ಹುಡುಗರು ಮಾತ್ರ ಅಲ್ಲ ಅವಳಿಗೆ ಹುಡುಗಿಯರೂ ಸಖತ್ ಇಷ್ಟ ; ಡಿವೋರ್ಸ್ ಆಘಾತದಲ್ಲಿರುವ ನಟಿಯ ವೈಯಕ್ತಿಕ ವಿಷಯ ಕೆದಕಿದ ಚೆಲುವೆ

''ಅಪೋಸಿಟ್ ಪೋಲ್ಸ್ ಅಟ್ಯ್ರಾಕ್ಟ್ ಈಚ್ ಅದರ್''.. ಹುಡುಗರಿಗೆ ಹುಡುಗಿಯರು ಆಕರ್ಷಿತರಾಗುವುದು, ಪುರುಷರತ್ತ ಮಹಿಳೆಯರು ಆಕರ್ಷಣೆಗೆ ಒಳಗಾಗುವುದು ಪ್ರಕೃತಿಯ ಸಹಜ ಪ್ರಕ್ರಿಯೆ. ಆದರೆ, ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಲವ್ ಅಂದರೆ ಹೀಗೆ ಇರಬೇಕು, ಲೈಫ್ ಅಂದರೆ ಹುಡುಗ-ಹುಡುಗಿ ಮದುವೆಯಾಗಿ ಬದುಕಿನಲ್ಲಿ ಸೆಟ್ಲ್ ಆಗಬೇಕು ಅನ್ನೋ ಹಿರಿಯರ ಮಾತುಗಳೆಲ್ಲಾ ಹಳೆಯದಾಗಿವೆ. ಪ್ರೀತಿ ಪ್ರೇಮದ ಅರ್ಥ ಬದಲಾಗಿದೆ.

ಇಂದು ಯಾರ ಮೇಲೆ ಯಾರಿಗೆ ಬೇಕಾದರೂ ಆಕರ್ಷಣೆಯಾಗಬಹುದು. ಯಾರ ಮೇಲೆ ಯಾರಿಗೆ ಬೇಕಾದರೂ ಪ್ರೀತಿಯಾಗಬಹುದು. ಇದಕ್ಕೆ ಕೈಗನ್ನಡಿ ಎಂಬಂತೆ ಭಾರತದಲ್ಲಿ ಈಗೀಗ ಸಲಿಂಗ ಪ್ರೇಮ.. ಸಲಿಂಗ ವಿವಾಹಗಳು ಹೆಚ್ಚಾಗುತ್ತಿವೆ. ಗಂಡಿನ ಜೊತೆ ಗಂಡಿನ.. ಹೆಣ್ಣಿನ ಜೊತೆ ಹೆಣ್ಣಿನ ಮದುವೆಗಳು ನಡೆಯುತ್ತಿವೆ.

Lock Upp 2 Firestorm Shreya Kalra s Shocking Claim Against Akanksha Chamola Leaves Fans Stunned

ಇನ್ನು ಕೆಲವರಿಗೆ ಹುಡುಗ ಹುಡುಗಿ ಯಾರೇ ಇರಲಿ, ಇಬ್ಬರ ಮೇಲೂ ಲವ್ ಆಗುತ್ತೆ. ಕ್ರಶ್ ಆಗುತ್ತೆ. ಇವರಿಗೆ ಗಂಡು ಮತ್ತು ಹೆಣ್ಣು ಇಬ್ಬರ ಮೇಲೂ ಲೈಂ*ಗಿಕ ಆಸಕ್ತಿ ಇರುತ್ತೆ. ಇವರನ್ನು ನಮ್ಮ ಸಮಾಜ ಬೈಸೆಕ್ಸುವಲ್ ಎಂದು ಕರೆಯುತ್ತೆ. ಈ ಮಾಡರ್ನ್ ಲೈಫ್‌ಸ್ಟೈಲ್ ನಮಗೆ ಹೊಸದೇನಲ್ಲ, ಆದ್ರೆ ಇದೇ ವಿಚಾರ ಟಿವಿ ರಿಯಾಲಿಟಿ ಶೋ ಒಳಗಡೆ ಬಾಂಬ್ ತರಹ ಬಿದ್ದರೆ ಹೇಗಿರುತ್ತೆ ಯೋಚನೆ ಮಾಡಿ..?

