»   » ರಿಯಾಲಿಟಿ ಶೋ ದಿಂದ ಈ ಸ್ಯಾಂಡಲ್ ವುಡ್ ಸ್ಟಾರ್ ಗಳು ದೂರ ಇರುವುದು ಏಕೆ?

ರಿಯಾಲಿಟಿ ಶೋ ದಿಂದ ಈ ಸ್ಯಾಂಡಲ್ ವುಡ್ ಸ್ಟಾರ್ ಗಳು ದೂರ ಇರುವುದು ಏಕೆ?

Posted By:
Subscribe to Filmibeat Kannada
ರಿಯಾಲಿಟಿ ಶೋ ದಿಂದ ಈ ಸ್ಯಾಂಡಲ್ ವುಡ್ ಸ್ಟಾರ್ ಗಳು ದೂರ ಇರುವುದು ಏಕೆ? | Filmibeat Kannada

ಕನ್ನಡದ ಕಿರುತೆರೆಯ ವಾಹಿನಿಗಳ ತುಂಬ ರಿಯಾಲಿಟಿ ಶೋಗಳ ಹಬ್ಬ ನಡೆಯುತ್ತಿದೆ. ಎಲ್ಲ ವಾಹಿನಿಗಳಲ್ಲಿಯೂ ಬೇರೆ ಬೇರೆ ರೀತಿಯ ರಿಯಾಲಿಟಿ ಶೋಗಳು ಬರುತ್ತಿದೆ. ಇಂತಹ ರಿಯಾಲಿಟಿ ಶೋಗಳಲ್ಲಿ ಪ್ರಮುಖ ಆಕರ್ಷಣೆ ಅಂದರೆ ಅದು ಸ್ಟಾರ್ ನಟರು. ಕನ್ನಡದ ಬಹುತೇಕ ನಟರು ಈಗ ರಿಯಾಲಿಟಿ ಶೋಗಳಲ್ಲಿ ಬಿಜಿ ಇದ್ದಾರೆ.

ಪುನೀತ್ ರಾಜ್ ಕುಮಾರ್ 'ಕನ್ನಡದ ಕೋಟ್ಯಾದಿಪತಿ' ನಂತರ ಈಗ 'ಫ್ಯಾಮಿಲಿ ಪವರ್' ಸಾರಥಿ ಆಗಿದ್ದರೆ. ಶಿವರಾಜ್ ಕುಮಾರ್ 'ಕಿಕ್' ಬಳಿಕ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಮಾಡುತ್ತಿದ್ದಾರೆ. ರಮೇಶ್ 'ವಿಕೇಂಡ್ ವಿತ್ ರಮೇಶ್' ಶೋ ನಡೆಸಿಕೊಡುತ್ತಿದ್ದರೆ, ಗಣೇಶ್ 'ಸೂಪರ್ ಮಿನಿಟ್' ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿದ್ದರು. ಉಳಿದಂತೆ ಕಿಚ್ಚ ಸುದೀಪ್‌ 'ಬಿಗ್ ಬಾಸ್' ಕಾರ್ಯಕ್ರಮದ ಹೈಲೈಟ್ ಆಗಿದ್ದಾರೆ. ಈ ರೀತಿ ಸ್ಟಾರ್ ನಟರು ಒಂದಲ್ಲ ಒಂದು ಕಾರ್ಯಕ್ರಮವನ್ನು ತಮ್ಮ ಸಿನಿಮಾಗಳ ಜೊತೆ ಜೊತೆಗೆ ಮಾಡುತ್ತಿದ್ದಾರೆ. ಆದರೆ ಕನ್ನಡದ ಕೆಲವು ನಟರು ಇದುವರೆಗೆ ಯಾವುದೇ ರಿಯಾಲಿಟಿ ಶೋದಲ್ಲಿ ಭಾಗಿಯಾಗಿಲ್ಲ. ಮುಂದೆ ಓದಿ..

