನ್ನಡ ರನ್ನರ್ ಅಪ್ ಗಳು ನೆನಪಿದ್ದಾರಾ? ಈಗೇನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ

    |

    ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಕನ್ನಡದಲ್ಲಿ ಈಗಾಗಲೇ 7 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸೀಸನ್8 ಸಹ ಮುಕ್ತಾಯವಾಗಬೇಕಿತ್ತು. ಆದರೀಗ ತಡವಾಗಿ ಪ್ರಾರಂಭವಾಗುತ್ತಿದೆ. ಸದ್ಯ ಸೀಸನ್-8 ಪ್ರಾರಂಭಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.

    ಈಗಾಗಲೇ ಸೀಸನ್ 8ರ ಪ್ರೋಮೋ ರಿಲೀಸ್ ಆಗಿದ್ದು, ಕಿಚ್ಚನ ಪ್ರೋಮೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಾರಿಯ ಬಿಗ್ ಬಾಸ್ ಪ್ರಾರಂಭವಾಗುವ ಮೊದಲು ಕನ್ನಡ ಬಿಗ್ ಬಾಸ್ ಇತಿಹಾಸವನ್ನು ಒಮ್ಮೆ ಮೆಲುಕು ಹಾಕೋಣ. ಸಾಮಾನ್ಯವಾಗಿ ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿದವರು ನೆನಪಿರುತ್ತಾರೆ. ಆದರೆ 7 ಸೀಸನ್ ಗಳಲ್ಲಿ ರನ್ನರ್ ಅಪ್ ಪಟ್ಟ ಪಡೆದುಕೊಂಡವರು ಯಾರ್ಯಾರು ಎನ್ನುವುದು ನೆನಪಿದೆಯಾ? ಅವರೆಲ್ಲ ಈಗೇನು ಮಾಡುತ್ತಿದ್ದಾರೆ? ರನ್ನರ್ ಅಪ್ ಗಳ ಬಗ್ಗೆ ಒಂದು ವಿವರ ಇಲ್ಲಿದೆ..

    ಬಿಗ್ ಬಾಸ್ ಸೀಸನ್ 1

    ಬಿಗ್ ಬಾಸ್ ಸೀಸನ್ 1

    ಬಿಗ್ ಬಾಸ್ ಮೊದಲ ಸೀಸನ್ ಕನ್ನಡ ಕಿರುತೆರೆ ಲೋಕಕ್ಕೆ ಹೊಸ ರಿಯಾಲಿಟಿ ಶೋ ಆಗಿತ್ತು. ಬಿಗ್ ಬಾಸ್ ಎಂದರೆ ಏನು, ಹೇಗಿರುತ್ತೆ, ವಿಶೇಷವಾಗಿ ಸೆಲೆಬ್ರಿಟಿಗಳ ದಿನಚರಿ ಹೇಗಿರುತ್ತೆ ಎನ್ನುವ ಕುತೂಹಲದಿಂದನೇ ಪ್ರೇಕ್ಷಕರು ಶೋ ವೀಕ್ಷಿಸಿದರು. ಅಂದಹಾಗೆ ಮೊದಲ ಶೋ ವಿನ್ನರ್ ಆಗಿ ನಟ ವಿಜಯ್ ರಾಘವೇಂದ್ರ ಹೊರ ಹೊಮ್ಮಿದ್ದರು. ರನ್ನರ್ ಅಪ್ ಪಟ್ಟ ಅರುಣ್ ಸಾಗರ್ ಪಾಲಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಮನರಂಜನೆ ನೀಡಿದ್ದು ಅರುಣ್ ಸಾಗರ್ ಅವರೇ ವಿನ್ ಆಗಬೇಕಿತ್ತು ಎನ್ನುವುದು ಅನೇಕರ ವಾದವಾಗಿತ್ತು. ಅರುಣ್ ಸಾಗರ್ ಸದ್ಯ ಸಿನಿಮಾಗಳ ಜೊತೆಗೆ ಟಿವಿಯಲ್ಲೂ ಬ್ಯುಸಿಯಾಗಿದ್ದಾರೆ.

    ಬಿಗ್ ಬಾಸ್ ಸೀಸನ್ 2

    ಬಿಗ್ ಬಾಸ್ ಸೀಸನ್ 2

    ಬಿಗ್ ಬಾಸ್ ಸೀಸನ್ 2ರಲ್ಲಿ ನಿರೂಪಕ ಅಕುಲ್ ಬಾಲಾಜಿ ಟ್ರೋಫಿಯನ್ನು ಎತ್ತಿಹಿಡಿದ್ದರು. ರನ್ನರ್ ಅಪ್ ಆಗಿ ನಟ ಮತ್ತು ನಿರೂಪಕ ಸೃಜನ್ ಲೋಕೇಶ್ ಹೊರಹೊಮ್ಮಿದ್ದಾರೆ. ಸೃಜನ್ ಲೋಕೇಶ್ ಸದ್ಯ ಮಜಾ ಟಾಕೀಸ್ ಕಾಮಿಡಿ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋ ಮೂಲಕ ಸೃಜನ್ ಸಖತ್ ಖ್ಯಾತಿಗಳಿಸಿದ್ದಾರೆ.

