ಬಾಲನಟ-ನಟಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವವರು ಇವರೇ ನೋಡಿ

By ಅನಿತಾ ಬನಾರಿ

ಕನ್ನಡ ಕಿರುತೆರೆಯಲ್ಲಿ ಇದೀಗ ಬಾಲನಟ ನಟಿಯರ ಟ್ರೆಂಡ್ ಹೆಚ್ಚಾಗಿದೆ. ಮೊದಲ್ಲೆಲ್ಲಾ ಸಿನಿಮಾಗಳಲ್ಲಿ ಬಾಲನಟ ನಟಿಯರು ಕಾಣಿಸಿಕೊಳ್ಳುತ್ತಿದ್ದರು‌. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸುಧಾರಾಣಿ, ಶಿವರಾಜ್ ಕುಮಾರ್ ಅವರೆಲ್ಲರೂ ಬಾಲ ನಟ ನಟಿಯಾಗಿ ಬಣ್ಣದ ಲೋಕಕ್ಕೆ ಪರಿಚಿತರಾದವರು. ಇದೀಗ ಈ ಟ್ರೆಂಡ್ ಕಿರುತೆರೆಗೂ ಕೂಡಾ ಲಗ್ಗೆ ಇಟ್ಟಿದೆ ಎನ್ನಿ!

ಹೌದು, ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಿಗೆ ಪುಟಾಣಿ ಮಕ್ಕಳು ಬಣ್ಣ ಹಚ್ಚುತ್ತಿದ್ದಾರೆ. ಹಾಗೇ ನೋಡುವುದಾದರೆ ಸದ್ಯದ ಮಟ್ಟಿಗೆ ಬಾಲ ನಟ -ನಟಿಯರೇ ಧಾರಾವಾಹಿಯ ಕೇಂದ್ರ ಬಿಂದು ಹೌದು ಅನ್ನಿ. ಈ ಪುಟಾಣಿ ಮಕ್ಕಳು ತಮ್ಮ ಅದ್ಭುತವಾದ ಅಭಿನಯದ ಮೂಲಕ ವೀಕ್ಷಕರ ಮನ ಗೆದ್ದಿದ್ದಾರೆ. ಮುದ್ದಾದ ನಟನೆ, ಮುಗ್ಧ ಅಭಿನಯದ ಮೂಲಕ ಮೋಡಿ ಮಾಡಿ, ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿರುವ ಆ ಪುಟಾಣಿ ಮಕ್ಕಳು ಯಾರು ಎಂದು ನಾವಿಂದು ತಿಳಿಯೋಣ.

Look at these who are shining on television as child artist

'ಸೀತಾರಾಮ' ಧಾರಾವಾಹಿಯ ಸಿಹಿ

ಗಗನ್ ಚಿನ್ನಪ್ಪ ನಾಯಕ ನಟನಾಗಿ ನಟಿಸುತ್ತಿರುವ ಹಾಗೂ ವೈಷ್ಣವಿ ಗೌಡ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ 'ಸೀತಾರಾಮ'ದಲ್ಲಿ ಬಾಲನಟಿ ರಿತು ಸಿಂಗ್ ಅವರು ಸಿಹಿ ಎಂಬ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸುತ್ತಿದ್ದಾರೆ. ಸಿಹಿ ತನ್ನ ಸಿಹಿಯಾದ ಮಾತುಗಳಿಂದ ಹಾಗೂ ಮುದ್ದುತನದಿಂದ ವೀಕ್ಷಕರ ಮನ ಗೆದ್ದಿದ್ದಾರೆ ಎಂದರೆ ತಪ್ಪಾಗಲ್ಲ.

