ಕಿರುತೆರೆಯ ಈ ನಟರ ಪೈಕಿ ನಂ 1 ಪಟ್ಟ ಪಡೆದವರು ಯಾರು ?

By Naveen

Recommended Video

ಕಿರುತೆರಿಯಲ್ಲಿ ಸಾಧನೆ ಮಾಡಿರೋ ಹೀರೋಗಳು ಇವರೇ ಸ್ವಾಮಿ ! | Filmibeat Kannada

ನಟ ವಿಜಯ್ ಸೂರ್ಯ ಕಿರುತೆರೆಯ ಲವ್ಲಿ ಸ್ಟಾರ್. 'ಅಗ್ನಿಸಾಕ್ಷಿ' ಧಾರಾವಾಹಿಯ ಮೂಲಕ ದಿನ ಟಿವಿ ಪರದೆಯಿಂದ ವಿಜಯ್ ಅದೆಷ್ಟೋ ಹುಡುಗಿಯರ ಮನಸೊಳಗೆ ಹೋಗಿದ್ದಾರೆ. ಇದೀಗ ವಿಜಯ್ ನಂ 1 ಪಟ್ಟ ಪಡೆದಿದ್ದಾರೆ. ಅದು 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯಲ್ಲಿ.

ಈ ಬಾರಿಯ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿ ಇದೀಗ ಹೊರ ಬಂದಿದೆ. ಈ ಪಟ್ಟಿಯಲ್ಲಿ ನಟ ವಿಜಯ ಸೂರ್ಯ ಪ್ರಥಮ ಸ್ಥಾನ ಪಡೆದಿದ್ದಾರೆ. 15 ಕಿರುತೆರೆಯ ನಟರು ಈ ಪಟ್ಟಿಯಲ್ಲಿ ಇದ್ದಾರೆ. ಧಾರಾವಾಹಿ ಮತ್ತು ಕಿರುತೆರೆಯ ಕಾರ್ಯಕ್ರಮ ಸೇರಿದಂತೆ ಟಿವಿ ಜಗತ್ತಿನಲ್ಲಿ ಮಿಂಚುತ್ತಿರುವ ಈ ನಟರು 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್' ಆಗಿದ್ದಾರೆ.

ಅಂದಹಾಗೆ, ''ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಸಂಪೂರ್ಣ ಪಟ್ಟಿ ಇಲ್ಲಿದೆ. ಮುಂದೆ ಓದಿ...

1.ವಿಜಯ ಸೂರ್ಯ

1.ವಿಜಯ ಸೂರ್ಯ

ನಟ ವಿಜಯ ಸೂರ್ಯ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯ ಅಗ್ರ ಸ್ಥಾನದಲ್ಲಿ ಇದ್ದಾರೆ. ಕಲರ್ಸ್ ಕನ್ನಡ ವಾಹಿನಿಯ 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ವಿಜಯ ಸೂರ್ಯ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಷ್ಟಕಾಮ್ಯ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

2. ಸ್ಕಂದ ಅಶೋಕ್

2. ಸ್ಕಂದ ಅಶೋಕ್

'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯ ಎರಡನೇ ಸ್ಥಾನದಲ್ಲಿ ಸ್ಕಂದ ಅಶೋಕ್ ಇದ್ದಾರೆ. ಸ್ಕಂದ ಅಶೋಕ್ ಕೂಡ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಯ ನಟ ಆಗಿದ್ದಾರೆ. 'ರಾಧ ರಮಣ' ಸೀರಿಯಲ್ ನಲ್ಲಿ ಸ್ಕಂದ ಅಶೋಕ್ ರಮಣ್ ಪಾತ್ರವನ್ನು ಮಾಡುತ್ತಿದ್ದಾರೆ.

3. ಜಗನ್

3. ಜಗನ್

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಖತ್ ಕಿರಿಕ್ ಮಾಡಿಕೊಳ್ಳುತ್ತಿದ್ದ ನಟ ಜಗನ್ ಈಗ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್'ಪಟ್ಟಿಯ ಮೂರನೇ ಸ್ಥಾನದಲ್ಲಿ ಇದ್ದಾರೆ. ಜಗನ್ ಕಲರ್ಸ್ ಕನ್ನಡ ವಾಹಿನಿಯ 'ಗಾಂಧಾರಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು.

