'ಆಪರೇಷನ್ ಅಲಮೇಲಮ್ಮ' ಸಿನಿಮಾದ ರಿಷಿ ನಟಿಸಿದ ಧಾರಾವಾಹಿಗಳು ಯಾವುವು ಗೊತ್ತೇ?

By ಅನಿತಾ ಬನಾರಿ

ಕನ್ನಡದ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರುವ ನಟ ರಿಷಿ. ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಈ ನಟ ಸಿನಿಮಾ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆಯ ಮೂಲಕ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ಜನಪ್ರಿಯರಾಗಿರುವ ಈ ಹ್ಯಾಂಡ್‌ಸಮ್ ನಟ ಕನ್ನಡಿಗರಿಗೆ ಚಿರಪರಿಚಿತ. ಸದ್ಯ ರಿಷಿ ನಟಿಸುತ್ತಿರುವ 'ಮಂಗಳಾಪುರಂ' ಸಿನಿಮಾ ಗಮನ ಸೆಳೆಯುತ್ತಿದೆ.

ರಿಷಿ ಬೆಂಗಳೂರಿನಲ್ಲಿ ಹುಟ್ಟಿದರೂ, ಬೆಳೆದಿದ್ದೆಲ್ಲಾ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಸಣ್ಣ ವಯಸ್ಸಿನಿಂದಲೂ ನಟನೆಯ ಗೀಳು ಹಚ್ಚಿಸಿಕೊಂಡಿದ್ದ ರಿಷಿ ಮುಂದೆ ಮೈಸೂರಿನ ಕೆಲವು ರಂಗತಂಡಗಳಲ್ಲಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಅವರು ತಮ್ಮದೇ ಕಾಲೇಜಿನ ನಾಟಕ ತಂಡದ ಜವಾಬ್ದಾರಿಯನ್ನು ಕೂಡಾ ತೆಗೆದುಕೊಂಡಿದ್ದರು.

List of Operation Alamelamma actor Rishi s Kannada serials

ಇಂಜಿನಿಯರಿಂಗ್ ಪದವೀಧರರಾಗಿರುವ ರಿಷಿ ಮುಂದೆ ರೇಡಿಯೋ ಜಾಕಿಯಾಗಿ ಕಾರ್ಯ ನಿರ್ವಹಿಸಿದ್ದರು. ರೇಡಿಯೋ ಜಾಕಿಯಾಗಿ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಶೋತೃಗಳ ಮನ ಸೆಳೆದರು. ಪದವಿಯ ಬಳಿಕ ಕಂಪನಿಯಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡರು ರಿಷಿ. ಆದರೆ ಎಳವೆಯಿಂದಲೂ ನಟನೆಯತ್ತ ಒಂದು ರೀತಿಯ ವಿಶೇಷವಾದ ಸೆಳೆತ ಇದ್ದ ಕಾರಣದಿಂದಲೋ ಏನೋ ಕೆಲಸಕ್ಕೆ ವಿದಾಯ ಹೇಳಿ ನಟನೆಯತ್ತ ಮುಖ ಮಾಡುವ ನಿರ್ಧಾರ ಮಾಡಿದರು.

ಅಂತೆಯೇ ಕಿರುತೆರೆಯತ್ತ ಮುಖ ಮಾಡಿದ ರಿಷಿ ಟಿ.ಎನ್. ಸೀತಾರಾಮ್ ಅವರ 'ಮಹಾಪರ್ವ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯಲ್ಲಿ ನಾಯಕ ತೇಜಸ್ಸ್ ಪಾತ್ರಕ್ಕೆ ಜೀವ ತುಂಬಿದ್ದರು. ಅಲ್ಲೂ ವೀಕ್ಷಕರ ಮನ ಸೆಳೆದ ರಿಷಿ ಸುವರ್ಣ ಪರಿವಾರ ನೀಡುವ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಪಡೆದುಕೊಂಡಿದ್ದರು.

ಸಿಂಪಲ್ ಸುನಿ ನಿರ್ದೇಶನದ 'ಆಪರೇಶನ್ ಅಲಮೇಲಮ್ಮ' ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ನಾಯಕನಾಗಿ ಕಾಣಿಸಿಕೊಂಡಿ ರಿಷಿ ಪರಮೇಶಿ ಪಾತ್ರಕ್ಕೆ ಜೀವ ತುಂಬಿದ್ದರು. ಸಂತಸದ ವಿಚಾರವೆಂದರೆ ಆ ಸಿನಿಮಾದ ನಟನೆಗೆ ಸೈಮಾ ಕೊಡುವ 'ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ' ಯನ್ನು ಇವರು ಪಡೆದುಕೊಂಡಿದ್ದರು.

List of Operation Alamelamma actor Rishi s Kannada serials

ಮುಂದೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ಸ್ ನಡಿಯಲ್ಲಿ, ಹೇಮಂತ್ ರಾವ್ ನಿರ್ದೇಶನದ 'ಕವಲು ದಾರಿ' ಚಿತ್ರದ ಮೂಲಕ ಮತ್ತೊಮ್ಮೆ ಸಿನಿ ಪ್ರಿಯರ ಮನ ಗೆದ್ದರು ರಿಷಿ. ಕವಲುದಾರಿಯ ನಂತರ 'ರಾಮನ ಅವತಾರ', 'ಸಾರ್ವಜನಿಕರಿಗೆ ಸುವರ್ಣವಕಾಶ', 'ನೋಡಿ ಸ್ವಾಮಿ ಇವನು ಇರೋದೇ ಹೀಗೆ', 'ರುದ್ರ ಗರುಡ ಪುರಾಣ' ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದರ ಜೊತೆಗೆ 'ಆಟಗಾರ', 'ಮುಗಿಲ್ ಪೇಟೆ', 'ಒನ್ ಕಟ್ ಟು ಕಟ್', 'ತುರ್ತು ನಿರ್ಗಮನ' ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಿಷಿ ತೆಲುಗು ಸಿನಿ ರಂಗದಲ್ಲಿ ಮೋಡಿ ಮಾಡಿದ್ದಾರೆ. ತೆಲುಗಿನ 'ಡಾಕು ಮಹಾರಾಜ್' ಸಿನಿಮಾದಲ್ಲಿ ಅಭಿನಯಿಸಿರುವ ರಿಷಿ 'ಶೈತಾನ್' ಎನ್ನುವ ತೆಲುಗು ವೆಬ್ ಸೀರಿಸ್‌ನಲ್ಲೂ ನಟನಾ ಕಂಪನ್ನು ಪಸರಿಸಿದ್ದಾರೆ.

More from Filmibeat

English summary
List of Operation Alamelamma actor Rishi's Kannada serials;
Read more about: actor radio jockey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X