'ನಮ್ಮ ಲಚ್ಚಿ' ಧಾರಾವಾಹಿಯ ಲಚ್ಚಿ

ನಟ ವಿಜಯ್ ಸೂರ್ಯ ಹಾಗೂ ನಟಿ ನೇಹಾ ಗೌಡ ಅಭಿನಯದಲ್ಲಿ ಅದ್ಭುತವಾಗಿ ಮೂಡಿ ಬರುತ್ತಿರುವ ಧಾರಾವಾಹಿ 'ನಮ್ಮ ಲಚ್ಚಿ'. ಅದರಲ್ಲಿ ಲಚ್ಚಿ ಎಂಬ ಪುಟ್ಟ ಮಗುವಿನ ಪಾತ್ರವನ್ನು ಬಾಲ ನಟಿ ಸಾಂಘವಿ ಮಾಡುತ್ತಿದ್ದಾಳೆ . ಚಿಕ್ಕ ವಯಸ್ಸಿನಲ್ಲಿ ತನ್ನ ಅದ್ಭುತ ಅಭಿನಯದ ಮೂಲಕ ಹಲವಾರು ಭಾವನೆಗಳನ್ನು ಸ್ಪಷ್ಟವಾಗಿ ಅಭಿನಯದ ಮೂಲಕ ತೋರಿಸಬಲ್ಲ ಈಕೆ ಬಹಳಷ್ಟು ಅಭಿಮಾನಿಗಳನ್ನು ಪಡೆದಿದ್ದಾಳೆ.

Look at these who are shining on television as child artist

'ನಮ್ಮ ಲಚ್ಚಿ' ಧಾರಾವಾಹಿಯ ರಿಯಾ

'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ರಿಯಾ ಎಂಬ ಪುಟಾಣಿ ಪಾತ್ರವನ್ನು ಮಾಡುತ್ತಿರುವ ಬಾಲ ನಟಿ ಶ್ರೀ ದಿಶಾ ಮನೋಜ್ಞ ನಟನೆಯ ಮೂಲಕ ಗುರುತಿಸಿಕೊಂಡಾಕೆ. ಧಾರಾವಾಹಿಯುದ್ದಕ್ಕೂ ತನ್ನ ಡೈಲಾಗ್ ಡೆಲಿವರಿ ಮೂಲಕ ಪ್ರೇಕ್ಷಕರ ಹೃದಯ ಕದ್ದಾಕೆ‌. ಇದರ ಜೊತೆಗೆ ಫ್ಯಾಶನ್ ಸೆನ್ಸ್‌ಗೆ ಹಾಗೂ ಸ್ಟೈಲಿಗೆ ಸಖತ್ ಫೇಮಸ್ ಆಗಿದ್ದಾಳೆ.

'ಸೀತಾರಾಮ' ಧಾರಾವಾಹಿಯಲ್ಲಿ ಧೀರಜ್

ಬಾಲ ನಟ ಧೀರಜ್ ಮೊದಲು 'ಹೂಮಳೆ' ಧಾರಾವಾಹಿಯಲ್ಲಿ ಮೊದಲ ಬಾರಿ ನಟಿಸಿದರು‌. ಅದಾದ ಮೇಲೆ 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಈತ ಅಲ್ಲೂ ತನ್ನ ಮಾತಿನ ಮೂಲಕ ಮೋಡಿ ಮಾಡಿದ್ದ. ಇದೀಗ 'ಸೀತಾರಾಮ' ಧಾರಾವಾಹಿಯಲ್ಲಿ ಸಿಹಿಯ ಸ್ನೇಹಿತನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಆತನ ನಟನೆ ಹಾಗೂ ಮುಗ್ದತೆಗೆ ಜನರು ಫಿದಾ ಆಗಿದ್ದಾರೆ.

Look at these who are shining on television as child artist

'ಭೂಮಿಗೆ ಬಂದ ಭಗವಂತ'ದ ಸ್ಕಂದ

'ಭೂಮಿಗೆ ಬಂದ ಭಗವಂತ' ಎಂಬ ವಿಭಿನ್ನವಾದ ಧಾರಾವಾಹಿಯಲ್ಲಿ ಸ್ಕಂದ ಪಾತ್ರವನ್ನು ಅದ್ಭುತವಾಗಿ ಅಭಿನಯಿಸುತ್ತಿರುವ ಬಾಲ ನಟ ಅನುರಾಗ್. ತಮ್ಮ ಎನರ್ಜೆಟಿಕ್ ಅಭಿನಯದಿಂದ ಹೆಸರಾಗಿದ್ದಾರೆ.

More from Filmibeat

English summary
Look at this child artist who is charming on television
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X