Actress Amitha Kulal: ಕಿರುತೆರೆಯಲ್ಲಿ ಸದ್ದು ಮಾಡುತ್ತಿರೋ ಈ ಕರಾವಳಿ ಬ್ಯೂಟಿ ಯಾರು? ಹಿನ್ನೆಲೆಯೇನು?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ಮಲೆನಾಡ ಹುಡುಗಿ ತಾರಿಣಿ ಪಾತ್ರ ತುಂಬಾನೇ ಫೇಮಸ್. ಈ ಧಾರಾವಾಹಿಯ ನಟಿ ಅಮಿತಾ ಕುಲಾಲ್ ಕರಾವಳಿಯ ಹುಡುಗಿ. ಅದ್ಭುತ ನಟನೆಯ ಮೂಲಕ ಮನ ಸೆಳೆದ ಅಮಿತಾ ಕುಲಾಲ್ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಕಳೆದ ವರ್ಷ ನಡೆದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ 'ಮನೆ ಮೆಚ್ಚಿದ ಮಗಳು' ಪ್ರಶಸ್ತಿ ಪಡೆದ ಅಮಿತಾ ಕುಲಾಲ್ ಅವರನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ ಎಂಬುದಕ್ಕೆ ಅದುವೇ ಸಾಕ್ಷಿ. ಧಾರಾವಾಹಿ ಆರಂಭವಾಗಿ ಕೆಲವೇ ಕೆಲವು ಸಮಯದಲ್ಲಿ ಆಕೆ ಮನೆ ಮೆಚ್ಚಿದ ಮಗಳಾಗಿ ಗುರುತಿಸಿಕೊಂಡಿದ್ದರು.

actress Amitha Kulal who is charming on the small screen

ಹಿರಿತೆರೆ ಮೂಲಕ ನಟನೆ ಶುರು

ಮಲೆನಾಡ ಹುಡುಗಿಯಾಗಿ ತೆರೆ ಮೇಲೆ ಮೋಡಿ ಮಾಡುತ್ತಿರುವ ಕರಾವಳಿ ಬೆಡಗಿ ಅಮಿತಾ ಕುಲಾಲ್ ಅವರ ನಟನಾ ಪಯಣಕ್ಕೆ ಮುನ್ನುಡಿ ಬರೆದುದು ಹಿರಿತೆರೆ. ಸೃಜನ್ ಲೋಕೇಶ್ ನಿರ್ದೇಶನದ 'ಹ್ಯಾಪಿ ಜರ್ನಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಅಮಿತಾ ಕುಲಾಲ್ ತದ ನಂತರ 'ಗಿಫ್ಟ್ ಬಾಕ್ಸ್' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ತೆಲುಗು ಧಾರಾವಾಹಿಯ ಎಂಟ್ರಿ

'ಒಲವಿನ ನಿಲ್ದಾಣ' ಧಾರಾವಾಹಿಯ ತಾರಿಣಿಯಾಗಿ ನಟಿಸಿ ಸೈ ಎನಿಸಿಕೊಂಡು ಇದೀಗ ಮನೆ ಮೆಚ್ಚಿದ ಮಗಳಾಗಿ ಗುರುತಿಸಿಕೊಂಡಿರುವ ಅಮಿತಾ ಅವರ ಕಿರುತೆರೆ ಪಯಣ ಶುರುವಾಗಿದ್ದು ತೆಲುಗು ಧಾರಾವಾಹಿಯ ಮೂಲಕ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರೌಡಿ ಗಾರಿ ಪೆಳ್ಳಂ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಅಮಿತಾ ಕಿರುತೆರೆ ಪಯಣ ಶುರುವಾಯಿತು.

actress Amitha Kulal who is charming on the small screen

ಮಾಡೆಲ್ ಲೋಕದಲ್ಲೂ ಸೈ

ಹಿರಿತೆರೆ ನಂತರ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅಮಿತಾ ಕುಲಾಲ್ ಅವರು ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡ ಬೆಡಗಿ. ಪದವಿ ವಿದ್ಯಾಭ್ಯಾಸದ ಬಳಿಕ ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಳ್ಳುವ ನಿರ್ಧಾರ ಮಾಡಿದ ಅಮಿತಾ ಸೀದಾ ಹಾರಿದ್ದು ದೂರದ ಮುಂಬೈಗೆ. ಅಲ್ಲಿ ನಟನೆಯ ರೀತಿ ನೀತಿಗಳನ್ನು ಕಲಿತ ಈಕೆ ಹಲವು ಫ್ಯಾಷನ್ ಶೋಗಳಲ್ಲಿ ರ್ಯಾಂಪ್ ವಾಕ್ ಮಾಡಿ ಸೈ ಎನಿಸಿಕೊಂಡರು. ನಂತರ ಜಾಹೀರಾತು ಲೋಕದಲ್ಲಿಯೂ ಗುರುತಿಸಿಕೊಂಡ ಈಕೆ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಮಧುರೈ ಸಿಲ್ಕ್ಸ್, ಸೂರತ್ ಬ್ರಾಂಡ್, ಹೈದರಾಬಾದ್ ಸೀರೆಗಳಿಗೆ ರೂಪದರ್ಶಿಯಾಗಿ ಮೋಡಿ ಮಾಡಿದ್ದಾರೆ.

More from Filmibeat

English summary
Look at this big screen actress Amitha Kulal who is charming on the small screen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X