BBK: ಕಳೆದ 10 ಸೀಸನ್‌ಗಳ ವಿನ್ನರ್‌ಗಳ್ಯಾರು? ಯಾರಾಗ್ತಾರೆ 11ನೇ ಸೀಸನ್‌ನ ವಿನ್ನರ್?
ಕನ್ನಡದ ಬಿಗ್ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಸದ್ಯಕ್ಕಂತು ಬಹಳ ಹೆಚ್ಚಿನ ಟಿಆರ್‌ಪಿ ಯನ್ನು ತಂದು ಕೊಡುತ್ತಿರುವ ಬಿಗ್ ಬಾಸ್ ಇದೀಗ ಕನ್ನಡದಲ್ಲಿ 11ನೇ ಸೀಸನ್ ನಡೆಯುತ್ತಿದೆ. ಕಳೆದ 11 ಸೀಸನ್‌ಗಳನ್ನು ನಟ ಕಿಚ್ಚ ಸುದೀಪ್ ಅವರು ನಡೆಸಿಕೊಂಡು ಬಂದಿದ್ದಾರೆ.
ಬಿಗ್ ಬಾಸ್ ಕನ್ನಡ 2013ರಲ್ಲಿ ಆರಂಭವಾಯಿತು. ಕಲಾವಿದರಾದ ಲೂಸ್ ಮಾದ ಯೋಗಿ, ವಿಜಯ್ ರಾಘವೇಂದ್ರ, ಅರುಣ್ ಸಾಗರ್, ನಿರೂಪಕರಾದ ಅಪರ್ಣ, ಅನುಶ್ರೀ, ನಟರಾದ ತಿಲಕ್ ಗೌಡ, ನಟಿಯರಾದ ನಿಕಿತಾ, ಶ್ವೇತ, ಚಂದ್ರಿಕಾ, ಹಾಗೂ ಬ್ರಹ್ಮಾಂಡ ಗುರೂಜಿ ಮುಂತಾದ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡ ಈ ಸೀಸನ್ ಬಹಳ ಯಶಸ್ವಿಯಾಗಿ ನಡೆಯಿತು. ಅರುಣ್ ಸಾಗರ್ ರನ್ನರ್ ಅಪ್ ಆಗಿ ನಟ ವಿಜಯ ರಾಘವೇಂದ್ರ ಅವರು ಈ ಸೀಸನ್‌ನ ವಿನ್ನರ್ ಆದರು.

ಬಿಗ್ ಬಾಸ್ ಸೀಸನ್ ಎರಡರಲ್ಲಿ ಕಲಾವಿದರಾದ ಸೃಜನ್ ಲೋಕೇಶ್, ಶ್ವೇತಾ ಚಂಗಪ್ಪ, ಅಕುಲ್ ಬಾಲಾಜಿ, ಅನುಪಮಾ ಭಟ್, ದೀಪಿಕಾ ಕಾಮಯ್ಯ ಗುರುಪ್ರಸಾದ್ ಮುಂತಾದವರು ಇದ್ದರು. ಸೃಜನ್ ಲೋಕೇಶ್ ರನ್ನರ್ ಅಪ್ ಆದರೆ ಅಕುಲ್ ಬಾಲಾಜಿ ವಿನ್ನರ್ ಆದರು.
ಬಿಗ್ ಬಾಸ್ ಸೀಸನ್ ಮೂರರಲ್ಲಿ ಭಾವನಾ ಬೆಳಗೆರೆ, ಶೃತಿ, ಚಂದನ್, ಪೂಜಾ, ಅಯ್ಯಪ್ಪ, ಪತ್ರಕರ್ತ ರೆಹಮಾನ್ ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ನಟಿ ಶ್ರುತಿ ಕೃಷ್ಣ ಈ ಸೀಸನ್ ವಿನ್ನರ್ ಆದರೆ, ಚಂದನ್ ಕುಮಾರ್ ರನ್ನರ್ ಆಗಿ ಹೊರಹೊಮ್ಮಿದರು.

