ಕನ್ನಡದ ಈ ನಟಿಯರ ಯೂಟ್ಯೂಬ್ ಚಾನೆಲ್‌ಗಳಿಗೆ ಎಷ್ಟು ಸಬ್‌ಸ್ಕ್ರೈಬರ್‌ಗಳಿದ್ದಾರೆ ಗೊತ್ತೇ?

By ಅನಿತಾ ಬನಾರಿ

ಇಂದು ಯೂಟ್ಯೂಬ್ ಎಲ್ಲರ ಅಂಗೈ ಒಳಗಿನ ಬಹುದೊಡ್ಡ ಲೋಕವಾಗಿ ಜನರ ಮುಂದೆ ತೆರೆದುಕೊಳ್ಳುತ್ತಿದೆ. ಈಗಂತೂ ಒಂದಲ್ಲ ಒಂದು ವಿಚಾರಕ್ಕೆ ಯೂಟ್ಯೂಬ್ ಬಳಸದವರು ಇಲ್ಲ. ಹೀಗಿರುವಾಗ ಕಿರುತೆರೆ ಕಲಾವಿದರಂತೂ ಯೂಟ್ಯೂಬ್ ಚಾನೆಲ್‌ಗಳ ಮೂಲಕ ತಮ್ಮ ದೈನಂದಿನ ಚಟುವಟಿಕೆಯಿಂದ ಹಿಡಿದು ಶೂಟಿಂಗ್ ನಡೆಯುವ ಎಲ್ಲಾ ಮೋಜು ಮಾಸ್ತಿಯನ್ನು ತಮ್ಮ ಚಾನೆಲ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಮೂಲಕ ತೆರೆ ಮೇಲಷ್ಟೇ ಅಲ್ಲದೆ ತೆರೆ ಹಿಂದಿನ ತಮ್ಮ ಜೀವನದ ಬಗ್ಗೆಯೂ ತಮ್ಮ ಅಭಿಮಾನಿಗಳಿಗೆ ಹಾಗೂ ವೀಕ್ಷಕರಿಗೆ ಪರಿಚಯ ಮಾಡುತ್ತಿದ್ದಾರೆ. ಇವರ ಯೂಟ್ಯೂಬ್ ಚಾನೆಲ್‌ಗಳಿಗೆ ಚಂದಾದಾರರೇನು ಕಮ್ಮಿಯಿಲ್ಲ.

Look at these kannada actress who are making noise through YouTube channel

ನಟಿ ಭವ್ಯಾ ಗೌಡ

'ಗೀತಾ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಭವ್ಯಾ ಗೌಡ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಅನ್ನು ಹೊಂದಿದ್ದಾರೆ. ಬಿಗ್ ಬಾಸ್ ಸೀಸನ್ 11ರಲ್ಲಿ ಬಹಳ ಉನ್ನತ ಮಟ್ಟದಲ್ಲಿ ಆಡುತ್ತಿರುವ ನಟಿ ಭವ್ಯಾ ಗೌಡ ಕೂಡ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ಆರಂಭಗೊಂಡ ಭವ್ಯಾ ಗೌಡ ಯುಟ್ಯೂಬ್ ಚಾನೆಲ್‌ನಲ್ಲಿ ಈವರೆಗೂ 90 ಕ್ಕಿಂತ ಹೆಚ್ಚು ಯೂಟ್ಯೂಬ್ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಈಕೆಗೆ 73,000ಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳು ಇದ್ದಾರೆ.

ನಟಿ ರೂಪ ಪ್ರಭಾಕರ್

'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಸಿಲ್ಲಿಯಾಗಿ ಕಾಣಿಸಿಕೊಂಡ ನಟಿ ರೂಪ ಪ್ರಭಾಕರ್ ಇಂದಿಗೂ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಅಚ್ಚಾಗಿ ಉಳಿದಿದ್ದಾರೆ. 'ಸಿಲ್ಲಿ ಲಲ್ಲಿ' ಧಾರಾವಾಹಿ ನಂತರ ಹೆಚ್ಚಿನ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದ ಈಕೆ ಪ್ರಸ್ತುತ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಮೂರು ವರ್ಷಗಳಿಂದ ಇವರು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ನಾನಾ ರೀತಿಯ ಅಡುಗೆ, ಮೇಕಪ್ ಹ್ಯಾಕ್ ಮುಂತಾದ ವಿಚಾರಗಳ ಬಗ್ಗೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಯೂಟ್ಯೂಬ್‌ನ ಸಿಲ್ವರ್ ಬಟನ್ ಕೂಡ ಪಡೆದರು. ಪ್ರಸ್ತುತ ದುಬೈ ಪ್ರವಾಸದಲ್ಲಿರುವ ಈಕೆ ದುಬೈನಲ್ಲಿರುವ ಭಾರತೀಯ ಹೋಟೆಲ್‌ಗಳ ಫುಡ್ ಬ್ಲಾಗ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈಕೆಗೆ ಒಂದು ಲಕ್ಷಕ್ಕೂ ಅಧಿಕ ಯೂಟ್ಯೂಬ್ ಸಬ್‌ಸ್ಕ್ರೈಬರ್ಸ್‌ ಇದ್ದಾರೆ.