ಗಂಡು-ಹೆಣ್ಣು ; ಆಕಾಂಕ್ಷಾಗೆ ಇಬ್ಬರು ಇಷ್ಟ ಅಂತೆ

ಹೌದು, ಹಿಂದಿಯಲ್ಲಿ ರಿಯಾಲಿಟಿ ಶೋ ಒಂದು ಪ್ರಸಾರವಾಗುತ್ತಿದೆ. ಅದರ ಹೆಸರು ''ಲಾಕಪ್ 2''. ರಿತೇಶ್ ದೇಶಮುಖ್ ಮತ್ತು ಫರ್ಹಾ ಖಾನ್ ಈ ಕಾರ್ಯಕ್ರಮದ ಸಾರಥ್ಯ ವಹಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಆಕಾಂಕ್ಷಾ ಚಮೋಲಾ ಭಾಗವಹಿಸಿದ್ದಾರೆ. ಸದ್ಯ ಈ ಕಾರ್ಯಕ್ರಮ ಮೊದಲ ವಾರವನ್ನು ಪೂರೈಸಲಿದ್ದು ಮೊನ್ನೆಯ ದಿವಸ ಮತ್ತೊಬ್ಬ ಸ್ಫರ್ಧಿ ಶ್ರೇಯಾ ಕಲ್ರಾ ಅವರನ್ನು ಆಕಾಮಕ್ಷಾ ನಾಮಿನೇಟ್ ಮಾಡಿದ್ದರು.


ನಾಮಿನೇಟ್ ಮಾಡಿದ್ದಕ್ಕೆ ಕೆರಳಿ ಕೆಂಡವಾದ ಶ್ರೇಯಾ

ಆಕಾಂಕ್ಷಾ ನಾಮಿನೇಟ್ ಮಾಡಿದ್ದೇ ತಡ, ಶ್ರೇಯಾ ಉರಿದು ಬಿದ್ದರು. ಆಕಾಂಕ್ಷಾ ವಿರುದ್ದ ಕತ್ತಿ ಮಸೆಯುತ್ತಿದ್ದರು. ಹೀಗಾಗಿ ಮತ್ತೊಬ್ಬ ಸ್ಫರ್ಧಿ ಸೂಫಿ ಮೋತಿವಾಲಾ ಹತ್ತಿರ ಹೋದ ಶ್ರೇಯಾ ನಾನು ನಿನಗೊಂದು ರಹಸ್ಯ ಹೇಳಿದರೆ ಜನರ ಕಣ್ಣಲ್ಲಿ ನಾನು ವಿಲನ್ ಆಗ್ತೀನಾ..? ಎಂದು ಕೇಳಿದ್ದಾರೆ. ಶ್ರೇಯಾ ಆಡಿದ ಈ ಮಾತಿಗೆ ಸೂಫಿ ಅಯ್ಯೋ, ಹಾಗೇನು ಇಲ್ಲಪ್ಪಾ, ಇದೊಂದು ಗೇಮ್ ಪ್ಲಾನ್ ಮಾತ್ರ ಎಂದು ಹೇಳಿದ್ದಾರೆ.

ಸೂಫಿ ಈ ಮಾತು ಆಡಿದ್ದೇ ತಡ, ಆಕಾಂಕ್ಷಾ ನನಗೆ ಹುಡುಗರು ಮಾತ್ರ ಅಲ್ಲ ಹುಡುಗಿಯರು ಕೂಡ ಇಷ್ಟ (ಬೈಸೆಕ್ಷುವಲ್) ಎಂದು ನನ್ನ ಹತ್ತಿರ ವೈಯಕ್ತಿಕವಾಗಿ ಬಂದು ಹೇಳಿದ್ಧಾಳೆ ಎಂದು ಶ್ರೇಯಾ ಹೇಳಿದ್ಧಾರೆ. ಶ್ರೇಯಾ ಆಡಿದ ಮಾತು ಕೇಳಿ ಬೆಚ್ಚಿ ಬಿದ್ದ ಸೂಫಿ ಅಯ್ಯೋ, ನನಗೆ ನಿಮ್ಮ ಸಹವಾಸ ಬೇಡಪ್ಪಾ, ಈ ವಿಚಾರ ಇಲ್ಲೇ ನಮ್ಮ ಇಬ್ಬರ ಮಧ್ಯೆ ಇರಲಿ ಎಂದು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಜಾರಿಕೊಳ್ಳಲು ಯತ್ನಿಸಿದ್ದಾರೆ.

ಆದರೆ ಶ್ರೇಯಾ ಬಿಡಬೇಕಲ್ಲ..? ನನಗೆ ಗೊತ್ತಿದ್ದ ಗುಟ್ಟು ನಾನು ಈಗ ನ್ಯಾಷನಲ್ ಟಿವಿಯಲ್ಲಿ ಕುಂತು ರಟ್ಟು ಮಾಡಿದ್ದೇನೆ, ಹೀಗಾಗಿ ಆಕಾಂಕ್ಷಾ ಹತ್ತಿರ ಇದ್ದ ಮೂರು ಲೈಫ್ ಲೈನ್‌ನಲ್ಲಿ ಎರಡು ಖಾಲಿಯಾಗಿದೆ, ಇನ್ನು ಅವಳ ಹತ್ತಿರ ಇರುವುದು ಒಂದೇ ಅವಕಾಶ ಎಂದು ಲಾಕಪ್ ಸ್ಫರ್ಧೆ ಗೆದ್ದಷ್ಟೇ ಸಂಭ್ರಮ ಪಟ್ಟಿದ್ದಾರೆ.