ಬಿಗ್ ಬಾಸ್ ಸೀಸನ್ 4ರಲ್ಲಿ ಕಲಾವಿದರಾದ ಶಾಲಿನಿ, ಕಿರಿಕ್ ಕೀರ್ತಿ, ನಿರಂಜನ್ ದೇಶಪಾಂಡೆ, ಒಳ್ಳೆ ಹುಡುಗ ಪ್ರಥಮ್, ಮಾಳವಿಕಾ ಅವಿನಾಶ್, ಭುವನ್ ಸಂಜನಾ ಮುಂತಾದವರು ಭಾಗವಹಿಸಿದರು ಇದರಲ್ಲಿ ಕಿರಿಕ್ ಕೀರ್ತಿ ಅವರು ರನ್ನರ್ ಆದರೆ ಪ್ರಥಮ್ ವಿನ್ನರ್ ಆದರು.
ಬಿಗ್ ಬಾಸ್ ಸೀಸನ್ ಐದರಲ್ಲಿ ಕಲಾವಿದರಾದ ಸಿಹಿ ಕಹಿ ಚಂದ್ರು, ಚಂದನ್ ಶೆಟ್ಟಿ, ನಿವೇದಿತಾ ಗೌಡ, ಜಯಾ ಶ್ರೀನಿವಾಸನ್, ಜಗನ್ನಾಥ್ ಚಂದ್ರಶೇಖರ್ ಮುಂತಾದವರು ಸ್ಪರ್ಧಿಗಳಾಗಿದ್ದರು. ಈ ಸೀಸನ್ ನಲ್ಲಿ ದಿವಾಕರ್ ರನ್ನರ್ ಅಪ್ ಆದರೆ ಗಾಯಕ ಚಂದನ್ ಶೆಟ್ಟಿ ವಿನ್ನರ್ ಆದರು.
ಬಿಗ್ ಬಾಸ್ ಸೀಸನ್ 6 ರಲ್ಲಿ ಕಲಾವಿದರಾದ ಕವಿತಾ ಗೌಡ ಆಡಂ ಪಾಷಾ, ಶಶಿ ಕುಮಾರ್, ರಾಪಿಡ್ ರಶ್ಮಿ, ಅಕ್ಷತಾ ಪಾಂಡವಪುರ, ನವೀನ್ ಸಜ್ಜು, ರವಿ ಎ ವಿ ಮುಂತಾದವರು ಭಾಗವಹಿಸಿದ್ದರು. ಇದರಲ್ಲಿ ಗಾಯಕ ನವೀನ್ ಸಜ್ಜು ರನ್ನರಪ್ ಆಗಿ, ರೈತ ಶಶಿಕುಮಾರ್ ವಿನ್ನರ್ ಆದರು.
ಬಿಗ್ ಬಾಸ್ ಸೀಸನ್ ಏಳರಲ್ಲಿ ಕಲಾವಿದರಾದ ಶೈನ್ ಶೆಟ್ಟಿ ಕುರಿ ಪ್ರತಾಪ್, ವಾಸುಕಿ ವೈಭವ್, ಭೂಮಿಕ ಗೌಡ ದೀಪಿಕಾ ದಾಸ್ ಹರೀಶ್, ರವಿ ಬೆಳಗೆರೆ ಮುಂತಾದವರು ಭಾಗವಹಿಸಿದರು. ಕಾಮಿಡಿಯನ್ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಶೈನ್ ಶೆಟ್ಟಿ ವಿನ್ನರ್ ಆದರು.
ಬಿಗ್ ಬಾಸ್ ಸೀಸನ್ 8 ರಲ್ಲಿ ಕಲಾವಿದರಾದ ಮಂಜು ಅರವಿಂದ್ ಕೆ ಪಿ, ದಿವ್ಯ ಉರುಡುಗ, ಶುಭ ಪೂಂಜ, ವೈಷ್ಣವಿ ಗೌಡ, ರಘು ವೈನ್ ಸ್ಟೋರ್ಸ್, ಬ್ರೋ ಗೌಡ ಶಮಂತ್, ಚಕ್ರವರ್ತಿ ಚಂದ್ರ ಚೂಡು ಮುಂತಾದವರು ಭಾಗವಹಿಸಿದರು. ಬೈಕರ್ ಅರವಿಂದ್ ಕೆಪಿ ರನ್ನರ್ ಅಪ್ ಆಗಿ ನಟ ಮಂಜು ಪಾವಗಡ ವಿನ್ನರ್ ಆದರು.