ನಟಿ ಮೋಕ್ಷಿತಾ ಪೈ

'ಪಾರು' ಧಾರಾವಾಹಿ ಮೂಲಕ ಸರಿ ಸುಮಾರು 5 ವರ್ಷದ ವರೆಗೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿರುವ ನಟಿ ಮೋಕ್ಷಿತಾ ಪೈ, ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಈಕೆಗೂ ತನ್ನದೇ ಆದ ಯೂಟ್ಯೂಬ್ ಚಾನೆಲ್ ಇದ್ದು ಇದರಲ್ಲಿ, ಬಾಲಿ, ಮನಾಲಿ ಹೀಗೆ ನಾನಾ ಸ್ಥಳಗಳ ಟ್ರಾವೆಲ್ ವ್ಲಾಗ್ ಸೇರಿದಂತೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಸುಮಾರು ಎಂಟು ತಿಂಗಳ ಹಿಂದಷ್ಟೇ ಆರಂಭಗೊಂಡಿರುವ ಯುಟ್ಯೂಬ್ ಚಾನೆಲ್ ಗೆ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್‌ಗಳು ಇದ್ದಾರೆ.

Look at these kannada actress who are making noise through YouTube channel

ನಟಿ ಮಲೈಕಾ ವಾಸುಪಾಲ್

'ಹಿಟ್ಲರ್ ಕಲ್ಯಾಣ' ಧಾರಾವಾಹಿ ಮೂಲಕ ಬಹಳಷ್ಟು ಖ್ಯಾತಿಗಳಿಸಿರುವ ನಟಿ ಮಲೈಕಾ ವಾಸುಪಾಲ್, ಲೀಲಾ ಪಾತ್ರದಲ್ಲಿ ಜನರ ಮುಂದೆ ಕಾಣಿಸಿಕೊಂಡಿದ್ದರು. ಆರು ತಿಂಗಳ ಹಿಂದಷ್ಟೇ ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭ ಮಾಡಿರುವ ಈಕೆ ಹತ್ತು ಸಾವಿರಕ್ಕೂ ಹೆಚ್ಚಿನ ಯೂಟ್ಯೂಬ್ ಸಬ್‌ಸ್ಕ್ರೈಬರ್‌ ಅನ್ನು ಹೊಂದಿದ್ದಾರೆ. ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮೇಕಪ್ ಟ್ಯುಟೋರಿಯಲ್, ಸ್ಕಿನ್ ಕೇರ್ ರೂಟೀನ್ ಮುಂತಾದ ವಿಚಾರಗಳ ಬಗ್ಗೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ನಟಿ ಐಶ್ವರ್ಯ ಶಿಂಧೋಗಿ

'ಶಾಂಭವಿ' ಹಾಗೂ 'ಮಂಗಳ ಗೌರಿ ಮದುವೆ' ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ನಟಿ ಐಶ್ವರ್ಯ ಶಿಂಧೋಗಿ, 2015ರಲ್ಲಿ ತೆರೆಕಂಡ 'ಜಾಕ್ಸನ್' ಚಿತ್ರದ ಮೂಲಕ ನಟನ ಕ್ಷೇತ್ರಕ್ಕೆ ಕಾಲಿಟ್ಟವರು. ಅದಾದ ಮೇಲೆ 'ಭುಜಂಗ', 'ರಣತಂತ್ರ', 'ಮಮ್ಮಿ ಸೇವ್ ಮಿ' ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಈಕೆ ನಂತರ ಕಿರುತೆರೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡರು. ಐಶ್ವರ್ಯ ಕೂಡ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು ಸದ್ಯಕ್ಕೆ 45 ಸಾವಿರಕ್ಕೂ ಅಧಿಕ ಸಬ್‌ಸ್ಕ್ರೈಬರ್‌ಗಳನ್ನು ಪಡೆದಿದ್ದಾರೆ.

ನಟಿ ಅದಿತಿ ಪ್ರಭುದೇವ

"ನಾಗಕನ್ನಿಕೆ" ಧಾರಾವಾಹಿ ಮೂಲಕ ಖ್ಯಾತಿಗಳಿಸಿದ ನಟಿ ಅದಿತಿ ಪ್ರಭುದೇವ ನಂತರ ಬೆಳ್ಳಿತರೆಯಲ್ಲಿಯೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಪ್ರಸ್ತುತ ತಮ್ಮ ದಾಂಪತ್ಯ ಜೀವನದ ಕಡೆಗೆ ಹೆಚ್ಚಿನ ಸಮಯ ನೀಡುತ್ತಿರುವುದರಿಂದ ಯಾವುದೇ ಧಾರವಾಹಿಗಳಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ಇತ್ತೀಚೆಗೆ ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಅದಿತಿ ಪ್ರಭುದೇವ ಕೂಡ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಹೊಂದಿದ್ದು ಕಳೆದ ಮೂರು ವರ್ಷಗಳಿಂದ ಸತತವಾಗಿ ನಾನಾ ವಿಚಾರಗಳ ಬಗ್ಗೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಪ್ರಸ್ತುತ ಈಕೆಗೆ 5 ಲಕ್ಷಕ್ಕೂ ಹೆಚ್ಚಿನ ಸಬ್‌ಸ್ಕ್ರೈಬರ್‌ಗಳು ಇದ್ದಾರೆ.

More from Filmibeat

English summary
Look at these TV celebrities who are making noise through YouTube channel;
Read more about: actress anitha banari youtube
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X