twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲಿ ಅತಿ ಹೆಚ್ಚು ಸಂಚಿಕೆಗಳು ಪ್ರಸಾರವಾದ 5 ಧಾರಾವಾಹಿಗಳಿವು!

    |

    ಸಿನಿಮಾವನ್ನು ಹೊರತು ಪಡಿಸಿದರೆ ಇಂದು ಜನರಿಗೆ ನೂರು ಆಯ್ಕೆಗಳಿವೆ. ಸೋಷಿಯಲ್ ಮೀಡಿಯಾ, ವೆಬ್ ಸೀರಿಸ್, ಶಾರ್ಟ್ ಮೂವಿಗಳು ಹೀಗೆ ವೀಕ್ಷಕರು ಮನರಂಜನೆ ಹುಡುಕಿ ಎಲ್ಲಿ ಬೇಕಾದರೂ ಹೊಗಬಹುದಾಗಿದೆ. ಆದರೆ, ಏನೇ ಬಂದರೂ ಧಾರಾವಾಹಿಯ ಟ್ರೆಂಡ್ ಈಗಲೂ ಕಡಿಮೆ ಆಗಿಲ್ಲ.

    ಸಂಜೆ ಆದ್ರೆ ಸಾಕು ಟಿವಿ ಮುಂದೆ ಕುಳಿತುಕೊಳ್ಳುವ ವೀಕ್ಷಕರಿಗಾಗಿ ಹೊಸ ಹೊಸ ಧಾರಾವಾಹಿಗಳು ಬರುತ್ತಲೇ ಇವೆ. ಆದರೆ, ಧಾರಾವಾಹಿಗಳ ಸ್ಪರ್ಧೆ ಎಷ್ಟೇ ಇದ್ದರೂ ಕನ್ನಡದಲ್ಲಿ ಕೆಲ ಧಾರಾವಾಹಿಗಳು ಸಾಕಷ್ಟು ವರ್ಷಗಳಿಂದ ಪ್ರಸಾರ ಆಗುತ್ತಲೇ ಇವೆ. ಇಂತಹ ಧಾರಾವಾಹಿಗಳು ತಮ್ಮ ಸಂಚಿಕೆಗಳ ಮೂಲಕ ದಾಖಲೆ ನಿರ್ಮಾಣ ಮಾಡಿವೆ.

     ರೀಲ್ ಅಲ್ಲ ರಿಯಲ್: 'ಪುಟ್ಟಗೌರಿ' ರಂಜನಿ ಈಗ ಡೈರೆಕ್ಟರ್! ರೀಲ್ ಅಲ್ಲ ರಿಯಲ್: 'ಪುಟ್ಟಗೌರಿ' ರಂಜನಿ ಈಗ ಡೈರೆಕ್ಟರ್!

    ಹೀಗಿರುವಾಗ ಕನ್ನಡದ ಪ್ರಮುಖ ಧಾರಾವಾಹಿಗಳು ಎಷ್ಟು ಸಂಚಿಕೆ ಪೂರ್ಣ ಮಾಡಿವೆ ಎಂಬ ಕುತೂಹಲ ಅನೇಕರಿಗೆ ಇರಬಹುದು. ಅಂದಹಾಗೆ, ವಿಕಿಪೀಡಿಯ ಮಾಹಿತಿಯಂತೆ ಅತಿ ಹೆಚ್ಚು ಪ್ರಸಾರವಾದ ಕನ್ನಡದ ಟಾಪ್ 5 ಧಾರಾವಾಹಿಗಳ ಪಟ್ಟಿ ಮುಂದಿವೆ ಓದಿ...