4. ಅಕುಲ್ ಬಾಲಾಜಿ

4. ಅಕುಲ್ ಬಾಲಾಜಿ

ಕನ್ನಡ ಕಿರುತೆರೆಯ ಸ್ಟಾರ್ ಅಂಕರ್ ಅಕುಲ್ ಬಾಲಾಜಿ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯ 'ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫು' ಮತ್ತು ಕಲರ್ಸ್ ವಾಹಿನಿಯ 'ಮಾಸ್ಟರ್ ಡ್ಯಾನರ್ಸ್ಸ್' ನಿರೂಪಣೆ ಮಾಡುತ್ತಿದ್ದಾರೆ. ಕನ್ನಡದ ಅನೇಕ ಸೂಪರ್ ಹಿಟ್ ಕಾರ್ಯಕ್ರಮಗಳ ನ್ನು ನಿರೂಪಣೆ ಮಾಡಿದ್ದ ಖ್ಯಾತಿ ಅಕುಲ್ ಅವರಿಗೆ ಇದೆ.

5. ಸೃಜನ್ ಲೋಕೇಶ್

5. ಸೃಜನ್ ಲೋಕೇಶ್

ಮಾತಿನ ಮಲ್ಲ, ತನ್ನ ಪಂಚಿಂಗ್ ಡೈಲಾಗ್ ಗಳ ಮೂಲಕ ಎಲ್ಲರನ್ನು ನಗಿಸುವ ಸೃಜನ್ ಲೋಕೇಶ್ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯ ಐದನೇ ಸ್ಥಾನದಲ್ಲಿ ಇದ್ದಾರೆ. ಒಂದು ಕಡೆ ಸಿನಿಮಾ, ಇನ್ನೊಂದು ಕಡೆ ಕಿರುತೆರೆ ಎರಡನ್ನು ಬ್ಯಾಲೆನ್ಸ್ ಮಾಡುತ್ತಿರುವ ಸೃಜ 'ಮಜಾ ಟಾಕೀಸ್' ಮೂಲಕ ಎಲ್ಲರಿಗೆ ಮನಸಾರೆ ಇಷ್ಟ ಆಗಿದ್ದಾರೆ.

6. ಚಂದ್ರು ಬಿ ಗೌಡ

6. ಚಂದ್ರು ಬಿ ಗೌಡ

ಚಂದ್ರು ಬಿ ಗೌಡ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯಲ್ಲಿ ಆರನೇ ರಾಂಕ್ ನಲ್ಲಿ ಇದ್ದಾರೆ. ಕಲರ್ಸ್ ಕನ್ನಡ ವಾಹಿನಿಯ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಟಿಸುತ್ತಿರುವ ಚಂದ್ರು ಇತ್ತೀಚಿಗಷ್ಟೆ 'ಅಟೆಂಪ್ಟ್ ಟು ಮರ್ಡರ್' ಸಿನಿಮಾದಲ್ಲಿ ನಾಯಕನಾಗಿದ್ದರು. ಈ ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು.

7.ದಿಲೀಪ್ ಆರ್ ಶೆಟ್ಟಿ

7.ದಿಲೀಪ್ ಆರ್ ಶೆಟ್ಟಿ

ಜೀ ಕನ್ನಡ ವಾಹಿನಿಯ 'ವಿದ್ಯಾ ವಿನಾಯಕ' ಧಾರಾವಾಹಿಯ ನಟ ದಿಲೀಪ್ ಆರ್ ಶೆಟ್ಟಿ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯ ಏಳನೇ ಸ್ಥಾನದಲ್ಲಿ ಇದ್ದಾರೆ. ಮಾಡೆಲ್ ಆಗಿದ್ದ ದಿಲೀಪ್ ನಟನೆ ಮಾಡಬೇಕು ಎನ್ನುವ ಆಸೆಯಿಂದ ದುಬೈನಿಂದ ವಾಪಸ್ ಬಂದಿದ್ದರು.

8.ರಕ್ಷಿತ್

8.ರಕ್ಷಿತ್

'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ನಟ ರಕ್ಷಿತ್ ಪಡೆದಿದ್ದಾರೆ. 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ರಕ್ಷಿತ್ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಎಂಬ ಅವರ ಪಾತ್ರ ಧಾರಾವಾಹಿ ನೋಡುಗರ ಎಚ್ಚುಗೆ ಗಳಿಸಿದೆ.

9. ಸಾಗರ್ ಬಿಳಿಗೌಡ

9. ಸಾಗರ್ ಬಿಳಿಗೌಡ

ಸಾಗರ್ ಬಿಳಿಗೌಡ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಮೊದಲು ಮಾಡೆಲ್ ಆಗಿದ್ದ ಸಾಗರ್ ನಂತರ ನಟ ಆದರು. 'ಕಿನ್ನರಿ' ಸೀರಿಯಲ್ ನಲ್ಲಿ ಸಾಗರ್ ಬಿಳಿಗೌಡ ಅಭಿನಯಿಸುತ್ತಿದ್ದಾರೆ.

10.ಅನಿರುದ್ಧ್ ಬಾಲಾಜಿ

10.ಅನಿರುದ್ಧ್ ಬಾಲಾಜಿ

ಮೊದಲು ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದ ಅನಿರುದ್ಧ್ ಬಾಲಾಜಿ 'ಎರಡು ಕನಸು' ಕನಸು ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯಲ್ಲಿ ಅನಿರುದ್ಧ್ ಬಾಲಾಜಿ ಹತ್ತನೇ ಸ್ಥಾನ ಪಡೆದಿದ್ದಾರೆ. ತನ್ನ ಕಣ್ಣು ಮತ್ತು ಮೈಕಟ್ಟಿನ ಮೂಲಕ ಅನಿರುದ್ಧ್ ಗಮನ ಸೆಳೆಯುತ್ತಾರೆ.

11. ಜಯ್ ಜುಜ್ಜಿ ಡಿಸೋಜಾ

11. ಜಯ್ ಜುಜ್ಜಿ ಡಿಸೋಜಾ

ನಟ ಜಯ್ ಜುಜ್ಜಿ ಡಿಸೋಜಾ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯ 11 ಸ್ಥಾನದಲ್ಲಿ ಇದ್ದಾರೆ. ಕನ್ನಡದಲ್ಲಿ 'ಮನೆದೇವ್ರು' ಧಾರಾವಾಹಿ ಮಾಡಿದ್ದ ಇವರು ತೆಲುಗಿನ ಸೀರಿಯಲ್ ನಲ್ಲಿ ಕೂಡ ನಟಿಸಿದ್ದಾರೆ.

12. ರಂಜಿತ್ ಕುಮಾರ್

12. ರಂಜಿತ್ ಕುಮಾರ್

ಸದ್ಯ ದೊಡ್ಡ ವೀಕ್ಷಕ ಬಳಗ ಹೊಂದಿರುವ 'ಶನಿ' ಧಾರಾವಾಹಿಯಲ್ಲಿ ನಟ ರಂಜಿತ್ ಕುಮಾರ್ ಸೂರ್ಯದೇವನ ಪಾತ್ರ ಮಾಡುತ್ತಿದ್ದಾರೆ. ಇದೀಗ ಬಂದಿರುವ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯಲ್ಲಿ ರಂಜಿತ್ ಕುಮಾರ್ ಹನ್ನೆರಡನೇ ಸ್ಥಾನ ಗಳಿಸಿದ್ದಾರೆ.

13. ಮಾಸ್ಟರ್ ಆನಂದ್

13. ಮಾಸ್ಟರ್ ಆನಂದ್

ಸದ್ಯ ನಿರೂಪಣೆ ಮೂಲಕ ಗಮನ ಸೆಳೆಯುತ್ತಿರುವ ನಟ ಮಾಸ್ಟರ್ ಆನಂದ್ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯ ಹದಿಮೂರನೆಯ ಸ್ಥಾನದಲ್ಲಿ ಇದ್ದಾರೆ. ಕಿರುತೆರೆಯಲ್ಲಿ ನಿರೂಪಣೆ ಜೊತೆಗೆ ನಿರ್ದೇಶನವನ್ನು ಕೂಡ ಆನಂದ್ ಮಾಡಿದ್ದಾರೆ.

14.ತ್ರಿವಿಕ್ರಮ್

14.ತ್ರಿವಿಕ್ರಮ್

'ಪದ್ಮವತಿ' ಧಾರಾವಾಹಿಯ ನಟ ತ್ರಿವಿಕ್ರಮ್ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯ ಹದಿನಾರನೆಯ ಸ್ಥಾನ ಪಡೆದಿದ್ದಾರೆ.

15. ಚರಿತ್ ಬಳಪ್ಪ

15. ಚರಿತ್ ಬಳಪ್ಪ

'ಮುದ್ದುಲಕ್ಷ್ಮಿ' ಧಾರಾವಾಹಿಯ ನಟ ಚರಿತ್ ಬಳಪ್ಪ 'ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್' ಪಟ್ಟಿಯ ಹದಿನೈದನೇ ಮತ್ತು ಕೊನೆಯ ಸ್ಥಾನ ಗಳಿಸಿದ್ದಾರೆ

More from Filmibeat

English summary
List of times most desirable men on television 2018. Agnisakshi serial actor vijay suriya is kannada tv's most desirable man.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X