    ಬಿಗ್ ಬಾಸ್ ಸೀಸನ್ 3

    ಬಿಗ್ ಬಾಸ್ ಸೀಸನ್ 3

    ಬಿಗ್ ಬಾಸ್ 3ಯನ್ನು ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಗೆದ್ದುಕೊಂಡಿದ್ದಾರೆ. ರನ್ನರ್ ಅಪ್ ಆಗಿ ನಟ ಚಂದನ್ ಕುಮಾರ್ ಹೊರ ಹೊಮ್ಮಿದ್ದಾರೆ. ಚಂದನ್ ಕುಮಾರ್ ಸದ್ಯ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಬಳಿಕ ಚಂದನ್ ಅರ್ಜುನ್ ಸರ್ಜಾ ನಿರ್ದೇಶನ ಮತ್ತು ಐಶ್ವರ್ಯ ಸರ್ಜಾ ನಾಯಕಿಯಾಗಿ ಕಾಣಿಸಿಕೊಂಡಿರುವ ಪ್ರೇಮ ಬರಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ.

    ಬಿಗ್ ಬಾಸ್ ಸೀಸನ್ 4

    ಬಿಗ್ ಬಾಸ್ ಸೀಸನ್ 4

    ಬಿಗ್ ಬಾಸ್ ಸೀಸನ್-4 ಕನ್ನಡ ಪ್ರೇಕ್ಷಕರಿಗೆ ಹೆಚ್ಚು ಮನರಂಜನೆ ನೀಡಿದ ಶೋ ಎಂದರೆ ತಪ್ಪಾಗಲ್ಲ. ಇಂದಿಗೂ ಪ್ರೇಕ್ಷಕರು ಬಿಗ್ ಬಾಸ್ ಸೀಸನ್ 4ರನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಕಾರಣ ಪ್ರಥಮ್. ಬಿಗ್ ಮನೆಯಲ್ಲಿ ಹೆಚ್ಚು ಮನರಂಜನೆ ನೀಡಿದ ಪ್ರಥಮ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಇನ್ನು ರನ್ನರ್ ಅಪ್ ಪಟ್ಟ ಕಿರಿಕ್ ಕೀರ್ತಿ ಪಾಲಾಗಿತ್ತು. ಕಿರಿಕ್ ಕಾರ್ತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ವೀವ್ ಆಗಿದ್ದಾರೆ. ಕನ್ನಡ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.

    ಬಿಗ್ ಬಾಸ್ ಸೀಸನ್ 5

    ಬಿಗ್ ಬಾಸ್ ಸೀಸನ್ 5

    ಬಿಗ್ ಬಾಸ್ ಸೀಸನ್ 5 ಟ್ರೋಫಿ ಗಾಯಕ ಚಂದನ್ ಶೆಟ್ಟಿ ಪಾಲಾಗಿದೆ. ರನ್ನರ್ ಅಪ್ ಆಗಿ ಕಾಮನ್ ಮ್ಯಾನ್ ದಿವಾಕರ್ ಹೊರಹೊಮ್ಮಿದ್ದಾರೆ. ಮೊದಲ ಬಾರಿಗೆ ಕಾಮನ್ ಮ್ಯಾನ್ ಒಬ್ಬರು ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ವಿಶೇಷ. ಬಿಗ್ ಬಾಸ್ ಬಳಿಕ ದಿವಾಕರ್ ಎರಡು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಹೇಳುವಷ್ಟು ಯಶಸ್ಸು ಸಿಗಲಿಲ್ಲ. ಸೇಲ್ಸ್ ಮ್ಯಾನ್ ಆಗಿದ್ದ ದಿವಾಕರ್ ಮತ್ತದೆ ವೃತ್ತಿಗೆ ಮರಳಿದ್ದಾರೆ.

    ಬಿಗ್ ಬಾಸ್ ಸೀಸನ್ 6

    ಬಿಗ್ ಬಾಸ್ ಸೀಸನ್ 6

    ಬಿಗ್ ಬಾಸ್ ಸೀಸನ್ 6ರ ವಿನ್ನರ್ ಆಗಿ ಶಶಿ ಕುಮಾರ್ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಆಗಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ಶಶಿ ಸೆಲೆಬ್ರಿಟಿಯಾಗಿ ಹೊರಬಂದಿದ್ದಾರೆ. ರನ್ನರ್ ಅಪ್ ಆಗಿ ಗಾಯಕ ನವೀನ್ ಸಜ್ಜು ಹೊರಹೊಮ್ಮಿದ್ದರು. ನವೀನ್ ಸಜ್ಜು ಅನೇಕ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

    ಬಿಗ್ ಬಾಸ್ ಸೀಸನ್ 7

    ಬಿಗ್ ಬಾಸ್ ಸೀಸನ್ 7

    ಬಿಗ್ ಬಾಸ್ ಸೀಸನ್ 7 ವಿನ್ನರ್ ಪಟ್ಟ ಶೈನ್ ಶೆಟ್ಟಿ ಪಾಲಾಗಿದೆ. ಶೈನ್ ಸದ್ಯ ಸಿನಿಮಾಗಳ ಜೊತೆಗೆ ಫುಡ್ ಟ್ರಕ್ ನೋಡಿಕೊಳ್ಳುತ್ತಿದ್ದಾರೆ. ರನ್ನರ್ ಅಪ್ ಆಗಿ ಕಾಮಿಡಿ ನಟ ಕುರಿ ಪ್ರತಾಪ್ ಹೊರಹೊಮ್ಮಿದ್ದಾರೆ. ಬಿಗ್ ಮನೆಯಲ್ಲಿ ಸಿಕ್ಕಾಪಟ್ಟೆ ಮನರಂಜನೆ ನೀಡಿದ್ದ ಕುರಿ ಪ್ರತಾಪ್ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಕುರಿ ಪ್ರತಾಪ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಪೊಗರು ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಜೊತೆಗೆ ಸಖತ್ ಮತ್ತು ತ್ರಿಬಲ್ ರೈಡಿಂಗ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    English summary
    List of Bigg Boss Kannada All Seasons Runner-Up? Here is what they are doing.
    Thursday, February 11, 2021, 20:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X