    'ಪುಟ್ಟಗೌರಿ ಮದುವೆಯ' 1930ಕ್ಕೂ ಹೆಚ್ಚು ಸಂಚಿಕೆಗಳು

    'ಪುಟ್ಟಗೌರಿ ಮದುವೆಯ' 1930ಕ್ಕೂ ಹೆಚ್ಚು ಸಂಚಿಕೆಗಳು

    'ಪುಟ್ಟಗೌರಿ ಮದುವೆ' ಕನ್ನಡದ ಕಿರುತೆರೆಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಪ್ರಸಾರ ಆದ ಧಾರಾವಾಹಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಈ ಧಾರಾವಾಹಿ ಬರೋಬ್ಬರಿ 1930 ಕ್ಕೂ ಹೆಚ್ಚು ಸಂಚಿಕೆಗಳು ಪ್ರಸಾರ ಆಗಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ 12 ಮಾರ್ಚ್ 2012ರಲ್ಲಿ ಮೊದಲ ಸಂಚಿಕೆ ಶುರು ಮಾಡಿದ ಈ ಸೀರಿಯಲ್ ಇಂದಿಗೂ ಮುಂದುವರೆಯುತ್ತಿದೆ. ಹಿಂದಿಯ ಕಲರ್ಸ್ ಟಿವಿಯ 'ಬಾಲಿಕಾ ವದು' ಧಾರಾವಾಹಿಯ ರಿಮೇಕ್ ಇದಾಗಿದೆ.

    'ಲಕ್ಷ್ಮಿ ಬಾರಮ್ಮ' 1850 + ಎಪಿಸೋಡ್

    'ಲಕ್ಷ್ಮಿ ಬಾರಮ್ಮ' 1850 + ಎಪಿಸೋಡ್

    'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಒಂದು ಕಾಲದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಅತಿ ಹೆಚ್ಚು ಟಿ ಆರ್ ಪಿ ಹೊಂದಿದ್ದ ಧಾರಾವಾಹಿ ಆಗಿತ್ತು. ಈ ಧಾರಾವಾಹಿ ಸದ್ಯ 1850ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರ್ಣ ಮಾಡಿ ಎರಡನೇ ಸ್ಥಾನ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರ ಪ್ರತಿ ದಿನ 20 ರಿಂದ 22 ನಿಮಿಷ ಧಾರಾವಾಹಿ ಪ್ರಸಾರ ಆಗುತ್ತಿದೆ. 2013ರಲ್ಲಿ 'ಲಕ್ಷ್ಮಿ ಬಾರಮ್ಮ' ಸೀರಿಯಲ್ ಪ್ರಾರಂಭ ಆಗಿತ್ತು.

    RCB ಸೋಲುತ್ತಾ ಬರುತ್ತಿರುವುದಕ್ಕೆ 'ಅಗ್ನಿಸಾಕ್ಷಿ' ಅಂತಹ ಧಾರಾವಾಹಿಗಳು ಕಾರಣ.! RCB ಸೋಲುತ್ತಾ ಬರುತ್ತಿರುವುದಕ್ಕೆ 'ಅಗ್ನಿಸಾಕ್ಷಿ' ಅಂತಹ ಧಾರಾವಾಹಿಗಳು ಕಾರಣ.!

    'ಅಮೃತವರ್ಷಿಣಿ'ಯ 1724 ಸಂಚಿಕೆಗಳ ಓಟ

    'ಅಮೃತವರ್ಷಿಣಿ'ಯ 1724 ಸಂಚಿಕೆಗಳ ಓಟ

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆದ ಜನಪ್ರಿಯ ಧಾರಾವಾಹಿಗಳಲ್ಲಿ 'ಅಮೃತವರ್ಷಿಣಿ' ಕೂಡ ಒಂದಾಗಿತ್ತು. ಈ ಧಾರಾವಾಹಿ 1724 ಸಂಚಿಕೆಗಳು ಪ್ರಸಾರ ಆಗಿತ್ತು. ಸತತ 5 ವರ್ಷ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಿತ್ತು. ಕನ್ನಡದ ಧಾರಾವಾಹಿಗಳ ಪೈಕಿ ಅತಿ ಹೆಚ್ಚು ಸಂಚಿಕೆಗಳಲ್ಲಿ ಬಂದ ಮೂರನೇ ಅತಿ ದೊಡ್ಡ ಧಾರಾವಾಹಿ ಇದಾಗಿದೆ.