ರಿಯಾಲಿಟಿ ಶೋ ದಲ್ಲಿ ದರ್ಶನ ನೀಡಿಲ್ಲ ದರ್ಶನ್

ಕನ್ನಡದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ನಟ ದರ್ಶನ್ ಇದುವರೆಗೆ ಯಾವುದೇ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಈ ಹಿಂದೆಯೇ ದರ್ಶನ್ ಅವರನ್ನು ಕಿರುತೆರೆಗೆ ಕರೆತರುವ ಅನೇಕ ಪ್ರಯತ್ನಗಳು ನಡೆದರು ದರ್ಶನ್ 'ನನಗೆ ರಿಯಾಲಿಟಿ ಶೋ ಗಳು ಸೂಟ್ ಆಗುವುದಿಲ್ಲ' ಎಂದು ಅದರಿಂದ ದೂರ ಇದ್ದಾರೆ.

ತೀರ್ಪುಗಾರ ಆಗಿಲ್ಲ ಉಪೇಂದ್ರ

ಉಪೇಂದ್ರ ಈಗಾಗಲೇ ಅನೇಕ ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಿದ್ದಾರೆ. ಆದರೆ ಇದುವರೆಗೆ ಅವರು ಯಾವುದೇ ಕಾರ್ಯಕ್ರಮದ ತೀರ್ಪುಗಾರ ಅಥವಾ ನಿರೂಪಕ ಆಗಿಲ್ಲ. ಇತ್ತೀಚಿಗೆ ಶಿವರಾಜ್ ಕುಮಾರ್ ಅವರ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಮೊದಲ ಅತಿಥಿಯಾಗಿ ಉಪೇಂದ್ರ ಆಗಮಿಸಿದ್ದರು.

'ಓಂ 2' ಸಿನಿಮಾಗೆ ದರ್ಶನ್, ಸುದೀಪ್, ಯಶ್ ರಲ್ಲಿ ಯಾರು ಹೀರೋ?

'ಕನ್ನಡದ ಕೋಟ್ಯಾದಿಪತಿ'ಯಲ್ಲಿ ಯಶ್ ?

ಯಾವಾಗಲೂ ತಮ್ಮ ಸಿನಿಮಾದ ಕೆಲಸದಲ್ಲಿ ಬಿಜಿ ಇರುವ ರಾಕಿಂಗ್ ಸ್ಟಾರ್ ಯಶ್ ಸಹ ಯಾವುದೇ ರಿಯಾಲಿಟಿ ಶೋ ದಲ್ಲಿ ಭಾಗಿಯಾಗಿಲ್ಲ. ಆದರೆ ಈ ಬಾರಿಯ 'ಕನ್ನಡದ ಕೋಟ್ಯಾದಿಪತಿ' ಕಾರ್ಯಕ್ರಮಕ್ಕೆ ಯಶ್ ನೇತೃತ್ವ ವಹಿಸುತ್ತಾರೆ ಎನ್ನುವ ಸುದ್ದಿ ಈ ಹಿಂದೆಯೇ ಇತ್ತು. ಹೀಗಿದ್ದರೂ ಇದರ ಬಗ್ಗೆ ಸದ್ಯಕ್ಕೆ ಸರಿಯಾದ ಕ್ಲಾರಿಟಿ ಇಲ್ಲ.

ದುನಿಯಾ ವಿಜಯ್

ಸ್ಯಾಂಡಲ್ ವುಡ್ ಯಶಸ್ವಿ ನಟ ದುನಿಯಾ ವಿಜಯ್ ಕೂಡ ತಮ್ಮ ಸಿನಿಮಾ ಪಯಣದಲ್ಲಿ ಕಿರುತೆರೆಯ ಕಾರ್ಯಕ್ರಮಗಳಿಂದ ದೂರ ಇದ್ದಾರೆ.

ಧಾರಾವಾಹಿ ನಿರ್ಮಾಣ

ರಿಯಾಲಿಟಿ ಶೋ ದಲ್ಲಿ ಭಾಗಿಯಾಗುವುದರ ಜೊತೆಗೆ ಕನ್ನಡದ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್ ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ.

English summary
kannada actor Upendra, Darshan, Duniya Vijay and Yash are not part of any tv reality shows.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada