'ಸರಿಗಮಪ 14' ಫೈನಲ್ ಗೆ ಆಯ್ಕೆ ಆದ ಟಾಪ್ 5 ಸ್ಪರ್ಧಿಗಳು ಇವರೇ!

By Naveen

Recommended Video

ಫೈನಲ್ ಹಂತಕ್ಕೆ ತಲುಪಿದ 5 ಪುಟಾಣಿಗಳು | FIlmibeat Kannada

ಕಳೆದ ಐದು ತಿಂಗಳಿನಿಂದ ಶನಿವಾರ ಮತ್ತು ಭಾನುವಾರ ಬಂತು ಅಂದರೆ ಅದೆಷ್ಟೋ ವೀಕ್ಷಕರು ಸರಿಗಮಪ ಕಾರ್ಯಕ್ರಮವನ್ನು ನೋಡುತ್ತಿದ್ದರು. ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿರುವ ಈ ಕಾರ್ಯಕ್ರಮ ಈಗ ಫೈನಲ್ ಹಂತ ತಲುಪಿದೆ. ಇದೀಗ ಐದು ಮಕ್ಕಳು ಫೈನಲ್ ಗೆ ಆಯ್ಕೆ ಆಗಿದ್ದಾರೆ.

'ಸರಿಗಮಪ ಸೀಸನ್ 14' ಜೀ ಕನ್ನಡ ವಾಹಿನಿಯ ಹೆಮ್ಮೆಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಸೆಮಿ ಫೈನಲ್ ನಿನ್ನೆ ಪ್ರಸಾರ ಆಗಿದೆ. 12 ಮಕ್ಕಳ ಪೈಕಿ ಯಾರು ಫೈನಲ್ ವೇದಿಕೆ ಮೇಲೆ ಹಾಡುತ್ತಾರೆ ಎಂಬ ನಿರೀಕ್ಷೆಗೆ ಉತ್ತರ ಸಿಕ್ಕಿದೆ. ಐದು ಮಕ್ಕಳ ಜೊತೆಗೆ ಪುಟಾಣಿ ನೇಹಾಗಳನ್ನು ಮೈಲ್ಡ್ ಎಂಟ್ರಿ ಎಂದು ಪರಿಗಣಿಸಿ ಫೈನಲ್ ಗೆ ಆಯ್ಕೆ ಮಾಡಲಾಗಿದೆ.

ಅಂದಹಾಗೆ, 'ಸರಿಗಮಪ ಸೀಸನ್ 14' ಕಾರ್ಯಕ್ರಮದಲ್ಲಿ ಫೈನಲ್ ಹಂತ ತಲುಪಿದ ಸ್ಪರ್ಧಿಗಳ ಪಟ್ಟಿ ಮುಂದಿದೆ ಓದಿ...

ತೇಜಸ್ ಶಾಸ್ತ್ರಿ

ತೇಜಸ್ ಶಾಸ್ತ್ರಿ

ಈ ಬಾರಿಯ ಸರಿಗಮಪ ಕಾರ್ಯಕ್ರಮದಲ್ಲಿ ಫೈನಲ್ ಗೆ ಆಯ್ಕೆ ಆದ ಮೊದಲ ಸ್ಪರ್ಧಿ ಚನ್ನಗಿರಿಯ ಹುಡುಗ ತೇಜಸ್ ಶಾಸ್ತ್ರಿ. ವಿಶೇಷ ಅಂದರೆ, ತೇಜಸ್ ಶಾಸ್ತಿ ಕ್ವಾಟರ್ ಫೈನಲ್ ನಲ್ಲಿಯೇ ನೇರವಾಗಿ ಫೈನಲ್ ಗೆ ಆಯ್ಕೆ ಆಗಿದ್ದ. ಸೆಮಿ ಫೈನಲ್ ಇಲ್ಲದೆ ತೀರ್ಪುಗಾರರು ತೇಜಸ್ ನನ್ನು ಫೈನಲ್ ಗೆ ಆಯ್ಕೆ ಮಾಡಿದ್ದರು. ಇನ್ನು ಇಡೀ ಸರಿಗಮಪ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ರೀತಿ ಒಬ್ಬ ಸ್ಪರ್ಧಿಯನ್ನು ನೇರವಾಗಿ ಕ್ವಾರ್ಟರ್ ಫೈನಲ್ ಹಂತದಿಂದ ಫೈನಲ್ ಗೆ ಕಳುಹಿಸಿತ್ತು.

ವಿಶ್ವ ಪ್ರಸಾದ್

ವಿಶ್ವ ಪ್ರಸಾದ್

ಇಟಗಿಯ ವಿಶ್ವ ಪ್ರಸಾದ್ ಫೈನಲ್ ಗೆ ಆಯ್ಕೆ ಆದ ಎರಡನೇ ಸ್ಪರ್ಧಿ ಆಗಿದ್ದಾರೆ. ಪ್ರತಿ ಹಂತದಲ್ಲಿಯೂ ತನ್ನ ಗಾಯನದ ಮೂಲಕ ಗಮನ ಸೆಳೆಯುತ್ತಿದ್ದ ವಿಶ್ವ ಪ್ರಸಾದ್ ಸೆಮಿ ಫೈನಲ್ ನಲ್ಲಿ ಅದ್ಬುತವಾಗಿ ಹಾಡಿದ್ದಾರೆ. 'ಗಾನಯೋಗಿ ಪಂಚಾಕ್ಷರಿ ಗವಾಯಿ' ಹಾಡಿಗೆ ನಾದಬ್ರಹ್ಮ ಹಂಸಲೇಖ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದು, ಇದೇ ಹಾಡನ್ನು ವಿಶ್ವ ಪ್ರಸಾದ್ ಸೆಮಿ ಫೈನಲ್ ನಲ್ಲಿ ಹಾಡಿದ್ದರು.

ಕೀರ್ತನ

ಕೀರ್ತನ

ಕಾರ್ಯಕ್ರಮದಲ್ಲಿ ತನ್ನ ಮುದ್ದು ಧ್ವನಿಯ ಮೂಲಕ ಎಲ್ಲರ ಫೇವರೇಟ್ ಆಗಿದ್ದ ಬೆಂಗಳೂರಿನ ಕೀರ್ತನ ಫೈನಲ್ ಗೆ ಹಾರಿದ ಮೂರನೇ ಸ್ಪರ್ಧಿ ಆಗಿದ್ದಾರೆ. ಎಕ್ಸ್ ಪ್ರೆಶನ್ ಕ್ವೀನ್ ಎಂದು ಬಿರುದು ಪಡೆದಿರುವ ಕೀರ್ತನ ಪ್ರತಿ ಸಂಚಿಕೆಯಲ್ಲಿಯೂ ಅದ್ಬುತವಾಗಿ ಹಾಡುತ್ತಿದ್ದರು. ಕೀರ್ತನ ಹಾಡಿಗೆ ಮನಸೋತು ಹಂಸಲೇಖ ಫೈನಲ್ ಗೆ ಸೆಲೆಕ್ಟ್ ಮಾಡಿದ್ದಾರೆ. ಸೆಮಿ ಫೈನಲ್ ನಲ್ಲಿ ಕೀರ್ತನ 'ಬಾ ಬೇಗ ಮನಮೋಹನ..' ಹಾಡನ್ನು ಹಾಡಿದ್ದರು.

ಅಭಿಜಾತ್ ಭಟ್

ಅಭಿಜಾತ್ ಭಟ್

ಉಡುಪಿಯ ಅಭಿಜಾತ್ ಭಟ್ ಸೆಮಿ ಫೈನಲ್ ನಲ್ಲಿ ಆಯ್ಕೆ ಆದ ನಾಲ್ಕನೇ ಸ್ಪರ್ಧಿ ಆಗಿದ್ದಾರೆ. ತನ್ನ ಪ್ರಬುದ್ಧ ಗಾಯನದ ಮೂಲಕ ಗಮನ ಸೆಳೆಯುತ್ತಿದ್ದ ಅಭಿಜಾತ್ ಕೊನೆಗೂ ಫೈನಲ್ ಮೆಟ್ಟಿಲು ಏರಿದ್ದಾರೆ. ಸೆಮಿ ಫೈನಲ್ ನಲ್ಲಿ ಅಭಿಜಾತ್ 'ಹಾಡುವೆನು ನಿಮಗಾಗಿ..' ಹಾಡನ್ನು ಹಾಡಿದ್ದರು.

ಜ್ಞಾನೇಶ್

ಜ್ಞಾನೇಶ್

ಜ್ಞಾನೇಶ್ ಫೈನಲ್ ಗೆ ಕಾಲಿಟ್ಟ ಐದನೇ ಸ್ಪರ್ಧಿ ಆಗಿದ್ದಾರೆ. ಮೊದಲ ಸಂಚಿಕೆಯಿಂದ ಹಿಡಿದು ಇಲ್ಲಿಯವರೆಗೆ ತನ್ನ ಶ್ರೇಷ್ಟ ಧ್ವನಿಯಿಂದ ಜ್ಞಾನೇಶ್ ವೀಕ್ಷಕರ ಹೃದಯ ಗೆದ್ದಿದ್ದ. ಅಂದಹಾಗೆ, ಜ್ಞಾನೇಶ್ ಮೂಲತಃ ಬಳ್ಳಾರಿಯವರು. 10 ವರ್ಷದ ಈ ಹುಡುಗ 'ಗಾನಯೋಗಿ ಪಂಚಾಕ್ಷರಗವಾಯಿ'ಗಳ ಮಠದಲ್ಲಿ ಸಂಗೀತ ಕಲಿಯುತ್ತಿದ್ದರು.

ನೇಹಾ ಮೈಲ್ಡ್ ಎಂಟ್ರಿ

ನೇಹಾ ಮೈಲ್ಡ್ ಎಂಟ್ರಿ

ಈ ಐದು ಸ್ಪರ್ಧಿಗಳ ಜೊತೆಗೆ ಮೈಲ್ಡ್ ಎಂಟ್ರಿ ಎಂದು ನೇಹಾಗಳನ್ನು ಫೈನಲ್ ಗೆ ಆಯ್ಕೆ ಮಾಡಲಾಗಿದೆ. ನೇಹಾ ಕಾರ್ಯಕ್ರಮದ ಅತಿ ಸಣ್ಣ ವಯಸ್ಸಿನ ಸ್ಪರ್ಧಿ ಆಗಿದ್ದು, ಫೈನಲ್ ನಲ್ಲಿ ಹಾಡುವ ಅವಕಾಶ ನೀಡಲಾಗಿದೆ.

ಫೈನಲ್ ಲೈವ್ ಆಗಿ ಪ್ರಸಾರ

ಫೈನಲ್ ಲೈವ್ ಆಗಿ ಪ್ರಸಾರ

ಇನ್ನು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಸರಿಗಮಪ ಸೀಸನ್ 14 ಕಾರ್ಯಕ್ರಮದ ಫೈನಲ್ ಸಂಚಿಕೆ ಇದೇ ಶನಿವಾರ ಪ್ರಸಾರ ಆಗಲಿದೆ. ವಿಶೇಷ ಅಂದರೆ ಕಳೆದ ಬಾರಿಯಂತೆ ಈ ಬಾರಿಯೂ ಲೈವ್ ಆಗಿ ಕಾರ್ಯಕ್ರಮ ಪ್ರಸಾರ ಆಗುತ್ತಿದೆ.

ನೀವು ಓಟ್ ಮಾಡಬಹುದು

ನೀವು ಓಟ್ ಮಾಡಬಹುದು

ಪ್ರತಿ ಬಾರಿಯಂತೆ ಈ ಬಾರಿಯೂ ಕಾರ್ಯಕ್ರಮ ನೋಡುವ ವೀಕ್ಷಕರು ತಮ್ಮ ಮೆಚ್ಚಿನ ಸ್ಪರ್ಧಿಗಳಿಗಾಗಿ ಓಟ್ ಮಾಡಬಹುದಾಗಿದೆ. ಮೇ 26ರವರೆಗೆ ಓಟಿಂಗ್ ಲೈನ್ ತೆರೆದಿರುತ್ತದೆ.

More from Filmibeat

English summary
List of top 5 finalist of Zee Kannada channel's popular reality show 'Sarigamapa Season 14'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X