    ಪಕ್ಕದ ಮನೆ ಮಗು ಹುಟ್ಟಿ ಒಂದನೇ ಕ್ಲಾಸ್ ಸೇರಿದರೂ, 'ಅಗ್ನಿಸಾಕ್ಷಿ' ಕಥೆ ಮಾತ್ರ ಮುಂದಕ್ಕೆ ಹೋಗಿಲ್ಲ.! ಪಕ್ಕದ ಮನೆ ಮಗು ಹುಟ್ಟಿ ಒಂದನೇ ಕ್ಲಾಸ್ ಸೇರಿದರೂ, 'ಅಗ್ನಿಸಾಕ್ಷಿ' ಕಥೆ ಮಾತ್ರ ಮುಂದಕ್ಕೆ ಹೋಗಿಲ್ಲ.!

    1400 ಸಂಚಿಕೆಗಳಲ್ಲಿ ಮೂಡಿ ಬಂದ 'ಮಾಂಗಲ್ಯ'

    1400 ಸಂಚಿಕೆಗಳಲ್ಲಿ ಮೂಡಿ ಬಂದ 'ಮಾಂಗಲ್ಯ'

    ಉದಯ ಟಿವಿ ಧಾರಾವಾಹಿಗಳ ಪೈಕಿ 'ಮಾಂಗಲ್ಯ' ದೊಡ್ಡ ವೀಕ್ಷಕರ ಬಹಳ ಹೊಂದಿತ್ತು. ನಾಲ್ಕು ಅಕ್ಕ ತಂಗಿಯರ ಕಥೆ ಮನೆ ಮನೆ ತಲುಪಿತ್ತು. ಈ ಧಾರಾವಾಹಿ ಬರೋಬ್ಬರಿ 1400 ಸಂಚಿಕೆಗಳಲ್ಲಿ ಪ್ರಸಾರ ಆಗಿತ್ತು. ಇಂದಿಗೂ ಈ ಧಾರಾವಾಹಿಯ ಹಲವು ಪಾತ್ರಗಳು ವೀಕ್ಷಕರ ನೆನಪಿನಲ್ಲಿ ಇವೆ.

    ನೀವು 'ಪುಟ್ಟಗೌರಿ ಮದುವೆ' ಸೀರಿಯಲ್ ಭಕ್ತರಾ? ಇದನ್ನೊಮ್ಮೆ ತಪ್ಪದೆ ಓದಿ.. ನೀವು 'ಪುಟ್ಟಗೌರಿ ಮದುವೆ' ಸೀರಿಯಲ್ ಭಕ್ತರಾ? ಇದನ್ನೊಮ್ಮೆ ತಪ್ಪದೆ ಓದಿ..

    'ಅಗ್ನಿಸಾಕ್ಷಿ' 1320 ನಾನ್ ಸ್ಪಾಪ್ ಎಪಿಡೋಡ್

    'ಅಗ್ನಿಸಾಕ್ಷಿ' 1320 ನಾನ್ ಸ್ಪಾಪ್ ಎಪಿಡೋಡ್

    ಸದ್ಯದ ಕಿರುತೆರೆಯ ವೀಕ್ಷಕರ ಮೆಚ್ಚಿನ ಧಾರಾವಾಹಿ 'ಅಗ್ನಿಸಾಕ್ಷಿ'. ಈ ಮೇಲಿನ ಎಲ್ಲ ಧಾರಾವಾಹಿಗಳು ಸೃಷ್ಟಿಸಿದ್ದ ದಾಖಲೆಯನ್ನು ಈ ಧಾರಾವಾಹಿ ಕೂಡ ಹಿಂಬಾಲಿಸುತ್ತಿದೆ. ಕಳೆದ 5 ವರ್ಷಗಳಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಆಗುತ್ತಿದೆ. ಬರೋಬ್ಬರಿ 1320 ಸಂಚಿಕೆಗಳನ್ನು ಈ ಸೀರಿಯಲ್ ಪೂರ್ಣ ಮಾಡಿದ ಸನ್ನಿಧಿ ಕಥೆ ಹಾಗೆಯೇ ಮುನ್ನುಗುತ್ತಿದೆ.

    English summary
    List of longest running kannada television serials. puttagowri maduve serial is become number 1 kannada serial which completed 1934 till now.
    Friday, March 15, 2019, 15:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X