ಬಿಗ್ ಬಾಸ್ ಸೀಸನ್ ಒಂಬತ್ತು ಸಾಮಾನ್ಯವಾಗಿ ನಡೆಯುವ ಬಿಗ್ ಬಾಸ್ ನಂತೆ ಕಾಣಲಿಲ್ಲ. ಮೊದಲಿಗೆ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾದ ಬಿಗ್ ಬಾಸ್, ನಂತರ ಮತ್ತೆ ಮೊದಲಿನಂತೆ ಸೀಸನ್ 9ನ್ನು ಆರಂಭಿಸಿತು.
ಈ ಓಟಿಟಿ ಪ್ಲಾಟ್ ಫಾರ್ಮಿನಲ್ಲಿ ಕಿರುತೆರೆ ನಟ ನಟಿಯರಾದ ಅನುಪಮಾ ಗೌಡ, ನೇಹಾ ಗೌಡ, ದೀಪಿಕಾ ದಾಸ್, ಭವ್ಯ ಗೌಡ ತ್ರಿ ವಿಕ್ರಂ ಮುಂತಾದವರು ಭಾಗವಹಿಸಿದರು.
ಬಿಗ್ ಬಾಸ್ ಸೀಸನ್ ೯ರಲ್ಲಿ ರೂಪೇಶ್ ಶೆಟ್ಟಿ ರಾಕೇಶ್ ಅಡಿಗ, ಸಾನಿಯಾ ಅಯ್ಯರ್, ಮಯೂರಿ ನವಾಜ್ ಸೇರಿದಂತೆ ಹಲವು ನಟ ನಟಿಯರು ಭಾಗವಹಿಸಿದ್ದರು. ನಟ ರಾಕೇಶ್ ಅಡಿಗ ರನ್ನರ್ ಅಪ್ ಆಗಿ ರೂಪೇಶ್ ಶೆಟ್ಟಿ ವಿನ್ನರ್ ಆದರು.
ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಕಲಾವಿದರಾದ ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್, ವಿನಯ್ ಗೌಡ,ಸಂಗೀತ ಶೃಂಗೇರಿ, ತನಿಶಾ ಕುಪ್ಪಂದ, ತುಕಾಲಿ ಸಂತೋಷ್ ಮುಂತಾದವರು ಭಾಗವಹಿಸಿದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿ ನಟ ಕಾರ್ತಿಕ್ ಮಹೇಶ್ ಸೀಸನ್‌ನ ವಿನ್ನರ್ ಆದರು.
ಸದ್ಯ ನಡೆಯುತ್ತಿರುವ ಬಿಗ್ ಬಾಸ್ ಸೀಸನ್ 11ರಲ್ಲಿ ಪ್ರಮುಖವಾಗಿ ತ್ರಿವಿಕ್ರಂ, ಭವ್ಯಾ ಗೌಡ, ಮೋಕ್ಷಿತಾ ಪೈ, ಮಂಜು, ಗೌತಮಿ ಜಾಧವ್, ಧನರಾಜ್ ಆಚಾರ್, ಹನುಮಂತು ಶಿಶಿರ್ ಶಾಸ್ತ್ರಿ, ಐಶ್ವರ್ಯ ಸಿಂದೋಗಿ, ಚೈತ್ರ ಕುಂದಾಪುರ, ರಜತ್ ಬುಜ್ಜಿ, ಗೋಲ್ಡ್ ಸುರೇಶ್ ಮುಂತಾದವರು ಭಾಗವಹಿಸುತ್ತಿದ್ದಾರೆ. ಈ ಸೀಸನ್ ನ ವಿನ್ನರ್ ಯಾರು ಎಂಬ ಕುತೂಹಲ ಎಲ್ಲರಿಗೂ ಇದೆ. ಪ್ರತಿಸ್ಪರ್ಧಿಗೂ ಅವರದೇ ಆದ ಬಹುದೊಡ್ಡ ಫ್ಯಾನ್ ಬೇಸ್ ಇದ್ದು ಕೊನೆಗೆ ಯಾರು ಹೆಚ್ಚಿನ ವೋಟ್ ಪಡೆದು ವಿನ್ ಆಗುತ್ತಾರೆ ಎಂಬುದನ್ನು ನೋಡಬೇಕಿದೆ.


Click it and Unblock the Notifications