ಆಕಾಂಕ್ಷಾ ಮೆಲೋಡ್ರಾಮಾ

ಅಂದ್ಹಾಗೇ ಕಳೆದ ಕೆಲ ದಿನಗಳಿಂದ ಆಕಾಂಕ್ಷಾ ಚಮೋಲಾ ದೇಶವ್ಯಾಪಿ ಚರ್ಚೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಇದಕ್ಕೆ ಕಾರಣ ವಿಚ್ಚೇದನದ ಸುದ್ದಿ. ಇದೇ ಕಾರ್ಯಕ್ರಮದಲ್ಲಿ ಮೊದಲ ದಿನ ನಾನು ನನ್ನ ಗಂಡ ಗೌರವ್ ಖನ್ನಾ ಅವರಿಂದ ದೂರ ಆಗುತ್ತಿದ್ದೇನೆ ಎಂದು ಹೇಳಿ ಬಾಂಬ್ ಸಿಡಿಸಿದ್ದರು ಆಕಾಂಕ್ಷಾ.

ಆ ನಂತರ ನಮ್ಮ ನಡುವೆ ಮಗು ವಿಚಾರಕ್ಕೆ ಭಿನ್ನಾಭಿಪ್ರಾಯಗಳಿವೆ, ಅವನಿಗೆ ಮಗು ಬೇಕು ಆದರೆ ನನಗೆ ಬೇಡ ಈ ಹಿನ್ನೆಲೆ ನಾವು ದೂರ ದೂರ ಆಗುತ್ತಿದ್ದೇವೆ, ನಮ್ಮ ಹತ್ತು ವರ್ಷದ ದಾಂಪತ್ಯ ಜೀವನ ಮುರಿದು ಬೀಳಲು ಮಗುನೇ ಕಾರಣ ಎಂದು ಹೇಳಿದ್ದರು. ಕ್ಯಾಮರಾ ಎದುರು ಕಣ್ಣೀರು ಹಾಕಿದ್ದರು.

ಗೌರವ್ ಮತ್ತು ಆಕಾಂಕ್ಷಾ ವಯಸ್ಸಿನ ಅಂತರ ಎಷ್ಟು ?

ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ? ಅಂದ್ಹಾಗೇ ಗೌರವ್ ಖನ್ನಾಗೆ ಈಗ 44ರ ಹರೆಯ. ಮತ್ತೊಂದು ಕಡೆ ಆಕಾಂಕ್ಷಾ ಚಮೋಲಾಗೆ 35 ವರ್ಷ. ಇಬ್ಬರ ನಡುವೆ 09 ವರ್ಷಗಳ ಅಂತರ ಇದೆ. ಅಂತರದಿಂದ ಭಿನ್ನಾಭಿಪ್ರಾಯ ಹೆಚ್ಚಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮಗು ವಿಚಾರದಲ್ಲಿ ಇಬ್ಬರ ತದ್ವಿರುದ್ದ ನಿಲುವು ಸಾಂಸಾರಿಕ ನೆಮ್ಮದಿಗೆ ಕೊಳ್ಳಿ ಇಟ್ಟಿದೆ

lock-upp-2-firestorm-shreya-kalra-s-shocking-claim-against-akanksha-chamola-leaves-fans-stunned

ಶ್ರೇಯಾ ಮಾತು, ಕೆರಳಿದ ಜನ

ಸದ್ಯ ಆಕಾಂಕ್ಷಾ ಕುರಿತು ಶ್ರೇಯಾ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ಹಲವರನ್ನು ಕೆರಳಸಿದೆ. ''ಬಿಗ್ ಬಾಸ್'' ಅಥವಾ ''ಲಾಕಪ್'' ಯಾವುದೇ ರಿಯಾಲಿಟಿ ಶೋ ಆದರೂ ಈ ತರಹದ ಗೇಮ್ ಪ್ಲಾನ್ ಎಲ್ಲ ಕಾಮನ್ ಎಂದು ಕೆಲವರು ಶ್ರೇಯಾ ಪರ ವಕಾಲತ್ತು ವಹಿಸಿದ್ದರೆ, ಇನ್ನು ಕೆಲವರು ಗೆಲ್ಲಲು ಮತ್ತೊಬ್ಬರು ಚಾರಿತ್ಯ್ರ ಹರಣ ಮಾಡಬಾರದು, ವೈಯಕ್ತಿಕ ಬದುಕಿನ ಮೇಲೆ ಹಲ್ಲೆ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ.

English summary
A massive storm hits Telly Town! Shreya Kalra exposes Akanksha Chamola's big secret in a viral interview. Check out the jaw-dropping revelation here!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X